Health Care: ರಾತ್ರಿ ನಿದ್ರೆ ಬರ್ತಿಲ್ಲ ಅಂದ್ರೆ ಮಿಸ್​ ಮಾಡ್ದೇ ಈ ಟಿಪ್ಸ್ ಫಾಲೋ ಮಾಡಿ

Home Remedies: ನಿಮ್ಮ ದೇಹದ ಪ್ರತಿಯೊಂದು ಭಾಗಗಳ ಸ್ಕ್ಯಾನ್ ಆದ ನಂತರ, ಈಗ ನಿಮ್ಮ ದೇಹವನ್ನು ಒಟ್ಟಾರೆಯಾಗಿ ಪ್ರತಿಬಿಂಬಿಸಿಕೊಳ್ಳಿ ಮತ್ತು ದೇಹಕ್ಕೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿದ್ರಾಹೀನತೆ (Sleeping Problem) ಉಂಟಾಗಿದ್ದರೆ ಅಥವಾ ಸಮರ್ಪಕ ಪ್ರಮಾಣದಲ್ಲಿ ನೀವು ನಿದ್ರೆ (Sleep) ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದು ನಿಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ನಮ್ಮಲ್ಲಿ ಹಲವಾರು ಜನರು ಸಾಂದರ್ಭಿಕವಾಗಿ ಮಲಗಲು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಇದಕ್ಕೆ ಕೆಲ ಮುಖ್ಯ ಕಾರಣಗಳೆಂದರೆ ಒತ್ತಡ, ಪ್ರಯಾಣ, ಅನಾರೋಗ್ಯ(Health Issue)  ಆಗಿರುತ್ತವೆ. ಒಮ್ಮೊಮ್ಮೆ ಸಾಮಾನ್ಯ ದಿನಚರಿಯಲ್ಲಿ ಕೆಲ ತಾತ್ಕಾಲಿಕ ಅಡಚಣೆಗಳಿಂದಲೂ ಇದು ಉಂಟಾಗುತ್ತದೆ. 

ಆದಾಗ್ಯೂ, ನೀವು ನಿಯಮಿತವಾಗಿ ರಾತ್ರಿಯಲ್ಲಿ ನಿದ್ರಿಸಲು ಸಮಸ್ಯೆಗಳನ್ನು ಹೊಂದಿದ್ದರೆ, ದಣಿದ ಭಾವನೆಯಿಂದ ಎಚ್ಚರಗೊಂಡರೆ ಅಥವಾ ಹಗಲಿನಲ್ಲಿ ನಿದ್ರೆಯ ಭಾವನೆಯನ್ನು ಅನುಭವಿಸಿದರೆ, ನೀವು ನಿದ್ರಾಹೀನತೆಯಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಮನಸ್ಥಿತಿ, ಶಕ್ತಿ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಸೇರಿದಂತೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಇದು ಗಂಭೀರವಾದ ಪರಿಣಾಮ ಬೀರಬಹುದು. 

ರಾತ್ರಿ ಸಮರ್ಪಕವಾಗಿ ನಿದ್ರೆ ಮಾಡದಿದ್ದರೆ ದಿನದ ಸಮಯದಲ್ಲಿ ಅದರಿಂದಾಗಿ ಅನೇಕ ಸಮಸ್ಯೆಗಳು ಮತ್ತು ಅಸ್ವಸ್ಥತೆಗಳು ಉಂಟಾಗಬಹುದು. ತೂಕ ಹೆಚ್ಚಾಗುವುದು, ಕಾರು ಅಪಘಾತಗಳು, ದುರ್ಬಲಗೊಂಡ ಕೆಲಸದ ಕಾರ್ಯಕ್ಷಮತೆ, ಮೆಮೊರಿ ಸಮಸ್ಯೆಗಳು ಮತ್ತು ಸಂಬಂಧಗಳಲ್ಲಿಯೂ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ನೀವು ಹುರುಪು ಹೊಂದಲು ಬಯಸಿದರೆ, ಆರೋಗ್ಯವಾಗಿರಲು ಮತ್ತು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಬಯಸಿದರೆ, ಗುಣಮಟ್ಟದ ನಿದ್ರೆಯು ಅಗತ್ಯವಾಗಿದೆ ಹೊರತು ಐಷಾರಾಮಿತನ ಅಲ್ಲ.

ರಾತ್ರಿಯಲ್ಲಿ ನಿದ್ರೆ ಸರಿಯಾಗಿ ಬರುತ್ತಿಲ್ಲವೆಂದರೆ ಅದು ನಿಮಗೆ ಹತಾಶೆಯ ಮತ್ತು ದುರ್ಬಲಗೊಂಡ ಮನಸ್ಥಿತಿಯ ಅನುಭೂತಿ ನೀಡುತ್ತದೆ. ಇದರಿಂದ ಖಿನ್ನತೆಯೂ ಉಂಟಾಗಬಹುದು. ರಾತ್ರಿಯಲ್ಲಿ ನಿದ್ರಿಸಲು ಪರದಾಡಿದ್ದರೆ ದಿನದ ಸಮಯ ವ್ಯರ್ಥವಾದಂತೆ. ಏಕೆಂದರೆ ರಾತ್ರಿ ನಿದ್ರಿಸಲಾಗದ ಕಾರಣ ದಿನದ ಸಮಯದಲ್ಲಿ ದೇಹದಲ್ಲಿ ಇದ್ದಬಿದ್ದ ಎಲ್ಲ ಶಕ್ತಿಯು ವ್ಯಯವಾಗಿ ದಣಿದಂತಹ ಸ್ಥಿತಿ ಉಂಟಾಗುತ್ತದೆ. ಯಾವುದರಲ್ಲೂ ಆಸಕ್ತಿಯಿರದಂತಾಗುತ್ತದೆ. ರಾತ್ರಿಯಾದಾಗ ನೀವು ಎಷ್ಟು ದಣಿದಿದ್ದರೂ ಸಹ, ಮತ್ತೆ ಮಲಗಲು ತೊಂದರೆ ಅನುಭವಿಸುತ್ತೀರಿ. ಈ ರೀತಿ ರಾತ್ರಿಯಲ್ಲಿ ನಿದ್ರೆ ಮಾಡಲು ಕಷ್ಟ ಪಡುವ ನಿಮ್ಮ ಚಕ್ರವು ಮತ್ತೆ ಪ್ರಾರಂಭವಾಗುತ್ತದೆ. 

ಆದರೆ ನೀವು ನಿದ್ರೆಯ ಸಮಸ್ಯೆಯೊಂದಿಗೆ ಬದುಕಬೇಕಾಗಿಲ್ಲ. ನಿಮ್ಮ ನಿದ್ರೆಯ ಅಸ್ವಸ್ಥತೆಯ ಮೂಲ ಕಾರಣಗಳನ್ನು ಗುರುತಿಸಲು ಮತ್ತು ನಿಮ್ಮ ನಿದ್ರೆ, ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ನೀವು ಮಾಡಬಹುದಾದ ಹಲವು ವಿಷಯಗಳಿವೆ. ಅವುಗಳನ್ನು ಗಮನವಿಟ್ಟು ಮಾಡಿದಾಗ ನಿಮಗೆ ಮತ್ತೆ ಉತ್ತಮವಾದ ನಿದ್ರೆ ರಾತ್ರಿಯ ಸಮಯದಲ್ಲೂ ಬರುತ್ತದೆ. 

ನಿದ್ರಾಹೀನತೆಯೊಂದಿಗೆ ಹೋರಾಡುವ ಲಕ್ಷಾಂತರ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ರಾತ್ರಿ ಸಮಯದಲ್ಲಿ ನೀವು ನಿದ್ದೆ ಮಾಡಲು ಬಯಸಿದಾಗ ನಿಮ್ಮ ಮನಸ್ಸು ಅಲ್ಲಿಂದಿಲ್ಲಿ ಓಡಾಡುವ ಹಾಗೂ ನಿಮ್ಮ ದೇಹ ಹಾಸಿಗೆಯ ಮೇಲೆ ಅತ್ತಿಂದಿತ್ತ ಉರುಳಾಡುತ್ತಿರುವುದನ್ನಷ್ಟೆ ಮಾಡುತ್ತಿರುತ್ತದೆ. ಆದರೆ, 

ಸರಿಯಾದ ವಿಧಾನವನ್ನು ಅನುಸರಿಸಿದಾಗ, ನೀವು ನಿಮಿಷಗಳಲ್ಲಿ ಉತ್ತಮವಾಗಿ ನಿದ್ರಿಸಬಹುದು. ನಿಮಗೆ ನಿದ್ರೆ ಬರುವಂತೆ ಮಾಡುವ ಮಾರ್ಗಗಳಲ್ಲಿ ಒಂದಾಗಿದೆ ವಿಶ್ರಾಂತಿ. 

ವಿಶ್ರಾಂತಿ ಪ್ರತಿಕ್ರಿಯೆ  ಎಂಬುದು ಶಾರೀರಿಕ ಪ್ರಕ್ರಿಯೆಯಾಗಿದ್ದು ಅದು ಮನಸ್ಸು ಮತ್ತು ದೇಹ ಎರಡರ ಮೇಲೂ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ, ವಿಶ್ರಾಂತಿ ಪ್ರತಿಕ್ರಿಯೆಯು ನಿಮ್ಮನ್ನು ಶಾಂತಿಯುತವಾಗಿ ನಿದ್ರೆಗೆ ತಳ್ಳಲು ಅನುವು ಮಾಡಿಕೊಡುತ್ತದೆ. 

ವಿಶ್ರಾಂತಿಯನ್ನು ಪಡೆಯಲು ನಾಲ್ಕು ಪ್ರಮುಖ ಅಂಶಗಳು

ನಿಮಗೆ ಗೊತ್ತಿರುವಂತೆ ಸಾವಿರಾರು ವರ್ಷಗಳಿಂದ, ವಿಶ್ರಾಂತಿ ಎಂಬುದು ಆಧ್ಯಾತ್ಮಿಕ ಮತ್ತು ಹಲವು ಸಾಂಸ್ಕೃತಿಕ ಆಚರಣೆಗಳ ಪ್ರಮುಖ ಅಂಶವಾಗಿದ್ದು, ನಮ್ಮಲ್ಲಿ ನೆಮ್ಮದಿ ತರುವ ಮೂಲಕ ನಮ್ಮ ಸುತ್ತಮುತ್ತಲಿನ ವಾತಾವರಣದೊಂದಿಗೆ ನಾವು ಬೆಸೆದುಕೊಳ್ಳುವಂತೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ಶಾಂತ ವಾತಾವರಣ:  ಇಲ್ಲಿ ಶಾಂತ ಎಂದರೆ ಸಂಪೂರ್ಣ ಮೌನ ಎಂದಲ್ಲ. ಮನಸ್ಸನ್ನು ಶಾಂತಗೊಳಿಸುವಂತಹ ಹಗುರವಾದ-ಮಧುರವಾದ ಶಬ್ದಗಳು ಅಥವಾ ಇಂಪಾದ ಸಂಗೀತವಿರುವ ವಾತಾವರಣ ಪ್ರಯೋಜನಕಾರಿಯಾಗಿದೆ. ಜೋರಾಗಿ, ಅಪಘರ್ಷಕ ಶಬ್ದಗಳು ಅಥವಾ ಶಬ್ದಗಳನ್ನು ತಪ್ಪಿಸಬೇಕು. ಆಗ ಸುಲಭವಾಗಿ ನಿದ್ರೆ ಬರುವ ಸಾಧ್ಯತೆಯಿರುತ್ತದೆ.

ಗಮನದ ಕೇಂದ್ರಬಿಂದು: ವಸ್ತು ಅಥವಾ ವಿಷಯದ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು. ಯಾವುದಾದರೂ ಒಂದು ಪದ, ನುಡಿಗಟ್ಟು, ಮಂತ್ರ, ಉಸಿರಾಟದ ಮಾದರಿ ಅಥವಾ ಮಾನಸಿಕ ಚಿತ್ರಣವನ್ನು ನಿಮ್ಮ ಗಮನವನ್ನು ಸೆಳೆಯಲು ಮತ್ತು ನೀವು ಬಾಹ್ಯ ವಿಷಯಗಳ ಬಗ್ಗೆ ಯೋಚಿಸುವುದನ್ನು ಕಡಿಮೆ ಮಾಡಲು ಬಳಸಬಹುದು.

ಇದನ್ನೂ ಓದಿ: ನಿಮ್ಮ ಕನ್ನಡಕ ಕ್ಲೀನ್ ಮಾಡೋಕೆ ಇದೊಂದು ವಸ್ತು ಇದ್ರೆ ಸಾಕು

ನಿಷ್ಕ್ರೀಯ ವರ್ತನೆ: ಮನಸ್ಸನ್ನು ಮರ್ಕಟ ಎಂದು ಕರೆಯಲಾಗುತ್ತದೆ. ಮನಸ್ಸು ಒಂದೆಡೆ ಸುಮ್ಮನಿರದೆ ಅಲ್ಲಿ-ಇಲ್ಲಿ ವಿಚಾರಗಳ ಅಲೆಗಳಲ್ಲಿ ಅಲೆದಾಡುವುದು ಸಹಜ. ಇದನ್ನು ಮನಸಾರೆ ಒಪ್ಪಿಕೊಳ್ಳುವುದರಿಂದ ನಿಮ್ಮಲ್ಲಿ ನಿರಾಳತೆ ಮೂಡಿ ನಿಮ್ಮ ಗಮನವನ್ನು ಒಂದೆ ಕಡೆ ಇರುವಂತೆ ಮಾಡಬಹುದು. 

ಆರಾಮದಾಯಕ ಸ್ಥಾನ: ನಿಮಗೆ ವಿಶ್ರಾಂತಿ ಪಡೆಯುವ ಮನಸ್ಸಿದ್ದರೆ ಮೊದಲು ಅದಕ್ಕೆ ಸ್ನೇಹಪರವಾದಂತಹ ಸ್ಥಳವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಸ್ವಾಭಾವಿಕವಾಗಿ ನೀವು ನಿದ್ರಿಸಲು ಬಯಸಿದ್ದರೆ ಮೆತ್ತನೆಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯಲು ಪ್ರಯತ್ನಿಸುವುದು ಉತ್ತಮ. 

ಆರಾಮದಾಯಕವಾದ ಮತ್ತು ನಿಮ್ಮ ದೇಹದ ಪ್ರಕಾರಕ್ಕೆ ಪೂರಕವಾಗಿರುವಂತಹ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತ ಉತ್ತಮವಾಗಿ ನಿದ್ರಿಸಬಹುದು. 

ಕೆಳಗಿನ ಎಲ್ಲಾ ವಿಧಾನಗಳು ಈ ಪ್ರಮುಖ ಅಂಶಗಳನ್ನು ಸಾಧಿಸುವ ಮಾರ್ಗಗಳಾಗಿವೆ, ಇದರಿಂದ ನೀವು ಶಾಂತವಾಗಿ ನಿದ್ರಿಸಬಹುದು. ಇವುಗಳನ್ನೊಮ್ಮೆ ಪ್ರಯತ್ನಿಸಿ ನೋಡಿ.

ವಿಶ್ರಾಂತಿ ತಂತ್ರಗಳೊಂದಿಗೆ ನಿದ್ರಿಸುವುದು: ನೀವು ಹಾಸಿಗೆಯಲ್ಲಿ ಆರಾಮವಾಗಿ ಮಲಗಿದ ನಂತರ, ನಿಮ್ಮನ್ನು ಆರಾಮವಾಗಿ ಇರಿಸಿಕೊಳ್ಳಲು ಮತ್ತು ನಿಧಾನವಾಗಿ ನಿದ್ದೆ ಮಾಡಲು ಈ ತಂತ್ರಗಳಲ್ಲಿ ಒಂದನ್ನು ಪ್ರಯತ್ನಿಸಿ.

ನಿಯಂತ್ರಿತ ಉಸಿರಾಟ 

ಇದು ಏಕೆ ಕೆಲಸ ಮಾಡುತ್ತದೆ:

 ನಿಧಾನವಾಗಿ ಉಸಿರು ತೆಗೆದುಕೊಳ್ಲುವುದು ಹಾಗೂ ಬಿಡುವುದು ಶಾಂತತೆಯ ಭಾವವನ್ನು ಸಕ್ರಿಯಗೊಳಿಸುತ್ತದೆ. ಇದನ್ನು ಪ್ರಾಣಾಯಾಮಿಕ್ ಉಸಿರಾಟ ಎಂದು ಕರೆಯಲಾಗುತ್ತದೆ ಹಾಗೂ ಈ ವಿಧಾನವು ನರಮಂಡಲದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಧ್ಯಾನ

ಇದು ಏಕೆ ಕೆಲಸ ಮಾಡುತ್ತದೆ:

 ಧ್ಯಾನದಿಂದ ನಿಧಾನವಾದ, ಸ್ಥಿರವಾದ ಉಸಿರಾಟ ಮತ್ತು ಪ್ರಸ್ತುತ ಕ್ಷಣದ ಮೇಲೆ ಗಮನವನ್ನು ಕೇಂದ್ರೀಕರಿಸುವಂತಹ ಶಕ್ತಿ ಉಂಟಾಗುತ್ತದೆ. ಮನದಲ್ಲಿರುವ ಆತಂಕ ಮತ್ತು ಗೊಂದಲ ಕಡಿಮೆಯಾಗಿ ಇದು ನಿದ್ರಾಹೀನತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಂತೆ ವ್ಯಾಪಕವಾದ ಆರೋಗ್ಯಕ್ಕೂ ಆಗುವ ಪ್ರಯೋಜನಗಳನ್ನು ಹೊಂದಿದೆ. 

ಇದನ್ನೂ ಓದಿ: ಮಕ್ಕಳಿಗೆ ಈ ಅಭ್ಯಾಸ ಮಾಡಿಸಿದ್ರೆ ತುಂಬಾ ಸ್ಮಾರ್ಟ್​ ಆಗ್ತಾರಂತೆ

ಅದನ್ನು ಹೇಗೆ ಮಾಡುವುದು:

ವಿಭಿನ್ನ ಸನ್ನಿವೇಶಗಳಿಗನುಸಾರವಾಗಿ ಧ್ಯಾನ ಮಾಡಲು ಹಲವು ಮಾರ್ಗಗಳಿವೆ. ಬಾಡಿ ಸ್ಕ್ಯಾನ್ ಧ್ಯಾನ ಬಳಸಲು ಸುಲಭವಾದ ಶೈಲಿಯಾಗಿದೆ.

ಆರಾಮದಾಯಕವಾದ ವೇಗದಲ್ಲಿ ನಿಧಾನವಾಗಿ ಉಸಿರಾಡುವ ಮತ್ತು ಬಿಡುವುದರ ಮೇಲೆ ಗಮನ ಕೇಂದ್ರೀಕರಿಸಿ. 

ಹಾಸಿಗೆಯ ಮೇಲೆ ನಿಮ್ಮ ದೇಹದ ಸ್ಥಾನವನ್ನು ಮೊದಲೇ ಗಮನಿಸಿಟ್ಟುಕೊಂಡಿರಿ. ಮೊದಲಿಗೆ 

ನಿಮ್ಮ ಕಾಲುಗಳು ಮತ್ತು ಪಾದಗಳಲ್ಲಿ ಆಗುತ್ತಿರುವ ಯಾವುದಾದರೂ ಸಂವೇದನೆಯನ್ನು ಗಮನಿಸಿ. ತದಂತರ ನಿಮ್ಮ 

"ದೇಹ ಸ್ಕ್ಯಾನ್" ಅನ್ನು ಮುಂದುವರಿಸುತ್ತ, ನಿಮ್ಮ ಕಾಲುಗಳಿಂದ ಹಿಡಿದು ನಿಮ್ಮ ತಲೆಯವರೆಗೆ, ಹಾಗೂ ನಿಮ್ಮ ದೇಹದ ಪ್ರತಿಯೊಂದು ಭಾಗಗಳಲ್ಲು ಆಗುತ್ತಿರುವ ಸಂವೇದನೆಗಳನ್ನು ಗಮನಿಸುತ್ತ ಬನ್ನಿ. ನಿಮ್ಮ ದೇಹದ ಪ್ರತಿಯೊಂದು ಭಾಗಗಳ ಸ್ಕ್ಯಾನ್ ಆದ ನಂತರ, ಈಗ ನಿಮ್ಮ ದೇಹವನ್ನು ಒಟ್ಟಾರೆಯಾಗಿ ಪ್ರತಿಬಿಂಬಿಸಿಕೊಳ್ಳಿ ಮತ್ತು ದೇಹಕ್ಕೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡಿ. 
Published by:Sandhya M
First published: