• Home
  • »
  • News
  • »
  • lifestyle
  • »
  • Children’s Health: ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಪ್ರಮಾಣದ ಕಬ್ಬಿಣಾಂಶ ಬೇಕಾಗುತ್ತದೆ?

Children’s Health: ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಪ್ರಮಾಣದ ಕಬ್ಬಿಣಾಂಶ ಬೇಕಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳ ಆಹಾರದಲ್ಲಿ ಕಬ್ಬಿಣಾಂಶ ಎಷ್ಟು ಇರಬೇಕು. ಹಾಗೂ ಅವರಿಗೆ ಹೇಗೆ ಕಬ್ಬಿಣದಂಶವನ್ನ ಪೂರೈಸಬೇಕು. ಮಕ್ಕಳ ಆಹಾರದಲ್ಲಿ ಕಬ್ಬಿಣ ಏಕೆ ಮತ್ತು ಎಷ್ಟು ಅಗತ್ಯವಿದೆ. ಮಕ್ಕಳು ಆಹಾರ ಸೇವನೆಗೆ ತುಂಬಾ ಹಠ ಮಾಡ್ತಾರೆ. ಕೆಲವು ಮಕ್ಕಳು ಆಹಾರವನ್ನೇ ಸೇವಿಸಲ್ಲ. ಹೀಗಿದ್ದಾಗ ಮಕ್ಕಳಿಗೆ ಪೋಷಕಾಂಶ ಒದಗಿಸುವುದು ಮತ್ತು ಆರೋಗ್ಯಕರ ಆಹಾರ ನೀಡುವುದು ತುಂಬಾ ಕಷ್ಟಕರ.

ಮುಂದೆ ಓದಿ ...
  • Share this:

    ದೇಹದ ಆರೋಗ್ಯ (Body Health) ಕಾಪಾಡಲು ಕಬ್ಬಿಣಾಂಶದ (Iron)  ತುಂಬಾ ಅತ್ಯಗತ್ಯ ಖನಿಜವಾಗಿದೆ. ಕಬ್ಬಿಣ ಅಂಶ ಕೊರತೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ (Hemoglobin Deficiency) ಉಂಟು ಮಾಡಲು ಕಾರಣವಾಗುತ್ತದೆ. ಮತ್ತು ದೇಹದಲ್ಲಿನ ಕೆಂಪು ರಕ್ತ ಕಣಗಳು ಕಡಿಮೆ ಆಗಲು ಕಾರಣವಾಗುತ್ತೆ. ಇದು ಮುಂದುವರೆದು ರಕ್ತಹೀನತೆ ಅಪಾಯಕಾರಿ ಕಾಯಿಲೆಗೆ ಕಾರಣವಾಗುವ ಸ್ಥಿತಿ ಹೆಚ್ಚು. ಹಾಗಾಗಿ ಮಕ್ಕಳು ಮತ್ತು ವಯಸ್ಕರು ದೇಹದಲ್ಲಿ ಸರಿಯಾದ ಪ್ರಮಾಣದ ಕಬ್ಬಿಣಾಂಶ ಹೊಂದಿರುವುದು ಬಹಳ ಮುಖ್ಯ ಎಂದು ತಜ್ಞರು ಹೇಳ್ತಾರೆ. ಒಂದು ವೇಳೆ ಕಬ್ಬಿಣಾಂಶ ಕೊರತೆ ಉಂಟಾದರೆ ಅದು ಅನೇಕ ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತದೆ ಅಂತಾ ಎಚ್ಚರಿಸಿದ್ದಾರೆ.


    ಮಕ್ಕಳ ಆಹಾರದಲ್ಲಿ ಕಬ್ಬಿಣಾಂಶ ಎಷ್ಟು ಇರಬೇಕು?


    ಆದರೆ ಮಕ್ಕಳ ಆಹಾರದಲ್ಲಿ ಕಬ್ಬಿಣಾಂಶ ಎಷ್ಟು ಇರಬೇಕು? ಹಾಗೂ ಅವರಿಗೆ ಹೇಗೆ ಕಬ್ಬಿಣದಂಶವನ್ನ ಪೂರೈಸಬೇಕು? ಮಕ್ಕಳ ಆಹಾರದಲ್ಲಿ ಕಬ್ಬಿಣ ಏಕೆ ಮತ್ತು ಎಷ್ಟು ಅಗತ್ಯವಿದೆ? ಮಕ್ಕಳು ಆಹಾರ ಸೇವನೆಗೆ ತುಂಬಾ ಹಠ ಮಾಡ್ತಾರೆ. ಕೆಲವು ಮಕ್ಕಳು ಆಹಾರವನ್ನೇ ಸೇವಿಸಲ್ಲ. ಹೀಗಿದ್ದಾಗ ಮಕ್ಕಳಿಗೆ ಪೋಷಕಾಂಶ ಒದಗಿಸುವುದು ಮತ್ತು ಆರೋಗ್ಯಕರ ಆಹಾರ ನೀಡುವುದು ತುಂಬಾ ಕಷ್ಟಕರ.


    ಮಕ್ಕಳ ಆಹಾರದಲ್ಲಿ ಕಬ್ಬಿಣಾಂಶ ಏಕೆ ಅಗತ್ಯವಿದೆ?


    ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಅವರಿಗೆ ಸರಿಯಾದ ಬೆಳವಣಿಗೆ ಮತ್ತು ಬಲವಾದ ದೇಹಕ್ಕಾಗಿ ಕಬ್ಬಿಣ ಬೇಕು. ಮಕ್ಕಳು ತಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದ ಕಬ್ಬಿಣ ಪದಾರ್ಥ ಸೇವನೆ ಮಾಡ್ಬೇಕು. ಕಬ್ಬಿಣದ ಕೊರತೆಯು ಮಕ್ಕಳಿಗೆ ಹೇಗೆ ಹಾನಿಕಾರಕವಾಗಿದೆ ತಿಳಿಯೋಣ.




    ಮಕ್ಕಳ ಬೆಳವಣಿಗೆ ಕುಂಠಿತವಾಗುವುದು


    ಕಬ್ಬಿಣವು ಅತ್ಯಗತ್ಯ ಅಂಶ. ಇದು ಬಲವಾದ ಮೂಳೆ ಮತ್ತು ಸ್ನಾಯುಗಳ ಸರಿಯಾದ ಬೆಳವಣಿಗೆಗೆ ಸಹಕಾರಿ. ಮಕ್ಕಳಲ್ಲಿ ಕಬ್ಬಿಣದ ಕೊರತೆಯು ಅವರ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ರಕ್ತಹೀನತೆಯ ಅಪಾಯ ಉಂಟು ಮಾಡುತ್ತದೆ.


    ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತದೆ


    ಪ್ರತಿರಕ್ಷಣಾ ವ್ಯವಸ್ಥೆ ಆರೋಗ್ಯವಾಗಿಡಲು ಎಲ್ಲಾ ಪೋಷಕಾಂಶ ಪದಾರ್ಥ ಸೇವಿಸಬೇಕು. ಉತ್ತಮ ರೋಗ ನಿರೋಧಕ ಶಕ್ತಿ, ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಗುವಿನ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳಲು ಕಬ್ಬಿಣದ ಕೊರತೆ ಕಾರಣವಾಗಿದೆ. ಇದು ಮಕ್ಕಳಿಗೆ ಶೀತ ಅಥವಾ ಜ್ವರ ಬರುವ ಅಪಾಯ ಹೆಚ್ಚಿಸುತ್ತದೆ.


    ಮಾನಸಿಕ ಬೆಳವಣಿಗೆಗೆ ಅಡ್ಡಿ


    ಮಕ್ಕಳ ದೈಹಿಕ ಬೆಳವಣಿಗೆ ಜೊತೆಗೆ ಕಬ್ಬಿಣವು ಮಾನಸಿಕ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಕಬ್ಬಿಣದ ಕೊರತೆ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಏಕಾಗ್ರತೆ, ಕಲಿಕೆಯಲ್ಲಿ ನಿರಾಸಕ್ತಿ ಹೊಂದಲು ಇದು ಕಾರಣವಾಗಿದೆ. ಕೌಶಲ್ಯಗಳ ಬೆಳವಣಿಗೆಗೆ ಅಡ್ಡಿ ಉಂಟು ಮಾಡುತ್ತದೆ.


    ಯಾವ ವಯಸ್ಸಿನ ಮಕ್ಕಳಲ್ಲಿ ಕಬ್ಬಿಣದ ಪ್ರಮಾಣ ಎಷ್ಟಿರಬೇಕು?


    ಆಹಾರ ಪೂರಕ ಕಚೇರಿ ಪ್ರಕಾರ, ಹಾಲುಣಿಸುವ ಶಿಶುಗಳು 6 ತಿಂಗಳವರೆಗೆ ತಾಯಿಯ ಹಾಲಿನಿಂದ ಕಬ್ಬಿಣ ಪಡೆಯುತ್ತಾರೆ. 1 ರಿಂದ 3 ವರ್ಷ ವಯಸ್ಸಿನ ಮಗುವಿಗೆ ದಿನವೂ 7 ಮಿಲಿಗ್ರಾಂ ಕಬ್ಬಿಣ ಬೇಕು. 4 ರಿಂದ 8 ವರ್ಷದ ಮಗುವಿಗೆ 10 ಮಿಗ್ರಾಂ ಕಬ್ಬಿಣ ಬೇಕು. 9 ರಿಂದ 13 ವರ್ಷದ ಮಗುವಿಗೆ 8 ಮಿಲಿಗ್ರಾಂ, 14 ವರ್ಷದ ಮಕ್ಕಳಿಗೆ 40 ಮಿಗ್ರಾಂ ಬೇಕು. ಹೆಚ್ಚಿನ ಪ್ರಮಾಣದ ಕಬ್ಬಿಣವು ಮಗುವಿಗೆ ಹಾನಿಕಾರಕ.


    ಹಸಿರು ಎಲೆಗಳ ತರಕಾರಿ


    ಆಹಾರದಲ್ಲಿ ಋತುಮಾನದ ಎಲ್ಲಾ ಹಣ್ಣು ಮತ್ತು ತರಕಾರಿ ಸೇವನೆ ಉತ್ತಮ. ಪಾಲಕ್, ಮೆಂತ್ಯ, ಕೋಸುಗಡ್ಡೆ ಹಸಿರು ಎಲೆಗಳ ತರಕಾರಿ ಕಬ್ಬಿಣದ ಪ್ರಮಾಣ ಕಂಡು ಬರುತ್ತದೆ. ಇದು ಮಕ್ಕಳ ಆಹಾರ ಕ್ರಮಕ್ಕೆ ಉತ್ತಮ ಆಯ್ಕೆ.


    ಇದನ್ನೂ ಓದಿ: ಹಸಿರು ಕಡಲೆಕಾಳು ಸಲಾಡ್ ಮತ್ತು ಕಟ್ಲೆಟ್ ರೆಸಿಪಿ; ಇದು ಚಳಿಗಾಲದ ತಿಂಡಿ


    ಕೆಂಪು ಮಾಂಸ


    ಕೆಂಪು ಮಾಂಸ, ಮೀನು, ಮಾಂಸ ಮತ್ತು ಗೋಮಾಂಸ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಮಕ್ಕಳ ಆಹಾರದಲ್ಲಿ ಕಬ್ಬಿಣ ಹೆಚ್ಚಿಸಲು ಕೆಂಪು ಮಾಂಸವು ಉತ್ತಮ ಆಯ್ಕೆ. ಕಬ್ಬಿಣದ ಪೂರಕಗಳನ್ನು ವೈದ್ಯರ ಸಲಹೆ ಮೇರೆಗೆ ನೀಡಬಹುದು.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು