Curd And Uric Acid: ಮೊಸರು ದೇಹದಲ್ಲಿನ ಯೂರಿಕ್ ಆಮ್ಲ ಹೆಚ್ಚಿಸುತ್ತದೆಯೇ?

ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲ ಸಂಗ್ರಹವಾಗುವುದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟದಲ್ಲಿ ಹೆಚ್ಚಳವಾಗುವುದು ಕೈ ಮತ್ತು ಕಾಲುಗಳಲ್ಲಿ ಬಿಗಿತ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಹಾರದ (Food) ಜೀರ್ಣಕ್ರಿಯೆಯ (Digestion) ನೈಸರ್ಗಿಕ ಪ್ರಕ್ರಿಯೆ (Natural Process) ಮತ್ತು ದೇಹದ (Body) ಜೀವಕೋಶಗಳ ವಿಭಜನೆಯಿಂದಾಗಿ ದೇಹದಲ್ಲಿ ಯೂರಿಕ್ ಆಮ್ಲವು (Uric Acid) ರೂಪುಗೊಳ್ಳುತ್ತದೆ. ಕೆಲವು ಆಹಾರಗಳು ಪ್ಯೂರಿನ್ ಎಂಬ ನೈಸರ್ಗಿಕ ಪದಾರ್ಥ ಹೊಂದಿರುತ್ತವೆ. ದೇಹವು ಪ್ಯೂರಿನ್ಗಳನ್ನು ಜೀರ್ಣಿಸಿದಾಗ, ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ. ಮೂತ್ರಪಿಂಡವು ರಕ್ತದಿಂದ ಹೆಚ್ಚಿನ ಯೂರಿಕ್ ಆಮ್ಲವನ್ನು ಮೂತ್ರದ ಮೂಲಕ ದೇಹದಿಂದ ತೆಗೆದು ಹಾಕುತ್ತದೆ. ಆದರೆ ಈ ಯೂರಿಕ್ ಆಸಿಡ್ ಹೆಚ್ಚೆಚ್ಚು ಸಂಗ್ರಹವಾಗುತ್ತ ಹೋದರೆ ಮೂತ್ರಪಿಂಡವು ಅದನ್ನು ತೆಗೆದು ಹಾಕಲು ಸಾಧ್ಯವಾಗದೇ ಹೋಗುತ್ತದೆ. ಈ  ವೇಳೆ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತದೆ.

    ಹೈಪರ್ಯುರಿಸೆಮಿಯಾ

    ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲ ಸಂಗ್ರಹವಾಗುತ್ತಾ ಹೋದರೆ ಇದು ಹೈಪರ್ಯುರಿಸೆಮಿಯಾ ಉಂಟಾಗಲು ಕಾರಣವಾಗುತ್ತದೆ. ದೇಹದಲ್ಲಿ ಹೆಚ್ಚು ಯೂರಿಕ್ ಆಮ್ಲ ಸಂಗ್ರಹವಾಗುವುದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟದಲ್ಲಿ ಹೆಚ್ಚಳವಾಗುವುದು ಕೈ ಮತ್ತು ಕಾಲುಗಳಲ್ಲಿ ಬಿಗಿತ ಉಂಟು ಮಾಡುತ್ತದೆ.

    ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳದಿಂದ ಕಾಯಿಲೆ

    ಇದರಿಂದಾಗಿ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಬೆರಳುಗಳಲ್ಲಿ ಊತ ಮತ್ತು ಅಸಹನೀಯ ನೋವು ಉಂಟಾಗುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳ ಸಂಧಿವಾತ, ಗೌಟ್ ಸೇರಿದಂತೆ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ. ಇದರೊಂದಿಗೆ ಕೀಲುಗಳಲ್ಲಿ ಗಡ್ಡೆಯ ದೂರು ಇದ್ದರೆ. ಹೆಚ್ಚಿದ ಯೂರಿಕ್ ಆಮ್ಲವು ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹ ಕಾಯಿಲೆಗಳಿಗೆ ಕಾರಣವಾಗುತ್ತದೆ.

    ಇದನ್ನೂ ಓದಿ: ಮಧುಮೇಹಿಗಳಿಗೆ ಈ ಚಹಾ ವರದಾನವಾಗಿದೆ! ಪ್ರತಿನಿತ್ಯ ಸೇವಿಸಿ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ!

    ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳವಿರುವವರು ಮೊಸರು ಸೇವಿಸಬಾರದು ಎಂದು ಸಲಹೆ ನೀಡುತ್ತಾರೆ ವೈದ್ಯರು. ಈ ಬಗ್ಗೆ ಚರಕ್ ಫಾರ್ಮಾ ಪ್ರೈವೇಟ್  LTD ಯ ವೈದ್ಯಕೀಯ ಸಲಹೆಗಾರ ಮನಿಶಾ ಮಿಶ್ರಾ ಗೋಸ್ವಾಮಿ ಏನು ಹೇಳಿದ್ದಾರೆ ನೋಡೋಣ ಬನ್ನಿ.

    ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಏನಾಗುತ್ತದೆ?

    ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾದರೆ ಅದು ಹರಳುಗಳಂತೆ ರೂಪುಗೊಳ್ಳುತ್ತದೆ. ಈ ಸ್ಫಟಿಕವು ಮೂಳೆಗಳ ನಡುವೆ ಸಣ್ಣ ತುಂಡುಗಳ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಕಾರಣದಿಂದಾಗಿ ಊತವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಮೂಳೆಗಳಲ್ಲಿ ತೀವ್ರವಾದ ನೋವು ಇರುತ್ತದೆ.

    ಯೂರಿಕ್ ಆಮ್ಲವು ಅನಿಯಂತ್ರಿತವಾದಾಗ, ಹೃದಯಾಘಾತ, ಮೂತ್ರಪಿಂಡ ವೈಫಲ್ಯ ಮತ್ತು ಬಹು ಅಂಗಗಳ ವೈಫಲ್ಯ ಕಾಯಿಲೆಗಳ ಅಪಾಯ ಹೆಚ್ಚುತ್ತದೆ.

    ಯೂರಿಕ್ ಆಮ್ಲ ಹೆಚ್ಚಾದರೆ ಕಡಿಮೆ ಪ್ರೋಟೀನ್ ಸೇವಿಸಿ

    ಯೂರಿಕ್ ಆಮ್ಲ ನಿಯಂತ್ರಿಸುವಲ್ಲಿ ಜೀವನಶೈಲಿ ಮತ್ತು ಆಹಾರಕ್ರಮವು ಅತ್ಯಂತ ಮುಖ್ಯ. ಯೂರಿಕ್ ಆಮ್ಲ ನಿಯಂತ್ರಿಸಲು, ಪ್ರೋಟೀನ್ನ ಸೇವನೆ ಕಡಿಮೆ ಮಾಡಿ. ಏಕೆಂದರೆ ಪ್ರೋಟೀನ್ನ ಹೆಚ್ಚಿನ ಸೇವನೆಯು ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುತ್ತದೆ. ಮೊಸರು ಹೆಚ್ಚಿನ ಪ್ರೋಟೀನ್ ಹೊಂದಿದ್ದು ಅದು ಹಾನಿಕಾರಕವಾಗಿದೆ.

    ಮೊಸರು ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿಸುತ್ತದೆ

    ಹೆಚ್ಚಿನವರು ಊಟದ ನಂತರ ಮೊಸರು ತಿನ್ನುತ್ತಾರೆ. ಆದರೆ ಯೂರಿಕ್ ಆಸಿಡ್ ಹೆಚ್ಚಿರುವ ಜನರು ಮೊಸರು ಸೇವಿಸಬಾರದು. ಮೊಸರಿನಲ್ಲಿರುವ ಟ್ರಾನ್ಸ್ ಕೊಬ್ಬು ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ.

    ಹುಳಿ ಪದಾರ್ಥ ತಿನ್ನಬೇಡಿ

    ಯೂರಿಕ್ ಆಮ್ಲ ಹೆಚ್ಚಿರುವವರು ಹುಳಿ ಆಹಾರ ಸೇವಿಸಬಾರದು. ಆಯುರ್ವೇದದ ಪ್ರಕಾರ, ಮೊಸರು ರುಚಿಯಲ್ಲಿ ಹುಳಿ. ಯೂರಿಕ್ ಆಸಿಡ್ ಹೊಂದಿರುವ ರೋಗಿಗಳು ಇದನ್ನು ಸೇವಿಸಿದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

    ಮೊಸರಿನ ಬಗ್ಗೆ ಆಯುರ್ವೇದ ಹೇಳೋದೇನು?

    ಆಯುರ್ವೇದದ ಪ್ರಕಾರ, ಮೊಸರು ಸೇವನೆ ಕೀಲುಗಳಲ್ಲಿ ಊತ ಉಂಟಾಗುತ್ತದೆ. ಇದು ಯೂರಿಕ್ ಆಮ್ಲದಲ್ಲಿ ಹಾನಿಕಾರಕ. ಆಯುರ್ವೇದದ ಪ್ರಕಾರ ಮೊಸರು ತಿನ್ನುವ ಸರಿಯಾದ ಸಮಯ ಹಗಲು. ರಾತ್ರಿಯಲ್ಲಿ ಮೊಸರು ತಿನ್ನಬಾರದು. ಹಗಲಿನಲ್ಲಿ ಮೊಸರು ಸೇವಸುವಾಗ ಸಕ್ಕರೆ ಸೇರಿಸಿ ತಿನ್ನಿರಿ.
    Published by:renukadariyannavar
    First published: