Periods: ನಿಮ್ಮ ಮಗಳಿಗೆ ಮುಟ್ಟಿನ ಬಗ್ಗೆ ಯಾವ ವಯಸ್ಸಿನಲ್ಲಿ ಮತ್ತು ಹೇಗೆ ತಿಳಿಸಬೇಕು? ಮಗನಿಗೂ ಕೂಡಾ...!

Menstrual Cycle: ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಮುಟ್ಟಿನ ಕುರಿತು ಸೂಕ್ತ ಮಾಹಿತಿಯ ಅಗತ್ಯವಿದೆ. ಹಾಗಾಗಿ ಗಂಡು ಮಕ್ಕಳಲ್ಲಿಯೂ ಈ ಕುರಿತು ಮಾತನಾಡಿ. ಮುಜುಗರ ಬೇಡ, ಮಕ್ಕಳೊಂದಿಗೆ ಋತುಸ್ರಾವದ ಬಗ್ಗೆ ಮುಕ್ತವಾಗಿ ಮಾತನಾಡಿ. ಅವರಿಗೆ ತಿಳುವಳಿಕೆ ಇದ್ದಾಗ ಆರೋಗ್ಯ ಉತ್ತಮವಾಗುತ್ತದೆ, ಜೊತೆಗೆ ಅರಿವಿನಿಂದ ಜವಾಬ್ದಾರಿಯೂ ಹೆಚ್ಚುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Menstrual Health Awareness: ಮಕ್ಕಳೊಂದಿಗೆ , ಋತುಸ್ರಾವದಂತಹ ವೈಯುಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೆತ್ತವರಿಗೆ ಮುಜುಗರ ಆಗಬಹುದು. ಆದರೆ ಮಕ್ಕಳಿಗೆ ಆ ಕುರಿತು ವಿಶ್ವಾಸಾರ್ಹ ಮಾಹಿತಿಯ ಅಗತ್ಯವಿರುತ್ತದೆ! ಮಕ್ಕಳಿಗೆ ಅವರ ದೇಹವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು.


ಮಕ್ಕಳ ಜೊತೆ ಋತುಸ್ರಾವದ ಬಗ್ಗೆ ಯಾವಾಗ ಮಾತನಾಡಬೇಕು?
ಋತುಸ್ರಾವ ಅಥವಾ ಮುಟ್ಟಿನ ಕುರಿತು ಮಾತನಾಡುವುದು ಒಂದು ನಿರ್ದಿಷ್ಟ ವಯಸ್ಸಿನ ನಂತರ ದೊಡ್ಡ ವಿಷಯ ಅನಿಸಿಕೊಳ್ಳುವುದಿಲ್ಲ.ಬದಲಿಗೆ, ಸ್ವಲ್ಪ ಬೇಗನೇ ಈ ಕುರಿತು ಮಾತನಾಡಲು ಆರಂಭಿಸುವ ಮೂಲಕ ಮಗುವಿನ ಅರಿವನ್ನು ಬೆಳೆಸುತ್ತಾ ಬನ್ನಿ. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಮುಟ್ಟಿನ ಕುರಿತು ಸೂಕ್ತ ಮಾಹಿತಿಯ ಅಗತ್ಯವಿದೆ. ಹಾಗಾಗಿ ಗಂಡು ಮಕ್ಕಳಲ್ಲಿಯೂ ಈ ಕುರಿತು ಮಾತನಾಡಿ.


ಉದಾಹರಣೆಗೆ ನಿಮ್ಮ ನಾಲ್ಕು ವರ್ಷದ ಮಗು ಟ್ಯಾಂಪುನ್ಸ್ ನೋಡಿದಾಗ ಅದರ ಬಗ್ಗೆ ಕೇಳಿತು ಎಂದುಕೊಳ್ಳಿ,ಆಗ “ ಪ್ರತಿ ತಿಂಗಳು ಮಹಿಳೆಯರ ಗುಪ್ತಾಂಗದಿಂದ ಸ್ವಲ್ಪ ರಕ್ತ ಬರುತ್ತದೆ. ಅದನ್ನು ಮುಟ್ಟು ಎನ್ನುತ್ತಾರೆ. ಅದು ಗಾಯವಾದ್ದರಿಂದ ಬರುವುದಲ್ಲ, ಬದಲು ದೇಹ ಮಗು ಹೇರಲು ಸಿದ್ಧವಾಗುವ ರೀತಿಯದು. ಟ್ಯಾಂಪೂನ್ ರಕ್ತವನ್ನು ಹೀರಿಕೊಂಡು ಒಳ ಉಡುಪಿಗೆ ಕಲೆಯಾಗದಂತೆ ನೋಡಿಕೊಳ್ಳುತ್ತದೆ” ಎಂದು ಹೇಳಿ.
ವರ್ಷ ಕಳೆದಂತೆ, ಆ ಕುರಿತು ಮಗುವಿಗೆ ಇನ್ನಷ್ಟು ಮಾಹಿತಿಗಳನ್ನು ನೀಡುತ್ತಾ ಬರಬಹುದು.


ಇದನ್ನೂ ಓದಿ: Diet Tips: ರಾತ್ರಿಯಿಂದ ಬೆಳಗ್ಗೆವರಗೆ ಎಷ್ಟು ಗಂಟೆ ಹೊಟ್ಟೆ ಖಾಲಿ ಇರಬೇಕು? ಇದು Dry Fasting ಎನ್ನುವ ಹೊಸಾ ಆರೋಗ್ಯ ಸೂತ್ರ !

ಮಗು ಆ ಕುರಿತು ಪ್ರಶ್ನೆ ಕೇಳದಿದ್ದರೆ, ನೀವೆ ಅದನ್ನು ಹೇಳಬಹುದು. 6 ರಿಂದ 7 ವಯಸ್ಸಿನ ಮಕ್ಕಳು ಮುಟ್ಟಿನ ಪ್ರಾಥಮಿಕ ಮಾಹಿತಿಗಳನ್ನು ಅರ್ಥ ಮಾಡಿಕೊಳ್ಳಬಹುದು. ಈ ಕುರಿತು ಮಾತನಾಡಲು ಸಾಧ್ಯವಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಳ್ಳಿ, ಅಂದರೆ:
• ಮಕ್ಕಳು ಪ್ರೌಢಾವಸ್ಥೆ ಅಥವಾ ದೈಹಿಕ ಬದಲಾವಣೆಗಳ ಬಗ್ಗೆ ಕೇಳಿದಾಗ.
• ಮಕ್ಕಳು , ಮಗು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ.
• ನೀವು ಅಂಗಡಿಯಲ್ಲಿ ಪ್ಯಾಡ್ ಅಥವಾ ಟ್ಯಾಂಪೂನ್ಸ್ ಖರೀದಿಸುತ್ತಿದ್ದಾಗ.


ನಿಮ್ಮ ಮಗುವಿಗೆ ಮುಟ್ಟಿನ ಬಗ್ಗೆ ಗೊತ್ತಿದೆಯಾ ಎಂದು ಕೇಳಿ. ಬಳಿಕ ಪ್ರಾಥಮಿಕ ಮಾಹಿತಿ ಹಂಚಿಕೊಳ್ಳಿ. ಉದಾಹರಣೆಗೆ: ಹೆಣ್ಣು ದೊಡ್ಡವಳಾದಾಗ ಮಗು ಹೇರಲು ಸಾಧ್ಯವಾಗುವಂತೆ ದೇಹ ಬದಲಾಗುತ್ತದೆ. ಮಗು ದೇಹದೊಳಗೆ ಬೆಳೆಯುವ ಜಾಗ ಗರ್ಭಕೋಶ. ಪ್ರತಿ ತಿಂಗಳು ಗರ್ಭಕೋಶದ ಗೋಡೆ/ಪದರ ಮಗು ಹೊಂದಲು ಸಿದ್ಧವಾಗುತ್ತದೆ. ಅಲ್ಲಿ ಮಗು ಇರದಿದ್ದಲ್ಲಿ, ಗರ್ಭಾಶಯದ ಗೋಡೆಯು ಹೊರ ಬರುತ್ತದೆ ಮತ್ತು ಸ್ವಲ್ಪ ರಕ್ತಸ್ರಾವ ಆಗುತ್ತದೆ. ಅದು ಮಹಿಳೆಯ ಯೋನಿಯ ಮೂಲಕ ಹೊರ ಬರುತ್ತದೆ. ದೇಹ ಪ್ರತಿ ಬಾರಿ ಹೊಸ ಗೋಡೆ ರಚಿಸುತ್ತದೆ.


ನಾನು ಯಾವುದರ ಬಗ್ಗೆ ಮಾತನಾಡಬೇಕು?


ನೀವೇನು ಮಾತನಾಡಬೇಕು ಎಂಬುವುದು ನಿಮ್ಮ ಮಗುವಿನ ವಯಸ್ಸನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮಕ್ಕಳು ಕೇಳುವ ಪ್ರಶ್ನೆಗಳು ಈ ಕೆಳಗಿನಂತಿವೆ.


ಹುಡುಗಿಯರಿಗೆ ಯಾವಾಗ ಮುಟ್ಟು ಆರಂಭವಾಗುತ್ತದೆ?
ಹೆಚ್ಚಿನ ಹುಡುಗಿಯರಿಗೆ ಅವರ 10 ರಿಂದ 15 ವಯಸ್ಸಿನ ನಡುವೆ ಮುಟ್ಟು ಆರಂಭವಾಗುತ್ತದೆ. ಸರಾಸರಿ ವಯಸ್ಸು 12, ಆದರೆ ಪ್ರತೀ ಹುಡುಗಿಗೂ ಅವಳದ್ದೇ ಆದ ಅವಧಿ ಇರುತ್ತದೆ. ಮುಟ್ಟು ಆರಂಭ ಆಗುವುದರ ಬಗ್ಗೆ ಕೆಲವೊಂದು ಲಕ್ಷಣಗಳು ಕಾಣಿಸುತ್ತವೆ. ಸಾಮಾನ್ಯವಾಗಿ, ಹೆಣ್ಣು ಮಕ್ಕಳ ಸ್ತನಗಳ ಬೆಳವಣಿಗೆ ಆದ 2 ವರ್ಷಕ್ಕೆ ಮುಟ್ಟು ಆರಂಭವಾಗುತ್ತದೆ. ಮತ್ತೊಂದು ಲಕ್ಷಣ ಯೋನಿ ಸ್ರಾವ(ಲೋಳೆಯಂತೆ). ಈ ಸ್ರಾವ ಹೆಣ್ಣು ಮುಟ್ಟಾಗುವ ಆರು ತಿಂಗಳು ಅಥವಾ ಒಂದು ವರ್ಷ ಮೊದಲು ಆರಂಭವಾಗುತ್ತದೆ.


ಇದನ್ನೂ ಓದಿ: NASA Report: ಮಂಗಳೂರು, ಮುಂಬೈ, ಗೋವಾ ಸೇರಿದಂತೆ ಭಾರತದ ಈ ನಗರಗಳು 2100 ವೇಳೆಗೆ ಸಂಪೂರ್ಣ ಮುಳುಗಿರುತ್ತವೆ!

ಮುಟ್ಟಿಗೆ ಕಾರಣವೇನು?
ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಮುಟ್ಟಾಗುತ್ತದೆ. ಅಂಡಾಶಯಗಳು ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಾರಾನ್ ಹಾರ್ಮೊನ್‍ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‍ಗಳು ಗರ್ಭಾಶಯದ ಒಳ ಪದರವನ್ನು ನಿರ್ಮಿಸಲು ಕಾರಣವಾಗುತ್ತದೆ. ಆ ಪದರ ಫಲವತ್ತಾದ ಮೊಟ್ಟೆಯನ್ನು ಅಂಟಿಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಸಿದ್ಧವಾಗಿರುತ್ತದೆ. ಮೊಟ್ಟೆ ಇಲ್ಲದಿದ್ದರೆ ಆ ಪದರವು ಒಡೆದು ರಕ್ತಸ್ರಾವವಾಗುತ್ತದೆ. ನಂತರ ಅದೇ ಪ್ರಕ್ರಿಯೆಯು ಮತ್ತೊಮ್ಮೆ ಸಂಭವಿಸುತ್ತದೆ. ಪದರ ನಿರ್ಮಿಸಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ.ಹಾಗಾಗಿ ಹೆಚ್ಚಿನವರಿಗೆ ತಿಂಗಳಿಗೊಮ್ಮೆ ಮುಟ್ಟಾಗುತ್ತದೆ.


ಋತುಮತಿ ಆದ ಬಳಿಕ ನಿಯಮಿತವಾಗಿ ಮುಟ್ಟಾಗುತ್ತದೆಯೇ?
ಋತುಮತಿ ಆದ ಆರಂಭದ ಕೆಲವು ವರ್ಷಗಳಲ್ಲಿ ನಿಯಮಿತವಾಗಿ ಮುಟ್ಟಾಗದೇ ಇರಲೂಬಹುದು. ಆರಂಭದಲ್ಲಿ ಇದು ಸಾಮಾನ್ಯ.ಮೊದಲ ಮುಟ್ಟಿನ 2-3 ವರ್ಷದ ನಂತರ ಹೆಣ್ಣಿನ ಮುಟ್ಟು ಪ್ರತೀ ತಿಂಗಳು ಬರಲು ಆರಂಭವಾಗುತ್ತದೆ.


ಋತುಮತಿ ಆದ ಕೂಡಲೇ ಹೆಣ್ಣು ಗರ್ಭಿಣಿ ಆಗುತ್ತಾಳೆಯೇ?
ಹೌದು, ಋತುಮತಿ ಆದ ಕೂಡಲೇ ಗರ್ಭಿಣಿಯಾಗಬಹುದು. ಮುಟ್ಟಿಗೆ ಮುಂಚೆಯೇ ಗರ್ಭಿಣಿ ಆಗಲೂಬಹುದು. ಏಕೆಂದರೆ ಆಕೆಯ ಹಾರ್ಮೋನ್‍ಗಳು ಈಗಾಗಲೇ ಸಕ್ರೀಯವಾಗಿರಬಹುದು. ಹಾರ್ಮೋನ್‍ಗಳು ಅಂಡೋತ್ಪತ್ತಿಗೆ ಮತ್ತು ಗರ್ಭಾಶಯದ ನಿರ್ಮಾಣಕ್ಕೆ ಕಾರಣವಾಗಬಹುದು. ಒಂದು ವೇಳೆ ಲೈಂಗಿಕ ಸಂಬಂಧ ಹೊಂದಿದ್ದರೆ, ಆಕೆಗೆ ಮುಟ್ಟಾಗದಿದ್ದರೂ ಗರ್ಭಿಣಿ ಆಗಬಹುದು.


ಇದನ್ನೂ ಓದಿ: Free Electricity: ಇಲ್ಲಿ ಫ್ರಿಡ್ಜ್, ಫ್ಯಾನ್, ಮಿಕ್ಸಿ, ಲೈಟ್ ಎಲ್ಲವೂ ದಿನವಿಡೀ ಉರಿದರೂ ಯಾರೂ ಕೇಳಲ್ಲ..ಎಲ್ಲಾ ಫ್ರೀ! ನೀವೂ ಪಡೆಯಬಹುದು...

ಮುಟ್ಟು ಎಷ್ಟು ದಿನ ಇರುತ್ತದೆ?
ಸಾಮಾನ್ಯವಾಗಿ ಮುಟ್ಟು 5 ದಿನ ಇರುತ್ತದೆ. ಆದರೆ ಅದಕ್ಕಿಂತ ಕಡಿಮೆಯೂ ಇರಬಹುದು ಅಥವಾ ಹೆಚ್ಚು ಅವಧಿಗೂ ಇರಬಹುದು.


ಮುಟ್ಟು ಎಷ್ಟು ಸಾರಿ ಆಗುತ್ತದೆ?
ಮುಟ್ಟು ತಿಂಗಳಿಗೊಮ್ಮೆ ಆಗುತ್ತದೆ. ಆದರೆ ಕೆಲವರಿಗೆ 3 ವಾರಕ್ಕೊಮ್ಮೆ , ಇನ್ನು ಕೆಲವರಿಗೆ 6 ವಾರಕ್ಕೊಮ್ಮೆಯೂ ಆಗುವುದುಂಟು.


ಪಿಎಂಎಸ್ ಎಂದರೇನು?
ಪಿಎಂಎಸ್ ಎಂದರೆ , ಒಂದು ಹುಡುಗಿಯಲ್ಲಿ ಮುಟ್ಟಿನ ಅವಧಿಯ ಆರಂಭಕ್ಕೂ ಮುನ್ನ ಕಾಣಿಸಿಕೊಳ್ಳುವ ಮಾನಸಿಕ ಮತ್ತು ದೈಹಿಕ ಲಕ್ಷಣಗಳು. ದುಃಖ , ಆತಂಕ ಮತ್ತು ಮೊಡವೆ ಆ ಲಕ್ಷಣಗಳಲ್ಲಿ ಕೆಲವು. ಮುಟ್ಟು ಆರಂಭವಾದ ಕೆಲವುದಿನಕ್ಕೆ ಅವು ಹೋಗುತ್ತವೆ.


ಮಕ್ಕಳ ಜೊತೆ ಮುಟ್ಟಿನ ಬಗ್ಗೆ ಮಾತನಾಡಲು ಕಷ್ಟವಾದರೆ?


ಮಕ್ಕಳ ಜೊತೆ ಮುಟ್ಟಿನ ಬಗ್ಗೆ ಮಾತನಾಡಲು ಕಷ್ಟವಾದರೆ, ಅವರು ಅದರ ಮಾಹಿತಿಯನ್ನು ಬೇರೆ ಕಡೆಯಿಂದ ಪಡೆಯುವಂತೆ ಅವಕಾಶ ಮಾಡಿಕೊಡಿ. ನಿಮ್ಮ ವೈದ್ಯರು, ನರ್ಸ್, ಶಾಲಾ ಕೌನ್ಸಿಲರ್ ಅಥವಾ ಕುಟುಂಬದ ನಂಬಿಕಸ್ತ ಸದಸ್ಯರಲ್ಲಿ ಆ ಮಗುವಿನ ಜೊತೆ ಮಾತನಾಡಲು ಹೇಳಬಹುದು.
ವೈದ್ಯರಿಗೆ ಯಾವಾಗ ಕರೆ ಮಾಡಬೇಕು?
ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು ಸಾಮಾನ್ಯವಾಗಿ ಇರುವುದಿಲ್ಲ. ಆದರೆ ನಿಮ್ಮ ಮಗುವಿಗೆ ಈ ಕೆಳಗಿನ ತೊಂದರೆಗಳು ಇದ್ದರೆ, ಖಂಡಿತಾ ಕರೆ ಮಾಡಿ.
• 15 ವರ್ಷ ಆಗಿದ್ದರೂ ಮುಟ್ಟಾಗದಿದ್ದರೆ.
• ಮೂರು ವರ್ಷಗಳ ಹಿಂದೆಯೇ ಸ್ತನಗಳ ಬೆಳವಣಿಗೆ ಆರಂಭವಾಗಿದ್ದರೂ ಮುಟ್ಟಾಗದಿದ್ದರೆ.
• ಮುಟ್ಟಾಗಿ 2 ವರ್ಷ ಕಳೆದಿದ್ದರೂ, ಆಕೆ 3-6 ವಾರಕ್ಕೆ ಮುಟ್ಟಾಗದಿದ್ದರೆ (ನಿರಂತರವಾಗಿ 3 ಅಥವಾ ಅದಕ್ಕಿಂತ ಹೆಚ್ಚು ಮುಟ್ಟುಗಳು ತಪ್ಪಿ ಹೋಗಿದ್ದರೆ)
• ನೋವು ನಿವಾರಕಗಳಿಂದಲೂ ನಿವಾರಣೆ ಆಗದಂತಹ ನೋವು ಹೊಂದಿದ್ದರೆ
• ಅತಿಯಾದ ರಕ್ತ ಸ್ರಾವ ಇದ್ದರೆ
• ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುವ ಮಟ್ಟಿಗೆ ಪಿಎಂಎಸ್ ಇದ್ದರೆ

Published by:Soumya KN
First published: