ಮೇದೋಜ್ಜೀರಕ ಗ್ರಂಥಿ (Pancreas) ಇದು ಹೊಟ್ಟೆಯಲ್ಲಿ (Stomach) ಇರುವ ಒಂದು ಪ್ರಮುಖ ಅಂಗ (Part). ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಮೇದೋಜ್ಜೀರಕ ಗ್ರಂಥಿಯು ದೇಹದಲ್ಲಿ (Body) ಎರಡು ಮುಖ್ಯ ಕಾರ್ಯಗಳನ್ನು (Work) ಮಾಡುತ್ತದೆ. ಒಂದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಎಕ್ಸೊಕ್ರೈನ್ ಕೆಲಸ, ಮತ್ತೊಂದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ಇತರ ಅಂತಃಸ್ರಾವಕ ಕೆಲಸ ಮಾಡುತ್ತದೆ. ಪ್ಯಾಂಕ್ರಿಯಾಟೈಟಿಸ್ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ. ಎರಡು ವಿಧಗಳಿವೆ. ಒಂದು ತೀವ್ರ ತರಹದ ಪ್ಯಾಂಕ್ರಿಯಾಟೈಟಿಸ್. ಇನ್ನೊಂದು ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಆಗಿದೆ.
ಪ್ಯಾಂಕ್ರಿಯಾಟೈಟಿಸ್ ಉರಿಯೂತ ಉಂಟು ಮಾಡುತ್ತದೆ
ತೀವ್ರ ತರಹದ ಪ್ಯಾಂಕ್ರಿಯಾಟೈಟಿಸ್ ಉಂಟಾದಾಗ ಮೇದೋಜ್ಜೀರಕ ಗ್ರಂಥಿಯು ಇದ್ದಕ್ಕಿದ್ದಂತೆ ಉರಿಯಲು ಶುರುವಾಗುತ್ತದೆ. ಆದರೆ ದೀರ್ಘ ಕಾಲದ ಪ್ಯಾಂಕ್ರಿಯಾಟೈಟಿಸ್ ವ್ಯಕ್ತಿಯು ದೀರ್ಘ ಕಾಲದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದಾಗ ಉಂಟಾಗುವ ಕಾಯಿಲೆ.
ದೀರ್ಘ ಕಾಲದ ಪ್ಯಾಂಕ್ರಿಯಾಟೈಟಿಸ್ನ ಕಾಯಿಲೆಯ ಸಂಕೇತಗಳು ಹಲವು ವರ್ಷಗಳವರೆಗೆ ಗೋಚರಿಸುವುದಿಲ್ಲ. ಆದರೆ ನಂತರ ಇದ್ದಕ್ಕಿದ್ದಂತೆ ತೀವ್ರತರದ ಪ್ಯಾಂಕ್ರಿಯಾಟೈಟಿಸ್ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ
ಮೇದೋಜ್ಜೀರಕ ಗ್ರಂಥಿ ತಾವ ರೀತಿ ಕೆಲಸ ಮಾಡುತ್ತದೆ
ಮೇದೋಜ್ಜೀರಕ ಗ್ರಂಥಿಯ ಪ್ರಮುಖ ಕೆಲಸ ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಮಾಡುವುದು. ಇದು ದೇಹದಲ್ಲಿನ ಕೊಬ್ಬು ಮತ್ತು ಪ್ರೋಟೀನ್ ಒಡೆಯುತ್ತದೆ. ಮೇದೋಜ್ಜೀರಕ ಗ್ರಂಥಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಯಲು ಕೆಲವು ಲಕ್ಷಣಗಳಿಂದ ಕಂಡು ಹಿಡಿಯಬಹುದು.
ಹೊಟ್ಟೆ ನೋವು
ಹೊಟ್ಟೆನೋವು ಇದ್ದರೆ ಮೇದೋಜ್ಜೀರಕ ಗ್ರಂಥಿಯಲ್ಲಿ ಸಮಸ್ಯೆ ಇದೆ ಎಂದರ್ಥ. ಕಿಬ್ಬೊಟ್ಟೆ ನೋವಿನ ಕಾರಣಗಳಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೂಡ ಒಂದು. ಇದು ಸಂಭವಿಸಿದಾಗ ಗೆಡ್ಡೆ ಸುತ್ತಮುತ್ತಲಿನ ಅಂಗಗಳ ಮೇಲೆ ಒತ್ತಡ ಉಂಟು ಮಾಡುತ್ತದೆ. ಈ ಕ್ಯಾನ್ಸರ್ ಆದಾಗ ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳು ಅಸಹಜವಾಗಿ ಬೆಳೆಯುತ್ತವೆ.
ಬೆನ್ನು ನೋವು
ಬೆನ್ನು ನೋವಿನ ಸಮಸ್ಯೆಯಿದ್ದರೆ ಅದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಥವಾ ಪ್ಯಾಂಕ್ರಿಯಾಟೈಟಿಸ್ನ ಸಂಕೇತ ಆಗಿರಬಹುದು. ದಿನ ಕಳೆದಂತೆ ನೋವು ತುಂಬಾ ಹೆಚ್ಚುತ್ತದೆ.
ಜ್ವರ
ಕಾರಣವಿಲ್ಲದೆ ನಿಮ್ಮ ದೇಹದ ಉಷ್ಣತೆ ಅಧಿಕವಾಗಿದ್ದರೆ, ಅದು ಪ್ಯಾಂಕ್ರಿಯಾಟೈಟಿಸ್ನ ಸಂಕೇತ. ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳು ಮೇದೋಜ್ಜೀರಕ ಗ್ರಂಥಿಯ ಅಂಗಾಂಶಗಳಲ್ಲಿ ಅಡಗಿದಾಗ ಇದು ಸಂಭವಿಸುತ್ತದೆ. ಇದು ರಕ್ತನಾಳಗಳಲ್ಲಿ ಕಿರಿಕಿರಿ, ಉರಿಯೂತ ಮತ್ತು ದಟ್ಟಣೆಗೆ ಕಾರಣವಾಗುತ್ತದೆ.
ವಾಕರಿಕೆ ಮತ್ತು ವಾಂತಿ
ವಾಂತಿ ಅಥವಾ ವಾಕರಿಕೆ ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ ಅದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಥವಾ ಪ್ಯಾಂಕ್ರಿಯಾಟೈಟಿಸ್ನಲ್ಲಿನ ಕೆಲವು ಸಮಸ್ಯೆಯ ಲಕ್ಷಣ.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡವು ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಸಂಕೇತ. ಅತಿಯಾದ ಆಲ್ಕೋಹಾಲ್ ಸೇವನೆ, ಆಘಾತ ಮತ್ತು ಪಿತ್ತಕೋಶದ ಕಲ್ಲುಗಳು ಮೇದೋಜ್ಜೀರಕ ಗ್ರಂಥಿಯ ಟ್ಯೂಬ್ಗಳನ್ನು ನಿರ್ಬಂಧಿಸುತ್ತವೆ.
ಶೀತ ಮತ್ತು ತೇವದ ಚರ್ಮ
ಒಡೆದ ಚರ್ಮ ಮತ್ತು ಕಡಿಮೆ ದೇಹದ ಉಷ್ಣತೆ ತೀವ್ರ ಪ್ಯಾಂಕ್ರಿಯಾಟೈಟಿಸ್ನ ಲಕ್ಷಣ. ಅಂಗಗಳಲ್ಲಿ ಸೋಂಕು, ರಕ್ತಸ್ರಾವ ಮತ್ತು ಕೀವು ಉಂಟಾದಾಗ ಆಗುತ್ತದೆ.
ಕಾಮಾಲೆ
ಕಾಮಾಲೆಯಿಂದ ಕಣ್ಣು ಮತ್ತು ಚರ್ಮ ಹಳದಿ ಬಣ್ಣ, ಗಾಢ ಬಣ್ಣದ ಮೂತ್ರ ಮತ್ತು ತಿಳಿ ಬಣ್ಣದ ಅಥವಾ ಜಿಡ್ಡಿನ ಮಲ ಹೋಗುತ್ತದೆ.
ಮಲದಲ್ಲಿ ಬದಲಾವಣೆ
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಉಂಟಾದಾಗ ಮಲದ ಬಣ್ಣವು ಹಳದಿ ಅಥವಾ ಮಣ್ಣಿನ ಬಣ್ಣದಲ್ಲಿ ಹೋಗುತ್ತದೆ. ವಿಚಿತ್ರ ವಾಸನೆ ಇರುತ್ತದೆ.
ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ
ಚರ್ಮದ ಮೇಲೆ ತುರಿಕೆ
ಚರ್ಮದಲ್ಲಿ ತುರಿಕೆ ಕಾಣಿಸುತ್ತದೆ. ಹಸಿವಾಗದಿರುವುದು ಮತ್ತು ತೂಕ ಇಳಿಕೆ. ಹಠಾತ್ ತೂಕ ನಷ್ಟವು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನ ಮೊದಲ ಲಕ್ಷಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ