ಇತ್ತೀಚಿನ ದಿನಗಳಲ್ಲಿ (Now a Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ ಉಂಟಾಗುವ ಪ್ರಕರಣಗಳ (Cases) ಸಂಖ್ಯೆ ಹೆಚ್ಚಿದ್ದು (Increase) ಇದು ಸಾಮಾನ್ಯವಾಗಿದೆ. ಹದಿಹರೆಯದಲ್ಲೇ ಹೆಚ್ಚಿನ ಜನರು (People) ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ. ವೃದ್ಧರ ಜತೆಗೆ ಯುವಕರು ಕೂಡ ಹೃದಯಾಘಾತ, ಹೃದಯ ಸ್ತಂಭನಕ್ಕೆ ಬಲಿಯಾಗುತ್ತಿರುವುದು ಹೆಚ್ಚು ಗಂಭೀರ ಹಾಗೂ ಸೂಕ್ಷ್ಮ ವಿಚಾರವಾಗಿದೆ. ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಧೂಮಪಾನದಂತ ಕೆಟ್ಟ ಅಭ್ಯಾಸಗಳು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ ಇದನ್ನು ಹೊರತುಪಡಿಸಿ, ಕೆಲವರು ಫಿಟ್ ಆಗಿದ್ದಾಗಲೂ ಹೃದಯಾಘಾತಕ್ಕೆ ಬಲಿಯಾದ ಹಲವು ಪ್ರಕರಣಗಳನ್ನು ನೀವು ನೋಡಿರಬಹುದು.
ಯಾವ ರೀತಿಯ ಸ್ವಭಾವದವರು ಹೆಚ್ಚು ಹೃದಯಾಘಾತಕ್ಕೆ ಗುರಿಯಾಗುತ್ತಾರೆ?
ಕೆಲವು ರೀತಿಯ ವ್ಯಕ್ತಿತ್ವ ಕೂಡ ಹೃದಯಾಘಾತದ ಅಪಾಯ ಹೆಚ್ಚಿಸುತ್ತಿದೆ ಎಂಬುದು ಬಹುಶಃ ನಿಮಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದರೆ ಆಶ್ಚರ್ಯವಾಗುತ್ತದೆ. ಪಾಲೊ ಆಲ್ಟೊ ಮೆಡಿಕಲ್ ಫೌಂಡೇಶನ್‌ನ ಆಂತರಿಕ ಔಷಧ ವೈದ್ಯ ರೋನೇಶ್ ಸಿನ್ಹಾ ಹೇಳುವ ಪ್ರಕಾರ, ಯಾರಾದರೂ ಅಸಹನೆ, ಆಕ್ರಮಣಕಾರಿ ಮತ್ತು ತುಂಬಾ ಸ್ಪರ್ಧಾತ್ಮಕ ಭಾವನೆ ಹೊಂದಿರುವವರನ್ನು ಟೈಪ್ ಎ ಪರ್ಸನಾಲಿಟಿ ಎಂದು ಕರೆಯಲಾಗುತ್ತದೆ.
ಅವರು ಹೃದಯಾಘಾತದ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಆದರೆ ನೀವು ಟೈಪ್ ಎ ಇಲ್ಲದಿದ್ದರೆ ನಿಮಗೆ ಹೃದಯಾಘಾತವಾಗುವುದಿಲ್ಲ ಎಂದು ಇದರ ಅರ್ಥವಲ್ಲ. ಕೆಲವೊಮ್ಮೆ ನಿಮ್ಮ ವಿಭಿನ್ನ ನಡವಳಿಕೆಯಿಂದಾಗಿ, ಹೃದಯಾಘಾತದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯಾಗದಂತೆ ನೋಡಿಕೊಳ್ಳಿ! ಇದು ಅಪಾಯಕ್ಕೆ ಅಹ್ವಾನ, ಏನೇನು ತಿನ್ನಬಹುದು?
ಹಾಗಾಗಿ ನಾವು ಇಲ್ಲಿ ಟೈಪ್ ಎ ವ್ಯಕ್ತಿತ್ವ ಹೊಂದಿರದೇ ಹೋದರೂ ಸಹ ಹೃದಯಾಘಾತದ ಅಪಾಯ ಹೇಗೆ ಹೆಚ್ಚಾಗುತ್ತದೆ ಎಂದು ನೋಡೋಣ.
ಸಮಯದ ಒತ್ತಡ
ಒಂದು ಕೆಲಸ ಮುಗಿಸಲು ನಿಮ್ಮ ಮೇಲೆ ಗಡುವು ನಿಗದಿ ಪಡಿಸಿದ್ದರೆ ಅಥವಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗದ ಒತ್ತಡವಿದ್ದರೆ, ಅದು ನಿಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಪ್ರಭಾವಶಾಲಿ, ಆಕ್ರಮಣಕಾರಿ ಅಥವಾ ತುಂಬಾ ಸ್ಪರ್ಧಾತ್ಮಕ ಸ್ವಭಾವ ಹೊಂದಿರದಿದ್ದರೂ, ಕೆಲವೊಮ್ಮೆ ಕೆಲವರ ಬೇಡಿಕೆಯನ್ನು ಪೂರೈಸಲು, ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುತ್ತದೆ.
ಇದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ ಎಂದು ಡಾ. ಸಿನ್ಹಾ ಹೇಳುತ್ತಾರೆ. ಆದ್ದರಿಂದ ನೀವು ಒತ್ತಡ ಕಡಿಮೆ ಮಾಡಲು ಬಯಸಿದರೆ, ನಂತರ ಆದ್ಯತೆಯ ಆಧಾರದ ಮೇಲೆ ಕೆಲಸ ಮಾಡಿ. ಬಹಳ ಮುಖ್ಯವಲ್ಲದ ಕೆಲಸವನ್ನು ಆರಾಮವಾಗಿ ಮಾಡಿ.
ಬಹು ಕೆಲಸಗಳನ್ನು ಮಾಡುವವರಲ್ಲಿ
ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವ ಅನೇಕ ಜನರಿದ್ದಾರೆ. ವಾಹನ ಚಾಲನೆ ಮಾಡುವಾಗ, ಸಂದೇಶ ಕಳುಹಿಸುವಾಗ ಅಥವಾ ಊಟ ಮಾಡುವಾಗ ಫೋನ್‌ನಲ್ಲಿ ಮಾತನಾಡುವಾಗ ನೀವು ಅನೇಕ ಜನರನ್ನು ನೋಡಿರಬೇಕು. ಹೀಗೆ ಬಹು ಕಾರ್ಯವು ಹೃದ್ರೋಗದ ಅಪಾಯ ಹೆಚ್ಚಿಸುವುದಿಲ್ಲ. ಆದರೆ ಇದು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು. ಇದು ಹೃದ್ರೋಗದ ಅಪಾಯಕ್ಕೆ ನೇರವಾಗಿ ಸಂಬಂಧಿಸಿದೆ.
ಭಾವನಾತ್ಮಕ ನಿಯಂತ್ರಣ
ಅನೇಕ ಜನರು ವಿಶೇಷವಾಗಿ ಪುರುಷರು ತಮ್ಮ ಕೋಪ ಮತ್ತು ಹತಾಶೆಯಂತಹ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಅಂತಹವರಲ್ಲಿ ಹೃದಯಾಘಾತದ ಅಪಾಯ ತುಂಬಾ ಹೆಚ್ಚಾಗಿರುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
ನಿಮ್ಮ ಸಂಗಾತಿ ಅಥವಾ ಕುಟುಂಬದೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಯಾವುದೇ ಚಿಕಿತ್ಸಕರೊಂದಿಗೆ ನಿಮ್ಮ ವಿಷಯ ಹಂಚಿಕೊಳ್ಳುವುದು ಮುಖ್ಯ.
ಒತ್ತಡದ ಮಟ್ಟ ಕಡಿಮೆ ಮಾಡುವ ಕೆಲ ಸಲಹೆಗಳು
ಡಾ. ಸಿನ್ಹಾ ಅವರು ನಿಮ್ಮ ಒತ್ತಡ ಕಡಿಮೆ ಮಾಡಲು ಮತ್ತು ನಿಮ್ಮ ಹೃದಯದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವ ಅಂಶಗಳನ್ನ ತಡೆಯಲು ಕೆಲವು ಮಾರ್ಗಗಳನ್ನು ತಿಳಿಸಿದ್ದಾರೆ.
ಬಲವಂತದ ಕೆಲಸ ಮಾಡಲು ಒಪ್ಪದಿರಿ: ನೀವು ಯಾವುದಾದರೂ ವಿಷಯದ ಬಗ್ಗೆ ತುಂಬಾ ಒತ್ತಡ ಅನುಭವಿಸುತ್ತಿದ್ದರೆ, ಯಾವುದೇ ಕೆಲಸವನ್ನು ಬಲವಂತವಾಗಿ ಮಾಡುವುದನ್ನು ನಿಲ್ಲಿಸಿ. ಅದು ಕಚೇರಿ ಅಥವಾ ಇನ್ನಾವುದೇ ವಿಷಯ ಆಗಿರಲಿ. ಸ್ವಲ್ಪ ಸಮಯದವರೆಗೆ ನಿಮ್ಮನ್ನು ಮುಕ್ತವಾಗಿರಿಸಿ.
ನಿಶ್ಚಿಂತೆಯಿಂದಿರಿ: ನೀವು ಯಾವುದಾದರೂ ಕಾರಣದಿಂದ ಒತ್ತಡದಿಂದ ಬಳಲುತ್ತಿರುವಾಗ, ನಿಧಾನವಾಗಿ ನಡೆಯಲು ಪ್ರಯತ್ನಿಸಿ. ನಿಧಾನವಾಗಿ ಮಾತನಾಡಿ ಮತ್ತು ನಿಧಾನವಾಗಿ ಉಸಿರಾಡಿ.
ಇದನ್ನೂ ಓದಿ: ಹಾಲಿನ ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದ್ರೆ ವಿಷಕಾರಿ ಅಂಶ ಸೃಷ್ಟಿ! ಇರಲಿ ಎಚ್ಚರ
ಯೋಗ ಅಥವಾ ಧ್ಯಾನ ಮಾಡಿ: ನಿಮ್ಮ ದಿನಚರಿಯಲ್ಲಿ ಧ್ಯಾನ ಮತ್ತು ಯೋಗ ಸೇರಿಸಿ. ನಿಮ್ಮ ಮನಸ್ಸು ಶಾಂತವಾಗಿರಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ