April Fools Day 2023: ಮೂರ್ಖರ ದಿನ ಯಾವಾಗ ಆರಂಭವಾಯಿತು? ಇದನ್ನು ಆಚರಿಸುವ ಉದ್ದೇಶವೇನು?

ಏಪ್ರಿಲ್ ಫೂಲ್ಸ್​ ಡೇ

ಏಪ್ರಿಲ್ ಫೂಲ್ಸ್​ ಡೇ

ಮೂರ್ಖರ ದಿನಾಚರಣೆಗೆ ಸಂಬಂಧಿಸಿದ ಅನೇಕ ಹಾಸ್ಯ, ಕಥೆಗಳನ್ನು ನೀವು ಓದಿರಬಹುದು ಅಥವಾ ಕೇಳಿರಬಹುದು. ಆದರೆ ಈ ಇಂದಿನವನ್ನು ಏಕೆ ಮತ್ತು ಯಾವಾಗ ಆಚರಿಸುತ್ತಾರೆ? ಮೊದಲ ಬಾರಿಗೆ ಆಚರಿಸಿದ್ದು ಎಲ್ಲಿ? ಈ ಬಗ್ಗೆ ಇಂಟ್ರೆಸ್ಟಿಂಗ್​ ಸ್ಟೋರಿಯನ್ನು ತಿಳಿದುಕೊಳ್ಳೋಣ ಬನ್ನಿ.

  • Share this:

ಪ್ರತಿ ವರ್ಷ ಏಪ್ರಿಲ್ 1 ರಂದು ಮೂರ್ಖರ ದಿನವನ್ನು (April Fool Day) ಆಚರಣೆ ಮಾಡಲಾಗುತ್ತದೆ. ಏಪ್ರಿಲ್ ಫೂಲ್ ದಿನದಂದು ಕೆಲವರು ಕೆಲವರನ್ನು ಮೂರ್ಖರನ್ನಾಗಿಸುತ್ತಾರೆ. ಈ ದಿನ ಸಾಮಾನ್ಯವಾಗಿ ಜನರು ಶಾಲೆ (School), ಕಾಲೇಜು(Collage), ಕಚೇರಿ (Office) ಮತ್ತು ಮನೆಗಳಲ್ಲಿ  (Home) ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ (Joke) ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ (India) ಮಾತ್ರವಲ್ಲದೇ ಪ್ರಪಂಚದ ಎಲ್ಲಾ ದೇಶಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಮೂರ್ಖರ ದಿನಾಚರಣೆಗೆ ಸಂಬಂಧಿಸಿದ ಅನೇಕ ಹಾಸ್ಯ, ಕಥೆಗಳನ್ನು ನೀವು ಓದಿರಬಹುದು ಅಥವಾ ಕೇಳಿರಬಹುದು. ಆದರೆ ಈ ಇಂದಿನವನ್ನು ಏಕೆ ಮತ್ತು ಯಾವಾಗ ಆಚರಿಸುತ್ತಾರೆ? ಮೊದಲ ಬಾರಿಗೆ ಆಚರಿಸಿದ್ದು ಎಲ್ಲಿ? ಈ ಬಗ್ಗೆ ಇಂಟ್ರೆಸ್ಟಿಂಗ್​ ಸ್ಟೋರಿಯನ್ನು ತಿಳಿದುಕೊಳ್ಳೋಣ ಬನ್ನಿ.


ಏಪ್ರಿಲ್ ಫೂಲ್ಸ್​ ಡೇ


ಮೂರ್ಖರ ದಿನಕ್ಕೆ ಸಂಬಂಧಿಸಿದ ಕಥೆಗಳು


ಪ್ರಪಂಚದಾದ್ಯಂತ ಜನರು ಈ ದಿನವನ್ನು ಆಚರಿಸುತ್ತಾರೆ. ಆದರೆ, ಮಾಹಿತಿಯ ಪ್ರಕಾರ, ಈ ದಿನವನ್ನು ಮೊದಲ ಬಾರಿಗೆ 1381 ರಲ್ಲಿ ಆಚರಿಸಲಾಯಿತು. ಒಂದು ನಂಬಿಕೆಯ ಪ್ರಕಾರ, ಇಂಗ್ಲೆಂಡ್‌ನ ರಾಜ ರಿಚರ್ಡ್ II ಬೊಹೆಮಿಯಾದ ರಾಣಿ ಅನ್ನಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದನು. ಅವರ ನಿಶ್ಚಿತಾರ್ಥದ ದಿನಾಂಕವನ್ನು 32 ಮಾರ್ಚ್ 1381 ಎಂದು ನಿಗದಿಪಡಿಸಲಾಯಿತು.


ಈ ಸುದ್ದಿ ಕೇಳಿ ಜನರು ತುಂಬಾ ಸಂತೋಷಪಟ್ಟರು. ಎಲ್ಲರೂ ಸಂಭ್ರಮಿಸತೊಡಗಿದರು. ನಂತರ ಅವರು ಕ್ಯಾಲೆಂಡರ್‌ನಲ್ಲಿ ಮಾರ್ಚ್ 32 ಕಾಣದೆ ಇರುವುದನ್ನು ನೋಡಿದರು. ಅಂದರೆ ಎಲ್ಲರೂ ಮೂರ್ಖರಾಗಿದ್ದಾರೆ. ಆದ್ದರಿಂದ ಈ ಲೇಖನದ ಪ್ರಕಾರ ಮೂರ್ಖರ ದಿನವನ್ನು ಏಪ್ರಿಲ್ 1 ರಿಂದ ಆಚರಿಸಲು ಪ್ರಾರಂಭಿಸಲಾಯಿತು.


ಮೂರ್ಖರ ದಿನಕ್ಕೆ ಸಂಬಂಧಿಸಿದ ಮತ್ತೊಂದು ಕಥೆ


ಫ್ರಾನ್ಸ್‌ನಲ್ಲಿ ಮೊದಲು ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವನ್ನು ಏಪ್ರಿಲ್ 1 ರಂದು ಆಚರಿಸಲಾಗುತ್ತದೆ. ಹಲವು ದಶಕಗಳ ಹಿಂದೆ ಇಡೀ ಜಗತ್ತೆ ಏಪ್ರಿಲ್ 1 ರಂದು ಹೊಸ ವರ್ಷವನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸುತ್ತಿತ್ತು.


ಏಪ್ರಿಲ್ ಫೂಲ್ಸ್​ ಡೇ


ಆದರೆ ಫ್ರಾನ್ಸ್ ದೇಶವೂ ಪೋಪ್ XIIIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತು. ಈ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಲಾಗುತ್ತಿದೆ. ಹೀಗಾಗಿ ಜನವರಿ 1 ಬದಲು ಎಪ್ರಿಲ್ 1 ರಂದು ನಾವು ಹೊಸ ವರ್ಷ ಆಚರಿಸುತ್ತಿದ್ದವು ಎಂಬುವುದನ್ನು ಮನಗಂಡ ಫ್ರಾನ್ಸ್ ದೇಶ, ಇಷ್ಟು ದಿನ ನಾವು ಮೂರ್ಖರಾದೆವು ಎಂದು ಹೇಳಿಕೊಂಡಿತು. ಏಪ್ರಿಲ್ 1 ನ್ನು ಹೊಸ ವರ್ಷ ಎಂದು ನಂಬಿದವರು ಹಾಗೂ ಈಗಲೂ ಏಪ್ರಿಲ್ 1 ರಂದು ಹೊಸ ವರ್ಷ ಆಚರಣೆ ಮಾಡುತ್ತಿರುವ ಹಿನ್ನಲೆ ಈ ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತಿದೆ.


ಇದನ್ನೂ ಓದಿ: Interesting Facts: ಮೂರ್ಖರನ್ನು ಕತ್ತೆಗೆ ಯಾಕೆ ಹೋಲಿಸ್ತಾರೆ? ನಿಜಕ್ಕೂ ಇದು ಬುದ್ಧಿವಂತ ಪ್ರಾಣಿ ಅಂತಿದೆ ಸಂಶೋಧನೆ!




ಕೆಲವು ವರದಿಗಳ ಪ್ರಕಾರ, ಬ್ರಿಟಿಷರು 19 ನೇ ಶತಮಾನದಲ್ಲಿ ಭಾರತದಲ್ಲಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಹೀಗೆ ಏಪ್ರಿಲ್​ ಫೂಲ್​ ದಿನವನ್ನು ವರ್ಷಗಳಿಂದಲೂ ಆಚರಿಸುತ್ತಾ ಬರಲಾಗಿದೆ. ಪ್ರತಿ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಮತ್ತು ಜೋಕ್‌ಗಳು ವೈರಲ್ ಆಗುತ್ತವೆ. ಹೇಗಾದರೂ, ಯಾರೊಂದಿಗಾದರೂ ತಮಾಷೆ ಮಾಡುವಾಗ, ಜೋಕ್ ಮಾರಣಾಂತಿಕವಾಗಿರಬಾರದು ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏಪ್ರಿಲ್ ಮೂರ್ಖರ ದಿನದ ನೆಪದಲ್ಲಿ ಧರ್ಮ, ಜಾತಿ, ಯಾರಿಗೋ ಅನಾರೋಗ್ಯ ಅಥವಾ ಸಾವಿನ ಬಗ್ಗೆ ಯಾರೂ ತಮಾಷೆ ಮಾಡಬಾರದು. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18 ಇದಕ್ಕೆ ಜವಾಬ್ದಾರಿಯಲ್ಲ)

First published: