• Home
 • »
 • News
 • »
 • lifestyle
 • »
 • Colon Cleanse: ಕರುಳನ್ನು ಸ್ವಚ್ಛಗೊಳಿಸುವ ಪದಾರ್ಥಗಳು ಇವು, ನಿಮ್ಮ ಆಹಾರದಲ್ಲಿ ಸದಾ ಇರಲಿ

Colon Cleanse: ಕರುಳನ್ನು ಸ್ವಚ್ಛಗೊಳಿಸುವ ಪದಾರ್ಥಗಳು ಇವು, ನಿಮ್ಮ ಆಹಾರದಲ್ಲಿ ಸದಾ ಇರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರುಳನ್ನು ಶುದ್ಧೀಕರಿಸುವಾಗ ಅದು ಜೀರ್ಣವಾಗದ ತ್ಯಾಜ್ಯವನ್ನು ದೇಹದಿಂದ ಹೊರ ಹಾಕುತ್ತದೆ. ಆಗ ದೇಹದಲ್ಲಿ ಪೋಷಕಾಂಶಗಳು ಹೀರಲ್ಪಡುತ್ತವೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತ್ಯಾಜ್ಯ ವಸ್ತುವು ದೇಹದಲ್ಲಿ ಹೆಚ್ಚು ಕಾಲ ಉಳಿದರೆ ಬ್ಯಾಕ್ಟೀರಿಯಾ ಮತ್ತು ರೋಗಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಮುಂದೆ ಓದಿ ...
 • Share this:

  ಫೈಬರ್ (Fiber) ಕೊರತೆ ಜೀರ್ಣಾಂಗ ವ್ಯವಸ್ಥೆಯು (Digestive System) ತುಂಬಾ ನಿಧಾನವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು (Food) ಜೀರ್ಣಾಂಗದ ವೇಗವನ್ನು ಸುಮಾರು ಕಾಲು ಭಾಗದಷ್ಟು ಹೆಚ್ಚಿಸುತ್ತವೆ. ಆಹಾರದಲ್ಲಿ ಫೈಬರ್ ಬ್ಯಾಕಪ್ ಕೊರತೆ ಕರುಳು (Colon) ಸರಿಯಾಗಿ ಸ್ವಚ್ಛವಾಗದೇ ಇರಲು ಕಾರಣವಾಗುತ್ತದೆ. ಈ ನಿಧಾನವಾಗಿ ಚಲಿಸುವ ಆಹಾರವು ಹೆಚ್ಚುವರಿ ಲೋಳೆಪೊರೆ ಉತ್ಪಾದಿಸುತ್ತದೆ. ಇದು ಕರುಳಿನ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡುತ್ತದೆ. ಜೊತೆಗೆ ತೂಕ ಹೆಚ್ಚಾಗಲು ಕಾರಣ ಆಗುತ್ತದೆ. ಹಾಗಾಗಿ ಕರುಳಿನ ಶುದ್ಧೀಕರಣ ಅಗತ್ಯವಾಗಿದೆ. ಇಲ್ಲಿ ನಾವು ಕರುಳು ಸ್ವಚ್ಛಗೊಳಿಸುವ ಆಹಾರ ಪದಾರ್ಥಗಳ ಬಗ್ಗೆ ನೋಡೋಣ.


  ಕರುಳಿನ ಶುದ್ಧೀಕರಣದಿಂದ ತೂಕ ಇಳಿಕೆಗೆ ಸಹಕಾರಿ


  ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್ ಜರ್ನಲ್ ಪ್ರಕಾರ, ಕರುಳನ್ನು ಶುದ್ಧೀಕರಿಸುವಾಗ ಅದು ಜೀರ್ಣವಾಗದ ತ್ಯಾಜ್ಯವನ್ನು ದೇಹದಿಂದ ಹೊರ ಹಾಕುತ್ತದೆ.


  ಆಗ ದೇಹದಲ್ಲಿ ಪೋಷಕಾಂಶಗಳು ಹೀರಲ್ಪಡುತ್ತವೆ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತ್ಯಾಜ್ಯ ವಸ್ತುವು ದೇಹದಲ್ಲಿ ಹೆಚ್ಚು ಕಾಲ ಉಳಿದರೆ ಬ್ಯಾಕ್ಟೀರಿಯಾ ಮತ್ತು ರೋಗಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.
  ಫೈಬರ್ ರಹಿತ ಹೆಚ್ಚಿನ ಪ್ರೊಟೀನ್ ಆಹಾರ ಪದಾರ್ಥಗಳು ಕರುಳಿನ ಅಡಚಣೆಯಿಂದಾಗಿ ಆಮ್ಲ ರಚನೆ ಮಾಡುತ್ತವೆ. ಇದು ಕರುಳಿನ ಅಂಗಾಂಶವು ಊತ ಮತ್ತು ರೋಗಗ್ರಸ್ತವಾಗಲು ಕಾರಣವಾಗುತ್ತದೆ. ಕರುಳು ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಯೀಸ್ಟ್, ಶಿಲೀಂಧ್ರ, ಬ್ಯಾಕ್ಟೀರಿಯಾ ಅಥವಾ ಫೆಕಲ್ ಮ್ಯಾಟರ್ ರಕ್ತಪ್ರವಾಹಕ್ಕೆ ಸಂಪರ್ಕ ಹೊಂದಿದ ಅಂಗಾಂಶಗಳಿಗೆ ಪ್ರವೇಶವಾದರೆ ದೇಹದ pH ಸಂಪೂರ್ಣವಾಗಿ ಅಸಮತೋಲನವಾಗುತ್ತದೆ.


  ಕರುಳನ್ನು ಸ್ವಚ್ಛಗೊಳಿಸುವ ಆಹಾರ ಪದಾರ್ಥಗಳು ಹೀಗಿವೆ


  ಹುದುಗಿಸಿದ ಆಹಾರ


  ಹುದುಗಿಸಿದ ಆಹಾರ ಕರುಳಿನ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ. ಪರಿಸರ ಮತ್ತು ಆಹಾರ ರಾಸಾಯನಿಕ , ಪ್ರತಿಜೀವಕ, ಸಂಸ್ಕರಿಸಿದ ಆಹಾರದಿಂದ ಉಂಟಾಗುವ ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾಕ್ಕೆ ಹಾನಿಯನ್ನು ಸರಿ ಮಾಡುತ್ತದೆ. ಪ್ರೋಬಯಾಟಿಕ್ ಭರಿತ ಆಹಾರ ಸೇವನೆ ಮಾಡಿ. ಕಿಮ್ಚಿ, ಕೆಫಿರ್, ಗ್ರೀಕ್ ಮೊಸರು, ಚಿವ್ರಾ, ಕೊಂಬುಚಾ ಟೀ ಸೇವಿಸಿ.


  ಬೆಳ್ಳುಳ್ಳಿ


  ಬೆಳ್ಳುಳ್ಳಿ ಕಟುವಾದ ಅಂಶವು ಕರುಳನ್ನು ಸ್ವಚ್ಛಗೊಳಿಸಲು ಸಹ ಪ್ರಯೋಜನಕಾರಿ. ಇದು ಆಂಟಿವೈರಲ್, ಆಂಟಿ ಬ್ಯಾಕ್ಟೀರಿಯಾ, ಆಂಟಿ ಫಂಗಲ್ ಗುಣ ಹೊಂದಿದೆ. ಜೀರ್ಣಾಂಗವ್ಯೂಹದಿಂದ ವಿಷ, ರೋಗ ಪರಾವಲಂಬಿಗಳನ್ನು ತೆಗೆದು ಹಾಕುತ್ತದೆ. ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ತ್ಯಾಜ್ಯ ವಸ್ತು ಮತ್ತು ವಿಷ ತೆಗೆದು ಹಾಕುತ್ತದೆ.


  ಅಲೋವೆರಾ


  ಅಲೋವೆರಾ ಜ್ಯೂಸ್ ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಚರ್ಮದ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತದೆ. ಅಲೋವೆರಾ ಜ್ಯೂಸ್ ಉರಿಯೂತದ ಗುಣಲಕ್ಷಣ ಹೊಂದಿದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರ ಫೈಬರ್ ಕರುಳನ್ನು ಶುದ್ಧೀಕರಿಸಿ ತ್ಯಾಜ್ಯ ವಸ್ತುಗಳನ್ನು ತೆಗೆದು ಹಾಕುತ್ತದೆ.


  ಆಪಲ್ ಸೈಡರ್ ವಿನೆಗರ್


  ಸೇಬುಗಳು ಹೆಚ್ಚಿನ ಫೈಬರ್ ಹೊಂದಿವೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಸೇಬುಗಳಲ್ಲಿ ಪೆಕ್ಟಿನ್ ಸಮೃದ್ಧವಾಗಿದ್ದು, ಕರುಳಿನಲ್ಲಿ ನಿರ್ಮಿಸಲಾದ ವಿಷವನ್ನು ತೆಗೆದು ಹಾಕಿ ಕರುಳಿನ ಒಳಪದರವನ್ನು ಬಲಪಡಿಸುತ್ತದೆ. ಪೆಕ್ಟಿನ್ ಬಾಳೆಹಣ್ಣು ಮತ್ತು ಸಿಟ್ರಸ್ ಹಣ್ಣುಗಳ ಸಿಪ್ಪೆಯಲ್ಲಿದೆ.


  ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


  ಅಗಸೆ ಬೀಜ ಮತ್ತು ಚಿಯಾ ಬೀಜಗಳು


  ಅಗಸೆ ಬೀಜ ಮತ್ತು ಚಿಯಾ ಬೀಜಗಳು ಪೌಷ್ಟಿಕಾಂಶದ ಸಮಸ್ಯೆ ನಿವಾರಿಸುತ್ತವೆ. ಕೊಬ್ಬು ಮತ್ತು ಫೈಬರ್ ಹೊಂದಿವೆ. ಜೀರ್ಣಕ್ರಿಯೆ ಮತ್ತು ಕರುಳು ಸ್ವಚ್ಛಗೊಳಿಸಲು ಸಹಕಾರಿ. ಎರಡೂ ಒಮೆಗಾ -3 ಕೊಬ್ಬಿನಾಮ್ಲ ಹೊಂದಿವೆ. ಉರಿಯೂತ ಕಡಿಮೆ ಮಾಡುತ್ತದೆ.  ಕರಗಬಲ್ಲ ಫೈಬರ್ ಹೊಂದಿವೆ. ಜೀರ್ಣಕ್ರಿಯೆಗೆ ಸಹಕಾರಿ.

  Published by:renukadariyannavar
  First published: