Dengue & Ayurveda: ಈ ಪದಾರ್ಥಗಳನ್ನು ಬಳಸಿದ್ರೆ ಡೆಂಗ್ಯೂ ಹತ್ತಿರಕ್ಕೂ ಬರಲ್ಲ ಅನ್ನುತ್ತೆ ಆಯುರ್ವೇದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೋಯ್ಡಾ ಮೂಲದ ಆಯುರ್ವೇದ ವೈದ್ಯ ಕಪಿಲ್ ತ್ಯಾಗಿ ಅವರು ಮಳೆಗಾಲದ ಋತುವಿನ ಅತ್ಯಂತ ಗಂಭೀರ ಕಾಯಿಲೆ ಡೆಂಗ್ಯೂಗೆ ಚಿಕಿತ್ಸೆ ನೀಡಲು ಆಯುರ್ವೇದ ಪರಿಹಾರದ ಬಗ್ಗೆ ಹೇಳಿದ್ದಾರೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹೀಗಾಗಿ ನೀವು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.

ಮುಂದೆ ಓದಿ ...
 • Share this:

  ಮುಂಗಾರು ಹಂಗಾಮು ಮುಂದುವರೆದಿದೆ. ಈ ಸಮಯದಲ್ಲಿ ಮಳೆಯಿಂದಾಗಿ (Rain) ವಿವಿಧ ರೀತಿಯ ಸೋಂಕು (Virus) ಹರಡುತ್ತವೆ. ಜೊತೆಗೆ ಸೊಳ್ಳೆಗಳಿಂದ (Mosquitos) ಹರಡುವ ರೋಗಗಳ (Disease) ಅಪಾಯವು ಹೆಚ್ಚುತ್ತದೆ. ಪ್ರತಿ ವರ್ಷ ಜುಲೈ ಮತ್ತು ನವೆಂಬರ್  ನಡುವೆ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಗಂಭೀರ ಮಾರಣಾಂತಿಕ ಕಾಯಿಲೆಗಳ ಪ್ರಕರಣಗಳು ಗರಿಷ್ಠ ಮಟ್ಟದಲ್ಲಿ ಏರಿಕೆ ಕಾಣುತ್ತವೆ. ಮಳೆಗಾಲ ಎಷ್ಟು ಹಿತಕರವೋ ಅಷ್ಟೇ ಮಾರಕವೂ ಆಗುವುದರಲ್ಲಿ ಸಂಶಯವೇ ಇಲ್ಲ. ಈ ಋತುವಿನ ಅತ್ಯಂತ ಆತಂಕಕಾರಿ ವಿಷಯ ಅಂದ್ರೆ ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಮತ್ತು ಆದ್ದರಿಂದ ನೀವು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.


  ಡೆಂಗ್ಯೂ ಸಮಸ್ಯೆ ನಿವಾರಣೆಗೆ ಆಯುರ್ವೇದ ಪರಿಹಾರ


  ಮಳೆಗಾಲವು ಡೆಂಗ್ಯೂ ಅಥವಾ ಮಲೇರಿಯಾ ಮಾತ್ರವಲ್ಲದೆ ಚಿಕೂನ್‌ಗುನ್ಯಾ, ಕಾಲರಾ, ಟೈಫಾಯಿಡ್, ವೈರಲ್ ಜ್ವರ, ಅತಿಸಾರ, ಇನ್‌ಫ್ಲುಯೆಂಜಾ ಮತ್ತು ಅನೇಕ ರೀತಿಯ ಹೊಟ್ಟೆಯ ಸೋಂಕುಗಳಿಗೆ ಕಾರಣ ಆಗಬಹುದು. ಈ ಕಾಯಿಲೆಗಳಿಗೆ ಹಲವಾರು ವೈದ್ಯಕೀಯ ಚಿಕಿತ್ಸೆಗಳಿವೆ. ಆದರೆ ಕೆಲವು ಆಯುರ್ವೇದ ಪರಿಹಾರಗಳ ಮೂಲಕವೂ ನೀವು ಮನೆಯಲ್ಲಿಯೇ ಪರಿಹಾರ ಪಡೆದುಕೊಳ್ಳಬಹುದು.


  ನೋಯ್ಡಾ ಮೂಲದ ಆಯುರ್ವೇದ ವೈದ್ಯ ಕಪಿಲ್ ತ್ಯಾಗಿ ಹೇಳಿರುವ ಪ್ರಕಾರ, ಈ ಋತುವಿನ ಅತ್ಯಂತ ಗಂಭೀರ ಕಾಯಿಲೆ ಡೆಂಗ್ಯೂಗೆ ಚಿಕಿತ್ಸೆ ನೀಡಲು ನೀವು ಬಳಸುವ ಕೆಲವು ಗಿಡಮೂಲಿಕೆಗಳ ಬಗ್ಗೆ ಇಲ್ಲಿ ಹೇಳಿದ್ದಾರೆ.


  ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!


  ಆಯುರ್ವೇದ ಮತ್ತು ಡೆಂಗ್ಯೂ


  ಆಯುರ್ವೇದದ ಪ್ರಕಾರ, ಡೆಂಗ್ಯೂ ಜ್ವರವನ್ನು ‘ವಿಷಮ ಜ್ವರ’ ಎಂದು ಹೇಳುತ್ತಾರೆ ವೈದ್ಯರು. ಇದು ತಾಪಮಾನದ ಏರಿಳಿತಕ್ಕೆ ಕಾರಣವಾಗುತ್ತದೆ. ಇದು ವಾತ ಮತ್ತು ಪಿತ್ತದ ಉಲ್ಬಣ ತೋರಿಸುತ್ತದೆ. ನಿರಂತರವಾಗಿ ಹರಡುತ್ತಿರುವ ಈ ಸಾಂಕ್ರಾಮಿಕ ರೋಗವನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾದ ಕೆಲವು ಪರಿಹಾರಗಳ ಬಳಕೆಯಿಂದ ನಿಲ್ಲಿಸಬಹುದು.


  ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಮತ್ತು ಹೆಚ್ಚಿನ ಜ್ವರ, ದೇಹದ ನೋವು, ಪ್ಲೇಟ್ಲೆಟ್ ಎಣಿಕೆ ಮತ್ತು ಆಯಾಸಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ನೀವು ಕೆಲವು ಗಿಡಮೂಲಿಕೆ ಬಳಸಬಹುದು.


  ಗುಡುಚಿ ಅಥವಾ ಗಿಲೋಯ್


  ಗಿಲೋಯ್ ಅಥವಾ ಟಿನೋಸ್ಪೊರಾ ಕಾರ್ಡಿಫೋಲಿಯಾವನ್ನು ಆಯುರ್ವೇದದಲ್ಲಿ ಆದರ್ಶ ಮೂಲಿಕೆ ಎಂದು ಪರಿಗಣಿಸುತ್ತಾರೆ. ಇದು ಡೆಂಗ್ಯೂ ಜ್ವರದ ಪ್ರಮುಖ ಅಂಶಗಳಾದ ವಾತ ಮತ್ತು ಪಿತ್ತ ಎರಡನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೋಗ ತಡೆಗೆ ಮತ್ತು ಚಿಕಿತ್ಸೆ ಎರಡಕ್ಕೂ ಗುಡುಚಿ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಕುಡಿಯಿರಿ.


  ಕಾಲಮೇಘ


  ಈ ಆಯುರ್ವೇದ ಮೂಲಿಕೆ ನಿರ್ದಿಷ್ಟವಾಗಿ ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬಿಸಿ ಮಾಡಿದಾಗ ಸಂಕೋಚಕ ಆಗುತ್ತದೆ. ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿರ್ದಿಷ್ಟವಾಗಿ ವಾತ ಮತ್ತು ಪಿತ್ತದ ಹರಡುವಿಕೆ ಕಡಿಮೆ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ಮತ್ತು ರೋಗವನ್ನು ತಡೆಯುತ್ತದೆ.


  ಬೇವು ಅಥವಾ ಇತರ ಎಲೆಗಳ ಹೊಗೆ


  ಬೇವು, ಕಾಳಮೇಘ, ಹರಿದ್ರಾ ಮತ್ತು ಉಶಿರಾ ಬಳಸಿ ಗಿಡಮೂಲಿಕೆಗಳ ಧೂಮೀಕರಣ ಅಥವಾ ಹೊಗೆಯನ್ನು ಡೆಂಗ್ಯೂ ತಡೆಗೆ ಮಾಡಬಹುದು. ಇದು ವೈರಸ್ ಹರಡುವಿಕೆ ತಡೆಯುತ್ತದೆ ಮತ್ತು ಸೊಳ್ಳೆಗಳನ್ನು ದೂರವಿರಿಸುತ್ತದೆ. ಈ ಹೊಗೆಯನ್ನು ಉಸಿರಾಡುವುದು ರೋಗ ತಡೆದು ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುತ್ತದೆ.


  ಷಡಂಗ ಪಣಿಯಾ


  ಜ್ವರಕ್ಕೆ ಈ ಆಯುರ್ವೇದ ಚಿಕಿತ್ಸೆಯು 7 ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಇವುಗಳಲ್ಲಿ ಪಥ್ಯಾ (ಟರ್ಮಿನಾಲಿಯಾ ಚೆಬುಲಾ), ಅಕ್ಷ (ಟರ್ಮಿನಾಲಿಯಾ ಬೆಲ್ಲೆರಿಕಾ), ಆಮ್ಲಾ (ಎಂಬ್ಲಿಕಾ ಅಫಿಷಿನಾಲಿಸ್), ಕಲಾಮೇಘ್ (ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲಾಟಾ), ಹಲ್ಡಿ (ಕರ್ಕುಮಾ ಲಾಂಗಾ), ಬೇವು (ಅಜಾಡಿರಾಚ್ಟಾ ಇಂಡಿಕಾ) ಮತ್ತು ಗುಡುಚಿ (ಟಿನೋಸ್ಪೊರಾ ಕಾರ್ಡಿಫೋಲಿಯಾ) ಇವೆ. 30 ಮಿಲಿ ಪಥ್ಯಷಡಂಗಂ ಕ್ವಾತ್ ಅನ್ನು 200 ಮಿಲಿ ಕುದಿಸಿದ ನೀರಿನಲ್ಲಿ ಬೆರೆಸಿ ಸೇವಿಸಿದರೆ ಜ್ವರ ಹೋಗುತ್ತದೆ.


  ಇದನ್ನೂ ಓದಿ: ಕೂದಲು ಸಮಸ್ಯೆ ಹೆಚ್ಚಿದ್ರೆ ಇದು ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿರಬಹುದು!


  ಕೋಲ್ಡ್ ಪೇಸ್ಟ್


  ಡೆಂಗ್ಯೂ ಜ್ವರದ ರಾಶಸ್ ಕಡಿಮೆ ಮಾಡಲು ಶ್ರೀಗಂಧದ ಮರ ಮತ್ತು ರೋಸ್ ವಾಟರ್‌ ಪೇಸ್ಟ್ ತಯಾರಿಸಿ ಬಳಸಿ. ಕುದಿಸಿದ ನೀರು ಕುಡಿಯಿರಿ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು