Pet Lover: ನಾಯಿ ಸಾಕಬೇಕಾ? ಹಾಗಾದರೆ ಈ ವಿಷಯಗಳು ಅಗತ್ಯ ಗೊತ್ತಿರಲಿ

ನೀವು ಕೂಡ ನಾಯಿ ಸಾಕಬೇಕು, ಅದು ನಿಮ್ಮ ಮನೆಯ ಸದಸ್ಯರಲ್ಲಿ ಒಂದಾಗಿ ಬದುಕಬೇಕು ಎಂಬ ಬಯಕೆ ಹೊಂದಿದ್ದರೆ, ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ನಾಯಿಯ ಆರೈಕೆ (Dogs care) ಮಾಡುವುದು ಸುಲಭದ ಕೆಲಸವಲ್ಲ

ನಾಯಿ

ನಾಯಿ

  • Share this:
ಕೆಲಸ ಮುಗಿಸಿ ಮನೆಗೆ ಸುಸ್ತಾಗಿ ಬಂದಾಗ, ನಿಷ್ಕಲ್ಮಶ ಮನಸ್ಸಿನ ಮುಗ್ಧ ಜೀವಿಯಾದ ನಿಮ್ಮ ಮುದ್ದಿನ ನಾಯಿ (Dog) ನಿಮ್ಮನ್ನು ಸ್ವಾಗತಿಸಿ, ಪ್ರೀತಿ ತೋರಿಸಿದರೆ, ಅದಕ್ಕಿಂತ ಬೇರೆ ಸಂತೋಷ (Happiness) ಇದೆಯೇ? ಖಂಡಿತಾ ಇಲ್ಲ, ಮೂಕ ಪ್ರಾಣಿಗಳು ತೋರುವ ಅಕ್ಕರೆಗೆ ಸಮ ಏನೂ ಇಲ್ಲ ಎಂದು ಹೇಳುವವರು ಬಹಳಷ್ಟು ಮಂದಿ ಇದ್ದಾರೆ. ನಾಯಿ ಅಥವಾ ಇನ್ನಾವುದೇ ಸಾಕು ಪ್ರಾಣಿ (Pet Animal) ಇರಲಿ, ಮನಸ್ಸಿನ ಒತ್ತಡ (Tensions) ನಿವಾರಿಸುವ ಅತ್ಯುತ್ತಮ ಸಂಗಾತಿಗಳು ಎನ್ನಲು ಅಡ್ಡಿಯಿಲ್ಲ. ಸಾಂಕ್ರಾಮಿಕ ರೋಗದ (Pandemic) ಸಮಯದಲ್ಲಿ ಕೆಲವರು ತಮ್ಮ ಮನಸ್ಸಿನ ಚಿಂತೆ ಮತ್ತು ಏಕಾಂತದಿಂದ ಮುಕ್ತಿ ಪಡೆಯಲು ಪ್ರಾಣಿ ಸ್ನೇಹಿತರನ್ನು ತಮ್ಮದಾಗಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದುಂಟು, ಆ ಅವಧಿಯಲ್ಲಿ ಪ್ರಾಣಿ ಮಾಲೀಕರ ಸಂಖ್ಯೆ ಹೆಚ್ಚಾಗಿತ್ತಂತೆ.

ನೀವು ಕೂಡ ನಾಯಿ ಸಾಕಬೇಕು, ಅದು ನಿಮ್ಮ ಮನೆಯ ಸದಸ್ಯರಲ್ಲಿ ಒಂದಾಗಿ ಬದುಕಬೇಕು ಎಂಬ ಬಯಕೆ ಹೊಂದಿದ್ದರೆ, ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ನಾಯಿಯ ಆರೈಕೆ (Dogs care) ಮಾಡುವುದು ಸುಲಭದ ಕೆಲಸವಲ್ಲ, ಹಾಗಾಗಿ ಅದು ನಿಮ್ಮಿಂದ ಸಾಧ್ಯವಿಲ್ಲ ಎಂದಾದದಲ್ಲಿ ನಾಯಿ ಸಾಕಬೇಕು ಎಂಬ ವಿಚಾರವನ್ನು ಬಿಟ್ಟುಬಿಡಿ. ನೀವು ನಾಯಿ ಸಾಕುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಕೆಳಗಿನ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳುವುದನ್ನು ಮರೆಯಬೇಡಿ.

ನಾಯಿಗಳಿಗೆ ಜೊತೆ ಬೇಕು

ನಿಮ್ಮ ನಾಯಿಯೊಂದಿಗೆ ವಾಕಿಂಗ್‍ಗೆ ಹೋಗುವುದು ಮತ್ತು ಆಡುವುದು ಅಥವಾ ದಿನಕ್ಕೆ ಕನಿಷ್ಟ ಎರಡು ಗಂಟೆ ಅವುಗಳೊಂದಿಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ. ಅದಕ್ಕಿಂತ ಹೆಚ್ಚಾಗಿ, ನಾಯಿಗಳನ್ನು ತುಂಬಾ ಕಾಲ ಒಂಟಿಯಾಗಿ (Alone) ಬಿಟ್ಟರೆ ಅವು ಬೇರ್ಪಡುವ ಆತಂಕಕ್ಕೆ ಈಡಾಗುತ್ತವೆ ಮತ್ತು ದಿನದ ಹೆಚ್ಚಿನ ಸಮಯ ಅವುಗಳಿಗೆ ಜೊತೆ ಬೇಕಾಗುತ್ತದೆ.

ಅದು ಮನೆಯಲ್ಲಿ ಕೆಲವು ಸಮಯ ಒಂಟಿಯಾಗಿ ಇರಲೇಬೇಕಾಗುತ್ತದೆ ಎಂದಾದಲ್ಲಿ, ನೀವು ಅದಕ್ಕೆ ಆ ಕುರಿತು ಕ್ರಮೇಣ ತರಬೇತಿ ಕೊಡಬೇಕಾಗುತ್ತದೆ. ಕೆಲವು ನಾಯಿಗಳು ಬೇರೆ ನಾಯಿಗಳಿಗಿಂತ ಬಹಳ ಬೇಗ ತರಬೇತಿ (Training) ಪಡೆಯಬಲ್ಲವು.

ದೀರ್ಘಕಾಲಿಕ ಜವಾಬ್ದಾರಿ

ಒಂದು ನಾಯಿಯನ್ನು ಪೋಷಿಸುವುದು ದೀರ್ಘ ಕಾಲದ ಜವಾಬ್ಧಾರಿ. ಒಂದು ನಾಯಿ ಸರಿಸುಮಾರು 10-15 ವರ್ಷಗಳ ಕಾಲ ಬದುಕುತ್ತದೆ. ಅಷ್ಟೂ ವರ್ಷಗಳ ಕಾಲ ಅದರ ಎಲ್ಲಾ ಜವಾಬ್ದಾರಿ ನಿಮ್ಮದಾಗಿರುತ್ತದೆ. ನಾಯಿ ಸಾಕುವುದಾದರೆ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Pet Care: ಮುದ್ದಿನ ನಾಯಿ ನಿಮ್ಮ ಮಾತು ಕೇಳಬೇಕೇ? ಇಲ್ಲಿದೆ ಉಪಯುಕ್ತ ಟಿಪ್ಸ್

ನೀವು ಅದಕ್ಕೆ ಸಿದ್ಧರಾಗಲೇಬೇಕು. ನೀವು ಮನೆಯಿಂದ ಹೊರಗೆ ಹೋಗುವ ಸಂದರ್ಭಗಳು ಅಧಿಕವಿದ್ದಲ್ಲಿ, ನಾಯಿಯನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿ ಅಥವಾ ಮನೆಯಲ್ಲೇ ಅವುಗಳ ಆರೈಕೆ ಮಾಡಲು, ಯಾರನ್ನಾದರೂ ಗೊತ್ತು ಮಾಡಿ. ಅಲ್ಲದೇ, ಯಾವುದೇ ತಳಿಯ ನಾಯಿಯಾಗಿರಲಿ, ಅವು ಖರ್ಚಿನ ಬಾಬ್ತು ಎನ್ನುವುದರಲ್ಲಿ ಸಂಶಯವಿಲ್ಲ. ನಾಯಿಯ ಆರೈಕೆ ಮಾಡಲು ದುಡ್ಡು ಖರ್ಚಾಗುತ್ತದೆ ಮತ್ತು ನೀವು ಅದನ್ನು ಮಾಡಲು ಸಿದ್ಧವಿರಬೇಕು.

ವ್ಯಕ್ತಿತ್ವ

ಸಾಮಾನ್ಯವಾಗಿ ಜನರು ನೋಡಲು ಸುಂದರವಾಗಿರುವ ನಾಯಿಗಳನ್ನು ಸಾಕಲು ಬಯಸುತ್ತಾರೆ. ಆದರೆ ಮಾಲೀಕರ ವ್ಯಕ್ತಿತ್ವಕ್ಕೆ ಹೊಂದುವಂತ ನಾಯಿಯನ್ನು ಆರಿಸಿಕೊಳ್ಳುವುದು ಹೆಚ್ಚು ಅನುಕೂಲಕರ.

ಇತರರ ಜೊತೆ ಬೆರೆಯುವಿಕೆ ಮತ್ತು ತರಬೇತಿ

ನಾಯಿಮರಿಗಳು ಇತರ ಜನರು ಅಥವಾ ಪ್ರಾಣಿಗಳಿಗೆ ಹೆದರದಂತೆ ತರಬೇತಿ ನೀಡುವುದು ಅಗತ್ಯ. ನಾಯಿ ಮರಿ ಇರುವಾಗಲೇ ಅದಕ್ಕೆ ಜನರ ಜೊತೆ ಅಥವಾ ಇತರ ಪ್ರಾಣಿಗಳ ಜೊತೆ ಬೆರೆಯಲು ಕಲಿಸಿ.ಅವುಗಳಿಗೆ ಮಲಮೂತ್ರ ವಿಸರ್ಜನೆ ಕುರಿತು ಕೂಡ ಸೂಕ್ತ ತರಬೇತಿ ನೀಡಬೇಕು.

ತಳಿಯ ಆಯ್ಕೆ

ಇದು ಅತ್ಯಂತ ನಿರ್ಣಾಯಕ ಸಂಗತಿ. ಕೆಲವು ತಳಿಯ ನಾಯಿಗಳಿಗೆ ನಿತ್ಯವೂ 3 ರಿಂದ ನಾಲ್ಕು ಗಂಟೆಗಳ ಚಟುವಟಿಕೆಯ ಅಗತ್ಯ ಇರುತ್ತದೆ, ಅಂತವುಗಳನ್ನು ಸಾಕಿದರೆ ನೀವು ಸೋಮಾರಿತವನ್ನು ಬಿಟ್ಟು ಅವುಗಳಿಗೆ ಸಮಯ ಕೊಡಬೇಕಾಗುತ್ತದೆ. ನೀವು ವಾಸಿಸುವ ಜಾಗದಲ್ಲಿ ಬಹಳ ಪ್ರಾಣಿಗಳು ಅಥವಾ ಬೆಕ್ಕುಗಳು ಇದ್ದರೆ ನಿಮ್ಮ ಬೇಟೆ ನಾಯಿಗಳನ್ನು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಇಡಬೇಕಾಗುತ್ತದೆ.

ಇದನ್ನೂ ಓದಿ: Dogs Tilt Heads: ನೀವು ಮಾತನಾಡುವಾಗ ನಾಯಿ ತಲೆಯನ್ನು ಏಕೆ ಒಂದೆಡೆ ವಾಲಿಸುತ್ತದೆ..? ಅಧ್ಯಯನದಿಂದ ಬಯಲು

ಅವುಗಳಲ್ಲಿ ಅನುವಂಶಿಕ ಗುಣಲಕ್ಷಣಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಹಾಗಾಗಿ, ವಿವಿಧ ತಳಿಗಳ ಬಗ್ಗೆ ಮೊದಲು ಸೂಕ್ತ ಮಾಹಿತಿ ಸಂಗ್ರಹಿಸಿ, ಬಳಿಕ ನಿಮ್ಮ ಜೀವನ ಶೈಲಿಗೆ ಹೊಂದುವಂತಹ ನಾಯಿಯನ್ನು ಆರಿಸಿಕೊಳ್ಳಿ.
Published by:Divya D
First published: