Child Safety Seat: ಪೋಷಕರೇ, ಕಾರಿನಲ್ಲಿ ಪ್ರಯಾಣಿಸುವಾಗ ಮಗುವನ್ನು ತೊಡೆ ಮೇಲೆ ಕೂರಿಸಬೇಡಿ, ಮಕ್ಕಳ ಆಸನದಲ್ಲೇ ಕೂರಿಸಿ

ನಮಗೇ ಅರಿವಿಲ್ಲದಂತೆ 2-3 ವರ್ಷಗಳ ಮಕ್ಕಳು ಕಾರಿನಲ್ಲಿ ಹೋಗುವಾಗ ತಾವು ಎಲ್ಲಿ ಕೂರಬೇಕು ಎಂಬ ಶಿಸ್ತನ್ನು ಹೊಂದಿದ್ದು ತಾವಾಗಿಯೇ ಹೋಗಿ ಕೂರುವುದನ್ನು ನೋಡಬಹುದು. ಕೆಲ ತಾಯಂದಿರು ಹೇಳುವಂತೆ ಅವರ ಪುಟ್ಟ ಮಕ್ಕಳನ್ನು ಕಾರಿನಲ್ಲಿ ಕೂರಿಸಿದಾಗ ಸೀಟ್ ಬೆಲ್ಟ್ ಹಾಕುವಂತೆ ಜೋರಾಗಿ ಕೂಗುತ್ತವಂತೆ. ಅಂದರೆ, ಅಷ್ಟರಮಟ್ಟಿಗೆ ಅವು ಶಿಸ್ತನ್ನು ಕಲಿತಿರುತ್ತವೆ. ಇದು, ನಿಜಕ್ಕೂ ಉತ್ತಮ ವಿಚಾರ, ನಿಮ್ಮ ಡ್ರೈವ್ ಮೂರು ನಿಮಿಷ ಅಥವಾ ಮೂರು ಗಂಟೆಯದ್ದೆ ಯಾಕಾಗಿರಲಿ ಬೆಲ್ಟ್ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ ಹಾಗೂ ಸುರಕ್ಷತೆಯ ಪ್ರಮುಖ ಕ್ರಮ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದೊಮ್ಮೆ ಹುಟ್ಟಿದ ಮಗು (Child) ಸ್ವಲ್ಪ ದೊಡ್ಡದಾಯಿತೆಂದರೆ, ಅಂದರೆ ಸುಮಾರು ಎರಡು ವರ್ಷಗಳನ್ನು ದಾಟಿತೆಂದರೆ ಸಾಕು, ಆಗ ಆ ಮಗುವಿಗೆ ಅದೆಷ್ಟೋ ಸಂಗತಿಗಳು (facts) ಗೊತ್ತಾಗಲಾರಂಭಿಸುತ್ತವೆ. ನಿಧಾನವಾಗಿ ಆ ಮಗು ತನ್ನ ಸುತ್ತಮುತ್ತಲು ಏನು ನಡೆಯುತ್ತಿದೆ ಎಂಬುದನ್ನು ನಿಧಾನವಾಗಿ ಅರ್ಥೈಸಿಕೊಳ್ಳಲು ಪ್ರಾರಂಭಿಸುತ್ತದೆ. ಅದರಲ್ಲೂ ವಿಶೇಷವಾಗಿ ಕುಟುಂಬದ ಯಾವ ಸದಸ್ಯನಾದರೂ (Family Members) ಆ ಮಗುವನ್ನು ಸುತ್ತಾಡಲು ಹೊರಗೆ ಕರೆದುಕೊಂಡ ಹೋಗಲು ಬಯಸಿದರೆ, ಥಟ್ಟನೆ ಮಗು ಸಿದ್ಧವಾಗಿಬಿಡುತ್ತದೆ. ಏಕೆಂದರೆ ಚಿಕ್ಕ ಮಕ್ಕಳಿಗೆ ಹೊರಗಿನ ಪ್ರಪಂಚ (outside world) ನೋಡಲು ತುಂಬ ಇಷ್ಟವಾಗುತ್ತದೆ (like) ಎಂದು ಹೇಳಬಹುದು.

ಕಾರಿನಲ್ಲಿ ಹೋಗುವಾಗ ಮಕ್ಕಳನ್ನು ಎಲ್ಲಿ ಕೂರಿಸಬೇಕು 
ಇನ್ನು, ದೊಡ್ಡ ದೊಡ್ಡ ನಗರಗಳ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಹುಟ್ಟಿ ಬೆಳೆಯುವ ಸಾಕಷ್ಟು ಮಕ್ಕಳಿಗೆ ಕಾರಿನಲ್ಲಿ ಓಡಾಡುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಕೆಲಸನಿರತ ಅದೆಷ್ಟೋ ದಂಪತಿಗಳು ವಾರಾಂತ್ಯ ಬಂತೆಂದರೆ ತಮ್ಮ ಮಗುವನ್ನು ಕಾರಿನಲ್ಲಿ ಕರೆದುಕೊಂಡು ಚಿಕ್ಕ ಲಘು ಪ್ರವಾಸಕ್ಕೆಂದು ತೆರಳಿಯೇ ಬಿಡುತ್ತಾರೆ. ಹಾಗಾಗಿ, ನಮಗೇ ಅರಿವಿಲ್ಲದಂತೆ 2-3 ವರ್ಷಗಳ ಮಕ್ಕಳು ಕಾರಿನಲ್ಲಿ ಹೋಗುವಾಗ ತಾವು ಎಲ್ಲಿ ಕೂರಬೇಕು ಎಂಬ ಶಿಸ್ತನ್ನು ಹೊಂದಿದ್ದು ತಾವಾಗಿಯೇ ಹೋಗಿ ಕೂರುವುದನ್ನು ನೋಡಬಹುದು.

ಕೆಲ ತಾಯಂದಿರು ಹೇಳುವಂತೆ ಅವರ ಪುಟ್ಟ ಮಕ್ಕಳನ್ನು ಕಾರಿನಲ್ಲಿ ಕೂರಿಸಿದಾಗ ಸೀಟ್ ಬೆಲ್ಟ್ ಹಾಕುವಂತೆ ಜೋರಾಗಿ ಕೂಗುತ್ತವಂತೆ. ಅಂದರೆ, ಅಷ್ಟರಮಟ್ಟಿಗೆ ಅವು ಶಿಸ್ತನ್ನು ಕಲಿತಿರುತ್ತವೆ. ಇದು, ನಿಜಕ್ಕೂ ಉತ್ತಮ ವಿಚಾರ, ನಿಮ್ಮ ಡ್ರೈವ್ ಮೂರು ನಿಮಿಷ ಅಥವಾ ಮೂರು ಗಂಟೆಯದ್ದೆ ಯಾಕಾಗಿರಲಿ ಬೆಲ್ಟ್ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ ಹಾಗೂ ಸುರಕ್ಷತೆಯ ಪ್ರಮುಖ ಕ್ರಮ.

ಕಾರಿನಲ್ಲಿ ಹೋಗುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ಕುಶನ್ ಮಿತ್ರ ಅವರ ಅನಿಸಿಕೆ ಏನು?
ಈ ಬಗ್ಗೆ ಕುಶನ್ ಮಿತ್ರ ಎಂಬ ತಂದೆಯೊಬ್ಬರು ಈ ರೀತಿಯಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಬನ್ನಿ ಅವರು ಈ ಬಗ್ಗೆ ಏನೆಂದು ಹೇಳುತ್ತಾರೆ ಎಂದು ಗಮನಿಸೋಣ. ಅಷ್ಟಕ್ಕೂ ಇದು ಮಕ್ಕಳ ಸುರಕ್ಷತೆಗೆ ಸಂಬಂಧಿಸಿರುವುದಲ್ಲವೆ...?

ನಾನು ಒಬ್ಬ ತಂದೆಯಾಗಿ ನನಗೆ ನನ್ನ ಮಗನ ಸುರಕ್ಷೆ ಪ್ರಮುಖವಾಗಿದೆ. ನನ್ನ ಮಗ ಈಗ ಪ್ರಿಸ್ಕೂಲ್ ನಲ್ಲಿ ಓದುತ್ತಾನೆ ಹಾಗೂ ಅವನಿಗೆ ಕಾರಿನಲ್ಲಿ ಹೋಗುವುದೆಂದರೆ ಬಲು ಇಷ್ಟ. ಹಾಗಂತ, ನಾನು ಪ್ರತಿ ಬಾರಿ ಅವನನ್ನು ಕಾರಿನಲ್ಲಿ ಸುತ್ತಾಡಿಸುವುದಿಲ್ಲ. ಆದರೆ, ನನ್ನ ಕೆಲ ಕಾರ್ಯಗಳಿಗಾಗಿ ಹೋರ ಹೋಗುವಾಗ ನಾನು ಅವನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ. ನನಗೆ ಅಚ್ಚರಿಯಾಗುವ ವಿಷಯವೆಂದರೆ ನಾನು ಕಾರಿನಲ್ಲಿ ಅವನನ್ನು ಕೂರಿಸಿದರೆ ಸಾಕು, ಅವನು ತಾನಾಗಿಯೇ ತನಗೆ ಮೀಸಲಾದ ಮಕ್ಕಳ ಆಸನದಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಇದು ಅಷ್ಟರಮಟ್ಟಿಗೆ ಅವನಿಗೆ ಅಭ್ಯಾಸವಾಗಿದೆ.

ಸ್ವಲ್ಪ ಸಮಯ ಕಾರಿನಲ್ಲಿ ಪ್ರಯಾಣ ಮಾಡಿದ್ರೂ ಮಕ್ಕಳ ಸುರಕ್ಷತೆಯ ಬಗ್ಗೆ ನೋಡಿಕೊಳ್ಳಬೇಕು
ಅಲ್ಲದೆ, ನನ್ನ ಮನೆಯಿಂದ ಕೇವಲ ಮೂರು ನಿಮಿಷಗಳಷ್ಟು ಕಾರು ಪ್ರಯಾಣದ ಅಂತರದಲ್ಲಿರುವ ನನ್ನ ತಾಯಿಯ ಮನೆಗೆ ಅವನನ್ನು ಕರೆದುಕೊಂಡು ಹೋಗುವಾಗ, ಅಕಸ್ಮಾತ್ ಇದು ಕೇವಲ ಮೂರು ನಿಮಿಷಗಳ ಪ್ರಾಯಣವಷ್ಟೆ ಎಂದು ಭಾವಿಸಿ ನಾನು ಆತನಿಗೆ ಸೀಟ್ ಬೆಲ್ಟ್ ಹಾಕದೆ ಹೋದರೆ ಅವನು ಜೋರಾಗಿ ಸದ್ದು ಮಾಡುತ್ತ 'ಬೆಲ್ಟ್...ಬೆಲ್ಟ್...' ಎಂದು ಅರಚುತ್ತಾನೆ. ಇದೇ ಅಲ್ಲವೇ ಶಿಸ್ತು.

ನಾನು ನನ್ನ ಮಗನನ್ನು ಸ್ಕೂಲಿಗೆ ಬಿಡಲು ಕರೆದುಕೊಂಡು ಹೋಗುವಾಗ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ಕಾರಿನ ಮುಂದಿನ ಸೀಟುಗಳಲ್ಲಿ ಹಾಗೆಯೇ ಕೂರಿಸಿಕೊಂಡು ಬರುತ್ತಾರೆ, ಅಥವಾ ಒಮ್ಮೊಮ್ಮೆ ಆ ಮಕ್ಕಳು ಚಾಲಕನ ಅಥವಾ ಮುಂದೆ ಕುಳಿತವರ ಯಾರದ್ದಾದರೂ ತೊಡೆಯ ಮೇಲೆ ಕುಳಿತಿರುತ್ತವೆ. ಇದನ್ನು ನೋಡಿದಾಗ ನನಗೆ ನಿಜಕ್ಕೂ ಆತಂಕ ಹಾಗೂ ದುಖ ಎರಡೂ ಆಗುತ್ತದೆ. ಆದರೆ, ಮತ್ತೊಬ್ಬ ಪೋಷಕರಿಗೆ ಅವರು ತಮ್ಮ ಮಗುವನ್ನು ಬೆಳೆಸುವ ಪರಿ ಬಗ್ಗೆ ನಾನು ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಆದರೆ, ಒಂದಂತು ನೆನಪಿಡಿ, ನನ್ನ ಮಗನಿಗೆ ಔಷಧಿ ಸೇರುವುದಿಲ್ಲ ಎಂದು ಹಾಗೆ ಕುಳಿತರೆ ಕಾಯಿಲೆ ಹೋಗುವುದಿಲ್ಲ. ಔಷಧಿ ನೀಡುವುದು ಒಂದು ಕಾರ್ಯವಾಗಿದ್ದು ಅದನ್ನು ಮಾಡಲೇಬೇಕು ಎಂದಷ್ಟೇ ಹೇಳಬಹುದು.

ಮಕ್ಕಳ ಸೀಟುಗಳು ಎಲ್ಲಿ ಲಭ್ಯವಿರುತ್ತದೆ
ಈಗಂತೂ ದೊಡ್ಡ ಮಾಲ್ ಗಳಿಗೆ ಅಥವಾ ಮಕ್ಕಳ ಸ್ಟೋರ್ ಗಳಿಗೆ ಭೇಟಿ ನೀಡಿದರೆ ಸಾಕು ಹಲವು ಬಗೆಯ ಮಕ್ಕಳ ಆಸನಗಳು ಲಭ್ಯವಿರುವುದನ್ನು ಕಾಣಬಹುದು. ಇಷ್ಟೇ ಅಲ್ಲದೆ, ನೀವು ದೈತ್ಯ ಇ-ಕಾಮರ್ಸ್ ವೆಬ್ಸೈಟುಗಳಿಗೆ ಭೇಟಿ ನೀಡಿಯೂ ಮಕ್ಕಳ ಆಸನಗಳನ್ನು ಆರ್ಡರ್ ಮಾಡಬಹುದು. ಮುಂಚಿನಂತೆ ಇದು ಸಿಗುವುದೇ ಇಲ್ಲ ಎಂಬ ಸಾಧ್ಯತೆಯಂತೂ ಇಂದು ಇಲ್ಲ. ಹಾಗಾಗಿ ನಾನು ಎಲ್ಲ ಪೋಷಕರನ್ನು ಕೇಳಿಕೊಳ್ಳುವುದೇನೆಂದರೆ ಕಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ದಯವಿಟ್ಟು ಮಕ್ಕಳ ಸೀಟ್ ಅಳವಡಿಸಿ ಅವುಗಳಲ್ಲಿ ಮಕ್ಕಳನ್ನು ಕೂರಿಸಿ. ಇದರಿಂದ ಗರಿಷ್ಠ ಮಟ್ಟದ ಸುರಕ್ಷತೆ ನಿಮ್ಮ ಮಗುವಿಗೆ ದೊರೆತಂತಾಗುತ್ತದೆ.

ಇದನ್ನೂ ಓದಿ: Parent Dressing: ಮಕ್ಕಳನ್ನು ಸ್ಕೂಲಿಗೆ ಬಿಡೋಕೆ ಹೋಗುವಾಗ ಪೋಷಕರು ಈ ಬಟ್ಟೆಗಳನ್ನು ಧರಿಸುವಂತಿಲ್ಲ!

ಮಕ್ಕಳ ಸೀಟ್ ಮಕ್ಕಳ ಸುರಕ್ಷತೆ
ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳ ಸುರಕ್ಷತೆ ಎಂಬುದು ಬಲು ಪ್ರಮುಖವಾದ ವಿಚಾರವಾಗಿದೆ. ಯಾವುದೇ ಭಾರತೀಯ, ಪಾಶ್ಚಿಮಾತ್ಯ ದೇಶದಲ್ಲಿ ಭಾರತದಲ್ಲಿ ಮಾಡುವಂತೆ ಕಾರಿನ ಮುಂದಿನ ಆಸನದಲ್ಲಿ ಮಗುವನ್ನು ತೊಡೆಯಲ್ಲಿ ಕೂರಿಸಿಕೊಂಡು ಡ್ರೈವ್ ಮಾಡುವಂತಹ ಸಾಹಸ ಮಾಡಿದರೆ, ಮುಂದೆ ಅವನು ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕುಳಿತು ತನ್ನ ಮಗು ಮರಳಿಸುವಂತೆ ಸಹಾಯ ಮಾಡಬೇಕೆಂದು ಅಂಗಲಾಚಿಸಬೇಕಾದ ಪರಿಸ್ಥಿತಿ ಬರುವುದು ಖಂಡಿತ. ಏಕೆಂದರೆ ಅಲ್ಲಿರುವ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಏಜನ್ಸಿಗಳು ಕೂಡಲೆ ನಿಮ್ಮ ಮಗುವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತವೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ಸೀಟ್ ಅನ್ನು ಅಳವಡಿಸುವುದು ಮುಖ್ಯವಾದ ಅಂಶ.

ಈ ದೇಶಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ನಿಯಮಾವಳಿಗಳಿವೆಯಂತೆ 
ಯುಕೆ, ಯುರೋಪ್ ದೇಶಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕಾರಿನಲ್ಲಿ ಮಕ್ಕಳ ಸೀಟ್ ಬಗ್ಗೆ ಹಲವು ನಿಯಮಾವಳಿಗಳಿವೆ, ಅಲ್ಲದೆ ಇಲ್ಲಿನ ಪೋಷಕರು ಸಾಕಷ್ಟು ಬಾರಿ ಕಾರು ಉತ್ಪಾದಕರಿಗೆ ಮಕ್ಕಳನ್ನು ಗಮನದಲ್ಲಿರಿಸಿಕೊಂಡೂ ಸಹ ಕೆಲವು ಸುರಕ್ಷತಾ ವೈಶಿಷ್ಠ್ಯಗಳನ್ನು ವಿನ್ಯಾಸಗೊಳಿಸಿ ಎಂದು ಕೋರುತ್ತಾರೆ. ಆದಾಗ್ಯೂ, ಮಕ್ಕಳು ಕಾರಿನಲ್ಲಿ ಮಕ್ಕಳ ಸೀಟ್ ನಲ್ಲಿ ಕುಳಿತು ಬೆಲ್ಟ್ ಧರಿಸಿಕೊಂಡಿದ್ದಾಗ ಹಲವು ನಿಯಮಾವಳಿಗಳ ಪ್ರಕಾರ ಸುರಕ್ಷತೆಯ ಮಾನದಂಡಗಳು ಈಡೇರಿಸಲ್ಪಟ್ಟಿರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  Black Magic: ಮಾಟ ಮಂತ್ರಕ್ಕಾಗಿ ಹೆತ್ತ ಮಗಳನ್ನೇ ಹೊಡೆದು ಕೊಂದ ಪೋಷಕರು!

ಅಂತಿಮವಾಗಿ, ಮಕ್ಕಳು ನಮ್ಮ ದೇಶದ, ರಾಷ್ಟ್ರದ ಮುಂದಿನ ಭವ್ಯ ನಾಗರಿಕರು, ಅವರಲ್ಲಿ ಶಿಸ್ತು ಮೂಡಿಸುವುದಲ್ಲದೆ ಅವರ ಸುರಕ್ಷತೆಯ ಬಗ್ಗೆ ನಮ್ಮ ನಿಷ್ಠೆ ಹಾಗೂ ಕರ್ತವ್ಯ ಇರಲೇಬೇಕಾಗಿರುವುದು ಬಲು ಅವಶ್ಯಕವಾಗಿದೆ. ಹಾಗಾಗಿ, ಪ್ರೀಯ ಭಾರತೀಯ ಪೋಷಕರೆ ನಿಮ್ಮ ಕಾರಿನಲ್ಲಿ ಮಕ್ಕಳ ಆಸನಗಳನ್ನು ಅಳವಡಿಸಿ ಅದರಲ್ಲೇ ಮಕ್ಕಳನ್ನು ಕೂರಿಸಿ ಚಾಲನೆ ಮಾಡಿ. ಇದರಿಂದ ನಿಮ್ಮಲ್ಲೂ ಸುರಕ್ಷತಾ ಭಾವನೆಯ ವಿಶ್ವಾಸ ಹೆಚ್ಚು ಮೂಡುತ್ತದೆ.
Published by:Ashwini Prabhu
First published: