Core Muscles: ಬೆನ್ನುನೋವು ಹೆಚ್ಚು ಕಾಡುತ್ತಾ? ಕೋರ್ ಸ್ನಾಯು ಸ್ಟ್ರಾಂಗ್ ಇರಲ್ಲ, ಇರಲಿ ಎಚ್ಚರ

ಕೋರ್ ಸ್ನಾಯುಗಳು ಬಲವಾದ ಮತ್ತು ಗಾಯವನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಅಥ್ಲೆಟಿಕ್ ಕಾರ್ಯಕ್ಷಮತೆ ಹೆಚ್ಚಿಸಲು ಕೋರ್ ಸ್ನಾಯುಗಳು ಸಹಕಾರಿ ಆಗಿವೆ. ಮತ್ತು ಭಂಗಿಯ ಅಸಮತೋಲನ ಸುಧಾರಿಸುತ್ತವೆ. ಇದು ಎಬಿಎಸ್ ಅನ್ನು ಸರಿಯಾಗಿಡಲು ಮತ್ತು ಕೆಲಸ ಮಾಡಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವ್ಯಾಯಾಮದ (Exercise) ವಿಷಯಕ್ಕೆ ಬಂದ್ರೆ ಕೋರ್ ಸ್ನಾಯುಗಳ (Core Muscles) ತರಬೇತಿ (Training) ತುಂಬಾ ಮುಖ್ಯ ಆಗುತ್ತದೆ. ಬಲವಾದ ಕೋರ್ ಸ್ನಾಯುಗಳನ್ನು ಹೊಂದಿರುವುದು ತರಬೇತಿಯ ಪ್ರಮುಖ ಅಂಶ ಆಗಿದೆ. ಕೋರ್ ಸ್ನಾಯುಗಳ ಸ್ಥಿರತೆಯು ದೇಹದ (Body) ಚಲನೆಗೆ ಸರಿಯಾದ ಅಡಿಪಾಯ ಹಾಕುತ್ತವೆ. ನಮ್ಮ ಕೋರ್ ಸ್ನಾಯುಗಳು ದೇಹವನ್ನು ಒಟ್ಟಿಗೆ ಜೋಡಿಸುತ್ತವೆ. ಏಕೆಂದರೆ ಅದು ನಮ್ಮ ದೇಹದ ಕೆಳಗಿನ ಮತ್ತು ಮೇಲಿನ ತುದಿಗಳ ನಡುವೆ ಸಂಪರ್ಕ ಹೊಂದಿವೆ. ನಮ್ಮ ಪ್ರತಿಯೊಂದು ಚಲನೆಯೂ ಕೋರ್ ಸ್ನಾಯುಗಳ ಮೂಲಕ ನಡೆಯುತ್ತದೆ. ಇದು ಇಡೀ ದೇಹಕ್ಕೆ ಶಕ್ತಿ ಮತ್ತು ಬೆಂಬಲ ನೀಡುವ ಆಧಾರ ಆಗಿದೆ.

    ಸ್ಟ್ರಾಂಗ್ ಕೋರ್ ಸ್ನಾಯುಗಳು

    ಕೋರ್ ಸ್ನಾಯುಗಳು ಬಲವಾದ ಮತ್ತು ಗಾಯವನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಅಥ್ಲೆಟಿಕ್ ಕಾರ್ಯಕ್ಷಮತೆ ಹೆಚ್ಚಿಸಲು ಕೋರ್ ಸ್ನಾಯುಗಳು ಸಹಕಾರಿ ಆಗಿವೆ. ಮತ್ತು ಭಂಗಿಯ ಅಸಮತೋಲನ ಸುಧಾರಿಸುತ್ತವೆ. ಇದು ಖಂಡಿತವಾಗಿಯೂ ನಿಮ್ಮ ಎಬಿಎಸ್ ಅನ್ನು ಸರಿಯಾಗಿಡಲು ಮತ್ತು ಕೆಲಸ ಮಾಡಲು ಸಹಾಯ ಮಾಡುತ್ತದೆ.

    ಅಂತಹ ಸ್ಥಿತಿಯಲ್ಲಿ ನಿಮ್ಮ ದೇಹದ ಪ್ರಮುಖ ಶಕ್ತಿಯ ಬಗ್ಗೆ ತಿಳಿಯುವುದು ಬಹಳ ಮುಖ್ಯ? ನೀವು ಉತ್ತಮ ಕೋರ್ ಸ್ನಾಯುಗಳ ಶಕ್ತಿ ಹೊಂದಿದ್ದೀರಾ? ಅಥವಾ ಇಲ್ಲವೇ ಎಂಬುದನ್ನು ಕಂಡು ಹಿಡಿಯುವ ಬಗ್ಗೆ ಇಲ್ಲಿ ನೋಡೋಣ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಸ್ಟ್ರಾಂಗ್ ಕೋರ್ ಸ್ನಾಯುಗಳ ಪ್ರಮುಖ ಸಂಕೇತಗಳು ಯಾವುವು?

    ಕಡಿಮೆ ಬೆನ್ನು ನೋವು

    ನಡೆಯಲು ತೊಂದರೆ ಆಗದಿರುವುದು

    ಸಮತೋಲನ ಮಾಡುವಲ್ಲಿ ತೊಂದರೆ ಆಗದಿರುವುದು

    ದೀರ್ಘ ಕಾಲದವರೆಗೆ ನಿಲ್ಲಲು ತೊಂದರೆ ಆಗದಿರುವುದು

    ನಿಮ್ಮ ಕೋರ್ ಸ್ನಾಯುಗಳ ತರಬೇತಿ ವಿಷಯದ ಬಗ್ಗೆ ಹೇಳುವುದಾದರೆ ಸಿಟ್-ಅಪ್‌ಗಳು ಮತ್ತು ಕ್ರಂಚ್‌ಗಳನ್ನು ಮಾಡುವ ಬಗ್ಗೆ ಯೋಚಿಸಬೇಡಿ. ಯಾಕೆಂದ್ರೆ ಸ್ಕ್ವಾಟ್‌, ಡೆಡ್‌ಲಿಫ್ಟ್‌ಗಳು, ಭುಜದ ಪ್ರೆಸ್‌ಗಳು ಮತ್ತು ಪುಲ್ ಅಪ್‌ಗಳಂತಹ ಸಂಯುಕ್ತ ಚಲನೆಗಳು ಕೋರ್ ಸ್ನಾಯುಗಳ ಬಲಿಷ್ಠಗೊಳಿಸಲು ಕೆಲವು ಅತ್ಯಂತ ಪರಿಣಾಮಕಾರಿ ಮಾರ್ಗಗಳು ಆಗಿವೆ.

    ಬಾಲಿವುಡ್ ನಟಿ ಮಲೈಕಾ ಅರೋರಾ ಹೇಳಿದ್ದಾರೆ ಕ್ಯಾಟ್ ಪೋಸ್

    ಈ ವ್ಯಾಯಾಮಗಳನ್ನು ಸರಿಯಾಗಿ ಮಾಡಿದಾಗ  ನಿಮ್ಮ ದೇಹದ ಇತರ ಭಾಗಗಳೊಂದಿಗೆ ನಿಮ್ಮ ಕೋರ್ ಸ್ನಾಯುಗಳು ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ನಿಮ್ಮ ಹೃದಯದ ಆರೋಗ್ಯ ಹೆಚ್ಚಿಸಲು ಬಯಸಿದರೆ ಬಾಲಿವುಡ್ ನಟಿ ಮಲೈಕಾ ಅರೋರಾ ಕೆಲವು ಭಂಗಿಗಳನ್ನು ಹೇಳಿದ್ದಾರೆ. ಟೈಗರ್ ಪೋಸ್ ಅಂದ್ರೆ ಕ್ಯಾಟ್ ಪೋಸ್ ಸಹಕಾರಿ ಎಂದು ಹೇಳಿದ್ದಾರೆ.

    ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಕಾರ, ಬಲವಾದ ಕೋರ್ ನಿಮ್ಮ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಆದರೆ ಶಕ್ತಿ ಹೆಚ್ಚಿಸುತ್ತದೆ. ಮತ್ತು ನಿಮ್ಮ ದೈನಂದಿನ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

    ಕ್ಯಾಟ್ ಪೋಸ್‌ ಪ್ರಯೋಜನಗಳು

    ಬೆನ್ನು ಮೂಳೆಯನ್ನು ಟೋನ್ ಮಾಡುತ್ತದೆ

    ವಿಶ್ರಾಂತಿ ಮೂಲಕ ಬೆನ್ನು ಮೂಳೆಯ ಆರೋಗ್ಯ ಸುಧಾರಿಸುತ್ತದೆ

    ಭಂಗಿಯ ನಿಯಮಿತ ಅಭ್ಯಾಸವು ನಮ್ಯತೆ ಮತ್ತು ಸಮತೋಲನ ಉತ್ತೇಜಿಸುತ್ತದೆ

    ನಿಮ್ಮ ದೇಹದ ಭಂಗಿ ಸುಧಾರಿಸುತ್ತದೆ

    ದೇಹದ ಸಮತೋಲನ ಕಾಪಾಡುತ್ತದೆ

    ದೇಹದ ಸ್ಥಿರತೆ ಸುಧಾರಿಸಲು ಇದು ಉತ್ತಮ ಆಯ್ಕೆ

    ರಕ್ತ ಸಂಚಾರ, ಜೀರ್ಣಾಂಗ ವ್ಯವಸ್ಥೆ, ತೂಕ ಇಳಿಕೆಗೆ ಸಹಕಾರಿ

    ಕ್ಯಾಟ್ ಪೋಸ್ ಮಾಡುವುದು ಹೇಗೆ?

    ನಿಮ್ಮ ಕೈಗಳು ಮತ್ತು ಮೊಣಕಾಲುಗಳನ್ನು ಬಾಗಿಸಿ ಮೇಜಿನ ಭಂಗಿಯ ಆಕಾರಕ್ಕೆ ತನ್ನಿ. ಮೃದುವಾಗಿ ಮಾರ್ಗರಿಯಾಸನಾ ಅಥವಾ ಬೆಕ್ಕಿನ ಭಂಗಿ ಮಾಡಿ. ಬದಲಾವಣೆಯ ಮೊದಲು ಉಸಿರಾಡಿ. ಈಗ ನಿಮ್ಮ ಬಲಗಾಲನ್ನು ಹಿಂದಕ್ಕೆ ಎತ್ತಿ ನೆಲಕ್ಕೆ ಸಮಾನಾಂತರವಾಗಿ ಬೆನ್ನನ್ನು ಬಾಗಿಸುತ್ತಾ ಉಸಿರಾಡಿ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ನಿಮ್ಮ ಬಲ ಮೊಣಕಾಲು ಬಗ್ಗಿಸಿ, ನಿಮ್ಮ ಕಾಲನ್ನು ಮೇಲಕ್ಕೆತ್ತಿ. ನಂತರ ತಲೆಯನ್ನು ಮೇಲಕ್ಕೆತ್ತಿ. ಕೆಲ ನಿಮಿಷ ಇದೇ ಭಂಗಿಯಲ್ಲಿರಿ. ನಿಮ್ಮ ದೇಹವನ್ನು ಸಮತೋಲನಗೊಳಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ. ನಿಮ್ಮ ಬೆನ್ನುಮೂಳೆಯನ್ನು ಸುತ್ತುತ್ತಿರುವಾಗ ಈಗ ಉಸಿರನ್ನು ಹೊರಹಾಕಿ ಮತ್ತು ಬಾಗಿ. ಹೀಗೆ ಪುನರಾವರ್ತಿಸಿ.
    Published by:renukadariyannavar
    First published: