• Home
  • »
  • News
  • »
  • lifestyle
  • »
  • Fear Control: ನೀವು ತುಂಬಾ ಭಯಪಡ್ತಿರಾ? ಹಾಗಾದ್ರೆ ಈ ಥೆರಪಿ ಮಾಡಿಸಿಕೊಳ್ಳಿ

Fear Control: ನೀವು ತುಂಬಾ ಭಯಪಡ್ತಿರಾ? ಹಾಗಾದ್ರೆ ಈ ಥೆರಪಿ ಮಾಡಿಸಿಕೊಳ್ಳಿ

ಭಯ

ಭಯ

Fear Control: ಭಯ ನಿಯಂತ್ರಣಕ್ಕೆ ಏನು ಮಾಡಬೇಕು ಎಂದು ತಿಳಿಯಲು ಇದನ್ನು ಓದಿ. ಮತ್ತು ಈ ಸಲಹೆ ಅನುಸರಿಸಿ.

  • Share this:

ಎಕ್ಸ್‌ಪೋಶರ್ ಥೆರಪಿ ಎನ್ನುವುದು ರೋಗಿಗಳು (Patient) ಭಯವನ್ನು ಎದುರಿಸಲು ಮತ್ತು ಅವರನ್ನು ದುರ್ಬಲಗೊಳಿಸುವ ಭೀತಿಯಿಂದ ಹೊರಬರುವಂತೆ ಮಾಡಲು ಸಹಕಾರಿಯಾಗಿರುವ ವೈದ್ಯರು (Docter) ಬಳಸುವ ಪ್ರಮುಖ ಚಿಕಿತ್ಸಾ ಆಯ್ಕೆಯಾಗಿದೆ. ಆದರೆ ಈ ಚಿಕಿತ್ಸೆಯು (Treatment) 50% ದಷ್ಟು ಮಾತ್ರ ಯಶಸ್ವಿಯಾಗಿದೆ (Success) ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.


ಭಯವನ್ನು ಹೋಗಲಾಡಿಸುವ ಚಿಕಿತ್ಸೆ


ಕೊಲೊರಾಡೋ ವಿಶ್ವವಿದ್ಯಾನಿಲಯದ ಸಂಶೋಧಕರು ಇತ್ತೀಚೆಗೆ ಅದ್ಭುತವಾದ ಆರೋಗ್ಯ ಮಾದರಿಗಳನ್ನು ಪ್ರಸ್ತುತಪಡಿಸುವ ಅಧ್ಯಯನವನ್ನು ಪ್ರಕಟಿಸಿದ್ದಾರೆ. ಕಂಪ್ಯೂಟೇಶನಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಈ ಅಧ್ಯಯನವು, ಭಯವನ್ನು ಎಕ್ಸ್‌ಪೋಶರ್ ಥೆರಪಿಯ ಮೂಲಕ ಹೋಗಲಾಡಿಸಿದರೂ ಇದು ಮರುಕಳಿಸುವ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ.


ಕೊಲೊರಾಡೋ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜೋಯಲ್ ಸ್ಟೊಡ್ಡಾರ್ಡ್ ಈ ಕುರಿತು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದು ಭಯ ಎಲ್ಲಿಂದ ಉಂಟಾಗುತ್ತದೆ ಹಾಗೂ ಚಿಕಿತ್ಸೆಯ ನಂತರವೂ ಭಯ ಮರಳಿ ಬರಲು ಹೇಗೆ ಸಾಧ್ಯ ಎಂಬುದನ್ನು ತಿಳಿಸಿದ್ದಾರೆ.


ವೈದ್ಯರು ಸಂಶೋಧಕರಾಗಿರುವ ಜೋಯಲ್ ಸ್ಟೊಡ್ಡಾರ್ಡ್ ಭಯವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?


ಜೋಯಲ್ ಪ್ರಕಾರ ಭಯ ಎಂಬುದು ಸಂಪೂರ್ಣವಾಗಿ ದೇಹದ ಪ್ರಕ್ರಿಯೆಯಾಗಿದೆ. ಉದಾಹರಣೆಗೆ ನೀವು ಕಾಡಿನಲ್ಲಿ ಅಡ್ಡಾಡುತ್ತಿರುವಾಗ ಅಕಸ್ಮಾತ್ ಹಾವನ್ನು ನೋಡಿ ಭಯಭೀತರಾಗುತ್ತೀರಿ. ಇಲ್ಲಿ ದೇಹವು ಪ್ರತಿಕ್ರಿಯಿಸಿ ಹಾವು ಅಪಾಯಕಾರಿ ಎಂಬ ಸಂದೇಶವನ್ನು ಉಂಟುಮಾಡುತ್ತದೆ. ಸಂಪೂರ್ಣ ಮನಸ್ಸು-ದೇಹದ ಪ್ರತಿಕ್ರಿಯೆಯು ಸಾಮಾನ್ಯವಾಗಿ ಭಯದ ಪ್ರತಿಕ್ರಿಯೆಯಾಗಿದೆ.


ಹೆದರುವ ಸನ್ನಿವೇಶದಲ್ಲಿ ನೀವು ವ್ಯಕ್ತಪಡಿಸುವ ಸಂಪೂರ್ಣ ಪ್ರತಿಕ್ರಿಯೆಯನ್ನು ಆಧರಿಸಿ ಭಯ ವ್ಯಕ್ತವಾಗುತ್ತದೆ ಎಂಬುದು ವೈದ್ಯರ ಮಾತಾಗಿದೆ. ದೇಹವು ಚಲನಾಮುಕ್ತವಾಗಲು, ಸಂದರ್ಭದಿಂದ ಪಲಾಯನಗೈಯಲು ಅಥವಾ ಹೋರಾಡುವ ಪರಿಸ್ಥಿತಿಗೆ ಸನ್ನದ್ಧವಾಗುತ್ತದೆ.


ಚಲನೆಮುಕ್ತ ಎಂಬುದು ನನ್ನನ್ನು ಗಮನಿಸಬೇಡಿ ಪಲಾಯನ ಎಂಬುದು ಅಲ್ಲಿಂದ ಓಡುವುದು ಹಾಗೂ ಹೋರಾಟ ಎಂಬುದು ಪರಿಸ್ಥಿತಿಯನ್ನು ಎದುರಿಸುವುದನ್ನು ಸಂಕೇತಿಸುತ್ತದೆ.


ಪರಿಸ್ಥಿತಿಗಳಿಗೆ ಹೊಂದಿಕೊಂಡು ಬರುವಂತಹ ಭಯವನ್ನು ಎದುರಿಸುವುದು ಹೇಗೆ?


ಭಯದ ಕುರಿತು ಮಾತನಾಡುವಾಗ ಇದರ ಪ್ರತಿಕ್ರಿಯೆಯ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಯಾವುದು ಭಯವನ್ನುಂಟು ಮಾಡುತ್ತದೆಯೋ ಆ ವಿಷಯ ಅಪಾಯವನ್ನುಂಟು ಮಾಡುತ್ತದೆ. ಭಯವನ್ನುಂಟು ಮಾಡುವ ಹಲವಾರು ಪ್ರತಿಕ್ರಿಯೆಗಳು ವಿಶ್ವದಲ್ಲಿದೆ. ಹಾವಿಗೆ ಯಾವುದೇ ಹಾನಿ ಉಂಟುಮಾಡದೆಯೇ ಹಾವಿಗೆ ಹೆದರುತ್ತೇವೆ ಇದನ್ನು ಕಟ್ಟುಪಾಡುಗಳಿಗೆ ಒಳಪಡದ ಭಯ ಎಂದು ಕರೆಯಲಾಗುತ್ತದೆ


ಇನ್ನು ನಿಯಮಕ್ಕೆ ಒಳಪಟ್ಟ ಭಯಗಳು ಭಿನ್ನವಾಗಿರುತ್ತವೆ. ಅವುಗಳು ಚೆನ್ನಾಗಿ ತಿಳಿದುಕೊಂಡೇ ಉಂಟಾಗುವ ಭಯವಾಗಿದೆ. ಉದಾಹರಣೆಗೆ ಕಾರು ಅಪಘಾತದಿಂದ ಪ್ರಾಣಕ್ಕೆ ಹಾನಿ ಸಂಭವಿಸುತ್ತದೆ. ಕಾರು ಅಪಘಾತದ ನಂತರ ಜನರು ಭಯಾನಕವಲ್ಲದ ಕೆಲವೊಂದು ವಿಷಯಗಳಿಗೆ ಭಯಪಡಲು ಆರಂಭಿಸುತ್ತಾರೆ. ಸ್ಟೀರಿಂಗ್ ವೀಲ್‌ಗಳು ಜನರಿಗೆ ಯಾವುದೇ ನೋವನ್ನುಂಟು ಮಾಡುವುದಿಲ್ಲ ಅದಾಗ್ಯೂ ಕೆಲವರು ಇದಕ್ಕೆ ಕೂಡ ಹೆದರುತ್ತಾರೆ. ಏಕೆಂದರೆ ಅಪಘಾತದ ಸಮಯದಲ್ಲಿ ವೀಲ್ ಮೇಲೆ ಕೇಂದ್ರೀಕರಿಸಿದ್ದರು. ಹೀಗಾಗಿ ಸ್ಟೀರಿಂಗ್ ವೀಲ್ ಅನ್ನು ನೋಡಿದಾಗಲೆಲ್ಲಾ ಅರಿಗೆ ಜೀವನ್ಮರಣದ ಪ್ರಕ್ರಿಯೆ ನೆನಪಾಗುತ್ತದೆ.


ಕಟ್ಟುಪಾಡುಗಳಿಗೆ ಒಳಪಟ್ಟ ಭಯವನ್ನು ಪರಿಗಣಿಸುವುದಾದರೆ ಇದಕ್ಕೆ ಸಂಬಂಧಿಸಿದ ಬೇರೆ ಬೇರೆ ರೀತಿಯ ಭಯಗಳಾವುವು?


ಆಘಾತಕಾರಿ ಭಯವು ಆ ಘಟನೆಯ ಸಮಯದಲ್ಲಿ ಭಯಪಡಲು ಕಲಿತ ಭೀತಿ ಸೇರಿದಂತೆ ದುಃಖಕರ ಹಾಗೂ ದುರ್ಬಲ ಪ್ರತಿಕ್ರಿಯೆಯನ್ನು ಹೊಂದುತ್ತಾರೆ. ಅಪಘಾತದ ನಂತರ ಉಂಟಾಗುವ ಭಯ ಇದಾಗಿದೆ


ಇನ್ನೊಂದು ಆತಂಕದ ಅಸ್ವಸ್ಥತೆಯಾಗಿದೆ. ಇಂತಹ ಭಯ ನಿಮಗೆ ಉಂಟಾಗಿರುವುದೇ ಇಲ್ಲ ಇದೊಂದು ಅನಿರೀಕ್ಷಿತ ಭಯವಾಗಿದೆ. ಉದಾಹರಣೆಗೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲ ಎಂದು ಕಾಡುವ ಭಯ.


ಗಾಬರಿಯ ಭಯ ಇದೊಂದು ರೀತಿಯಲ್ಲಿ ಹೃದಯಾಘಾತದಂತೆಯೇ ಪರಿಣಾಮ ಬೀರುವ ಭಯವಾಗಿದೆ. ತೀವ್ರವಾದ ಭಯದ ಪ್ರತಿಕ್ರಿಯೆಯಾಗಿದೆ.


ಇಲ್ಲಿರುವ ಭಯದ ಸಂಕೇತಗಳು ಜನರು ಪ್ರತಿಕ್ರಿಯೆಗಳೊಂದಿಗೆ ಹೊಂದಿರುವ ಅಸ್ವಸ್ಥತೆಗಳನ್ನು ಉದಾಹರಣೆಯಾಗಿ ತೋರಿಸುತ್ತವೆ. ಗಾಬರಿ ಎಂಬುದು ಬೆದರಿಕೆಯಿಲ್ಲದೆ ಉಂಟಾಗುವ ಭಯದ ಪ್ರತಿಕ್ರಿಯೆಯಾಗಿದೆ. ಆತಂಕ ಎಂಬುದು ನಿರೀಕ್ಷಿತ ಬೆದರಿಕೆಗೆ ಭಯದ ಪ್ರತಿಕ್ರಿಯೆಯಾಗಿದೆ. ನಂತರ ಆಘಾತಕಾರಿ ಒತ್ತಡ ಎಂಬುದು ಬೆದರಿಕೆಯ ಸ್ಮರಣೆಗೆ ಪ್ರತಿಕ್ರಿಯೆ ಎಂದೆನಿಸಿದೆ.


ಎಕ್ಸ್‌ಪೋಶರ್ ಥೆರಪಿ ಎಂದರೇನು ಮತ್ತು ಸಾಮಾನ್ಯವಾಗಿ ಭಯಕ್ಕೆ ಇದು ಅತ್ಯುತ್ತಮ ಚಿಕಿತ್ಸಾ ಆಯ್ಕೆಯಾಗಿದೆಯೇ?


ಎಕ್ಸ್‌ಪೋಸರ್ ಥೆರಪಿಯು 20ನೇ ಶತಮಾನದ ಮಧ್ಯಭಾಗದ ಮನೋವೈದ್ಯಶಾಸ್ತ್ರದಿಂದ ಪ್ರದರ್ಶಿತಗೊಂಡ ಅತ್ಯಂತ ಪರಿಣಾಮಕಾರಿಯಾದ, ಹೆಚ್ಚು ಪುರಾವೆ-ಆಧಾರಿತ ವಿಧಾನವಾಗಿದೆ.


ಎತ್ತರವನ್ನು ನೋಡಿದಾಗ ನಿಮಗೆ ಭಯವಾಗುತ್ತದೆ ಎಂದಿಟ್ಟುಕೊಳ್ಳೋಣ. ಏಣಿ ಇದ್ದಾಗಲೂ ಎತ್ತರಕ್ಕೆ ಏರಲು ನಿಮ್ಮ ಭಯ ನಿಮ್ಮನ್ನು ಬಿಡುವುದಿಲ್ಲ. ಭಯ ನಿಮ್ಮನ್ನು ಪುಕ್ಕಲನನ್ನಾಗಿಸಿದೆ. ಇದರಿಂದ ನೀವು ಭೀತಿಗೊಳಗಾಗಿದ್ದೀರಿ.


ಸಾಮಾನ್ಯವಾಗಿ, ಚಿಕಿತ್ಸೆಯು ಸುರಕ್ಷಿತ ವಾತಾವರಣದಲ್ಲಿರುವಾಗ ನೀವು ಭಯಪಡದಿರುವ ಪರಿಸ್ಥಿತಿಯಲ್ಲಿ ನಿಮ್ಮನ್ನು ಇರಿಸುತ್ತದೆ. ಇದರಿಂದ ನೀವು ಸುರಕ್ಷಿತವಾಗಿರುತ್ತೀರಿ ಎಂದು ನೀವು ಕಲಿತುಕೊಳ್ಳುತ್ತೀರಿ, ನಂತರ ಕಲಿತ ಸುರಕ್ಷತಾ ಸ್ಮರಣೆಯನ್ನು ಮುಂದುವರಿಸಬೇಕು. ಸುರಕ್ಷತೆಯ ಸ್ಮರಣೆಯು ಎತ್ತರವನ್ನು ಹೆದರುವ ನಿಮ್ಮ ಭೀತಿಯ ಅಂಶಗಳೊಂದಿಗೆ ಸ್ಪರ್ಧಿಸುತ್ತದೆ.


ನಮ್ಮ ಕೆಲಸವು ಕೇವಲ ಎಕ್ಸ್‌ಪೋಶರ್ ಥೆರಪಿಗೆ ಹೆಚ್ಚು ವಿಶಾಲವಾದ ಪರಿಣಾಮಗಳನ್ನು ಹೊಂದಿದೆ. ತೆರೆದುಕೊಳ್ಳುವುದು ವಾಸ್ತವವಾಗಿ ಒಂದು ತಂತ್ರವಾಗಿದ್ದು, ಇದು ಬೆದರಿಕೆ ಸಂಬಂಧವನ್ನು ಗುರಿಯಾಗಿಸುವ ಅನೇಕ ಚಿಕಿತ್ಸೆಗಳಲ್ಲಿ ಸಕ್ರಿಯ ಘಟಕಾಂಶವಾಗಿದೆ.


ಈ ವಿಧಾನದಲ್ಲಿ ಸೂಚಿಸಲಾದ ಚಿಕಿತ್ಸೆಗಳು ಅರಿವಿನ ವರ್ತನೆಯ ಚಿಕಿತ್ಸೆ, ನಿರೂಪಣೆ ಚಿಕಿತ್ಸೆ, ಅಥವಾ ಕಣ್ಣಿನ ಚಲನೆಯ ಸಂವೇದನಾಶೀಲತೆ ಮತ್ತು ಮರು ಸಂಸ್ಕರಣೆಯನ್ನು ಒಳಗೊಂಡಿರಬಹುದು. ಇವೆಲ್ಲವೂ ವಿಭಿನ್ನ ರೀತಿಯ ಚಿಕಿತ್ಸೆಗಳಾಗಿದ್ದು, ಮನಸ್ಸಿನಲ್ಲಿರುವ ಭೀತಿಗೆ ನೇರ ಸ್ಪರ್ಧೆಯನ್ನೊಡ್ಡುವ ಮೂಲಕ ಭಯವನ್ನು ನಿವಾರಿಸುತ್ತವೆ.


ತಂಡವು ಎಕ್ಸ್‌ಪೋಶರ್ ಥೆರಪಿಯನ್ನು ಸುಧಾರಿಸಲು ಸಂಶೋಧನೆ ಕೈಗೆತ್ತಿಕೊಳ್ಳಲು ಏಕೆ ನಿರ್ಧರಿಸಿದೆ?


ಎಕ್ಸ್‌ಪೋಸರ್ ಥೆರಪಿ ಸಾಮಾನ್ಯವಾಗಿ ತುಂಬಾ ಪರಿಣಾಮಕಾರಿಯಾಗಿದೆ, ಆದರೆ 50% ಜನರಿಗೆ ಇದು ಅಷ್ಟು ಪರಿಣಾಮಕಾರಿಯಾಗಿಲ್ಲ ಮತ್ತು ಅನೇಕರಿಗೆ ಇದು ದೀರ್ಘಕಾಲ ಉಳಿಯುವುದಿಲ್ಲ. ಏಕೆಂದರೆ ಅವರ ಭಯವು ಕಾಲಾನಂತರದಲ್ಲಿ ಮರಳಿ ಬರಬಹುದು. ಶಾಶ್ವತವಾದ ಸುರಕ್ಷತಾ ಸ್ಮರಣೆಯಿಲ್ಲದೆ, ರೋಗಿಯ ನೆನಪುಗಳು ಸ್ಥಿರವಾಗಿರುತ್ತವೆ ಮತ್ತು ಮರುಕಳಿಸುವ ಭಯದ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ.


ವ್ಯಕ್ತಿಯು ಮತ್ತೊಮ್ಮೆ ಬೆದರಿಕೆಗೆ ಒಳಗಾದರೆ ಅಥವಾ ಬೇರೆ ಸನ್ನಿವೇಶದಲ್ಲಿ ತಮ್ಮನ್ನು ತಾವು ಪ್ರಚೋದಿಸಿದರೆ ಭಯದ ಪ್ರತಿಕ್ರಿಯೆಯು ಹಿಂತಿರುಗಬಹುದು. ಕೆಲವೊಮ್ಮೆ ಅವರ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ.


ಗಣಿತ ಮತ್ತು ಸಮೀಕರಣಗಳಿಂದ ಪ್ರಯೋಜನವೇನು?


ಗಣಿತ ಮತ್ತು ಸಮೀಕರಣಗಳಿಂದ ಪ್ರಯೋಜನವೇನು? ಎಕ್ಸ್‌ಪೋಶರ್ ಥೆರಪಿಯನ್ನು ಹೆಚ್ಚು ಸಮಯ ಬಾಳಿಕೆ ಬರುವಂತೆ ಮಾಡಲು ಹೊಸ ಮಾದರಿ ಹೇಗೆ ಸಹಾಯಕವಾಗಿದೆ? ಎಕ್ಸ್‌ಪೋಶರ್ ಥೆರಪಿಯನ್ನು ಆರಂಭಿಸಿದ ನಂತರ ಇದು ಸರಿಯಾದ ಚಿಕಿತ್ಸೆಯೇ ಎಂಬುದನ್ನು ನಿರ್ಧರಿಸಲು ಒಂದು ಇಲ್ಲವೇ ಎರಡು ವಾರಗಳಲ್ಲಿ ತಿಳಿದುಕೊಳ್ಳಬಹುದು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.


ನ್ಯೂಟನ್‌ನ ಸಮೀಕರಣ


ಗಣಿತದ ಪ್ರಕಾರ ಸಂಶೋಧನೆಯು ಭೌತಶಾಸ್ತ್ರದಲ್ಲಿನ ನ್ಯೂಟನ್‌ನ ಸಮೀಕರಣಗಳಿಗೆ ಹೋಲುತ್ತದೆ. ಚಲನೆ ಹಾಗೂ ಬಲವನ್ನು ವಿವರಿಸಲು ಸಹಕಾರಿಯಾಗಿರುವ ಸರಳ ಸಮೀಕರಣಗಳು ಎಂದೆನಿಸಿವೆ. ಬೆದರಿಕೆಯ ನೆನಪುಗಳನ್ನು ಒಳಗೊಂಡಿರುವ ಕಲಿಕೆಯ ಪ್ರಕ್ರಿಯೆಗಳನ್ನು ಅಳೆಯಲು ಮತ್ತು ಊಹಿಸಲು ಎಕ್ಸ್‌ಪೋಶರ್ ಥೆರಪಿ ಬಳಕೆಯಾಗಿದೆ.


ಸುರಕ್ಷತೆ ಮತ್ತು ಬೆದರಿಕೆಯ ನೆನಪುಗಳೆರಡನ್ನೂ ಜನರು ಹೇಗೆ ಹೊಂದುತ್ತಾರೆ ಮತ್ತು ಮರೆತುಬಿಡುತ್ತಾರೆ ಎಂಬುದನ್ನು ಅಳೆಯಲು ಮತ್ತು ಊಹಿಸಲು ಸಮೀಕರಣಗಳ ಗುಂಪನ್ನು ವಿವರಿಸುವ ಮೂಲಕ, ಬೆದರಿಕೆಯ ನೆನಪುಗಳಿಗೆ ಅವರ ಭಯದ ಪ್ರತಿಕ್ರಿಯೆಗಳೊಂದಿಗೆ ತೊಂದರೆ ಹೊಂದಿರುವವರಿಗೆ ಉತ್ತಮವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ. ಇಂತಹ ಭಯವು ಜೀವಿತಾವಧಿಯಲ್ಲಿ ಶೇಕಡಾವಾರು ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿಶ್ವಾದ್ಯಂತ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ ಅಂತೆಯೇ ಇದು ಎಲ್ಲಾ ರೋಗಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: ಕಾಯಿ ಕಾಯಿ ಹಸಿರು ಮೆಣಸಿನಕಾಯಿ; ಮೈಕೊರೆಯೋ ಚಳಿಗೆ, ಶೀತಕಾಲದ ಕಾಯಿಲೆಗೆ ಇದೇ ಮದ್ದಂತೆ!


ರೋಗಿಗಳು ತಮ್ಮ ಚಿಕಿತ್ಸಾ ಅವಧಿಗಳಲ್ಲಿ ಎಷ್ಟು ಕಲಿಯುತ್ತಾರೆ ಎಂಬುದರ ಮೂಲಕ ಚಿಕಿತ್ಸೆಗೆ ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಊಹಿಸಲು ನಾವು ಈ ಸಮೀಕರಣಗಳ ಗುಂಪನ್ನು ಬಳಸಬಹುದು ಎಂಬುದಕ್ಕೆ ಈಗಾಗಲೇ ಪ್ರಾಥಮಿಕ ಪುರಾವೆಗಳನ್ನು ಹೊಂದಿದ್ದೇವೆ ಎಂಬುದು ಸಂಶೋಧಕರ ಮಾತಾಗಿದೆ.


ಸಂಶೋಧಕರ ಅಭಿಪ್ರಾಯ


ಚಿಕಿತ್ಸಕರ ಕಚೇರಿಯಲ್ಲಿರುವಾಗ ಚಿಕಿತ್ಸಕ ಹಾಗೂ ಕಚೇರಿಯನ್ನು ಸುರಕ್ಷತೆಯೊಂದಿಗೆ ಹೊಂದಿಸಿರುತ್ತೀರಿ. ಸುರಕ್ಷತೆಯ ಸಂಕೇತಗಳು ನಿಮ್ಮೊಳಗಿರುವ ಬೆದರಿಕೆಯ ಪ್ರತಿಕ್ರಿಯೆಯನ್ನು ತಡೆಯಲು ಸಹಾಯ ಮಾಡುತ್ತವೆ. ಚಿಕಿತ್ಸಕರ ಕಚೇರಿಯಿಂದ ಹೊರಬಂದ ತಕ್ಷಣ ಸುರಕ್ಷತೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳಲು ಸಾಧ್ಯವಾಗದಿದ್ದರೆ ಭಯದ ಪ್ರತಿಕ್ರಿಯೆಯು ಹಿಂತಿರುಗಬಹುದು. ಪ್ರಯೋಗಗಳು ಮತ್ತು ಮಾದರಿಗಳು ಸುರಕ್ಷತಾ ನೆನಪುಗಳು ಬೆದರಿಕೆ ನೆನಪುಗಳಿಗಿಂತ ಕಡಿಮೆ ಸ್ಥಿರವಾಗಿರುತ್ತವೆ ಎಂದು ಸೂಚಿಸುತ್ತವೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ


ಸಮೀಕರಣಗಳು ಅಧ್ಯಯನದ ಎಲ್ಲಾ ಸಿದ್ಧಾಂತವನ್ನು ಜೊತೆಯಾದ ವಿಧಾನದಲ್ಲಿ ಸಂಕ್ಷಿಪ್ತಗೊಳಿಸಿರುವುದರಿಂದ, ವಿಷಯಗಳು ಹೇಗೆ ನಿಖರವಾಗಿ ಸಂಬಂಧಿಸಿವೆ ಎಂಬುದನ್ನು ನೋಡುವುದು ಸುಲಭವಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.


ಆರೋಗ್ಯ ಸಂಶೋಧನೆಗೆ ಇದು ಉತ್ತಮ ವಿಧಾನವಾಗಿದೆ. ರೋಗಿಗಳ ಆರೈಕೆಗೆ ಬೆದರಿಕೆ ಕಲಿಕೆಯಲ್ಲಿ 50 ವರ್ಷಗಳ ಸಂಶೋಧನೆಯನ್ನು ಸಂಯೋಜಿಸುವ ಸಿದ್ಧಾಂತವನ್ನು ಪರೀಕ್ಷಿಸಲು ಇದು ಅತ್ಯಾಕರ್ಷಕ ಹೊಸ ಸಂಶೋಧನೆಯ ಕಾರ್ಯಕ್ರಮದ ಪ್ರಾರಂಭವಾಗಿದೆ ಎಂಬುದು ಜೋಯಲ್ ಸ್ಟೊಡ್ಡಾರ್ಡ್ ಮಾತಾಗಿದೆ.

First published: