Ayurvedic Medicine: ಈ ಕೆಲವು ಆಯುರ್ವೇದಿಕ್ ಪದಾರ್ಥಗಳಿಂದ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ

ಕೆಲವು ಪದಾರ್ಥಗಳನ್ನು ಹಲವು ರೀತಿಯ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಚಿಕಿತ್ಸೆಯಾಗಿ ಅನೇಕ ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಇಂತಹ ಸಾಕಷ್ಟು ಸಾಂಬಾರ ಪದಾರ್ಥಗಳನ್ನು ನಮ್ಮೆಲ್ಲರ ಮನೆಗಳಲ್ಲಿ ದಿನನಿತ್ಯ ಬಳಸುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ (Indian) ವೈದ್ಯಕೀಯ ಇತಿಹಾಸದಲ್ಲಿ (Medical History) ಆಯುರ್ವೇದಕ್ಕೆ (Ayurveda) ಬಹಳ ಪ್ರಮುಖ ಮತ್ತು ಉನ್ನತ ಸ್ಥಾನ ಇದೆ. ಆಯುರ್ವೇದ ಪದಾರ್ಥಗಳು (Ingredients) ಬಹುತೇಕ ರೋಗಗಳ(Disease) ನಿವಾರಣೆಗೆ ಅನಾದಿ ಕಾಲದಿಂದಲೂ ಬಳಕೆ ಮಾಡುತ್ತಾ ಬರಲಾಗಿದೆ. ಇದರಲ್ಲಿ ಹೇಳಿರುವ ಮನೆಮದ್ದುಗಳು ಸಹ ಹಲವು ಅನಾರೋಗ್ಯ ಮತ್ತು ಕಾಯಿಲೆಗಳಿಗೆ ಔಷಧವಾಗಿ ಕೆಲಸ ಮಾಡುತ್ತವೆ. ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಜೊತೆಗೆ ಈ ಔಷಧಿಗಳನ್ನು ಹಲವು ರೀತಿಯ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಚಿಕಿತ್ಸೆಯಾಗಿ ಅನೇಕ ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ. ಇಂತಹ ಸಾಕಷ್ಟು ಸಾಂಬಾರ ಪದಾರ್ಥಗಳನ್ನು ನಮ್ಮೆಲ್ಲರ ಮನೆಗಳಲ್ಲಿ ದಿನನಿತ್ಯ ಬಳಸುತ್ತೇವೆ.

    ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಆಯುರ್ವೇದ ಔಷಧ

    ಇದು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಮಧುಮೇಹದಿಂದ ಹಿಡಿದು ಹೃದ್ರೋಗ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಹಲವು ತರಹದ ಗಂಭೀರ ಸಮಸ್ಯೆಗಳ ನಿವಾರಣೆಗೆ ಕೆಲವು ಔಷಧಿಗಳು ವಿಶೇಷವಾಗಿ ಸಹಾಯ ಮಾಡುತ್ತವೆ.

    ಭಾರತದಲ್ಲಿ ಆಯುರ್ವೇದವೂ ಐತಿಹಾಸಿಕವಾಗಿದೆ. ಯಾವುದೇ ರೋಗವಿರಲಿ ಅದನ್ನು ನಿವಾರಿಸುವ ಶಕ್ತಿಯುತ ಗಿಡಮೂಲಿಕೆಗಳು ಈ ನೆಲದಲ್ಲಿವೆ. ಕೆಲವು ಗಿಡಮೂಲಿಕೆಗಳನ್ನು ಮಸಾಲೆಯಾಗಿ ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಅವುಗಳು ಆರೋಗ್ಯ ಪ್ರಯೋಜನ ನೀಡುವುದರ ಜೊತೆಗೆ ಕಾಯಿಲೆಗಳನ್ನು ಹೊಡೆದೋಡಿಸುತ್ತವೆ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಆಯುರ್ವೇದ ಗಿಡಮೂಲಿಕೆಗಳು ಆರೋಗ್ಯ ಸಮಸ್ಯೆ ನಿವಾರಣೆ ಮಾಡುತ್ತವೆ ಎಂಬುದನ್ನು ವೈದ್ಯಕೀಯ ವಿಜ್ಞಾನವೂ ಒಪ್ಪಿಕೊಂಡಿದೆ. ಆಯುರ್ವೇದ ತತ್ವಗಳ ಆಧಾರದ ಮೇಲೆ ಔಷಧಿಗಳು ಅನೇಕ ಗಂಭೀರ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.

    ಇಷ್ಟೇ ಅಲ್ಲ, ಕೆಲವನ್ನು ಕ್ಯಾನ್ಸರ್‌ನಂತಹ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಲು ಸಹ ಬಳಸುತ್ತಾರೆ. ಆರೋಗ್ಯ ಗರಿಷ್ಠ ಪ್ರಯೋಜನ ಪಡೆಯಲು ಯಾವ ಔಷಧಿಗಳನ್ನು ಸೇವಿಸುವುದು ಉತ್ತಮ ಎಂಬುದನ್ನು ಇಲ್ಲಿ ನೋಡೋಣ.

    ದಾಲ್ಚಿನ್ನಿ ಪ್ರಯೋಜನಗಳು

    ದಾಲ್ಚಿನ್ನಿ ಪ್ರತಿ ಮನೆಯಲ್ಲೂ ಬಳಸಲಾಗುವ ಔಷಧಿ. ಭಕ್ಷ್ಯಗಳ ರುಚಿ ಹೆಚ್ಚಿಸುವುದರ ಜೊತೆಗೆ, ಅದರ ಬಳಕೆಯು ಅನೇಕ ರೋಗಗಳ ಅಪಾಯ ಕಡಿಮೆ ಮಾಡಲು ಪ್ರಯೋಜನಕಾರಿ. ದಾಲ್ಚಿನ್ನಿ ಸಿನ್ನಮಾಲ್ಡಿಹೈಡ್ ಎಂಬ ಸಂಯುಕ್ತ ಹೊಂದಿದೆ. ಇದು ಹಲಚು ಅಧ್ಯಯನಗಳಲ್ಲಿ ಪ್ರಯೋಜನಕಾರಿ ಎಂದು ಕಂಡು ಬಂದಿದೆ.

    ದಾಲ್ಚಿನ್ನಿ ಶಕ್ತಿಯುತ ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದು ಉರಿಯೂತ ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ನಿಯಂತ್ರಿಸುತ್ತದೆ.

    ಅರಿಶಿನದ ಔಷಧೀಯ ಪ್ರಯೋಜನಗಳು

    ಪುರಾತನ ಕಾಲದಿಂದಲೂ ಅರಿಶಿನವನ್ನು ಮನೆಮದ್ದಾಗಿ ಬಳಸುತ್ತಾರೆ. ಇದು ಔಷಧೀಯ ಗುಣ ಹೊಂದಿರುವ ಅನೇಕ ಸಂಯುಕ್ತಗಳನ್ನು ಹೊಂದಿದೆ. ಅದರಲ್ಲಿ ಪ್ರಮುಖವಾದದ್ದು ಕರ್ಕ್ಯುಮಿನ್. ಇದು ಶಕ್ತಿಯುತ ಉತ್ಕರ್ಷಣ ನಿರೋಧಕ.

    ಇದು ಆಕ್ಸಿಡೇಟಿವ್ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ರೋಗಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತ ಮತ್ತು ನೋವಿನ ಸಮಸ್ಯೆ ನಿವಾರಣೆಯಲ್ಲಿ ಅರಿಶಿನವು ವಿಶೇಷ ಪ್ರಯೋಜನಕಾರಿಯಾಗಿದೆ.

    ಶುಂಠಿಯ ಪ್ರಯೋಜನಗಳು

    ಶುಂಠಿ ಉರಿಯೂತ ಮತ್ತು ನೋವು ನಿವಾರಕವಾಗಿ ಪರಿಣಾಮಕಾರಿ ಔಷಧವಾಗಿದೆ. ಶುಂಠಿ ಸೇವನೆ ವಾಕರಿಕೆ ಗುಣಪಡಿಸುತ್ತದೆ. ಇದರ ಸೇವನೆಯು ಬೆಳಗಿನ ಬೇನೆ, ಶೀತ ಮತ್ತು ಗಂಟಲಿನ ಸಮಸ್ಯೆ ನಿವಾರಿಸಲು ಪ್ರಯೋಜನಕಾರಿ. ಶುಂಠಿಯ ಉರಿಯೂತ ಗುಣಲಕ್ಷಣಗಳು ನೋವು ಮತ್ತು ಉರಿಯೂತ ಕಡಿಮೆ ಮಾಡುತ್ತವೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ಮೆಂತ್ಯ ಪ್ರಯೋಜನಗಳು

    ಮೆಂತ್ಯದ ಗುಣಲಕ್ಷಣಗಳು ಆಯುರ್ವೇದದಲ್ಲಿ ವಿಶೇಷ ಉಲ್ಲೇಖ ಹೊಂದಿದೆ. ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟದಲ್ಲಿ ಇದರ ಪರಿಣಾಮ ಗಮನಿಸಲಾಗಿದೆ. ಇದರ ಹೊರತಾಗಿ ಮೆಂತ್ಯ ಸೇವನೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇನ್ಸುಲಿನ್ ಕಾರ್ಯವನ್ನು ಸುಧಾರಿಸುವ ಸಸ್ಯ ಪ್ರೋಟೀನ್ 4-ಹೈಡ್ರಾಕ್ಸಿಸೊಲ್ಯೂಸಿನ್ ಹೊಂದಿದೆ.
    Published by:renukadariyannavar
    First published: