• Home
  • »
  • News
  • »
  • lifestyle
  • »
  • Heart Health: ನಿಮಗೆ ಈ ಲಕ್ಷಣಗಳು ಕಾಣಿಸಿಕೊಳ್ತಿದ್ಯಾ? ಹುಷಾರ್, ನಿಮ್ಮ ಹೃದಯ ವೀಕ್ ಆಗ್ತಿದೆ ಕಣ್ರೀ!

Heart Health: ನಿಮಗೆ ಈ ಲಕ್ಷಣಗಳು ಕಾಣಿಸಿಕೊಳ್ತಿದ್ಯಾ? ಹುಷಾರ್, ನಿಮ್ಮ ಹೃದಯ ವೀಕ್ ಆಗ್ತಿದೆ ಕಣ್ರೀ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಎಲ್ಲಾ ವಯಸ್ಸಿನ ಜನರಲ್ಲಿ ಸಾಮಾನ್ಯವಾಗಿದೆ. ಎಲ್ಲಾ ವರ್ಗದ ಜನರು ಈ ಡೆಡ್ಲಿ ಕಾಯಿಲೆಯ ಅಪಾಯ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸೋಕೆ ಇರುವ ಏಕೈಕ ಮಾರ್ಗ ಅಂದ್ರೆ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು.

  • Share this:

    ಜಗತ್ತಿನಲ್ಲಿ (World) ಪ್ರತಿ ವರ್ಷ 1 ಕೋಟಿ 79 ಲಕ್ಷ ಜನರು ಹೃದ್ರೋಗ ಸಮಸ್ಯೆಯಿಂದ (Heart Disease) ಮೃತಪಡುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಎಲ್ಲಾ ವಯಸ್ಸಿನ (All Age) ಮತ್ತು ಲಿಂಗದ ಜನರಲ್ಲಿ ಸಾಮಾನ್ಯವಾಗಿದೆ. ಎಲ್ಲಾ ವರ್ಗದ ಜನರು ಈ ಡೆಡ್ಲಿ ಕಾಯಿಲೆಯ ಅಪಾಯ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸೋಕೆ ಇರುವ ಏಕೈಕ ಮಾರ್ಗ ಅಂದ್ರೆ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು. ಹೃದಯ ಸಮಸ್ಯೆ ಇದ್ದಾಗ ಅಥವಾ ದುರ್ಬಲ ಹೃದಯ ಸಮಸ್ಯೆ ಇದ್ದಾಗ ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗಲ್ಲ.


    ಹೃದ್ರೋಗ ಸಮಸ್ಯೆ ಅಪಾಯಕಾರಿ


    ಪರಿಧಮನಿಯ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಸಮಸ್ಯೆ ಸೇರಿ ಹಲವು ಕಾಯಿಲೆಗಳು ಮತ್ತು ಆರೋಗ್ಯ ಅಸ್ವಸ್ಥತೆಯು ಹೃದಯದ ಸಾಮರ್ಥ್ಯ ಕುಂಠಿತಗೊಳಿಸುತ್ತದೆ. ಹೃದಯ ದುರ್ಬಲವಾದಾಗ ಅದು ರಕ್ತವನ್ನು ಇನ್ನಷ್ಟು ವೇಗವಾಗಿ ಪಂಪ್ ಮಾಡುತ್ತದೆ. ಮತ್ತು ಈ ಅತಿಯಾದ ಕೆಲಸವು ಹೃದಯಾಘಾತ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ.


    ಹೀಗೆ ಹೃದಯಾಘಾತ ಒಂದು ದಿನದ ಫಲಿತಾಂಶ ಆಗಿರುವುದಿಲ್ಲ. ದೀರ್ಘಕಾಲದವರೆಗೆ ಹೃದಯ ಮಾಡುವ ಅತಿಯಾದ ಕೆಲಸ ಅದನ್ನು ದುರ್ಬಲವಾಗಿಸುತ್ತದೆ. ಮತ್ತು ಸ್ವಲ್ಪ ಸಮಯದ ನಂತರ ನಿಮ್ಮ ಹೃದಯ ಬಡಿತ ನಿಲ್ಲಿಸಿದಾಗ ಈ ಸ್ಥಿತಿ ಉಂಟಾಗುತ್ತದೆ.




    ಸಕಾಲಿಕ ಚಿಕಿತ್ಸೆಯಿಂದ ಮಾತ್ರ ಹೃದಯಾಘಾತ ಮತ್ತು ಸಮಸ್ಯೆ ತಡೆಯಬಹುದು. ಹಾಗಾಗಿ ಮೊದಲು ಹೃದಯ ದುರ್ಬಲವಾದಾಗ ಯಾವೆಲ್ಲಾ ಲಕ್ಷಣಗಳು ಗೋಚರಿಸುತ್ತವೆ ಎಂದು ತಿಳಿಯುವುದು ಮುಖ್ಯ.


    ದಿನವೂ ಮೈಗ್ರೇನ್ ನೋವು ಉಂಟಾಗುವುದು


    ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಮೈಗ್ರೇನ್ ನೋವು ಹೃದಯದ ಆರೋಗ್ಯಕ್ಕೂ ಸಂಬಂಧಪಟ್ಟಿದೆ. ನಿಯಮಿತವಾಗಿ ಬರುವ ಮೈಗ್ರೇನ್,  ಹೃದಯ ದುರ್ಬಲದ ಸ್ಥಿತಿಯನ್ನು ಹೇಳುತ್ತದೆ ಎಂಬುದರ ಸಂಕೇತವಾಗಿರಬಹುದು. ಹಾಗಾಗಿ ಮೈಗ್ರೇನ್ ಸಮಸ್ಯೆ ತಡೆಗೆ ಮತ್ತು ಹೃದಯದ ಆರೋಗ್ಯಕ್ಕೆ ನಿಯಮಿತ ವ್ಯಾಯಾಮ, ಯೋಗ ಮತ್ತು ಆಹಾರ ಕ್ರಮ ಪಾಲಿಸಿ.


    ಪದೇ ಪದೇ ಉಂಟಾಗುವ ಆಯಾಸ


    ಹೃದಯ ದುರ್ಬಲವಾದಾಗ ದೇಹದ ಭಾಗಗಳಿಗೆ ರಕ್ತದ ಮೂಲಕ ಆಮ್ಲಜನಕ ಸಾಗಿಸುವ ಕೆಲಸ ಕಠಿಣವಾಗುತ್ತದೆ. ಹೀಗಾಗಿ ದೇಹದಲ್ಲಿ ಆಯಾಸ ಉಳಿಯುತ್ತದೆ. ಆಯಾಸವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಭೇಟಿ ಮಾಡಿ, ಪರೀಕ್ಷಿಸಿ.


    ಕಾಲಿನ ಊತವು ದುರ್ಬಲ ಹೃದಯ ಸಂಕೇತ


    ಗರ್ಭಾವಸ್ಥೆ, ಉಬ್ಬಿರುವ ರಕ್ತನಾಳ, ಜಡ ಜೀವನಶೈಲಿ ಸಮಸ್ಯೆಯಿಂದಲೂ ಕಾಲು ಊತ ಉಂಟಾಗಬಹುದು. ಆದರೆ ಕಾಲಿನ ಊತವು ಕೆಲವೊಮ್ಮೆ ಹೃದಯ ವೈಫಲ್ಯದ ಸಂಕೇತವೂ ಆಗಿರುತ್ತದೆ. ಕಾಲುಗಳಲ್ಲಿ ಆಯಾಸವಾಗುವುದು, ನಡೆಯುವಾಗ ನೋವು ಉಂಟಾಗುವುದು, ಎತ್ತರದಲ್ಲಿ ಚಲಿಸುವಾಗ ಸೊಂಟ ಮತ್ತು ಕಾಲಿನ ಸ್ನಾಯುಗಳಲ್ಲಿ ನೋವು ಅಥವಾ ಸೆಳೆತ ಉಂಟಾದರೆ ಅದು ಹೃದಯ ದುರ್ಬಲವಾದ ಸಂಕೇತವಾಗಿರಬಹುದು.


    ಕಾಲಿನ ಊತ ಮತ್ತು ನೋವು ವಯಸ್ಸು ಅಥವಾ ವ್ಯಾಯಾಮದ ಕೊರತೆಯಿಂದ ಆಗಿರಬಹುದು. ಹೃದಯದ ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳ ಸಂಕೇತವಾಗಿರಬಹುದು. ಇದು ಅಪಾಯಕಾರಿ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ವೈದ್ಯರಿಂದ ಪರೀಕ್ಷಿಸಿ.


    ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚುತ್ತಿದೆ ಸೈನಸ್ ಸಮಸ್ಯೆ- ಹೀಗೆ ಮಾಡಿದ್ರೆ ಸಾಕು ಪರಿಹಾರ ಸಿಗುತ್ತೆ


    ಉಸಿರಾಟದ ತೊಂದರೆ ಹೃದಯದ ಎಚ್ಚರಿಕೆ


    ಅತಿಯಾದ ದೈಹಿಕ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ ಸಮಸ್ಯೆ ಉಂಟಾಗಬಹುದು. ಆದರೆ ಲಘು ಚಟುವಟಿಕೆ ಮಾಡಿದಾಗ ಹೆಚ್ಚು ಉಸಿರಾಡುವುದು, ಆಸ್ತಮಾ, ರಕ್ತಹೀನತೆ, ಸೋಂಕು ಅಥವಾ ಹೃದಯದ ಅತಿಯಾದ ಕೆಲಸದ ಪರಿಣಾಮ ಉಂಟಾಗುವ ಕೆಟ್ಟ ಸಂಕೇತಗಳಾಗಿವೆ.

    Published by:renukadariyannavar
    First published: