Bones Health: ಯಾವ ವಯಸ್ಸಿನವರು ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಸೇವಿಸಬೇಕು ಗೊತ್ತಾ!

ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಂ ಬೇಕು. ಹೆಚ್ಚಿನ ಕ್ಯಾಲ್ಸಿಯಂ ನಿಮಗೆ ಡೈರಿ ಆಹಾರಗಳಲ್ಲಿ ಕಂಡು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಸಸ್ಯಾಹಾರಿಗಳು ಆಗಿದ್ದರೆ ಡೈರಿ ಪದಾರ್ಥಗಳ ಸೇವನೆ ಮಾಡಿ ಕ್ಯಾಲ್ಸಿಯಂ ಪಡೆಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವ್ಯಕ್ತಿಯು (Person) ಆರೋಗ್ಯಕರವಾಗಿ (Healthy) ಓಡಾಡಿಕೊಂಡು ಇರಲು ಮೂಳೆಗಳು (Bones) ಗಟ್ಟಿಯಾಗಿರಬೇಕು. ಮೂಳೆಗಳು ಸ್ಟ್ರಾಂಗ್ (Strong) ಆಗಿರಬೇಕಾದ್ರೆ ಮೂಳೆಗಳು ಮತ್ತು ಹಲ್ಲುಗಳ (Teeth) ಬಲಕ್ಕೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಕ್ಯಾಲ್ಸಿಯಂ ಮೂಳೆಗಳ ಬಲಕ್ಕೆ ಬೇಕಾಗುವ ಪ್ರಾಥಮಿಕ ಪೋಷಕಾಂಶ ಆಗಿದೆ. ಹಾಗಾಗಿ ದೇಹದಲ್ಲಿ ಅದರ ಸಾಕಷ್ಟು ಪ್ರಮಾಣ ಇರುವುದು ತುಂಬಾ ಮುಖ್ಯ. ಪ್ರತೀ ವ್ಯಕ್ತಿಯಲ್ಲಿ ಕ್ಯಾಲ್ಸಿಯಂ ಅವಶ್ಯಕತೆ ಇದೆ. ದೈಹಿಕವಾಗಿ ಸದೃಢವಾಗಿರಲು ಕ್ಯಾಲ್ಸಿಯಂ ಬೇಕು. ಹೆಚ್ಚಿನ ಕ್ಯಾಲ್ಸಿಯಂ ನಿಮಗೆ ಡೈರಿ ಆಹಾರಗಳಲ್ಲಿ ಕಂಡು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಸಸ್ಯಾಹಾರಿಗಖು ಆಗಿದ್ದರೆ, ಡೈರಿ ಪದಾರ್ಥಗಳ ಸೇವನೆ ಮಾಡಿ ಕ್ಯಾಲ್ಸಿಯಂ ಪಡೆಯಿರಿ.

    ಯಾವುದೇ ರೀತಿಯ ಡೈರಿ ಉತ್ಪನ್ನವನ್ನು ನೀವು ಸೇವನೆ ಮಾಡದೇ ಇದ್ದರೆ ನಿಮ್ಮ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಪಡೆಯಲು ಸಾಧ್ಯ ಆಗಲ್ಲ. ಹೆಚ್ಚಿನ ಕ್ಯಾಲ್ಸಿಯಂ ಕೊರತೆಯು ಸಸ್ಯಾಹಾರಿ ಜನರಲ್ಲಿ ಮಾತ್ರ ಕಂಡು ಬರುತ್ತದೆ.

    ದೇಹಕ್ಕೆ ಎಷ್ಟು ಕ್ಯಾಲ್ಸಿಯಂ ಅಗತ್ಯವಿದೆ?

    ಮೇಯೊ ಕ್ಲಿನಿಕ್ ಪ್ರಕಾರ, ಯಾವ ವಯೋಮಾನದವರಿಗೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಬೇಕು ಎಂಬುದು ನಿಮ್ಮ ವಯಸ್ಸು ಮತ್ತು ಲಿಂಗ ಅವಲಂಬಿಸಿದೆ. 19 ರಿಂದ 50 ವರ್ಷ ವಯಸ್ಸಿನ ವಯಸ್ಕರಿಗೆ ದಿನಕ್ಕೆ 2,500 ಮಿಲಿ ಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    51 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಕ್ಯಾಲ್ಸಿಯಂ ಮಿತಿಯು ದಿನಕ್ಕೆ 2,000 ಮಿಲಿ ಗ್ರಾಂ ಆಗಿದೆ. ಸಾಕಷ್ಟು ಕ್ಯಾಲ್ಸಿಯಂ ಪಡೆಯಲು ನೀವು ಹಾಲು ಕುಡಿಯುವ ಅಗತ್ಯವಿಲ್ಲ. ಮತ್ತು ನೀವು ಪೂರಕಗಳನ್ನು ಸೇವನೆ ಮಾಡುವ ಅಗತ್ಯವಿಲ್ಲ ಎಂದು ಪೌಷ್ಟಿಕ ತಜ್ಞೆ ನಿತಿಕಾ ತನ್ವರ್ ಹೇಳಿದ್ದಾರೆ.

    ಹಾಲು ಅಥವಾ ಇತರ ಪ್ರಾಣಿ ಉತ್ಪನ್ನಗಳಿಂದ ಕ್ಯಾಲ್ಸಿಯಂಗಿಂತ ಸಸ್ಯ ಮೂಲಗಳಿಂದ ಕ್ಯಾಲ್ಸಿಯಂ ನಿಮಗೆ ಉತ್ತಮವಾಗಿದೆ. ಏಕೆಂದರೆ ಪ್ರಾಣಿ ಪ್ರೋಟೀನ್ಗಳು ನಿಮ್ಮ ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಹೊರ ಹಾಕುತ್ತವೆ.

    ಕ್ಯಾಲ್ಸಿಯಂ ಕೊರತೆ ಉಂಟಾದಾಗ ಏನಾಗುತ್ತದೆ?

    ನೀವು ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ದುರ್ಬಲ ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನೀವು ಎದುರಿಸಬಹುದು. ಅಲ್ಲದೆ ಮಕ್ಕಳು ತಮ್ಮ ಪೂರ್ಣ ಸಂಭಾವ್ಯ ವಯಸ್ಕ ಎತ್ತರ ತಲುಪುದೇ ಇದ್ದರೆ, ಅಂತಹ ಸಮಯದಲ್ಲಿ ವಯಸ್ಕರರು ಕಡಿಮೆ ಮೂಳೆ ದ್ರವ್ಯರಾಶಿ ಹೊಂದಿರಬಹುದು. ಇದು ಆಸ್ಟಿಯೊಪೊರೋಸಿಸ್ಗೆ ಅಪಾಯಕಾರಿ ಅಂಶ ಆಗಿದೆ.

    ಅಮರನಾಥ ಎಲೆಗಳ ಸೇವನೆ ಮೂಳೆಗಳಿಗೆ ಪ್ರಯೋಜನಕಾರಿ

    NCBI ಪ್ರಕಾರ, ಅಮರಂಥ್ ಎಲೆಗಳ ಸೇವನೆ ಮಾಡಿದರೆ ಮೂಳೆಗಳನ್ನು ಬಲಪಡಿಸಲು ನಿಮಗೆ ಪ್ರಯೋಜನಕಾರಿ ಆಗಿದೆ. ವಾಸ್ತವದಲ್ಲಿ ಇದು ಕ್ಯಾಲ್ಸಿಯಂನಲ್ಲಿ ಸಮೃದ್ಧ ಆಗಿದೆ. ಮೂಳೆಗಳ ರಚನೆ ಮತ್ತು ಅವುಗಳ ಬೆಳವಣಿಗೆಗೆ ಇದು ಬಹಳ ಮುಖ್ಯ ಆಗಿದೆ.

    ಕ್ಯಾಲ್ಸಿಯಂಗಾಗಿ ಸೆಲರಿ ಸೇವನೆ ಮಾಡಿ

    ತಜ್ಞರು ಸಸ್ಯಾಹಾರಿಗಳಿಗೆ ಸೆಲರಿ ಸೇವನೆ ಮಾಡಲು ಸಲಹೆ ನೀಡುತ್ತಾರೆ. ವಾಸ್ತವದಲ್ಲಿ ಸೆಲರಿಯು ನಿಯಾಸಿನ್, ಥಯಾಮಿನ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಅತ್ಯಂತ ಸಮೃದ್ಧ ಆಗಿದೆ. ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.

    ಮೆಂತ್ಯ ಎಲೆಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ

    ಮೆಂತ್ಯ ಎಲೆಗಳು 176 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ನ್ನು ಹೊಂದಿವೆ. ಮೆಂತ್ಯವು ಕ್ಯಾಲ್ಸಿಯಂ ಜೊತೆಗೆ ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಮೂಳೆಗಳ ಆರೋಗ್ಯ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

    ನೈಸರ್ಗಿಕವಾಗಿ ಕ್ಯಾಲ್ಸಿಯಂ ಪಡೆಯುವುದು ಹೇಗೆ

    ನೀವು ಡೈರಿ ಉತ್ಪನ್ನಗಳನ್ನು ಸೇವನೆ ಮಾಡದೇ ಹೋದರೆ ನೀವು ಕಪ್ಪು ಮತ್ತು ಬಿಳಿ ಎಳ್ಳನ್ನು ಸೇವಿಸಬಹುದು. 100 ಗ್ರಾಂ ಎಳ್ಳಿನಲ್ಲಿ ಸುಮಾರು 975 ಮಿ ಗ್ರಾಂ ಕ್ಯಾಲ್ಸಿಯಂ ಇದೆ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ರಾಗಿ ಸೇವನೆ ಮಾಡಿ ಕ್ಯಾಲ್ಸಿಯಂ ಪಡೆಯಿರಿ

    ಮೂಳೆಗಳ ಆರೋಗ್ಯ ಕಾಪಾಡಲು ಮತ್ತು ಅವುಗಳನ್ನು ಬಲಪಡಿಸಲು ಮತ್ತು ಮೂಳೆ ಮುರಿತದ ಅಪಾಯ ಕಡಿಮೆ ಮಾಡಲು ರಾಗಿ ಸೇವನೆ ಪ್ರಯೋಜನಕಾರಿ. ಕ್ಯಾಲ್ಸಿಯಂ ಕೊರತೆ ತಡೆಗಟ್ಟಲು, ಕ್ಯಾಲ್ಸಿಯಂ-ಭರಿತ ಆಹಾರದಲ್ಲಿ ರಾಗಿ ಸೇರಿಸಿ.
    Published by:renukadariyannavar
    First published: