• Home
  • »
  • News
  • »
  • lifestyle
  • »
  • Kidney Damage: ಮೂತ್ರಪಿಂಡದ ಆರೋಗ್ಯ ಕಾಪಾಡಲು ಯಾವ ಪದಾರ್ಥ ಸೇವಿಸಬೇಕು? ಇಲ್ಲಿದೆ ಮಾಹಿತಿ

Kidney Damage: ಮೂತ್ರಪಿಂಡದ ಆರೋಗ್ಯ ಕಾಪಾಡಲು ಯಾವ ಪದಾರ್ಥ ಸೇವಿಸಬೇಕು? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂತ್ರಪಿಂಡದಲ್ಲಿ ಉಂಟಾಗುವ ಯಾವುದೇ ರೀತಿಯ ಸಮಸ್ಯೆ ನಿಮ್ಮ ದೈನಂದಿನ ದಿನಚರಿಗೆ ಅಡ್ಡಿ ಉಂಟು ಮಾಡುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡದ ಕಾಯಿಲೆಗೆ ಸಾಮಾನ್ಯ ಮತ್ತು ಅಪಾಯಕಾರಿ ಅಂಶ ಆಗಿದೆ. ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ರಕ್ತದಲ್ಲಿ ತ್ಯಾಜ್ಯ ಸಂಗ್ರಹ ಆಗುತ್ತದೆ.

ಮುಂದೆ ಓದಿ ...
  • Share this:

    ವಿಶ್ವದ (World) ಜನಸಂಖ್ಯೆಯ (Population) ಸರಿಸುಮಾರು 10 ಪ್ರತಿಶತದಷ್ಟು ಜನರನ್ನು (People) ಮೂತ್ರಪಿಂಡ ಕಾಯಿಲೆ (Kidney Disease) ಬಾಧಿಸುತ್ತಿದೆ ಎಂದು ರಾಷ್ಟ್ರೀಯ ಕಿಡ್ನಿ ಫೌಂಡೇಶನ್ ಹೇಳಿದೆ. ಮೂತ್ರಪಿಂಡಗಳು ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಸಣ್ಣ ಹುರುಳಿ ಆಕಾರದ ಅಂಗಗಳು (Parts) ಆಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಿಸುವ ಹಾರ್ಮೋನುಗಳ ಬಿಡುಗಡೆ ಮಾಡುತ್ತದೆ. ಹಾಗೂ ದೇಹದಲ್ಲಿ ದ್ರವ ಪದಾರ್ಥ ಸಮತೋಲನಗೊಳಿಸುವುದು, ಮೂತ್ರ ಉತ್ಪಾದಿಸುವುದು ಮತ್ತು ಇತರೆ ಅನೇಕ ಅಗತ್ಯ ಕೆಲಸ ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.


    ಮೂತ್ರಪಿಂಡಗಳಿಗೆ ಹೇಗೆ ಹಾನಿಯಾಗುತ್ತದೆ?


    ಅಂತಹ ವೇಳೆ ಮೂತ್ರಪಿಂಡದಲ್ಲಿ ಉಂಟಾಗುವ ಯಾವುದೇ ರೀತಿಯ ಸಮಸ್ಯೆ ನಿಮ್ಮ ದೈನಂದಿನ ದಿನಚರಿಗೆ ಅಡ್ಡಿ ಉಂಟು ಮಾಡುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮೂತ್ರಪಿಂಡದ ಕಾಯಿಲೆಗೆ ಸಾಮಾನ್ಯ ಮತ್ತು ಅಪಾಯಕಾರಿ ಅಂಶ ಆಗಿದೆ. ಅದಾಗ್ಯೂ ಸ್ಥೂಲಕಾಯ, ಧೂಮಪಾನ, ತಳಿಶಾಸ್ತ್ರ, ಲಿಂಗ ಮತ್ತು ವಯಸ್ಸು ಕೂಡ ಮೂತ್ರಪಿಂಡದ ಹಾನಿಯ ಅಪಾಯ ಹೆಚ್ಚಿಸುತ್ತದೆ.


    ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ಆಹಾರದಿಂದ ಉತ್ಪನ್ನವಾಗುವ ತ್ಯಾಜ್ಯ ಉತ್ಪನ್ನವು ಹಾಗೂ ರಕ್ತದಲ್ಲಿ ತ್ಯಾಜ್ಯ ಸಂಗ್ರಹ ಆಗುತ್ತದೆ. ಹಾಗಾಗಿ ಮೂತ್ರಪಿಂಡದ ಕಾಯಿಲೆ ಇರುವವರು ವಿಶೇಷ ಆಹಾರ ಫಾಲೋ ಮಾಡುವುದು ತುಂಬಾ ಅತ್ಯಗತ್ಯ ಆಗಿದೆ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಮೂತ್ರಪಿಂಡದ ಆರೋಗ್ಯ ಕಾಪಾಡಲು ಯಾವ ಪದಾರ್ಥ ಕಡಿಮೆ ಸೇವಿಸಬೇಕು?


    ಮೇಯೊ ಕ್ಲಿನಿಕ್ ಪ್ರಕಾರ ನೀವು ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆ ಹೊಂದಿದ್ದರೆ ಅಥವಾ ನಿಮ್ಮ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ನಿಮ್ಮ ವೈದ್ಯರು ಮೂತ್ರಪಿಂಡದ ಆರೋಗ್ಯ ಕಾಪಾಡಲು ಕೆಲವು ಆಹಾರ ಕ್ರಮ ಮತ್ತು ಕೆಲವು ಪದಾರ್ಥಗಳನ್ನು ಕಡಿಮೆ ಸೇವನೆ ಮಾಡಲು ಸೂಚನೆ ನೀಡುತ್ತಾರೆ.


    ಸೋಡಿಯಂ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಕಡಿಮೆ ಇರುವ ಆಹಾರಗಳ ಸೇವನೆ ಕಿಡ್ನಿ ಸಮಸ್ಯೆ ತಡೆಯಲು ಸಹಕಾರಿ ಆಗಿವೆ. ಹಾಗಾಗಿ ಇಲ್ಲಿ ನಾವು ಮೂತ್ರಪಿಂಡ ಸ್ನೇಹಿ ಆಹಾರಗಳು ಯಾವವು ಎಂಬುದನ್ನು ನೋಡೋಣ.


    ಕೆಂಪು ಬೆಲ್ ಪೆಪ್ಪರ್


    ಒಂದು ಅಧ್ಯಯನದ ಪ್ರಕಾರ, ಕೆಂಪು ಕ್ಯಾಪ್ಸಿಕಂನಲ್ಲಿ ಪೊಟ್ಯಾಸಿಯಮ್ ಕಡಿಮೆ ಇದೆ. ಜೊತೆಗೆ ಇದು ವಿಟಮಿನ್ ಎ, ಸಿ, ಬಿ 6, ಫೋಲಿಕ್ ಆಮ್ಲ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಲೈಕೋಪೀನ್‌ನಲ್ಲಿ ಸಮೃದ್ಧವಾಗಿದ್ದು, ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಕೆಂಪು ಕ್ಯಾಪ್ಸಿಕಂನ್ನು ಹುರಿದು ಅಥವಾ ಸಲಾಡ್ಗಳಾಗಿ ಕತ್ತರಿಸಿ ಸೇವನೆ ಮಾಡಬಹುದು.


    ಸೇಬು


    ಸೇಬು ಹಣ್ಣಿನಲ್ಲಿ ಉರಿಯೂತ ಗುಣಲಕ್ಷಣಗಳು, ಫೈಬರ್ ಮತ್ತು ವಿಟಮಿನ್ಗಳು ಹೇರಳ ಆಗಿವೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ತಡೆಯುತ್ತದೆ. ಹಾಗೂ ಮೂತ್ರಪಿಂಡಗಳನ್ನು ಆರೋಗ್ಯವಾಗಿಸುತ್ತದೆ. ಸೇಬುಗಳನ್ನು ಕಚ್ಚಾ, ಬೇಯಿಸಿದ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದು ನಿಮಗೆ ಪ್ರಯೋಜನಕಾರಿ ಆಗಿದೆ.


    ಕ್ರ್ಯಾನ್ ಬೆರ್ರಿ


    ಸಂಶೋಧನೆಯೊಂದರ ಪ್ರಕಾರ, ಕ್ರ್ಯಾನ್ ಬೆರ್ರಿಗಳು ಮೂತ್ರನಾಳ ಸೋಂಕಿಗೆ ನೈಸರ್ಗಿಕ ಔಷಧವಾಗಿ ಕೆಲಸ ಮಾಡುತ್ತವೆ. ಇದು ಮೂತ್ರದ ಆಮ್ಲೀಯ ಮಟ್ಟ ಹೆಚ್ಚಿಸುತ್ತದೆ. ಇದು ಬ್ಯಾಕ್ಟೀರಿಯಾ ತೊಡೆದು ಹಾಕಲು ಕೆಲಸ ಮಾಡುತ್ತದೆ. ಜೊತೆಗೆ ಇದು ಕ್ಯಾನ್ಸರ್ ತಡೆಯುತ್ತದೆ.


    ಕೊಬ್ಬಿನ ಮೀನು


    ಕೊಬ್ಬಿನ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲ, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹವು ಸ್ವಂತವಾಗಿ ಮಾಡಲು ಸಾಧ್ಯವಿಲ್ಲ. ಮೀನುಗಳನ್ನು ವಾರಕ್ಕೆ ಮೂರು ಬಾರಿ ಸೇವಿಸುವುದು ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ ಆಗಿದೆ.


    ಇದನ್ನೂ ಓದಿ: ಇದ್ಯಾವುದು ಬಬಲ್ ಚಹಾ? ಟ್ರೆಂಡಿಂಗ್‌ನಲ್ಲಿರುವ ಈ ಪಾನೀಯ ಆರೋಗ್ಯಕ್ಕೆ ಎಷ್ಟು ಉತ್ತಮ?


    ಬೆಳ್ಳುಳ್ಳಿ


    ಬೆಳ್ಳುಳ್ಳಿ ಸೇವನೆ ಸಿಕೆಡಿ ಇರುವವರಿಗೆ ಪ್ರಯೋಜನಕಾರಿ ಆಗಿದೆ. ಮೂತ್ರಪಿಂಡದ ಸಮಸ್ಯೆ ಇರುವ ಜನರು ಸೋಡಿಯಂ ಕಡಿಮೆ ಸೇವಿಸಲು ಸಲಹೆ ನೀಡುತ್ತಾರೆ. ಬೆಳ್ಳುಳ್ಳಿ ಪೌಷ್ಟಿಕಾಂಶ ಪ್ರಯೋಜನ ನೀಡುತ್ತದೆ. ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ.

    Published by:renukadariyannavar
    First published: