Travel Guide: ನಿಮ್ಮ ಜೇಬು ತುಂಬಿದ್ದರೆ ಮಾತ್ರ ಈ ಐಷಾರಾಮಿ ರೈಲು, ರೆಸ್ಟೋರೆಂಟ್‌ಗೆ ಹೋಗಿ!

ಕೆಲವು ಪ್ರವಾಸಿ ತಾಣಗಳು ಐಷಾರಾಮಿಯಾಗಿದ್ದು, ಇಲ್ಲಿನ ಸೌಕರ್ಯವು ತುಂಬಾ ದುಬಾರಿ ಆಗಿದೆ. ಭಾರತದ ಅತಿದೊಡ್ಡ ರೆಸ್ಟೋರೆಂಟ್ ಎಂದರೆ ಮೊರಿಮೊಟೊದ ವಾಸಾಬಿಯ ಮೊದಲಿಗೆ ಇರುತ್ತದೆ. ಓರಿಯಂಟ್ ಎಕ್ಸ್‌ಪ್ರೆಸ್ ತಾಜ್ ಪ್ಯಾಲೇಸ್ ಹೆಸರೂ ಅತ್ಯಂತ ದುಬಾರಿ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಸೇರಿದೆ!

ಜೈಪುರದ ರಾಂಬಾಗ್ ಅರಮನೆ

ಜೈಪುರದ ರಾಂಬಾಗ್ ಅರಮನೆ

  • Share this:
    ನೀವು ಪ್ರಯಾಣ (Travel) ಮಾಡಲು ಮತ್ತು ಪ್ರವಾಸಿಗರಾಗಿದ್ದರೆ (Travelers) ಮತ್ತು ಪ್ರವಾಸಕ್ಕೆ ಹೋಗಲು ಯೋಜನೆ ಮಾಡುವವರಾಗಿದ್ದರೆ ಸಾಕಷ್ಟು ಪ್ರವಾಸಿ ತಾಣಗಳ (Tourist Spots) ಬಗ್ಗೆ ತಿಳಿಯುವುದು ತುಂಬಾ ಅವಶ್ಯಕ ಆಗಿದೆ. ಪ್ರತಿಯೊಬ್ಬರೂ ತಮ್ಮ ಪ್ರವಾಸದಲ್ಲಿ ಐಷಾರಾಮಿ ಮತ್ತು ಸೌಕರ್ಯಗಳ ಸಂಪೂರ್ಣ ಕಾಳಜಿ (Care) ವಹಿಸುವುದು ತುಂಬಾ ಮುಖ್ಯ. ಕೆಲವು ಪ್ರವಾಸಿ ತಾಣಗಳು ಮತ್ತು ಹೋಟೆಲ್ ಗಳು (Hotel), ಸ್ಥಳಗಳು  ಐಷಾರಾಮಿ ಮತ್ತು ಸೌಕರ್ಯವು ತುಂಬಾ ದುಬಾರಿ ಆಗಿದೆ. ನೀವು ನಿಮ್ಮ ಬಜೆಟ್‌ ನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ ಕೆಲವು ಸ್ಥಳಗಳಿಗೆ ಹೋಗಬೇಡಿ. ಭಾರತದಲ್ಲಿನ ಈ ಸ್ಥಳಗಳಲ್ಲಿ ಕೆಲವು ಅತ್ಯಂತ ದುಬಾರಿ ಎಂದು ಪರಿಗಣಿಸಲಾಗಿದೆ.

    ಇಲ್ಲಿ ನಾವು ಭಾರತದ ಅತ್ಯಂತ ದುಬಾರಿ ರೈಲು, ಭಾರತದ ಅತ್ಯಂತ ದುಬಾರಿ ಮಾಲ್‌, ಭಾರತದ ಅತ್ಯಂತ ದುಬಾರಿ ಹೋಟೆಲ್‌ , ಭಾರತದ ಅತ್ಯಂತ ದುಬಾರಿ ರೆಸ್ಟೋರೆಂಟ್ ಯಾವುವು ಎಂಬ ಬಗ್ಗೆ ಇಲ್ಲಿ ನೋಡೋಣ.

    ಅತ್ಯಂತ ದುಬಾರಿ ರೆಸ್ಟೋರೆಂಟ್

    ಭಾರತದ ಅತಿದೊಡ್ಡ ರೆಸ್ಟೋರೆಂಟ್ ಎಂದರೆ ಮೊರಿಮೊಟೊದ ವಾಸಾಬಿಯ ಹೆಸರು ಪಟ್ಟಿಯ ಮೇಲ್ಭಾಗದಲ್ಲಿ ಬರುತ್ತದೆ. ಇದರ ನಂತರ, ಓರಿಯಂಟ್ ಎಕ್ಸ್‌ಪ್ರೆಸ್, ತಾಜ್ ಪ್ಯಾಲೇಸ್ (ನವದೆಹಲಿ) ಹೆಸರೂ ಅತ್ಯಂತ ದುಬಾರಿ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಸೇರಿದೆ. ನೀವು ನಿಮ್ಮ ಕುಟುಂಬದೊಂದಿಗೆ ಇಲ್ಲಿಗೆ ಹೋಗುತ್ತಿದ್ದರೆ, ನಿಮ್ಮ ಜೇಬು ಮತ್ತು ದುಡ್ಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

    ಇದನ್ನೂ ಓದಿ: ಈ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ, ಹಣ್ಣು ತಿನ್ನುವ ಮುನ್ನ ಯೋಚಿಸಿ

    ಭಾರತದಲ್ಲಿ ದುಬಾರಿ ಹೋಟೆಲ್‌

    ಭಾರತದ ದುಬಾರಿ ಹೋಟೆಲ್‌ಗಳಲ್ಲಿ ರಾಂಬಾಗ್ ಅರಮನೆಯ ಹೆಸರು ಅಗ್ರಸ್ಥಾನದಲ್ಲಿದೆ. ಈ ಹೋಟೆಲ್ ರಾಜಸ್ಥಾನದ ಜೈಪುರದಲ್ಲಿದೆ. ರಾಂಬಾಗ್ ಅರಮನೆಯಲ್ಲಿ ಒಮ್ಮೆ ಊಟ ಮಾಡಬೇಕಾದರೆ ಸುಮಾರು 10 ರಿಂದ 12 ಸಾವಿರ ರೂ. ಮಧ್ಯಮ ವರ್ಗದ ಮನುಷ್ಯ ಇಲ್ಲಿ ನಿಂಬೆ ಪಾನಕ ಮಾತ್ರ ಖರೀದಿಸಬಹುದು.

    ಅತ್ಯಂತ ವಿಸ್ತಾರವಾದ ಹೋಟೆಲ್ ರಾಂಬಾಗ್ ಪ್ಯಾಲೇಸ್ ಆಗಿದೆ. ಈ ಹೋಟೆಲ್ ರಾಜಸ್ಥಾನದ ಜೈಪುರದಲ್ಲಿ್ದು, ಸಾಕಷ್ಟು ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತದೆ. ಇದರ ನಂತರ, ಒಬೆರಾಯ್ ಉದಯವಿಲಾಸ್‌ನಲ್ಲಿ (ಉದಯಪುರ) ಎರಡನೇ ಸ್ಥಾನದಲ್ಲಿದೆ. ಮೂರನೆಯದ್ದು ಲೀಲಾ ಪ್ಯಾಲೇಸ್‌ ಆಗಿದೆ. ರಾಂಬಾಗ್ ಅರಮನೆಯಲ್ಲಿ ಒಂದು ಬಾರಿ ಊಟ ಮಾಡಲು ನಿಮ್ಮ ಬಳಿ ಕನಿಷ್ಠ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ಬೇಕು.

     ಭಾರತದ ಅತ್ಯಂತ ದುಬಾರಿ ರೈಲು

    ನೀವು ರೈಲಿನಲ್ಲಿ ಎಷ್ಟು ಬಾರಿ ಪ್ರಯಾಣ ಮಾಡಿದ್ದೀರಿ? ಮಹಾರಾಜ ಎಕ್ಸ್‌ಪ್ರೆಸ್ ಭಾರತದ ಅತ್ಯಂತ ದುಬಾರಿ ರೈಲು. ಈ ರೈಲಿನಲ್ಲಿ ಪ್ರಯಾಣಿಸಲು ನಿಮ್ಮ ಬಳಿ ಸುಮಾರು 4 ರಿಂದ 6 ಲಕ್ಷ ರೂಪಾಯಿ ಇರಬೇಕು. ನೀವು ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣಿಸಿರತ್ತೀರಿ. ಆದರೆ ಅತ್ಯಂತ ದುಬಾರಿ ರೈಲಿನ ಬಗ್ಗೆ ಇಲ್ಲಿ ನಾವು ಹೇಳುತ್ತಿದ್ದೇವೆ. ಅತ್ಯಂತ ದುಬಾರಿ ರೈಲು ಮಹಾರಾಜ ಎಕ್ಸ್‌ಪ್ರೆಸ್ ಬಗ್ಗೆ ನೋಡೋಣ.

    ಈ ರೈಲಿನಲ್ಲಿ ಪ್ರಯಾಣಿಸಿದರೆ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ. ಈ ರೈಲಿನಲ್ಲಿ ನೀವು 7D/6N ಗಾಗಿ ಡೀಲಕ್ಸ್ ಕ್ಯಾಬಿನ್ ಅನ್ನು ಬುಕ್ ಮಾಡಿ. ಮತ್ತು ಪ್ರಯಾಣಿಸಿದರೆ, ನೀವು $7,380 ಅಂದರೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ನೀವು 4D/3N ಗಾಗಿ ಡೀಲಕ್ಸ್ ಕ್ಯಾಬಿನ್ ಅನ್ನು ಬುಕ್ ಮಾಡಿದರೆ ನೀವು $46,50 ಅಂದರೆ ಸುಮಾರು 4 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ.

    ಇದನ್ನೂ ಓದಿ: ಒಂದು ಕಪ್ ವಾಲ್ ನಟ್ಸ್​ನಲ್ಲಿಯ ಪೋಷಕಾಂಶ, ಪ್ರಯೋಜನಗಳ ಸೀಕ್ರೆಟ್

    ಅತ್ಯಂತ ವಿಸ್ತಾರವಾದ ಮಾಲ್‌

    ಅತ್ಯಂತ ವಿಸ್ತಾರವಾದ ಮಾಲ್‌ಗಳಲ್ಲಿ ದೆಹಲಿಯ ಡಿಎಲ್ಎಫ್ ಎಂಪೋರಿಯೊ ಹೆಸರಿನ ಮಾಲ್ ಫೇಮಸ್ ಆಗಿದೆ. ಮುಂಬೈನಲ್ಲಿ ಫೀನಿಕ್ಸ್ ಹೆಸರಿನ ಮತ್ತೊಂದು ಮಾಲ್ ಇದೆ. ಇವುಗಳು ನಿಮ್ಮ ಜೇಬಿನ ಹೊರೆ ಹೆಚ್ಚಿಸುತ್ತವೆ. ಇತರ ಮಾಲ್‌ಗಳಿಗಿಂತ ಹೆಚ್ಚಿನ ಬೆಲೆಗೆ ಇಲ್ಲಿ ಕೆಲವು ವಸ್ತುಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ.
    Published by:renukadariyannavar
    First published: