ಶುಗರ್ (Sugar) ಸಮಸ್ಯೆ (Problem) ಒಮ್ಮೆ ಶುರುವಾದರೆ ಜೀವನದುದ್ದಕ್ಕೂ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಮಧುಮೇಹ ರೋಗವು (Disease) ಮನುಷ್ಯನ ಲೈಫ್ ಲಾಂಗ್ (Life Long) ಇರುವುದರಿಂದ ರೋಗಿಯ ತಿನ್ನುವ ಮತ್ತು ಕುಡಿಯುವ ಹಾಗೂ ಜೀವನಶೈಲಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಶುಗರ್ ಬಂದ ಸ್ಥಿತಿಯಲ್ಲಿ ರೋಗಿಯ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದನೆ ಮಾಡುವುದಿಲ್ಲ. ಜೊತೆಗೆ ಉತ್ಪತ್ತಿ ಆಗುತ್ತಿರುವ ಇನ್ಸುಲಿನ್ಗೆ ಪ್ರತಿಕ್ರಿಯಿಸಲು ಸಾಧ್ಯ ಆಗುವುದಿಲ್ಲ. ಮಧುಮೇಹ ಎರಡು ರೀತಿಯಲ್ಲಿ ಇರುತ್ತದೆ. ಒಂದು ಟೈಪ್ ಒನ್ ಮಧುಮೇಹ. ಇನ್ನೊಂದು ಟೈಪ್ 2 ಮಧುಮೇಹ. ಮಧುಮೇಹ ರೋಗಿಯ ತಿನ್ನುವ ಮತ್ತು ಉಣ್ಣುವ ಪ್ರತಿ ಹಂತದಲ್ಲೂ ಹೆಚ್ಚು ಕಾಳಜಿ ವಹಿಸುವುದು ಅನಿವಾರ್ಯವಾಗಿರುತ್ತದೆ.
ರಕ್ತದ ಸಕ್ಕರೆ ಪ್ರಮಾಣ ಹಠಾತ್ ಇಳಿಕೆ ಆಗದಂತೆ ಎಚ್ಚರಿಕೆ ವಹಿಸಬೇಕು
ಮಧುಮೇಹ ವಿಚಾರವಾಗಿ ಹೊಸದಿಲ್ಲಿಯ ಸಾಕೇತ್ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಧುಮೇಹ ಶಿಕ್ಷಣತಜ್ಞ ಡಾ.ಮಂಜು ಪಾಂಡಾ ಮಾತನಾಡಿದ್ದಾರೆ. ಮಧುಮೇಹ ಕಾಯಿಲೆ ಉಳ್ಳವರು ರಕ್ತದ ಸಕ್ಕರೆ ಪ್ರಮಾಣ ಹಠಾತ್ ಇಳಿಕೆ ಆಗದಂತೆ ನಿಯಮಿತ ಅಂತರದಲ್ಲಿ ಆಹಾರ ಸೇವನೆ ಮಾಡಬೇಕು ಎಂದು ಹೇಳಿದ್ದಾರೆ.
ಉಪಾಹಾರ ಮತ್ತು ಮಧ್ಯಾಹ್ನದ ನಡುವಿನ ಊಟದ ಅಂತರದಲ್ಲಿ ಪ್ರಿ-ಲಂಚ್ ಸೇವನೆ ಮಾಡಿ
ಇದರ ಹೊರತಾಗಿ ರೋಗಿಯು ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಬೇಕು. ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವೆ ಏನಾದರೂ ಸೇವನೆ ಮಾಡಬೇಕು.
ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?
ಆದರೆ ಇದು ಹೆಲ್ದಿಯಾದ ಆಹಾರದಿಂದ ಕೂಡಿರಬೇಕು. ಹೀಗೆ ಉಪಾಹಾರ ಮತ್ತು ಮಧ್ಯಾಹ್ನದ ನಡುವಿನ ಊಟದ ಅಂತರದಲ್ಲಿ ಸೇವನೆ ಮಾಡುವ ಫುಡ್ ಸಮಯವನ್ನು ಪ್ರಿ-ಲಂಚ್ ಎಂದು ಕರೆಯುತ್ತಾರೆ.
ಲಘು ಆಹಾರ ತಿನ್ನಲು ಪ್ರಯತ್ನಿಸಿ
ಈ ಸಮಯದಲ್ಲಿ ಲಘು ಆಹಾರ ತಿನ್ನಲು ಪ್ರಯತ್ನಿಸಬೇಕು. ಈ ವೇಳೆ ನಿಮ್ಮ ಆಹಾರವನ್ನು ವಿಭಜನೆ ಮಾಡಬೇಕು. ಆಹಾರದಲ್ಲಿ ನೀವು ದಿನಕ್ಕೆ ಎಷ್ಟು ಕ್ಯಾಲೊರಿ ಸೇವನೆ ಮಾಡಬೇಕು ಎಂಬುದನ್ನು ಸಹ ನೆನಪಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಮಧುಮೇಹ ರೋಗಿಗಳಿಗೆ ಹೆಚ್ಚಿನ ಕ್ಯಾಲೋರಿಗಳು ಸಕ್ಕರೆ ಮತ್ತು ತೂಕ ಹೆಚ್ಚಳಕ್ಕೆ ಕಾರಣ ಆಗುತ್ತವೆ.
ಕಾಲೋಚಿತ ಹಣ್ಣುಗಳು
ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಾಲೋಚಿತ ಹಣ್ಣುಗಳು ನಿಮ್ಮ ರಕ್ತದ ಸಕ್ಕರೆ ಏರಿಳಿತ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಾಲಕ್ ಮತ್ತು ಎಲೆಕೋಸು ಜ್ಯೂಸ್
ಸಾಮಾನ್ಯವಾಗಿ ಜ್ಯೂಸ್ನಲ್ಲಿ ತರಕಾರಿ ಅಥವಾ ಹಣ್ಣಿನ ಫೈಬರ್ ಅಂಶ ಕಡಿಮೆ ಇರುತ್ತದೆ. ಹಾಗಾಗಿ ತಿನ್ನಲು ಸಲಹೆ ನೀಡಲಾಗುತ್ತದೆ. ಜ್ಯೂಸ್ ತಾಜಾ ಮತ್ತು ಮನೆಯಲ್ಲಿ ಮಾಡಿದ್ದು, ನೈಸರ್ಗಿಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ತಾಜಾ ಪಾಲಕ್ ಸೊಪ್ಪಿನ ಜೊತೆಗೆ ಎಲೆಕೋಸಿನ ಎಲೆ ಬೆರೆಸಿ ನೀರು ಸೇರಿಸಿ ಕುಡಿಯಬಹುದು.
ಅಡಿಕೆ ಮಿಶ್ರಣ
ಬಾದಾಮಿ, ಕುಂಬಳಕಾಯಿ ಬೀಜ, ಗೋಡಂಬಿ, ಎಳ್ಳು, ಅಗಸೆ ಬೀಜ ಮತ್ತು ವಾಲ್ನಟ್ ಒಟ್ಟಿಗೆ ಬೆರೆಸಿ ನೀವು ಮನೆಯಲ್ಲಿ ಅಡಿಕೆ-ಟ್ರಯಲ್ ತಯಾರಿಸಿ ಸೇವಿಸಿ. ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಟೊಮೆಟೊ ಮತ್ತು ಕೊತ್ತಂಬರಿ ಸಲಾಡ್
ಈ ಕಡಿಮೆ ಕ್ಯಾಲೋರಿ ಸಲಾಡ್ ನಿಮ್ಮನ್ನು ತಾಜಾ ಆಗಿರಿಸುತ್ತದೆ. ಕಡಿಮೆ ಸಮಯದಲ್ಲಿ ಈ ಸಲಾಡ್ ತಯಾರಿಸಬಹುದು. ಕತ್ತರಿಸಿದ ಟೊಮ್ಯಾಟೊ, ಕೊತ್ತಂಬರಿ, ನಿಂಬೆ ರಸ ಮತ್ತು ಕರಿಮೆಣಸನ್ನು ಮಿಶ್ರಣ ಮಾಡಿ ಟೊಮೆಟೊ ಸಲಾಡ್ ತಯಾರಿಸಬಹುದು.
ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ
ಕ್ಯಾರೆಟ್ ಸ್ಟಿಕ್ಸ್ ಮತ್ತು ಹಮ್ಮಸ್
ಕ್ಯಾರೆಟ್ ಸ್ವಚ್ಛಗೊಳಿಸಿ ಮತ್ತು ಸಿಪ್ಪೆ ತೆಗೆದು ಉದ್ದವಾಗಿ ಕತ್ತರಿಸಿ ಹಮ್ಮಸ್ನಲ್ಲಿ ಮುಳುಗಿಸಬಹುದು. ಕಡಿಮೆ ಕಾರ್ಬ್ ಸ್ನ್ಯಾಕ್ಗೆ ಉತ್ತಮ ಪರ್ಯಾಯ ಪದಾರ್ಥವಾಗಿದೆ. ಕ್ಯಾರೆಟ್ ಬದಲು ಸೌತೆಕಾಯಿ ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ