• Home
 • »
 • News
 • »
 • lifestyle
 • »
 • Cancer: ಬಾಯಿ ಕ್ಯಾನ್ಸರ್ ಬಗ್ಗೆ ಇರಲಿ ಸಾಕಷ್ಟು ಎಚ್ಚರ

Cancer: ಬಾಯಿ ಕ್ಯಾನ್ಸರ್ ಬಗ್ಗೆ ಇರಲಿ ಸಾಕಷ್ಟು ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mouth Cancer: ಕರೆಂಟ್ ಅಥವಾ ರೇಡಿಯೇಶನ್ ಮೂಲಕ ಬಾಯಿ ಕ್ಯಾನ್ಸರ್ ಗೆ ಚಿಕಿತ್ಸೆ ಮಾಡಲಾಗುವುದು. ಇನ್ನು ಕೆಲವು ಸಮಯದಲ್ಲಿ ಇಂಜೆಕ್ಷನ್ ಅಥವಾ ಖೀಮೋಥೆರಪಿ ಕೊಡುತ್ತಾರೆ . ಈ ಎಲ್ಲಾ ಚಿಕಿತ್ಸೆಯನ್ನು ಕೊಟ್ಟು ಖಾಯಿಲೆಯನ್ನು ಗುಣಪಡಿಸಬಹುದು

 • Share this:

  ಜಗತ್ತನ್ನು(World) ಕಾಡುತ್ತಿರುವ ಮಹಾಮಾರಿಗಳ ಪೈಕಿ ಕ್ಯಾನ್ಸರ್(Cancer) ರೋಗ ಕೂಡ ಒಂದು.. ಕ್ಯಾನ್ಸರ್ ರೋಗದಲ್ಲಿ ಹಲವಾರು ಬಗೆಗಳಿವೆ. ಸ್ತನ ಕ್ಯಾನ್ಸರ್(Breast cancer) ಗರ್ಭಕೋಶದ ಕ್ಯಾನ್ಸರ್ ಶ್ವಾಸಕೋಶದ ಕ್ಯಾನ್ಸರ್(Lung Cancer) ರಕ್ತದ ಕ್ಯಾನ್ಸರ್(Blood Cancer) ಹೀಗೆ ನಾನಾ ರೀತಿಯ ಕ್ಯಾನ್ಸರ್ ಗಳು ಮಾರಕವಾಗಿ ಮನುಷ್ಯನನ್ನ(Human) ಕಾಡುತ್ತಿವೆ. ಬದಲಾದ ಜೀವನಶೈಲಿ(Lifestyle) ಆಹಾರ (Food)ಕ್ರಮದಿಂದ ನಮಗೆ ಅರಿವಿಲ್ಲದಂತೆಯೇ ಕ್ಯಾನ್ಸರ್ ಎಂಬ ಮಹಾಮಾರಿ ನಮ್ಮನ್ನು ನಿಧಾನಗತಿಯಲ್ಲಿ ಆವರಿಸಿಕೊಳ್ಳುತ್ತಿದೆ.. ಅದರಲ್ಲೂ ಬಾಯಿ ಕ್ಯಾನ್ಸರ್ ಎಂಬ ಮಹಾಮಾರಿ ಧೂಮಪಾನ ಮದ್ಯಪಾನ ಹಾಗೂ ತಂಬಾಕಿಗೆ ದಾಸರಾಗಿರುವ ಜನರಲ್ಲಿ ಹೆಚ್ಚು ಕಾಟ ಕೊಡಲು ಶುರುಮಾಡಿದೆ.


  ಮಹಾಮಾರಿ ಬಾಯಿ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ


  ಬಾಯಿ ಕ್ಯಾನ್ಸರ್ ಎಂಬುದು ಕೇವಲ ಆಡು ಭಾಷೆಯಲ್ಲಿ ಬಂದ ಸಾಮಾನ್ಯ ಪದವಾಗಿದೆ. ಆದರೆ ನಿಜವಾಗಲೂ ಬಾಯೊಳಗಿನ ತುಟಿಗಳು, ನಾಲಿಗೆ, ಗಂಟಲು, ಕೆನ್ನೆಯ ಭಾಗ, ಬಾಯಿಯ ತಳಭಾಗ, ಅಂಗುಳಿನ ಭಾಗಗಳು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತವೆ.


  ಇದು ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದಿಗಿಲು ಹುಟ್ಟಿಸುವಂತಹ ಪರಿಸ್ಥಿತಿಯಾಗಿ ಮಾರ್ಪಾಡಾಗುತ್ತದೆ. ಆದರೆ ಈ ಬಗ್ಗೆ ಮುಂಚೆಯೇ ಅರಿತುಕೊಂಡು ವೈದ್ಯರ ಬಳಿ ಮುಂಜಾಗೃತ ಕ್ರಮ ಕೈಗೊಂಡರೆ ಇದರಿಂದ ಪಾರಾಗುವ ಅವಕಾಶಗಳು ಹೆಚ್ಚಾಗಿರುತ್ತವೆ.


  ಇದನ್ನೂ ಓದಿ: ಅಗಸೆ ಬೀಜಗಳನ್ನು ಹುರಿದು ತಿನ್ನಿ ಸಾಕು.. ಅತಿಯಾದ ತೂಕ, ನಿದ್ರೆ ಸಮಸ್ಯೆ ಮಾಯವಾಗುತ್ತೆ!


  ಇನ್ನು ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಕಾಣಿಸಿಕೊಳ್ಳೂವುದು. ಇದು ಮೊದಲಿಗೆ ಕೆಳಗಿನ ಭಾಗ ಮತ್ತು ನಾಲಗೆಯಲ್ಲಿ ಕಾಣಿಸಿಕೊಳ್ಳುವುದು.


  ಇದು ತುಂಬಾ ವೇಗವಾಗಿ ಬಾಯಿಯ ಇತರ ಭಾಗಗಳಾಗಿ ರುವಂತಹ ವಸಡು, ಜೊಲ್ಲಿನ ಗ್ರಂಥಿ, ಒಳಗಿನ ಗಲ್ಲ, ಗಂಟಲು, ಟಾನ್ಸಿಲ್ ಮತ್ತು ಅನ್ನನಾಳಕ್ಕೆ ಕೂಡ ಹರಡುವುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಕುತ್ತಿಗೆ, ತಲೆ ಮತ್ತು ದೇಹದ ಇತರ ಭಾಗಗಳಿಗೆ ಕೂಡ ಹರಡುವುದು.


  ಜಾಗತಿಕವಾಗಿ,ಎಲ್ಲ ಕ್ಯಾನ್ಸರ್‌ ಪ್ರಕರಣಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಶೇ.2ರಿಂದ 4ರಷ್ಟು ಬಾಯಿಯ ಕ್ಯಾನ್ಸರ್‌ ಆಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಅದು ಒಟ್ಟು ಕ್ಯಾನ್ಸರ್‌ ಪ್ರಕರಣಗಳ ಶೇ.10ರ ವರೆಗೂ ಇದೆ.


  ಬಾಯಿಯ ಕ್ಯಾನ್ಸರ್ ಎಂದರೇನು..?


  ನೀವು ಸೇವಿಸಿದ ಗಟ್ಟಿ ಆಹಾರ ಪದಾರ್ಥವನ್ನು ಜಿಗಿಯಲು ನೆರವಾಗುವುದೇ ಬಾಯೊಳಗಿನ ಹಲ್ಲುಗಳು. ಅನೇಕ ಕಾರಣಗಳಿಗೆ ಹಲ್ಲುಗಳು ವಿನಾಶದ ಹಾದಿ ಹಿಡಿಯುತ್ತವೆ. ಆದರೆ ನೀವು ಹಲ್ಲುಗಳನ್ನು ಹಾಳು ಮಾಡಿಕೊಂಡಾಗ ಅದು ಕೇವಲ ಹಲ್ಲುಗಳ ಕಾಯಿಲೆಗೆ ಸಂಬಂಧಪಟ್ಟ ವಿಷಯ ಮಾತ್ರ ಎಂದು ತಿಳಿದುಕೊಳ್ಳಲೇಬೇಡಿ.


  ಏಕೆಂದರೆ ಅದನ್ನು ಮೀರಿದ ಒಂದು ಭಯಾನಕ ಕಾಯಿಲೆ ನಿಮ್ಮನ್ನು ಕಾಡಲು ಪ್ರಾರಂಭ ಮಾಡಿರಬಹುದು, ಅದೇ ಬಾಯಿಯ ಕ್ಯಾನ್ಸರ್. ಇದರ ಮುಖ್ಯ ಗುಣಲಕ್ಷಣಗಳೆಂದರೆ ಬಾಯಿಯ ಒಳಗಿನ ಯಾವುದಾದರೂ ಭಾಗದಲ್ಲಿ ಅನಿರೀಕ್ಷಿತವಾದ ಮಾಂಸ ಖಂಡದ ಬೆಳವಣಿಗೆ ಉಂಟು ಮಾಡುವುದು ಅಥವಾ ಇದ್ದಕ್ಕಿದ್ದಂತೆ ಊದಿಕೊಳ್ಳುವುದು.


  ಎಲ್ಲಾ ರೀತಿಯ ಕ್ಯಾನ್ಸರ್ ಕಾಯಿಲೆಗಳಂತೆ ಬಾಯಿಯ ಕ್ಯಾನ್ಸರ್ ಸಹ ನಾನಾ ಹಂತಗಳನ್ನು ಹೊಂದಿದೆ. ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಬಾಯಿಯ ಕ್ಯಾನ್ಸರ್ ನ ಹಂತಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿದ್ದಾರೆ.


  ಟ್ಯೂಮರ್: ಮುಖ್ಯ ಟ್ಯೂಮರ್ ನ ಗಾತ್ರ ಮತ್ತು ಬಾಯೊಳಗಿನ ಇತರ ಅಂಗಾಂಶಗಳ ಮೇಲೆ ಅದರ ವ್ಯಾಪ್ತಿಗೆ ಸಂಬಂಧ ಪಟ್ಟ ಹಾಗೆ.


  ದುಗ್ಧರಸ ಗ್ರಂಥಿಗಳು: ದುಗ್ಧರಸ ಗ್ರಂಥಿಗಳಿಗೆ ಕ್ಯಾನ್ಸರ್ ಕಾಯಿಲೆ ತಗುಲಿದೆಯೋ ಅಥವಾ ಇಲ್ಲವೋ ಎಂಬ ಆಧಾರದ ಮೇಲೆ ವಿಂಗಡಿಸಲಾಗಿದೆ.


  ಇಮೇಜಿಂಗ್ ಟೆಸ್ಟ್‌ಗಳು: ಇಮೇಜಿಂಗ್ ಪರೀಕ್ಷೆಗಳಾದ ಸಿಟಿ ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್, ಎಕ್ಸರೇ, ಎಂಡೋಸ್ಕೋಪಿ ಮತ್ತು ಪಿ ಇ ಟಿ ಸ್ಕ್ಯಾನ್ ಗಳು ಬಾಯಿಯ ಕ್ಯಾನ್ಸರ್ ನ ಹಂತಗಳನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


  ಬಾಯಿ ಕ್ಯಾನ್ಸರ್ ಗೆ ಚಿಕಿತ್ಸೆಗಳೇನು..?


  ಕರೆಂಟ್ ಅಥವಾ ರೇಡಿಯೇಶನ್ ಮೂಲಕ ಬಾಯಿ ಕ್ಯಾನ್ಸರ್ ಗೆ ಚಿಕಿತ್ಸೆ ಮಾಡಲಾಗುವುದು . ಇನ್ನು ಕೆಲವು ಸಮಯದಲ್ಲಿ ಇಂಜೆಕ್ಷನ್ ಅಥವಾ ಖೀಮೋಥೆರಪಿ ಕೊಡುತ್ತಾರೆ . ಈ ಎಲ್ಲಾ ಚಿಕಿತ್ಸೆಯನ್ನು ಕೊಟ್ಟು ಖಾಯಿಲೆಯನ್ನು ಗುಣಪಡಿಸಬಹುದು. ಆದರೆ ಈ ಚಿಕಿತ್ಸೆಗಳ ಬಳಿಕ ರೋಗಿಯು ಮೊದಲಿನಂತೆ ಮಾತನಾಡಲು ಹಾಗು ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ..


  ಧೂಮಪಾನ ಹಾಗೂ ತಂಬಾಕು ಸೇವನೆ ಯಿಂದ ಅಪಾಯ


  ಕೆಲವರಿಗೆ ತಂಬಾಕು ಸೇವನೆ ಮಾಡುವಾಗ ತಂಬಾಕನ್ನು ಬಾಯಿಯ ಒಂದೇ ಕಡೆ ಇಟ್ಟು ಅದರ ರಸವನ್ನು ಹೀರಿ ಖುಷಿಪಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇ ದ ರಿಂದ ತಂಬಾಕು ಅಲ್ಲೇ ಇದ್ದು ಇದ್ದು ಅದು ವಿಷವಾಗಿ ಮಾರ್ಪಾಡಾಗಿ ಒಳಗಡೆ ಸೇರಿ ಕ್ಯಾನ್ಸರ್ ಆಗಿ ಪೂರ್ತಿಯಾಗಿ ಬಾಯಿಯನ್ನು ಹಾಳು ಮಾಡಿಬಿಡುತ್ತದೆ .


  ಇದರಿಂದ ಆ ಜಾಗ , ದವಡೆ, ಕೆನ್ನೆ ಈ ಎಲ್ಲ ಭಾಗವನ್ನು ತಿಂದುಬಿಡುತ್ತೆ .ಇದೆ ರೀತಿ ಧೂಮಪಾನ ಮಾಡುವವರಿಗೆ ನಾಲಿಗೆಗೆ , ಗಂಟಲಿಗೆ ಕ್ಯಾನ್ಸರ್ ಬರುತ್ತದೆ . ಇದರ ಪರಿಣಾಮ ಅವರು ತಮ್ಮ ಧ್ವನಿಯನ್ನು ಅಥವಾ ನಾಲಿಗೆಯನ್ನು ಕೆಳೆದುಕೊಳ್ಳುತ್ತಾರೆ . ಹಾಗಾಗಿ ಮಾತನಾಡಲು ಹಾಗು ಊಟ ಮಾಡಲು ಅಸಾಧ್ಯವಾಗುತ್ತದೆ .


  ಕ್ಯಾನ್ಸರ್ ಬರದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರವಹಿಸಿ


  ಆಗಾಗ್ಗೆ ಬಾಯಿಯ ತಪಾಸಣೆ ಮಾಡಿಸಿ: ನಿಯಮಿತ ತಪಾಸಣೆಗಳು ಮತ್ತು ವೈದ್ಯರಿಂದ ಇತರ ನಿಯಮಿತ ಆರೋಗ್ಯ ಪರೀಕ್ಷೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ.


  ರೋಗ ಲಕ್ಷಣವನ್ನು ನಿರ್ಲಕ್ಷಿಸಬೇಡಿ: ಬಾಯಿಯ ಕ್ಯಾನ್ಸರ್​, ತುಟಿ, ನಾಲಿಗೆ ಅಥವಾ ಗಂಟಲು ಅಗಿಯುವಾಗ ಅಥವಾ ನುಂಗುವಾಗ ಯಾವುದೇ ನೋವು ಆದ್ರೆ ಅದನ್ನು ನಿರ್ಲಕ್ಷಿಸಬೇಡಿ. ಪ್ರಸ್ತುತ, ಹೆಚ್ಚಿನ ರೋಗಿಗಳನ್ನು ದೃಷ್ಟಿ ಪರೀಕ್ಷೆಯ ಮೂಲಕ ಕಂಡುಹಿಡಿಯಲಾಗುತ್ತಿದೆ. ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ಮೆಟಾಸ್ಟಾಸೈಸಿಂಗ್ ಹಂತಕ್ಕೆ ಪತ್ತೆಯಾಗುವುದಿಲ್ಲ.


  ಆರೋಗ್ಯಕರ ಆಹಾರ ಮತ್ತು ಹಲ್ಲಿನ ನೈರ್ಮಲ್ಯವನ್ನು ಕಪಾಡಿ: ಉತ್ತಮ, ಸಮತೋಲಿತ ಪೋಷಣೆಯು ನಮ್ಮ ದೇಹ ಸರಾಗವಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತೆಗೆದುಕೊಳ್ಳುವ ಜೊತೆಗೆ ನಿಮ್ಮ ಊಟದಲ್ಲಿ ಎಲ್ಲಾ ಮ್ಯಾಕ್ರೋ ಮತ್ತು ಮೈಕ್ರೋನ್ಯೂಟ್ರಿಯಂಟ್‌ಗಳನ್ನು ಸೇರಿಸಿ.


  ಇದನ್ನೂ ಓದಿ: Noodlesಗೆ ಗುಡ್‌ ಬೈ ಹೇಳಿ, ಈಗ Voodles ತಿನ್ನಿ! ಹೊಸ Food ಬಗ್ಗೆ ಇಲ್ಲಿದೆ ಮಾಹಿತಿ


  ಕ್ಯಾಲೋರಿ, ಸಕ್ಕರೆ ಸೇವನೆ ಮತ್ತು ಕೆಂಪು ಮಾಂಸದ ಸೇವನೆ ಕಡಿಮೆ ಮಾಡಿ: ಇವುಗಳು ನಿಮ್ಮ ಬಾಯಿಯ ಕ್ಯಾನ್ಸರ್ ಅಪಾಯವನ್ನು ಉಲ್ಬಣಗೊಳಿಸುತ್ತವೆ. ಗೋಮಾಂಸ, ಕುರಿ ಮರಿ ಮತ್ತು ಹಂದಿ ಮಾಂಸದಂತಹ ಕೆಂಪು ಮಾಂಸವನ್ನು ಕಾರ್ಸಿನೋಜೆನಿಕ್ ಎಂದು ವರ್ಗೀಕರಿಸಲಾಗಿದೆ. ಅಂದರೆ ಇದು ಕ್ಯಾನ್ಸರ್​ಗೆ ಕಾರಣವಾಗಬಹುದು. ಕೆಂಪು ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ

  Published by:ranjumbkgowda1 ranjumbkgowda1
  First published: