Hair Tips: ಕೂದಲ ಆರೋಗ್ಯಕ್ಕೆ ‘ಗೋಧಿ ಜರ್ಮ್ ಆಯಿಲ್’ ಟ್ರೈ ಮಾಡಿ ನೋಡಿ..!

ಗೋಧಿ ಜರ್ಮ್ ಆಯಿಲ್‍ನಿಂದ ನಮ್ಮ ಒತ್ತಡ ನಿವಾರಣೆಯಾಗುತ್ತದೆ ಇತರ ಧಾನ್ಯಗಳು ಮತ್ತು ತರಕಾರಿಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಹೊಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾದಿಂದ (Corona) ಅನಿರೀಕ್ಷಿತವಾಗಿ ಜೀವನ ಶೈಲಿ ಬದಲಾಗುತ್ತಿದೆ. ಎಲ್ಲಾ ಕಾಯಕಗಳು ಮನೆಗೆ ಬಂದು ಕುಳಿತಿವೆ. ಕೆಲಸದ ಅವಧಿಗಳು ಹೆಚ್ಚಾಗುತ್ತಿದೆ. ಮೀಟಿಂಗ್ ಅದೂ ಇದು ಎಂದು ಕೆಲಸದ ಹೊರೆಯು (Workload Increasing) ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ಆರೋಗ್ಯ, ಚರ್ಮದ ಆರೈಕೆ, ಕೂದಲ ಆರೈಕೆ ಇದ್ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದಂತಾಗಿದೆ. ಆದರೆ ಆರೈಕೆ ಇಲ್ಲದೆ ಚರ್ಮ, ಕೂದಲು ಕಾಂತಿ ಕಳೆದುಕೊಳ್ಳುತ್ತಿದೆ. ಚರ್ಮದ ಆರೈಕೆ, ಕೂದಲ ಆರೈಕೆ (Skin care) ಎಲ್ಲಾ ದಿನಮಾನಗಳಿಗಿಂತ ಕೊಂಚ ಹೆಚ್ಚೇ ಮಾಡಬೇಕಾಗುತ್ತದೆ. ಕೆಲಸದ ಒತ್ತಡದ ನಡುವೆ ಮಾಯಿಶ್ಚರೈಸರ್, ಲಿಪ್ ಬಾಂಬ್, ಕೂದಲಿಗೆ ಎಣ್ಣೆ ಮಸಾಜ್ (Hair Oil Massage)ಮಾಡಲು ಸಮಯ ಹೊಂದಿಸಿಕೊಳ್ಳಬಹುದು.

ಎಲೆಕ್ಟ್ರಾನಿಕ್ ಸಾಧನ ಕಡಿಮೆ ಮಾಡಿ
ಹೌದು ಕೂದಲ ಆರೈಕೆಗೆ ಎಣ್ಣೆಯೇ ಉತ್ತಮವಾದ ಮದ್ದು. ವಾರದಲ್ಲಿ 2 ಬಾರಿಯಾದರೂ ಎಣ್ಣೆ ಹಾಕಿ ಕೂದಲನ್ನು ಮಸಾಜ್ ಮಾಡಬೇಕು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಹೌದು ಕೂದಲಿಗೆ ಎಣ್ಣೆ ಬಳಸುವುದರಿಂದ ಕೂದಲು ಉದುರುವುದು ನಿಂತು ದಟ್ಟವಾದ, ಉದ್ದವಾದ ಕೂದಲನ್ನು ಪಡೆದುಕೊಳ್ಳಬಹುದು. ಆದರೆ ಕೆಲವು ಅಭ್ಯಾಸಗಳಿಂದಲೂ ದೂರವಿರಬೇಕು. ಏನೆಂದರೆ ಹೆಚ್ಚು ರಾಸಾಯನಿಕ ಅಂಶಗಳಿರುವ ಶ್ಯಾಂಪೂ ಬಳಸಬಾರದು. ಆದಷ್ಟು ನೈಸರ್ಗಿಕ ಅಂಶಗಳ ಕಡೆ ಒಲವು ತೋರಬೇಕು. ಇನ್ನು ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸುವುದನ್ನು ನಿಲ್ಲಿಸಬೇಕು. ಮತ್ತು ಕೂದಲನ್ನು ಸ್ಟೈಲ್‌ ಮಾಡಲು, ಕರ್ಲಿ ಮಾಡಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಬೇಕು.

ಇದನ್ನೂ ಓದಿ: Health Tips: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಇನ್ನು ಕೂದಲ ಬೆಳವನಿಗೆ ಎಂದಾಕ್ಷಣ ಮಾರುಕಟ್ಟೆಗೆ ಸಾವಿರಗಟ್ಟಲೇ ಉತ್ಪನ್ನಗಳು ಲಗ್ಗೆ ಇಡುತ್ತಿವೆ. ಇದೆಲ್ಲವನ್ನು ನಮ್ಮ ಕೂದಲ ಲಕ್ಷಣಕ್ಕೆ ಆಧರಿಸಿ ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲದಕ್ಕಿಂತ ಮನೆಯಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ, ಹರಳೆಣ್ಣೆ ಬಳಸಬಹುದು. ಇದರ ಹೊರತಾಗಿ ಗೋಧಿ ಜರ್ಮ್ ಆಯಿಲ್ ಕೂಡ ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒತ್ತಡ ನಿವಾರಣೆ
ಗೋಧಿ ಜರ್ಮ್ ಆಯಿಲ್‍ನಿಂದ ನಮ್ಮ ಒತ್ತಡ ನಿವಾರಣೆಯಾಗುತ್ತದೆ. ಅತಿಯಾದ ಬ್ಲೀಚ್, ಸ್ಟೈಲಿಂಗ್ ಉಪಕರಣಗಳು ಅಥವಾ ದೈನಂದಿನ ಮಾನಸಿಕ ಒತ್ತಡದಿಂದ ಉಂಟಾಗುವ ಹಾನಿ ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‍ಗಳು ಮಾನಸಿಕತೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ರಕ್ತ ಪರಿಚಲನೆ
ವಿಟಮಿನ್ ಇ ಮತ್ತು ಲಿನೋಲಿಕ್ ಆಮ್ಲಗಳು ಈ ಎಣ್ಣೆಯನ್ನು ಎಲ್ಲಾ ತೈಲಗಳ ರಾಜನನ್ನಾಗಿ ಮಾಡುವುದಲ್ಲದೇ ಎಲ್ಲಾ ಎಣ್ಣೆಗಳಿಗಿಂತ ತುಂಬಾ ಉತ್ತಮವಾಗಿ ಉಪಯೋಗಕ್ಕೆ ಬರುತ್ತದೆ. ಈ ಎಣ್ಣೆಯು ಒಟ್ಟಾಗಿ ಕೂದಲಿನ ತೇವಾಂಶ ಹೆಚ್ಚಿಸಲು, ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು ಮತ್ತು ನಿಮ್ಮ ಕೂದಲನ್ನು ಆಳವಾಗಿ ಕಂಡೀಷನಿಂಗ್ ಮಾಡಲು ಸಹಾಯ ಮಾಡುತ್ತದೆ. ಇದೆಲ್ಲದರ ಹೊರತಾಗಿಯೂ ನೀವು ರೇಷ್ಮೆಯಂತಹ ಮೃದು ಮತ್ತು ಸುಂದರವಾದ ಕೂದಲನ್ನು ಪಡೆದುಕೊಳ್ಳಲು ಈ ಎಣ್ಣೆಯು ಸಹಕಾರಿಯಾಗುತ್ತದೆ. ಕೂದಲು ಉದುರುವುದು ದೈನಂದಿನ ಹೆಚ್ಚಾಗುತ್ತಿದೆ ಎಂದಾದಲ್ಲಿ ಈ ಎಣ್ಣೆಯಲ್ಲಿ ತುಂಬಿರುವ ವಿಟಮಿನ್ ಬಿ ಕೂದಲಿನ ಬೆಳವಣಿಗೆಗೆ ಪ್ರಮುಖವಾದ ಪಾತ್ರ ವಹಿಸುವುದಲ್ಲದೆ, ಕೂದಲು ಎಳೆಗಳ ನಡುವೆ ರಕ್ತ ಪರಿಚಲನೆ ಸುಧಾರಿಸುತ್ತದೆ.

ಇದನ್ನೂ ಓದಿ: Health Tips: ಪ್ರತಿನಿತ್ಯ ಮೊಸರು ಸೇವಿಸಿದ್ರೆ, ಹೃದಯಾಘಾತದಿಂದ ದೂರವಿರಬಹುದಂತೆ..!

ಈ ಎಣ್ಣೆಯಲ್ಲಿ ಏನೆಲ್ಲಾ ಇದೆ?
ಗೋಧಿ ಸೂಕ್ಷ್ಮಾಣು ಎಣ್ಣೆಯು ವಿಟಮಿನ್ ಬಿ ಸಂಕೀರ್ಣ, ವಿಟಮಿನ್ ಬಿ 6, ಪೊಟ್ಯಾಶಿಯಮ್, ಮೆಗ್ನೀಶಿಯಮ್, ರಂಜಕ ಮತ್ತು ಇತರ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇತರ ಧಾನ್ಯಗಳು ಮತ್ತು ತರಕಾರಿಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯ ಹೊಂದಿದೆ. ಇದು ಒಟ್ಟು ಪೋಷಕಾಂಶಗಳ ಸುಮಾರು 25% ರಷ್ಟಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ತೈಲವು ಒಮೆಗಾ -6 ಆಮ್ಲ, ಪಾಲ್ಮಿಟಿಕ್ ಆಮ್ಲ, ಓಲಿಕ್ ಆಮ್ಲ, ಲೆಸಿಥಿನ್, ಸ್ಕ್ವಾಲೀನ್ ಮತ್ತು ಸ್ಟಿಯರಿಕ್ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಲೆಸಿಥಿನ್, ಪ್ರೋಟೀನ್, ಖನಿಜಗಳು ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ. ಖನಿಜಗಳು ಮತ್ತು ವಿಟಮಿನ್‍ಗಳಿಂದ ಸಮೃದ್ಧವಾಗಿದೆ.
Published by:vanithasanjevani vanithasanjevani
First published: