Over Sleeping Problem: ಅತಿಯಾಗಿ ನಿದ್ದೆ ಮಾಡಿದ್ರೆ ಈ ಆರೋಗ್ಯ ಸಮಸ್ಯೆ ಗ್ಯಾರಂಟಿ

ನೀವು ದಿನವೂ ಒಳ್ಳೆಯ ನಿದ್ದೆ ಮಾಡುವ ಭರದಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವವರಲ್ಲಿ ಪರಿಧಮನಿಯ ಹೃದಯ ಕಾಯಿಲೆ ಉಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉತ್ತಮ ಆರೋಗ್ಯಕ್ಕಾಗಿ (Health) ಸಾಕಷ್ಟು ನಿದ್ರೆ (Sleep) ಮಾಡುವುದು ತುಂಬಾ ಮುಖ್ಯ ಆಗುತ್ತದೆ. ರಾತ್ರಿ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಆರೋಗ್ಯವನ್ನು ಚೆನ್ನಾಗಿ ಇರಿಸಲು ಸಹಾಯ ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡದೆ ಹೋದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (Bad Effect) ಬೀರುತ್ತದೆ. ಒಳ್ಳೆಯ ನಿದ್ದೆ ನಿಮಗೆ ದಿನವಿಡೀ ತುಂಬಾ ಉಲ್ಲಾಸಮಯ ಮನಸ್ಸು (Mind) ನೀಡುತ್ತದೆ. ಆದರೆ ನೀವು ದಿನವೂ ಒಳ್ಳೆಯ ನಿದ್ದೆ ಮಾಡುವ ಭರದಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಆರೋಗ್ಯಕ್ಕೆ ಅಡ್ಡ ಪರಿಣಾಮವೂ ಉಂಟು ಮಾಡುತ್ತದೆ. ಹೆಚ್ಚು ನಿದ್ದೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

    ಅತಿಯಾದ ಅಥವಾ ಹೆಚ್ಚು ನಿದ್ದೆ ಮಾಡುವುದರಿಂದ ಆಗುವ ಅನಾನುಕೂಲಗಳು

    ಹೆಚ್ಚು ಆಹಾರ ಸೇವನೆ ಮತ್ತು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಾವಧಿಯ ಅತಿಯಾದ ನಿದ್ದೆ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ನೀವು ನಿಯಮಿತವಾಗಿ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ ನೀವು ಅನೇಕ ಹಾನಿ  ಅನುಭವಿಸಬಹುದು. ಅತಿಯಾದ ಅಥವಾ ಹೆಚ್ಚು ನಿದ್ದೆ ಮಾಡುವುದರಿಂದ ಆಗುವ ಅನಾನುಕೂಲಗಳ ಬಗ್ಗೆ  ಇಲ್ಲಿ ತಿಳಿಯೋಣ.

    ಹೃದಯ ಸಮಸ್ಯೆ

    ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವವರಲ್ಲಿ ಪರಿಧಮನಿಯ ಹೃದಯ ಕಾಯಿಲೆ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಸಂಶೋಧನೆ ಒಂದು ಹೇಳಿದೆ.

    ಇದನ್ನೂ ಓದಿ: ಅಸ್ತಮಾ ರೋಗಿಗಳು ಏನು ತಿನ್ನಬೇಕು; ಏನು ತಿನ್ನಬಾರದು ಗೊತ್ತಾ?

    ತೀವ್ರ ತಲೆನೋವು

    ದೀರ್ಘಕಾಲ ನಿದ್ರಿಸುವುದು ಮೆದುಳಿನ ಮೇಲೆ ಅದರ ವಿರುದ್ಧ ಪರಿಣಾಮ ಬೀರುತ್ತದೆ. ಇದು ನಿಮಗೆ ತೀವ್ರ ತಲೆನೋವಿನ ಸಮಸ್ಯೆ ಉಂಟು ಮಾಡುತ್ತದೆ.

    ಖಿನ್ನತೆ ಸಮಸ್ಯೆ

    ದೀರ್ಘಕಾಲ ನಿದ್ದೆ ಮಾಡುವುದರಿಂದ ಖಿನ್ನತೆ ಸಮಸ್ಯೆ ಕಾಡಬಹುದು. ಇದರ ಜೊತೆಗೆ ನೀವು ಒತ್ತಡವನ್ನು ಸಹ ಎದುರಿಸಬೇಕಾಗಬಹುದು.

    ಬೊಜ್ಜು ಹೆಚ್ಚಾಗುತ್ತದೆ

    ನೀವು ನಿದ್ದೆ ಮಾಡುವಾಗ, ನಿಮ್ಮ ದೈಹಿಕ ಚಟುವಟಿಕೆಯು ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ನಿಮ್ಮ ದೇಹದಲ್ಲಿನ ಕ್ಯಾಲೋರಿಗಳು ಹೆಚ್ಚಾಗುವ ಕಾರಣದಿಂದಾಗಿ ಬೊಜ್ಜು ಹೆಚ್ಚುತ್ತದೆ.

    ಇನ್ನು ಬೇಸಿಗೆಯಲ್ಲಿ ವಾತಾವರಣವು ತುಂಬಾ ತೇವ ಮತ್ತು ಬಿಸಿಯಾಗಿರುತ್ತದೆ. ಆಗ ನೀವು ಎಸಿ ಅಥವಾ ಕೂಲರ್ ಇಲ್ಲದ ಸ್ಥಳದಲ್ಲಿದ್ದರೆ ರಾತ್ರಿ ಶಾಂತಿಯುತವಾಗಿ ಮಲಗಲು ನಿಮಗೆ ತುಂಬಾ ಕಷ್ಟ ಆಗುತ್ತದೆ. ಶಾಖವು ನಿದ್ರೆಗೆ ಅಡ್ಡಿಯಾಗುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಇಲ್ಲಿ ನಾವು ಉತ್ತಮ ನಿದ್ರೆ ಪಡೆಯುವ ಕೆಲವು ಟಿಪ್ಸ್ ನೋಡೋಣ.

    ಉತ್ತಮ ನಿದ್ರೆ ಪಡೆಯುವ ಕೆಲವು ಟಿಪ್ಸ್

    ಮಲಗುವ ಮುನ್ನ ಸ್ನಾನ ಮಾಡಿ

    ಮಲಗುವ ಮುನ್ನ ತಣ್ಣೀರಿನ ಸ್ನಾನ ಮಾಡಿ. ತಣ್ಣೀರು ದೇಹಕ್ಕೆ ತಂಪು ನೀಡುವುದರ ಜೊತೆಗೆ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ರಾತ್ರಿ ಸ್ನಾನ ಮಾಡಲು ಆಗದಿದ್ದರೆ ನಿಮ್ಮ ಪಾದಗಳನ್ನು 10 ರಿಂದ 15 ನಿಮಿಷ ತಣ್ಣನೆಯ ನೀರಿನಲ್ಲಿ ನೆನೆಸಿ. ಇದರಿಂದ ನಿಮ್ಮ ದೇಹ ತಂಪಾಗಿರುತ್ತದೆ.

    ನೀರು ಮತ್ತು ತಂಪಾದ ಟವೆಲ್ ಇಟ್ಟುಕೊಳ್ಳಿ

    ಬೇಸಿಗೆಯಲ್ಲಿ ಚೆನ್ನಾಗಿ ನಿದ್ರೆ ಬೇಕು ಎಂದಾದರೆ ಬಾಯಾರಿಕೆಯಾದ ತಕ್ಷಣ ನೀರು ಕುಡಿಯಲು ನೀರಿನ ಬಾಟಲಿ ಇಟ್ಟುಕೊಳ್ಳಿ. ಹೆಚ್ಚುವರಿ ಐಸ್ ಕ್ಯೂಬ್‌ ಟವೆಲ್‌ನಲ್ಲಿ ಸುತ್ತಿ, ಮಲಗುವಾಗ ತಣ್ಣಗಾಗಲು ಹಾಸಿಗೆಯ ಮೇಲೆ ಇರಿಸಿ.

    ಮೃದುವಾದ ಹಾಸಿಗೆ ಮತ್ತು ದಿಂಬು ಇರಲಿ

    ಮೃದುವಾದ ಹಾಸಿಗೆ ಮತ್ತು ದಿಂಬುಗಳನ್ನು ಆರಿಸಿ. ಏಕೆಂದರೆ ನಿಮ್ಮ ಹಾಸಿಗೆ ಮತ್ತು ದಿಂಬು ಸರಿಯಿಲ್ಲದಿದ್ದರೆ ರಾತ್ರಿಯಿಡೀ ನಿಮ್ಮನ್ನು ಕಾಡುತ್ತದೆ. ನಿಮಗೆ ಮಲಗಲು ಆಗಲ್ಲ.

    ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?

    ತಂಪಾದ ಮತ್ತು ಗಾಢವಾದ ಕೋಣೆ ಆರಿಸಿ

    ಬೆಳಕು ಹೊಂದಿರುವ ಕೋಣೆ ಬಿಸಿಯಾಗಿರುತ್ತದೆ. ಬೆಚ್ಚಗಿನ ಕೋಣೆ ನಿಮಗೆ ಚೆನ್ನಾಗಿ ಮಲಗಲು ಬಿಡುವುದಿಲ್ಲ. ಹಾಗಾಗಿ ಮಲಗುವ ಒಂದು ಗಂಟೆ ಮೊದಲು ಕೋಣೆಯ ಎಲ್ಲಾ ದೀಪಗಳನ್ನು ಆಫ್ ಮಾಡಿ. ಮತ್ತು ನೈಸರ್ಗಿಕ ಗಾಳಿ ಪಡೆಯಿರಿ.
    Published by:renukadariyannavar
    First published: