Bowel Cancer: ಈ ವಯಸ್ಸಿನ ಜನರು ಕರುಳಿನ ಕ್ಯಾನ್ಸರ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು; ಇಲ್ಲ ಅಪಾಯ

ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ನ್ನು ಕರುಳಿನ ಕ್ಯಾನ್ಸರ್ ಎನ್ನುತ್ತಾರೆ. ಕರುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಬೇಕಾದರೆ ಮೊದಲು ಇದು ನಿಮ್ಮ ಕರುಳಿನಲ್ಲಿ ಕ್ಯಾನ್ಸರ್ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಶ್ವಾದ್ಯಂತ (World) ಸಾವಿಗೆ (Death) ಪ್ರಮುಖ ಕಾರಣಗಳಲ್ಲಿ (Causes) ಹೃದ್ರೋಗ ಮತ್ತು ಕ್ಯಾನ್ಸರ್ (Heart Disease And Cancer) ಕಾಯಿಲೆಗಳು ಸೇರಿವೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಪ್ರಕಾರ 2040 ರ ವೇಳೆಗೆ ವರ್ಷಕ್ಕೆ 29.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 16.4 ಮಿಲಿಯನ್ ಕ್ಯಾನ್ಸರ್ ಸಂಬಂಧಿತ ಸಾವುಗಳು ಸಂಭವಿಸುವ ನಿರೀಕ್ಷೆ ಹೆಚ್ಚಿದೆ ಎಂದು ತಿಳಿಸಿದೆ. ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ಕ್ಯಾನ್ಸರ್ ತಡೆಗಟ್ಟಲು ವಿವಿಧ ರೀತಿಯ ಕ್ಯಾನ್ಸರ್ ಬಗ್ಗೆ ಅರಿವು ಹೊಂದುವುದು ತುಂಬಾ ಮುಖ್ಯ. ಇಂತಹ ಸ್ಥಿತಿಯಲ್ಲಿ ಇಂದು ನಾವು ಕರುಳಿನ ಕ್ಯಾನ್ಸರ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಬಗ್ಗೆ ತಿಳಿಯೋಣ.

    ಕರುಳಿನ ಕ್ಯಾನ್ಸರ್ ಎಂದರೇನು?

    ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ನ್ನು ಕರುಳಿನ ಕ್ಯಾನ್ಸರ್ ಅಥವಾ ಇದನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ.

    ಕರುಳಿನ ಕ್ಯಾನ್ಸರ್ ತಡೆಗೆ ಚಿಕಿತ್ಸೆ ಏನು?

    ಕರುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಬೇಕಾದರೆ ಮೊದಲು ಇದು ನಿಮ್ಮ ಕರುಳಿನಲ್ಲಿ ಕ್ಯಾನ್ಸರ್ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯು ಅನೇಕ ಪರಿಸರ, ಜೀವನಶೈಲಿ ಮತ್ತು ಆನುವಂಶಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.

    ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

    ಎಲ್ಲ ರೀತಿಯ ಜನರೂ ಸಹ ಸಮಾನವಾಗಿ ಕ್ಯಾನ್ಸರ್ ಅಪಾಯ ಎದುರಿಸುತ್ತಿದ್ದಾರೆ. ಅದರ ರೋಗನಿರ್ಣಯದ ಸಮಸ್ಯೆಯು ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗುತ್ತದೆ. ಹೊಟ್ಟೆಯ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚು ಕಂಡು ಬರುತ್ತದೆ.

    ಕರುಳಿನ ಕ್ಯಾನ್ಸರ್ ನ್ನು ಗುಣಪಡಿಸಬಹುದೇ?

    ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳು ಗುಣಮುಖರಾಗುವ ಸಾಧ್ಯತೆ ಇದೆ. ಕರುಳಿನ ಕ್ಯಾನ್ಸರ್ ಗುಣಪಡಿಸಬಹುದಾಗಿದೆ ಎನ್ನುತ್ತಾರೆ ತಜ್ಞರು. ಶಸ್ತ್ರಚಿಕಿತ್ಸೆ ಮೂಲಕ ಪ್ರಾಥಮಿಕ ರೂಪದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಬಹುದು. ಸುಮಾರು 50% ರೋಗಿಗಳು ಇದರಿಂದ ಚೇತರಿಕೆ ಕಂಡಿದ್ದಾರೆ. ಆದರೆ ಚೇತರಿಕೆಯ ನಂತರ ಇದು ಮತ್ತೆ ಕರುಳಿನ ಕ್ಯಾನ್ಸರ್ ಸಂಭವಿಸಬಹುದು. ಇದು ಅನೇಕ ಸಂದರ್ಭಗಳಲ್ಲಿ ಮಾರಕವೆಂದು ಸಾಬೀತಾಗುತ್ತದೆ.

    ಯಾವ ವಯಸ್ಸಿನ ಜನರು ಕರುಳಿನ ಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು?

    ಅಂಕಿ ಅಂಶಗಳ ಪ್ರಕಾರ ಕರುಳಿನ ಕ್ಯಾನ್ಸರ್ ನ ಸುಮಾರು 90 ಪ್ರತಿಶತ ಪ್ರಕರಣಗಳು 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ರೋಗ ನಿರ್ಣಯ ಮಾಡಲ್ಪಡುತ್ತವೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಗಟ್ಟಲು ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ.

    ಕರುಳಿನ ಕ್ಯಾನ್ಸರ್ ಸಾಮಾನ್ಯ ಲಕ್ಷಣಗಳು

    ಕರುಳಿನ ಅಭ್ಯಾಸದಲ್ಲಿ ಬದಲಾವಣೆ

    ಆಗಾಗ್ಗೆ ಅತಿಸಾರ ಅಥವಾ ಮಲಬದ್ಧತೆ

    ಮಲದಲ್ಲಿ ರಕ್ತ ಬರುವುದು

    ನಿರಂತರ ಹೊಟ್ಟೆ ನೋವು, ಅಸಮಾಧಾನ

    ಕರುಳಿನ ಸಂಪೂರ್ಣ ಖಾಲಿಯಾದ ಭಾವನೆ

    ದೌರ್ಬಲ್ಯ ಅಥವಾ ಆಯಾಸ

    ಹಠಾತ್ ತೂಕ ನಷ್ಟ

    ಕರುಳಿನ ಕ್ಯಾನ್ಸರ್ ಸಂಕೇತಗಳು

    ಕಬ್ಬಿಣದ ಕೊರತೆ ಮತ್ತು ರಕ್ತಹೀನತೆ

    ಬಣ್ಣದಲ್ಲಿ ಬದಲಾವಣೆ

    ಕಾಮಾಲೆ

    ತೋಳು ಅಥವಾ ಕಾಲುಗಳಲ್ಲಿ ಊತ

    ಉಸಿರಾಟ ತೊಂದರೆ

    ದೀರ್ಘಕಾಲದ ತಲೆನೋವು

    ಮಂದ ದೃಷ್ಟಿ

    ಮೂಳೆ ಮುರಿತ

    ಯಾವ ಕಾರಣಗಳು ಕರುಳಿನ ಕ್ಯಾನ್ಸರ್ ಹೆಚ್ಚಿಸುತ್ತವೆ?

    ಕರುಳಿನ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳಾದ ಅಂಶಗಳೆಂದರೆ ಸಾಮಾನ್ಯ ಕಾರಣಗಳಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚುವುದು, ಧೂಮಪಾನ, ಟೈಪ್ 2 ಮಧುಮೇಹ, ಜಡ ಜೀವನಶೈಲಿ, ಸಂಸ್ಕರಿಸಿದ ಮಾಂಸ ಸೇವನೆ ಇತ್ಯಾದಿ.

    ಇದನ್ನೂ ಓದಿ: ತಿಂಗಳುಗಟ್ಟಲೇ ಬಾಧಿಸುವ ಕಾಮಾಲೆಯಿಂದ ಶೀಘ್ರ ಪರಿಹಾರ ಕೊಡುತ್ತೆ ಈ ಮನೆಮದ್ದು!

    ಕರುಳಿನ ಕ್ಯಾನ್ಸರ್ ತಡೆಗೆ ಏನು ಮಾಡಬೇಕು?

    ಆರೋಗ್ಯಕರ ಜೀವನಶೈಲಿ, ನಿಮ್ಮ ದಿನಚರಿಯಲ್ಲಿ ಯೋಗ ಅಳವಡಿಸಿ. ಆರೋಗ್ಯಕರ, ಸಂತೋಷ ಹಾಗೂ ರೋಗ ಮುಕ್ತ ಜೀವನ ನಡೆಸಲು ನಿರ್ಧರಿಸಿ. ಕಳಪೆ ಜೀವನಶೈಲಿ ಸುಧಾರಿಸಿ. ಉತ್ತಮ ಆಹಾರ ಮತ್ತು ಜೀವನಶೈಲಿ ರೂಢಿಸಿಕೊಳ್ಳಿ. ಇದು ನಿಮ್ಮ ಜೀವಿತಾವಧಿ ಹೆಚ್ಚಿಸುತ್ತದೆ.
    Published by:renukadariyannavar
    First published: