Nutrition Week: ವಯಸ್ಸಿಗೆ ಸರಿಯಾಗಿ ಆಹಾರ ಕ್ರಮ ಹೀಗಿದ್ರೆ ಫಿಟ್​ ಆಗಿರಬಹುದು

ಮಹಿಳೆಯರು ತಮ್ಮ ವಯಸ್ಸಿಗೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡಬೇಕು. ವಯಸ್ಸಿನ ಬದಲಾಗುತ್ತಿರುವ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಆರೋಗ್ಯವಾಗಿರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಮಹಿಳೆಯು ತನ್ನ ವಯಸ್ಸಿಗೆ ಅನುಗುಣವಾಗಿ ಸರಿಯಾದ ರೀತಿಯ ಆಹಾರ ಸೇವಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉತ್ತಮ ಆರೋಗ್ಯ (Health) ಮತ್ತು ಪೋಷಣೆಗೆ ಆರೋಗ್ಯಕರ ಆಹಾರ (Food) ಸೇವನೆ ಅತ್ಯಗತ್ಯ. ಇದು ಹೃದ್ರೋಗ, ಮಧುಮೇಹ (Diabetes) ಮತ್ತು ಕ್ಯಾನ್ಸರ್ (Cancer) ಸೇರಿ ಅನೇಕ ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆರೋಗ್ಯಕರ ಆಹಾರವು ವಿವಿಧ ಆಹಾರ ಸೇವನೆ ಮತ್ತು ಕಡಿಮೆ ಉಪ್ಪು, ಸಕ್ಕರೆ ಮತ್ತು ಅಸಹ್ಯ ಕೊಬ್ಬಿನ ಆಹಾರ ಸೇವನೆ ಮಾಡದಿರುವ ಬಗ್ಗೆ ಗಮನ ಕೇಂದ್ರೀಕರಿಸಿ. ಆಹಾರ ಸೇವನೆಯ ಜಾಗೃತಿಗಾಗಿ ಸೆಪ್ಟೆಂಬರ್ 1 ರಿಂದ 7 ರವರೆಗೆ ಪೌಷ್ಟಿಕಾಂಶ ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ಇದು ಸಮತೋಲಿತ ಆಹಾರ ಪ್ರಾಮುಖ್ಯತೆ ಉತ್ತೇಜಿಸುವ ಗುರಿ ಹೊಂದಿದೆ. ಇದು ವಿವಿಧ ಕಾರ್ಯಗಳಿಗೆ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ.

  ಮಹಿಳೆಯರು ತಮ್ಮ ವಯಸ್ಸಿಗೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡಬೇಕು. ವಯಸ್ಸಿನ ಬದಲಾಗುತ್ತಿರುವ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಆರೋಗ್ಯವಾಗಿರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.

  ಅಬಾಟ್‌ನ ಪೌಷ್ಟಿಕಾಂಶ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಸಹಾಯಕ ನಿರ್ದೇಶಕ ಡಾ.ಗಣೇಶ್ ಕಾಡೆ ಮಹಿಳೆಯು ತನ್ನ ವಯಸ್ಸಿಗೆ ಅನುಗುಣವಾಗಿ ಸರಿಯಾದ ರೀತಿಯ ಆಹಾರ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.

  ಇದನ್ನೂ ಓದಿ: ಕೂದಲು, ನೆತ್ತಿಯ ರಕ್ಷಣೆಗೆ ಎಳ್ಳೆಣ್ಣೆಯ ಮಸಾಜ್! ಎಷ್ಟು ಪರಿಣಾಮಕಾರಿ?

  ಹದಿಹರೆಯದ ಹುಡುಗಿಯರ ಆಹಾರ ಕ್ರಮ

  ಹದಿಹರೆಯವು ತ್ವರಿತ ಬೆಳವಣಿಗೆಯ ಸಮಯ. ಆದ್ದರಿಂದ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ. ಏಕೆಂದರೆ ಸರಿಯಾದ ಹಾರ್ಮೋನ್ ಸಮತೋಲನಕ್ಕೆ ಆರೋಗ್ಯಕರ ಆಹಾರವು ಅವಶ್ಯಕ. ಅಂತಹ ಸ್ಥಿತಿಯಲ್ಲಿ ಮೀನು, ಆವಕಾಡೊ, ಬೀಜಗಳು, ಆಲಿವ್ ಎಣ್ಣೆ ಇತ್ಯಾದಿಗಳಿಂದ ಉತ್ತಮ ಕೊಬ್ಬನ್ನು ಸೇವಿಸುವ ಮೂಲಕ ಫಿಟ್ ಆಗಿರಬೇಕು.

  ಈ ಹಂತದಲ್ಲಿ ಮುಟ್ಟಿನ ಕಾರಣ ಸಾಮಾನ್ಯವಾಗಿ ಕಡಿಮೆ ಹಿಮೋಗ್ಲೋಬಿನ್ ಉಂಟು ಮಾಡುತ್ತದೆ. ಹಾಗಾಗಿ ಕಬ್ಬಿಣ, ಪ್ರೋಟೀನ್ ಸಮೃದ್ಧ ಆಹಾರ ಸೇವಿಸಿ. ಸಂಸ್ಕರಿಸಿದ ಸಕ್ಕರೆ, ಸ್ಯಾಚುರೇಟೆಡ್ ಮತ್ತು ಜಂಕ್ ಆಹಾರ ತಪ್ಪಿಸಿ.

  30 ವರ್ಷ ವಯಸ್ಸಿನ ಮಹಿಳೆಯರಿಗೆ ಆಹಾರ ಕ್ರಮ

  30 ರ ಹರೆಯದವರು ಕ್ಯಾಲ್ಸಿಯಂ ಸೇವನೆ ಹೆಚ್ಚಿಸಲು ಇದು ಉತ್ತಮ ಸಮಯ. ನೀವು ಗರ್ಭಿಣಿಯಾಗಿದ್ದರೆ ಅಥವಾ ಹಾಲುಣಿಸುವ ವೇಳೆ ನೇರ ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಪದಾರ್ಥ ಸೇವಿಸಬೇಕು. ನೀವು ಗರ್ಭಧಾರಣೆ ಯೋಜಿಸುತ್ತಿದ್ದರೆ ವಿಟಮಿನ್ ಡಿ, ಬಿ 12, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲ ಹೊಂದಿರುವ ಪೂರಕ ಸೇವಿಸುವುದು ಅತ್ಯಗತ್ಯ.

  ಈ ವಯಸ್ಸಿನ ಎಲ್ಲಾ ಮಹಿಳೆಯರಿಗೆ ಸಮತೋಲಿತ ಆಹಾರ ಸೇವನೆ ಮುಖ್ಯ. ಮಾಂಸ ಮತ್ತು ಡೈರಿ, ಸಮುದ್ರಾಹಾರ, ಹಸಿರು ಎಲೆಗಳ ತರಕಾರಿ, ಕಾಳು ಮತ್ತು ಧಾನ್ಯ, ಒಣಗಿದ ಹಣ್ಣುಗಳು ಮತ್ತು ಸಿಟ್ರಸ್ ಹಣ್ಣು ಸೇವಿಸಿ.

  40 ರಿಂದ 50 ನೇ ವಯಸ್ಸಿನವರ ಆಹಾರ ಕ್ರಮ

  40 ಮತ್ತು 50 ರ ಹರೆಯದ ಮಹಿಳೆಯರಿಗೆ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಗತ್ಯವಿದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಹಣ್ಣು, ಕೋಕೋ, ಹಸಿರು ಚಹಾ ಮತ್ತು ಧಾನ್ಯ ,ತರಕಾರಿಗಳು ಮತ್ತು ಹಣ್ಣುಗಳಂತಹ ನಾರಿನಂಶವಿರುವ ಆಹಾರ ಹೆಚ್ಚು ಸೇವಿಸಿ. D ಮತ್ತು C ಜೀವಸತ್ವಗಳ ಜೊತೆಗೆ, ನರವೈಜ್ಞಾನಿಕ ಕಾರ್ಯಕ್ಕೆ ಕಾರಣವಾಗಿರುವ B12 ಪದಾರ್ಥ ಸೇವಿಸಿ.

  ವಿಟಮಿನ್ B12 ಬಲವರ್ಧಿತ ಆಹಾರ ಪೂರಕ ಸೇವಿಸಬಹುದು. ಚಯಾಪಚಯ ಅಸ್ವಸ್ಥತೆ ಮತ್ತು ವಿಟಮಿನ್ ಕೊರತೆ ಈ ವಯಸ್ಸಿನಲ್ಲಿ ಹೆಚ್ಚು. ಕಡಿಮೆ ಗ್ಲೈಸೆಮಿಕ್, ನಿಯಮಿತ ವ್ಯಾಯಾಮ, ಕಡಿಮೆ ಕೊಬ್ಬು, ಹೆಚ್ಚಿನ ಪ್ರೋಟೀನ್ ಆಹಾರ ಸೇವಿಸಿ.

  60 ನೇ ವಯಸ್ಸಿನವರ ಆಹಾರ ಕ್ರಮ

  60 ರ ಹರೆಯದಲ್ಲೂ ನೀವು ಫಿಟ್ ಆಗಿ ಮತ್ತು ಸಕ್ರಿಯರಾಗಿರಲು ಬಯಸಿದರೆ, ನಿಮ್ಮ ಆಹಾರದಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚಿಸಿ. ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ ಸಮೃದ್ಧ ಆಹಾರ ಸೇವಿಸಿ. ಮಸಾಲೆಯುಕ್ತ ಆಹಾರ ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ. ಸಕ್ಕರೆ ಪದಾರ್ಥ ಕಡಿಮೆ ಮಾಡಿ. ಅಸಮತೋಲನ ಮತ್ತು ಅಂತಿಮವಾಗಿ ಮಧುಮೇಹಕ್ಕೆ ಕಾರಣವಾಗುವ ಬಹಳಷ್ಟು ಸಿಹಿ ತಿಂಡಿ ತಪ್ಪಿಸಿ. ಡೈರಿ ಉತ್ಪನ್ನ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧ ಪದಾರ್ಥ ಸೇವಿಸಿ.

  ಇದನ್ನೂ ಓದಿ: ತೂಕ ಇಳಿಸಲು ಈ ಡಯಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು ಎಚ್ಚರ!

  ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮುಖ್ಯ ಸಲಹೆಗಳು

  ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿ. ಹೆಚ್ಚು ನೀರು, ದ್ರವ ಪದಾರ್ಥ ಸೇವಿಸಿ. ಪೋಷಕಾಂಶಗಳ ಆರೋಗ್ಯಕರ ಸಮತೋಲನಕ್ಕೆ ಪೌಷ್ಟಿಕ ಪಾನೀಯ ಸೇರಿಸಿ. ಸಾಕಷ್ಟು ನಿದ್ರೆ ಮಾಡಿ. ವ್ಯಾಯಾಮ ಮಾಡಿ, ಸಕ್ರಿಯರಾಗಿರಿ. ಉತ್ತಮ ಜೀವನಶೈಲಿ ಫಾಲೋ ಮಾಡಿ.
  Published by:renukadariyannavar
  First published: