Pepper Benefits: 22 ರೋಗಗಳಿಗೆ ಔಷಧಿ ಕರಿಮೆಣಸು! ಬಳಕೆ ಬಗ್ಗೆ ಗೊತ್ತಿರಲಿ

ಪೆಪ್ಪರ್ ಕೂಡ ಮಸಾಲೆಗಳ ದೊಡ್ಡ ಶಕ್ತಿ ಆಗಿದೆ. ಕರಿಮೆಣಸು ಅದರ ಜೈವಿಕ ಸಕ್ರಿಯ ಸಂಯುಕ್ತಗಳ ಕಾರಣದಿಂದಾಗಿ ಆರೋಗ್ಯ ಪ್ರಯೋಜನ ನೀಡುತ್ತದೆ. ಪೆಪ್ಪರ್ ಕೆಲವು ಕಾಯಿಲೆಗಳ ನಿವಾರಣೆಗೆ ಮತ್ತು ತಡೆಗೆ ಪ್ರಮುಖವಾಗಿ ಕೆಲಸ ಮಾಡುತ್ತದೆ. ಪೆಪ್ಪರ್ ನೈಸರ್ಗಿಕ ಆಲ್ಕಲಾಯ್ಡ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಹಾರದಲ್ಲಿ (Food) ಕರಿಮೆಣಸು (Pepper) ನೀವು ಸೇವನೆ ಮಾಡುತ್ತಿದ್ದರೆ ಅದು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ತಂದು ಕೊಡುತ್ತದೆ. ನೀವು ಆಹಾರ ಸೇವನೆ ಮಾಡುವಾಗ ಬಾಯಿಯಲ್ಲಿ ಕರಿಮೆಣಸು ಬಂದರೆ, ಅದನ್ನು ಎಸೆಯಬೇಡಿ. ಅದನ್ನು ಅಗಿದು ತಿನ್ನಿ. ರುಚಿಯಲ್ಲಿ ಕಹಿ ಆಗಿರುವ ಕರಿಮೆಣಸು ಮಸಾಲೆ ಪದಾರ್ಥ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಕರಿಮೆಣಸು ಅದರ ಜೈವಿಕ ಸಕ್ರಿಯ ಸಂಯುಕ್ತಗಳ ಕಾರಣದಿಂದಾಗಿ ಆರೋಗ್ಯ ಪ್ರಯೋಜನ ನೀಡುತ್ತದೆ. ಪೆಪ್ಪರ್ ಕೆಲವು ಕಾಯಿಲೆಗಳ ನಿವಾರಣೆಗೆ ಮತ್ತು ತಡೆಗೆ ಪ್ರಮುಖವಾಗಿ ಕೆಲಸ ಮಾಡುತ್ತದೆ. ಪೆಪ್ಪರ್ ನೈಸರ್ಗಿಕ ಆಲ್ಕಲಾಯ್ಡ್ ಆಗಿದೆ. ಅದು ಕರಿಮೆಣಸಿಗೆ ಅದರ ಕಟುವಾದ ರುಚಿ ನೀಡುತ್ತದೆ.

    ಕರಿಮೆಣಸು ಸೇವನೆಯ ಪ್ರಯೋಜನಗಳೇನು?

    ಪೆಪ್ಪರ್ ಕೂಡ ಮಸಾಲೆಗಳ ದೊಡ್ಡ ಶಕ್ತಿ ಆಗಿದೆ. ಒಂದು ರೀತಿಯ ಉತ್ಕರ್ಷಣ ನಿರೋಧಕ ಎಂದು ನಂಬಲಾಗಿದೆ. ಇದು ಅಪಧಮನಿಕಾಠಿಣ್ಯ, ಹೃದ್ರೋಗ ಮತ್ತು ನರವೈಜ್ಞಾನಿಕ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಹಕಾರಿ ಆಗಿದೆ.

    ಕರಿಮೆಣಸಿನಲ್ಲಿರುವ ಪೋಷಕಾಂಶಗಳು ಮತ್ತು ಗುಣಲಕ್ಷಣಗಳು?

    ಕರಿಮೆಣಸು ಮ್ಯಾಂಗನೀಸ್ನ ಉತ್ತಮ ಮೂಲ ಆಗಿದೆ. ಇದು ಮೂಳೆಯ ಆರೋಗ್ಯ, ಗಾಯದ ಚಿಕಿತ್ಸೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುವ ಖನಿಜ ಹೊಂದಿದೆ. ಜೊತೆಗೆ ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಬಿ6, ಥಯಾಮಿನ್, ನಿಯಾಸಿನ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

    ಇದನ್ನೂ ಓದಿ: ತಿಂಗಳುಗಟ್ಟಲೇ ಬಾಧಿಸುವ ಕಾಮಾಲೆಯಿಂದ ಶೀಘ್ರ ಪರಿಹಾರ ಕೊಡುತ್ತೆ ಈ ಮನೆಮದ್ದು!

    ಆಯುರ್ವೇದದಲ್ಲಿ ಕರಿಮೆಣಸು ಸೇವನೆಯ ಪ್ರಯೋಜನಗಳು ಹೀಗಿವೆ

    ಆಯುರ್ವೇದದಲ್ಲಿ ಕರಿಮೆಣಸನ್ನು ಶಕ್ತಿಯುತ ಮಸಾಲೆ ಮತ್ತು ಮೂಲಿಕೆ ಎಂದು ಹೇಳಲಾಗಿದೆ. ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಪ್ರಕಾರ, ಕರಿಮೆಣಸನ್ನು ಆಯುರ್ವೇದದಲ್ಲಿ ಮಾರೀಚ ಎಂದು ಕರೆಯುತ್ತಾರೆ. ಕರಿಮೆಣಸು ಬಲವಾದ ಮತ್ತು ಕಟುವಾದ ಮಸಾಲೆ ಪದಾರ್ಥವಾಗಿದೆ. ಇದು ಶಕ್ತಿಯಲ್ಲಿ ಬಿಸಿ. ಜೀರ್ಣಕ್ರಿಯೆಯಲ್ಲಿ ನಿಧಾನ ಮತ್ತು ವಾತ ಮತ್ತು ಕಫ ಸಮತೋಲನ ಮಾಡುತ್ತದೆ.

    ಕರಿಮೆಣಸು ಪದಾರ್ಥ 22 ರೋಗಗಳಿಗೆ ಔಷಧವಾಗಿದೆ

    ಅನೋರೆಕ್ಸಿಯಾದಲ್ಲಿ ರುಚಿ ಸುಧಾರಿಸುತ್ತದೆ. ಕೆಮ್ಮು, ಶೀತಕ್ಕೆ ಉತ್ತಮ ಪರಿಹಾರ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕೀಲುಗಳು ಮತ್ತು ಕರುಳಿನ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತ ಮತ್ತು ಹೆಚ್ಚುವರಿ ವಾತ ಅಸ್ವಸ್ಥತೆ ನಿವಾರಿಸುತ್ತದೆ. ದೇಹದ ವಿಷ ತೆಗೆದು ಹಾಕುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ.

    ಬಾಯಿ ಆರೋಗ್ಯ ಕಾಪಾಡುತ್ತದೆ. ಅಲರ್ಜಿ ಮತ್ತು ಸೈನುಟಿಸ್‌ಗೆ ಅದ್ಭುತ ಔಷಧವಾಗಿದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಬೊಜ್ಜು ಕಡಿಮೆ ಮಾಡಲು ಸಹಕಾರಿ. ಯಕೃತ್ತು ಮತ್ತು ಹೃದಯಕ್ಕೆ ಉತ್ತಮ ಆಯ್ಕೆಯಾಗಿದೆ. ಕೊಲೆಸ್ಟ್ರಾಲ್, ಮಧುಮೇಹ ಮತ್ತು ರಕ್ತದೊತ್ತಡವನ್ನು ನಿರ್ವಹಿಸುತ್ತದೆ.

    ಆಲ್ಝೈಮರ್ ಮತ್ತು ಒಟ್ಟಾರೆ ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ತಲೆಹೊಟ್ಟು/ಶಿಲೀಂಧ್ರದಿಂದಾಗಿ ಕೂದಲು ಉದುರುವಿಕೆ ತಡೆಯುತ್ತದೆ. ಧೂಮಪಾನ ಚಟ ಹೋಗಲಾಡಿಸಲು ಸಹಕಾರಿಯಾಗಿದೆ. ಕ್ಯಾನ್ಸರ್ ತಡೆಗಟ್ಟಲು ಮತ್ತು ಹೋರಾಡಲು ಸಹ ಸಹಾಯ ಮಾಡುತ್ತದೆ.

    ಕರಿಮೆಣಸನ್ನು ಹೇಗೆ ಸೇವಿಸುವುದು ಉತ್ತಮ?

    ಗಂಭೀರ ಕಾಯಿಲೆಗಳಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಅಥವಾ ಪರಿಹಾರ ಪಡೆಯಲು ಬಯಸಿದರೆ, ನೀವು ಪ್ರತಿದಿನ ಒಂದು ಕರಿಮೆಣಸನ್ನು ಮಾತ್ರ ಸೇವಿಸಬೇಕು. ನೀವು ಅದನ್ನು ನೀರಿನ ಜೊತೆ ಅಗಿದು ಸೇವಿಸಿ. ಅಥವಾ ಆಹಾರದಲ್ಲಿ ಬಳಸಬಹುದು.

    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಮೆಣಸು ಸೇವನೆ

    ಹೆಚ್ಚಿನ ಪ್ರಯೋಜನ ಪಡೆಯಲು ನೀವು ಕರಿಮೆಣಸನ್ನು ಅಗಿಯಬಹುದು ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಇದು ನೀವು ಹಾರ್ಮೋನುಗಳ ಸಮತೋಲನ, ಮಧುಮೇಹ, ಅಮೆನೋರಿಯಾ, ಪಿರಿಯಡ್ಸ್ ವಿಳಂಬ ಅಸ್ವಸ್ಥತೆ ನಿವಾರಣೆ ಮಾಡುತ್ತದೆ.

    ಜೇನುತುಪ್ಪದ ಜೊತೆ ಸೇವಿಸಿ

    ಕರಿಮೆಣಸು ಮತ್ತು ಜೇನುತುಪ್ಪದ ಪ್ರಯೋಜನ ಹಲವು ಇವೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಮತ್ತು ಉಸಿರಾಟದ ತೊಂದರೆಗಳಿಂದ ಪರಿಹಾರ ಪಡೆಯಲು ಮತ್ತು ಅರಿಶಿನ ಮತ್ತು ಜೇನುತುಪ್ಪದೊಂದಿಗೆ 1 ಟೀ ಚಮಚ ಸೇವಿಸಿ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಹಾಲು ಅಥವಾ ತುಪ್ಪದ ಜೊತೆ ಕರಿಮೆಣಸು ಸೇವಿಸಿ

    ಉತ್ತಮ ನಿದ್ರೆ, ರೋಗ ನಿರೋಧಕ ಶಕ್ತಿ ಮತ್ತು ಸಂಧಿವಾತ ನಿವಾರಣೆಗೆ ಹಾಲಿನಲ್ಲಿ ಒಂದು ಚಿಟಿಕೆ ಒಣ ಶುಂಠಿ ಪುಡಿಯನ್ನು ಮಲಗುವ ಸಮಯದಲ್ಲಿ ಸೇವಿಸಿ. ಮಾನಸಿಕ ಆರೋಗ್ಯ ಸುಧಾರಿಸಲು, ಮಲಗುವ ವೇಳೆಗೆ 1 ಚಮಚ ದೇಸಿ ಹಸುವಿನ ತುಪ್ಪದೊಂದಿಗೆ ಸೇವಿಸಿ.
    Published by:renukadariyannavar
    First published: