ಬಾಳೆಹಣ್ಣು (Banana) ಜೀರ್ಣಶಕ್ತಿಯಿಂದ (Digestion) ಹಿಡಿದು ಅತಿಸಾರಕ್ಕೆ ಮದ್ದು, ದೇಹಕ್ಕೆ ತಂಪು ಹೀಗೆ ಹತ್ತಾರು ಪ್ರಯೋಜನಗಳನ್ನು (Banana Health Benefits) ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಳೆಹಣ್ಣಲ್ಲಿ ಸ್ವಲ್ಪ ಬಲಿತ ಅಥವಾ ಹಸಿರು ಹಳದಿ, ಮಾಗಿದ ಸೂರ್ಯನ ಹಳದಿ ಅಥವಾ ಕಂದು ಮಚ್ಚೆಯುಳ್ಳ ಪೂರ್ತಿ ಮಾಗಿದ ಹಣ್ಣು ಹೀಗೆ ಅನೇಕ (Types Of Banana) ವಿಧಗಳಿವೆ. ಕೆಲವರಿಗೆ ಬಾಳೆಹಣ್ಣಿನ ಪ್ರಯೋಜನ ತಿಳಿದಿದ್ದರೂ ಅದರ ಆಯ್ಕೆಯ ಬಗ್ಗೆ ಸ್ವಲ್ಪ ಗೊಂದಲವಿರುತ್ತದೆ. ಪೂರ್ತಿ ಮಾಗಿದ ಹಣ್ಣು ಆರೋಗ್ಯಕರವೇ? ಇಲ್ಲ ಹಸಿರಾಗಿರುವ (ಸ್ವಲ್ಪ ಕಾಯಿಯಂತೆ ಇರುವ ಬಾಳೆ ಹಣ್ಣು) ಒಳ್ಳೆಯದೇ ಹೀಗೆ ಕೆಲ ಗೊಂದಲಗಳಿರುತ್ತವೆ.
ಹೀಗಾಗಿ ವಿಶೇಷವಾಗಿ ಮಧುಮೇಹಿಗಳಿಗೆ ನೀವು ಸೇವಿಸುವ ಬಾಳೆಹಣ್ಣು ಹೇಗಿದ್ದರೆ ಒಳ್ಳೆಯದು, ಮಾಗಿದ ಹಣ್ಣಿನ ಪ್ರಯೋಜನ ಏನು? ಸ್ವಲ್ಪ ಕಾಯಿಯಾಗಿರುವ ಬಾಳೆಹಣ್ಣಿನ ಪ್ರಯೋಜನ ಏನು? ಎಂಬುದನ್ನು ಇಲ್ಲಿ ತಿಳಿಯೋಣ.
ತುಂಬಾ ಹಣ್ಣಾಗದ ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದು
ನೀವು ಮಧುಮೇಹಿಗಳಾಗಿದ್ದರೆ, ತುಂಬಾ ಹಣ್ಣಾಗದ ಸ್ವಲ್ಪ ಹಸಿರಾಗಿರುವ ಹಣ್ಣನ್ನು ಸೇವಿಸುವುದು ಉತ್ತಮ. ಏಕೆಂದರೆ ಇದು ನಿರೋಧಕ ಪಿಷ್ಟವನ್ನು ಹೊಂದಿರುತ್ತದೆ. ಇದು ಕರಗುವ ಫೈಬರ್ನಂತೆ ಕಾರ್ಯನಿರ್ವಹಿಸುತ್ತದೆ.
ಈ ನಿರೋಧಕ ಪಿಷ್ಟವೇ ಗ್ಲೂಕೋಸ್ಗೆ ಪರಿವರ್ತನೆಯಾಗುವ ಪ್ರಕ್ರಿಯೆಯೇ ಹಣ್ಣು ಪಕ್ವವಾಗುವಿಕೆಯನ್ನು ಸೂಚಿಸುತ್ತದೆ. ಸ್ವಲ್ಪ ಬಲಿತ ಸ್ವಲ್ಪ ಹಸಿರಾಗಿರುವ ಹಣ್ಣಿನಲ್ಲಿ ಗ್ಲೂಕೋಸ್ ಪ್ರಮಾಣವು ಕಡಿಮೆ ಇದೆ
ಅದೇ ಬಲಿತ ಬಾಳೆ ಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚಿಯು ಅಧಿಕವಾಗಿರುವುದರಿಂದ ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ.
ತುಂಬಾ ಹಣ್ಣಾಗದ ಬಾಳೆಹಣ್ಣಿನ ಪ್ರಯೋಜನ
ಹಾಗಾದರೆ ಹೆಚ್ಚು ಪಕ್ವವಾಗಿರದ, ಫೈಬರ್ ಅಂಶ ಹೆಚ್ಚಿರುವ ಬಾಳೆಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗುತ್ತದೆ ಎಂಬುದನ್ನು ನೋಡುವುದಾದರೆ, ಮೊದಲಿಗೆ ಈ ವಿಧದ ಬಾಳೆಹಣ್ಣು ಹೆಚ್ಚಿನ ನಾರಿನ ಅಂಶ ಹೊಂದಿರುತ್ತದೆ.
ಫೈಬರ್ಗಳು ದೇಹದಲ್ಲಿನ ಬ್ಯಾಕ್ಟೀರಿಯಾದ ಆಹಾರವಾಗಿದೆ. ಬಾಳೆ ಹಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹಣ್ಣು ಹೆಚ್ಚು ಬಲಿತಂತೆ ಸೂಕ್ಷ್ಮ ಪೋಷಕಾಂಶಗಳು ಕಡಿಮೆಯಾಗುತ್ತವೆ.
ನಮ್ಮಲ್ಲಿ ಪ್ರತಿ ಜೀವಕೋಶಕ್ಕೂ ಒಂಬತ್ತು ಬ್ಯಾಕ್ಟೀರಿಯಾಗಳಿವೆ. ನಮ್ಮ ದೇಹದ ಬಹುತೇಕ ಕಾರ್ಯನಿರ್ವಹಣೆಯು ಅವುಗಳ ಮೇಲೆ ಅವಲಂಬಿತವಾಗಿರುವುದರಿಂದ ಶೇಕಡಾ ತೊಂಬತ್ತೆಂಟು ಬ್ಯಾಕ್ಟೀರಿಯಾಗಳು ನಮಗೆ ಬೇಕೇ ಬೇಕು.
ಪ್ರತಿರಕ್ಷಣಾ ವ್ಯವಸ್ಥೆಗಳಿಗೆ ಬಾಳೆಹಣ್ಣು ಸಹಕಾರಿ
ಆದ್ದರಿಂದ ಈ ಸೂಕ್ಷ್ಮ ಪೋಷಕಾಂಶಗಳು ಬೇಕಾದಲ್ಲಿ ತುಂಬಾ ಹಣ್ಣಾಗದ ಹಣ್ಣನ್ನು ಸೇವಿಸುವುದು ಉತ್ತಮ. ಸ್ವಯಂ-ಹಾನಿ ಉಂಟುಮಾಡುವ ದೇಹದ ಕಾರ್ಯಗಳನ್ನು ತಪ್ಪಿಸಲು ಬ್ಯಾಕ್ಟೀರಿಯಾಗಳು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗಳಿಗೆ ತರಬೇತಿ ನೀಡುತ್ತವೆ.
ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಸಹ ಸಹಾಯ ಮಾಡುತ್ತದೆ.
ಒಟ್ಟಾರೆ ಹಸಿರು ಬಾಳೆ ಹಣ್ಣಿನಲ್ಲಿ ಫ್ಯಾಟಿ ಆಸಿಡ್ಸ್ ಹೆಚ್ಚಿರುತ್ತವೆ. ಇವು ಸಣ್ಣ ಕರುಳಿಗೆ ಉತ್ತಮವಾದದ್ದು. ಬಲಿತ ಹಣ್ಣಿನಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ.
ಬಲಿತ ಬಾಳೆಹಣ್ಣುಗಳಲ್ಲಿದೆ ಪೆಕ್ಟಿನ್ : ಏನಿದರ ಲಾಭ?
"ನ್ಯೂಟ್ರಿಷನ್ ರಿಸರ್ಚ್" ನಲ್ಲಿ ಜೂನ್ 2018 ರ ವಿಮರ್ಶೆಯು, ನಿರೋಧಕ ಪಿಷ್ಟವು ಒಟ್ಟು ಕೊಲೆಸ್ಟ್ರಾಲ್ ಮತ್ತು ಕೆಟ್ಟ LDL ಕೊಲೆಸ್ಟ್ರಾಲ್ ಮೇಲೆ ಕಡಿಮೆ ಪರಿಣಾಮವನ್ನು ಬೀರುತ್ತದೆ ಎಂದು ಸೂಚಿಸುತ್ತದೆ.
ಪೆಕ್ಟಿನ್ ಬಲಿತ ಬಾಳೆಹಣ್ಣುಗಳಲ್ಲಿ ಕಂಡುಬರುವ ಮತ್ತೊಂದು ಆರೋಗ್ಯಕರ ಫೈಬರ್ ಆಗಿದೆ, ಇದು ಹಸಿವನ್ನು ನಿವಾರಿಸಿ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಎಂದಿದೆ.
ಹೆಚ್ಚು ಬಲಿಯದ, ಹಸಿರು ಛಾಯೆ ಇರುವ ಬಾಳೆಹಣ್ಣುಗಳು ಪೋಷಕಾಂಶಗಳು ಮತ್ತು ಖನಿಜಗಳನ್ನು ವಿಶೇಷವಾಗಿ ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಸಾವಿರ ಜನರಿಂದ ಮಾಹಿತಿ ಸಂಗ್ರಹ
ನ್ಯೂಕ್ಯಾಸಲ್ ಮತ್ತು ಲೀಡ್ಸ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಲಿಂಚ್ ಸಿಂಡ್ರೋಮ್ ಹೊಂದಿರುವ ಸುಮಾರು 1,000 ಜನರನ್ನು ಅಧ್ಯಯನ ಮಾಡಿದರು, ಇದು ಆನುವಂಶಿಕ ಸ್ಥಿತಿಯಾಗಿದ್ದು ಅದು ಕ್ಯಾನ್ಸರ್ಗೆ ಕಾರಣವಾಗುತ್ತೆ.
ಇದನ್ನೂ ಓದಿ: Low Blood Pressure: ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಕಾರಣಗಳೇನು? ಯಾವ ಪದಾರ್ಥಗಳ ಸೇವನೆ ಸಹಕಾರಿ!
ಕ್ಯಾನ್ಸರ್ ತಡೆಗಟ್ಟುವಿಕೆ ಸಂಶೋಧನೆಯಲ್ಲಿ, ಎರಡು ವರ್ಷಗಳ ಅವಧಿಯಲ್ಲಿ ಒಂದು ಸ್ವಲ್ಪ ಹಸಿರು ಬಾಳೆಹಣ್ಣಿಗೆ ಸಮನಾದ ನಿರೋಧಕ ಪಿಷ್ಟ ಪೂರಕದ ದೈನಂದಿನ ಡೋಸ್ ಕೆಲವು ಕ್ಯಾನ್ಸರ್ಗಳನ್ನು ಮೂರನೇ ಎರಡರಷ್ಟು ಕಡಿಮೆ ಮಾಡಿರುವುದಾಗಿ ವರದಿ ತೋರಿಸಿದೆ.
ಮಧುಮೇಹ ಇಲ್ಲದವರು ಯಾವ ರೀತಿಯ ಬಾಳೆಹಣ್ಣು ಸೇವಿಸಬಹುದು?
ನೀವು ಮಧುಮೇಹದ ಅಪಾಯವನ್ನು ಹೊಂದಿಲ್ಲದಿದ್ದರೆ, ನೀವು ಹಳದಿ ಮಾಗಿದ ಬಾಳೆಹಣ್ಣನ್ನು ಸೇವಿಸಬಹುದು, ಇದು ಜೀವಕೋಶದ ಹಾನಿಯನ್ನು ತಡೆಯುವ ಫೈಟೊನ್ಯೂಟ್ರಿಯೆಂಟ್ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ಬಾಳೆಹಣ್ಣು ಹಣ್ಣಾಗುತ್ತಿದ್ದಂತೆ, ಚರ್ಮವು ಕಂದು ಬಣ್ಣದ ಚುಕ್ಕೆಗಳನ್ನು ಪಡೆಯುತ್ತದೆ, ಇದು ಸಕ್ಕರೆಯಾಗಿ ಪರಿವರ್ತನೆಯಾದ ಪಿಷ್ಟದ ಪ್ರಮಾಣವನ್ನು ಸೂಚಿಸುತ್ತದೆ. ಈ ಕಂದು ಚುಕ್ಕೆಗಳು ಹೆಚ್ಚಿದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.
ಈ ರೀತಿಯಾದ ಮಚ್ಚೆ ಅಥವಾ ಚುಕ್ಕೆ ಇರುವ ಬಾಳೆಹಣ್ಣುಗಳು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಎಂಬ ಮೂರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ ಮತ್ತು ಇವು ಫೈಬರ್ನೊಂದಿಗೆ ಸಂಯೋಜಿಸಲ್ಪಟ್ಟಿದೆ.
ಇದನ್ನೂ ಓದಿ: Body Heat: ಉಷ್ಣವಾಗಿರುವ ಬಾಡಿಯನ್ನು ಕೂಲ್ ಮಾಡಲು ಇಲ್ಲಿದೆ ಮನೆಮದ್ದು!
ಮಾಗಿದ ಬಾಳೆಹಣ್ಣಿನ ಪ್ರಯೋಜನ
ಮಾಗಿದ ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಹೆಚ್ಚಿನ ಮಟ್ಟದಲ್ಲಿರುತ್ತದೆ. ಇದು ವಿಟಮಿನ್ B6 ನಲ್ಲಿ ಸಮೃದ್ಧವಾಗಿದ್ದು, ಮಹಿಳೆಯರಲ್ಲಿ, ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಬಲಿತ ಬಾಳೆ ಹಣ್ಣಿನ ಸೇವನೆಯಿಂದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಉಂಟಾಗದು ಹಾಗೆ ಜೀರ್ಣಕ್ರಿಯೆ ಕೂಡ ಬೇಗ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ