Milk benefits: ಹಾಲು ಕುಡಿಯಲು ಯಾವ ಸಮಯ ಸೂಕ್ತ? ಆಯುರ್ವೇದ ಏನು ಹೇಳುತ್ತದೆ? 

ಆಯುರ್ವೇದದ ಪ್ರಕಾರ ವಯಸ್ಕರರಿಗೆ ಹಾಲು ಸೇವಿಸಲು ಉತ್ತಮ ಸಮಯವೆಂದರೆ ರಾತ್ರಿ ಮಲಗುವ ಮೊದಲು.  ಮಕ್ಕಳು ಬೆಳಗಿನ ಸಮಯದಲ್ಲಿ ಹಾಲು ಸೇವಿಸುವುದು ಉತ್ತಮ ಮತ್ತು ಪ್ರಯೋಜನಕಾರಿ ಎಂದು ಆಯುರ್ವೇದ ಶಿಫಾರಸು ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ (Indian) ಆಹಾರ ಪದ್ಧತಿಯಲ್ಲಿ ‘ಹಾಲು’ (Milk) ಪ್ರಮುಖ ಸ್ಥಾನ ಹೊಂದಿದೆ. ಮಕ್ಕಳು, ವಯಸ್ಕರರು (Youngsters), ವೃದ್ಧರು ಹೀಗೆ ಪ್ರತಿಯೊಬ್ಬರೂ ಕುಡಿಯಲು ಇಷ್ಟಪಡುವ ಮತ್ತು ಆರೋಗ್ಯವನ್ನು (health) ಕಾಪಾಡುವ ಹಾಲು ದೈಹಿಕ ಬೆಳವಣಿಗೆಗೆ ಮತ್ತು ಆರೋಗ್ಯಕರ ಜೀವನಕ್ಕೆ ಹಿತಕಾರಿಯಾಗಿದೆ. ಒಂದು ಲೋಟದಲ್ಲಿ ಹಾಲು, ಸಕ್ಕರೆ ಹಾಕಿ ಕುಡಿಯುವುದು ಅಥವಾ ಹಾಲಿನ ಜೊತೆ ಇತರೆ ಪದಾರ್ಥಗಳನ್ನು (ingredient) ಸೇರಿಸಿ ಕುಡಿಯುವುದು (drink) ಬಹುಜನರ ರೂಢಿ. ಮಕ್ಕಳ ಆರೋಗ್ಯ ವೃದ್ಧಿಗಾಗಿ ಹಾಲು ಕುಡಿಸುವುದು ಅತ್ಯವಶ್ಯಕವಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಹಾಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ನು ಮೂಳೆಗಳ ಆರೋಗ್ಯಕ್ಕಾಗಿ ವಯಸ್ಕರು ತಮ್ಮ ಆಹಾರದಲ್ಲಿ ಹಾಲನ್ನು ಸೇರಿಸಿಕೊಳ್ಳಬಹುದು. ಒಂದು ಲೋಟ (glass) ಹಾಲು ಕುಡಿದರೆ ಹೊಟ್ಟೆ ತುಂಬುತ್ತದೆ. ಕೆಲ ಹೊತ್ತು ಹೊಟ್ಟೆ ಹಸಿವನ್ನು ನೀಗಿಸುತ್ತದೆ.  ಇನ್ನು ಕೆಲವರು ಹಾಲನ್ನು ಬೆಳಗ್ಗೆ (morning) ಸೇವಿಸಲು ಬಯಸಿದರೆ, ಇನ್ನು ಕೆಲವರು ರಾತ್ರಿ (night) ಸೇವಿಸಲು ಬಯಸುತ್ತಾರೆ. ಹಾಗಾದರೆ ಹಾಲು ಕುಡಿಯಲು ಇರುವ ಸರಿಯಾದ ಸಮಯ ಯಾವುದು.. ಯಾವಾಗ ಹಾಲು ಕುಡಿಯಬೇಕು ಎಂಬುದರ ಬಗ್ಗೆ ಆಯುರ್ವೇದ (Ayurveda) ಹೀಗೆ ಹೇಳುತ್ತದೆ.

    ಇಮ್ಯುನಿಟಿ ಹೆಚ್ಚಿಸಲು ಹಾಲು ಸಹಕಾರಿ:

    ಆಯುರ್ವೇದದ ಪ್ರಕಾರ, ವಯಸ್ಕರರಿಗೆ ಹಾಲು ಸೇವಿಸಲು ಉತ್ತಮ ಸಮಯವೆಂದರೆ ರಾತ್ರಿ ಮಲಗುವ ಮೊದಲು.  ಮಕ್ಕಳು ಬೆಳಗಿನ ಸಮಯದಲ್ಲಿ ಹಾಲು ಸೇವಿಸುವುದು ಉತ್ತಮ ಮತ್ತು ಪ್ರಯೋಜನಕಾರಿ ಎಂದು ಆಯುರ್ವೇದ ಶಿಫಾರಸು ಮಾಡಿದೆ. ಆಯುರ್ವೇದದ ಪ್ರಕಾರ, ರಾತ್ರಿ ಹಾಲು ಕುಡಿಯುವುದರಿಂದ ‘ಓಜಸ್’ ವೃದ್ಧಿಗೆ ಸಹಕಾರಿ. ಓಜಸ್ ಎಂದರೆ ದೇಹದ ಇಮ್ಯುನಿಟಿಯನ್ನು ಹೆಚ್ಚಿಸಲು ಮತ್ತು ನೆಗಡಿ, ಕೆಮ್ಮಿನಿಂದ ದೇಹವನ್ನು ರಕ್ಷಿಸುವ ಅಂಶ ಆಗಿದೆ.  ಹಾಲು ಕುಡಿಯುವದರಿಂದ ಉತ್ತಮ ನಿದ್ದೆ ಹೊಂದಬಹುದು. ದೇಹಕ್ಕೆ ಗರಿಷ್ಠ ಮಟ್ಟದಲ್ಲಿ ಕ್ಯಾಲ್ಸಿಯಂ ಸಿಗುತ್ತದೆ.

    ರೋಗನಿರೋಧಕ ಶಕ್ತಿ  ಹೆಚ್ಚಳ:

    ಇನ್ನು ಹಾಲು ಸಂಪೂರ್ಣವಾಗಿ ಪೋಷಕಾಂಶಗಳಿಂದ ತುಂಬಿದೆ. ಮೂಳೆಗಳ ಬಲವರ್ಧನೆಗೆ ಸಹಕಾರಿಯಾಗಿದೆ. ಇದು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ರಂಜಕದ ಉತ್ತಮ ಮೂಲವಾಗಿದೆ. ನಿತ್ಯವೂ ಹಾಲು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ  ಹೆಚ್ಚುತ್ತದೆ. ಎದೆಯುರಿ ಹಾಗೂ ಇತರೆ ಸಮಸ್ಯೆಗಳಿಂದ ದೂರವಿರಬಹದು.

    ಇದನ್ನೂ ಓದಿ: ಮಗುವಿಗೆ ಎಷ್ಟು ದಿನ ಹಾಲುಣಿಸಬೇಕು? ತಜ್ಞರು ಹೇಳೋದೇನು ಕೇಳಿ

    ಕೆನೆಗಟ್ಟಿದ ಹಾಲು ಕುಡಿಯಬಹುದಾ..?:

    ನೀವು ದಿನಕ್ಕೆ 2-3 ಕಪ್ ಹಾಲನ್ನು ಸುಲಭವಾಗಿ ಸೇವಿಸಬಹುದು. ನೀವು ಕುಡಿಯುವ ಹಾಲು ಕೆನೆಗಟ್ಟಿದ್ದರೆ 1 ರಿಂದ 2 ಕಪ್ ಮಾತ್ರ ಹಾಲು ಕುಡಿಯಿರಿ. ಯಾಕೆಂದರೆ ಕೆನೆಗಟ್ಟಿದ ಹಾಲು ತೂಕವನ್ನು ಹೆಚ್ಚಿಸುತ್ತದೆ. ಕಡಿಮೆ ಕೊಬ್ಬಿನ ಹಾಲನ್ನು ಮಿತವಾಗಿ ಸೇವಿಸಿ.

    ಹಣ್ಣಿನೊಂದಿಗೆ ಹಾಲಿನ ಮಿಶ್ರಣ ಬೇಡ:

    ಆಯುರ್ವೇದದ ನಿಯಮಗಳ ಪ್ರಕಾರ, ಮಾವಿನಹಣ್ಣು, ಬಾಳೆಹಣ್ಣು, ಕಲ್ಲಂಗಡಿ ಮತ್ತು ಇತರೆ ಹುಳಿ ಹಣ್ಣುಗಳನ್ನು ಹಾಲು ಅಥವಾ ಮೊಸರಿನೊಂದಿಗೆ ಮಿಶ್ರಣ ಮಾಡಬಾರದು. ಅಂತಹ ಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಿದಾಗ ಗ್ಯಾಸ್ಟ್ರಿಕ್ ಫೈರ್ ಅಂಶ ಕಡಿಮೆಯಾಗಿ, ವಿಷವಾಗಿ ಪರಿಣಮಿಸುತ್ತದೆ. ಇದರಿಂದ ಸೈನಸ್, ಶೀತ, ಕೆಮ್ಮು ಮತ್ತು ಅಲರ್ಜಿ ಉಂಟಾಗುತ್ತದೆ.

    ಹಾಲಿನೊಂದಿಗೆ ಈ ಪದಾರ್ಥ ಸೇರಿಸಿ:

    ಇನ್ನು ಕೇವಲ ಹಾಲು ಮಾತ್ರ ಕುಡಿಯಲು ನಿಮಗೆ ಬೋರ್ ಎನ್ನಿಸಿದರೆ ಹಾಲಿನ ಜೊತೆಗೆ ಕೆಲವು ಆಹಾರ ಪದಾರ್ಥ, ಸಿಹಿಪದಾರ್ಥ, ಅರಿಶಿನವನ್ನು ಸೇರಿಸಬಹುದು. ಮಕ್ಕಳಿಗೆ ಹಾಲಿನ ರುಚಿಯನ್ನು ಹೆಚ್ಚಿಸಲು ಚಾಕೋಲೇಟ್ ಪೌಡರನ್ನು ಮಿಕ್ಸ್ ಮಾಡಿ ಚಾಕೋಲೇಟ್ ಶೇಖ್ ನೀಡಬಹುದು.

    ಇದನ್ನೂ ಓದಿ: ತ್ವಚೆಯ ಸರ್ವ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿದೆ ಪರಿಹಾರ

    ಈಗ ಆಯುರ್ವೇದದ ಪ್ರಕಾರ ಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇರಿಸಬಾರದು ಎಂದು ಹೇಳಿದೆ. ಹಾಗಾದರೆ ಇದನ್ನು ಸರಿಯಾದ ಪ್ರಮಾಣದಲ್ಲಿ, ರೀತಿಯಲ್ಲಿ ಹೇಗೆ ಸೇವಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ತಣ್ಣನೆಯ ಮತ್ತು ಬಿಸಿ ಹಾಲು ಎರಡೂ ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುತ್ತವೆ. ಆದರೆ ಅದಕ್ಕಾಗಿ ನೀವು ಸರಿಯಾದ ಮಾರ್ಗದಲ್ಲಿ ಹಾಲು ಕುಡಿಯಬೇಕು.

    ರಾತ್ರಿ ಬೆಚ್ಚಗಿನ ಹಾಲು ಸೇವಿಸಿ:  

    ನೀವು ಹಗಲಿನಲ್ಲಿ ಹಾಲು ಕುಡಿಯುತ್ತೀರಿ ಎಂದಾರೆ ಅದು ತಣ್ಣಗೆ ಅಥವಾ ಬಿಸಿ ಎರಡೂ ಇದ್ದರೂ ಕುಡಿಯಬಹುದು. ಆದರೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನೇ ಸೇವಿಸಿರಿ. ಇದು ಹೊಟ್ಟೆಯ ತೊಂದರೆ ನಿವಾರಣೆ ಮತ್ತು ಉತ್ತಮ ನಿದ್ದರೆ ಹೊಂದಲು ಸಹಕಾರಿಯಾಗುತ್ತದೆ.
    Published by:renukadariyannavar
    First published: