Menstrual cycle: ಋತುಚಕ್ರದ ಮೊದಲು, ಆ ಸಮಯ, ಹಾಗೂ ನಂತರ ಈ ಆಹಾರ ಸೇವಿಸಿ

Women Health: ಋತುಚಕ್ರದ ಮೊದಲು ಮತ್ತು ಮುಗಿಯುವವರೆಗೂ ಮಹಿಳೆಯರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಾರೆ. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ದೇಹದಲ್ಲಿ ಕೆಲವು ಏರುಪೇರು ಆಗುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಋತುಚಕ್ರದ(Menstrual cycle) ಸಂದರ್ಭದಲ್ಲಿ ಹಾರ್ಮೋನ್‌ಗಳ(Hormones) ಬದಲಾವಣೆಯಿಂದಾಗಿ ಮಹಿಳೆಯರಲ್ಲಿ(Women) ತಲೆನೋವು(Headache), ಸುಸ್ತು, ಹೊಟ್ಟೆನೋವು(Stomach Pain), ಕಾಲು ನೋವು, ಮನಸ್ಥಿತಿ ಬದಲಾವಣೆ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ಇವುಗಳನ್ನು ನಿವಾರಣೆ ಮಾಡಲು ಋತುಚಕ್ರದ(Periods) ಸಂದರ್ಭದಲ್ಲಿ(Time) ಮಾತ್ರವಲ್ಲದೆ ಋತುಚಕ್ರ ಆಗುವ ಮೊದಲು ಮತ್ತು ನಂತರ ಕೆಲವು ಕ್ರಮಗಳನ್ನು ಅನುಸರಿಸಬೇಕು. ಅದರಲ್ಲೂ ಮುಖ್ಯವಾಗಿ ಆಹಾರ ಸೇವನೆಗಳ(Food) ಮೇಲೆ ನಿಗಾ ಇರಬೇಕು. ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ಕಾಳಜಿ ವಹಿಸಿದರೆ ಕ್ರಮೇಣ ಋತುಚಕ್ರದ ಸಮಯದಲ್ಲಿ ಅನುಭವಿಸುವ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಹಾಗಾದ್ರೆ ಯಾವ ಆಹಾರ ಸೇವಿಸಬೇಕು, ಯಾವೆಲ್ಲ ಆಹಾರಗಳಿಂದ ದೂರವಿರಬೇಕು ಎಂಬುವುದರ ಬಗ್ಗೆ ಪೌಷ್ಟಿಕ ಆಹಾರ ತಜ್ಞೆ ಮಿನಾಕ್ಷಿ ಪೆಟ್ಟುಕೋಳ ತಿಳಿಸಿದ್ದಾರೆ. ಇವರು ಹೇಳಿರುವ ಸಲಹೆ ನಿಮ್ಮ ಋತುಚಕ್ರದ ಸಮಯವನ್ನು ಆರಾಮಾಗಿಸುವುದರಲ್ಲಿ ಸಂದೇಹವಿಲ್ಲ.

ಋತುಚಕ್ರದ ಮೊದಲು ಸೇವಿಸಬೇಕಾದ ಆಹಾರಗಳು

ಈ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟ ಕಡಿಮೆಯಾಗಿ FSH ಮತ್ತು LH ಹಾರ್ಮೋನುಗಳ ಸಮಸ್ಯೆಯನ್ನು ಎದುರಿಸುತ್ತಾರೆ. PMS ಹೆಚ್ಚಾಗಿ ತಿನ್ನುವ ಬಯಕೆಗಳು, ಕಿರಿಕಿರಿ, ಆಯಾಸ ಮತ್ತು ಮನಸ್ಥಿತಿ ಬದಲಾವಣೆಯಂತಹ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಯದಲ್ಲಿ ನಾವು ಈ ಆಹಾರ ಸೇವಿಸಿದರೆ ಉತ್ತಮ.

1 ) ಹಸಿರು ಸೊಪ್ಪು: ಕಬ್ಬಿಣಾಂಶದ ಕೊರತೆ ಇರುವವರು ಹೆಚ್ಚು ಸೊಪ್ಪುಗಳನ್ನು ಸೇವನೆ ಮಾಡಬೇಕು. ಋತುಚಕ್ರದ ಸಂದರ್ಭದಲ್ಲಿ ಕಬ್ಬಿಣಾಂಶದ ಮಟ್ಟವು ಕಡಿಮೆ ಆಗುವುದು ಮತ್ತು ಇದನ್ನು ಸಮತೋಲನದಲ್ಲಿ ಇಡಲು ಈ ಆಹಾರಗಳು ಸಹಕಾರಿಯಾಗುತ್ತವೆ.

ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಮನೆಯಲ್ಲಿಯೇ ಸಿಗುವ ಈ ಆಹಾರಗಳೇ ಬೆಸ್ಟ್

2 ) ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಅತ್ಯುತ್ತಮ ಮಟ್ಟದ ವಿಟಮಿನ್ ಬಿ6 ಇದ್ದು, ಇದು ಮನಸ್ಥಿತಿ ಸುಧಾರಣೆ ಮಾಡುವುದು. ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅತ್ಯಧಿಕ ಪ್ರಮಾಣದಲ್ಲಿದ್ದು, ಹೊಟ್ಟೆ ಉಬ್ಬರ ತಡೆದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

3) ಡಾರ್ಕ್ ಚಾಕೊಲೇಟ್: ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿ ಇರುವಂತಹ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಕಿರಿಕಿರಿ ಅನುಭವಿಸದೆ, ಋತುಚಕ್ರದ ವೇಳೆ ಕಾಡುವಂತಹ ಮನಸ್ಥಿತಿ ಬದಲಾವಣೆ ತಡೆಯುವುದು.

ಏನನ್ನು ತಿನ್ನಬಾರದು ..?

ಅತಿಯಾದ ಉಪ್ಪು ಸೇವನೆ ಈ ಸಂದರ್ಭದಲ್ಲಿ ಸೇವಿಸಬಾರದು. ಅಲ್ಲದೆ ಸಿಕ್ಕಿದ್ದೆಲ್ಲ ತಿನ್ನುವುದನ್ನು ತಪ್ಪಿಸಬೇಕು. ನಿಯಮಿತ ಆಹಾರ ಸೇವನೆ ಜೀರ್ಣಕ್ರಿಯೆಗೆ ಸಹಕರಿಸಿ ಹೊಟ್ಟೆ ಉಬ್ಬುವಿಕೆಯನ್ನು ತಡೆಯುತ್ತದೆ.

ಋತುಚಕ್ರದ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಋತುಚಕ್ರದ ಮೊದಲು ಮತ್ತು ಮುಗಿಯುವವರೆಗೂ ಮಹಿಳೆಯರು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಾರೆ. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ದೇಹದಲ್ಲಿ ಕೆಲವು ಏರುಪೇರು ಆಗುತ್ತವೆ. ಅವುಗಳ ನಿವಾರಣೆಗೆ ಈ ಕೆಳಗಿನ ಆಹಾರಗಳು ಸಹಕಾರಿಯಾಗುತ್ತವೆ.

ಒಮೆಗಾ-3ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಮೀನು ಇಲ್ಲ ಇನ್ನಿತರ ಆಹಾರ ಸೇವನೆಗಳಿಂದ ಸ್ನಾಯುಗಳಿಗೆ ಆರಾಮ ನೀಡುವುದು ಮತ್ತು ಸೆಳೆತವನ್ನು ಕಡಿಮೆ ಮಾಡುವುದು.

ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚು ಮೊಸರು, ಡಾರ್ಕ್ ಚಾಕೊಲೇಟ್, ಶುಂಠಿ ಚಹಾ ಸೇವಿಸುವುದು ಉತ್ತಮ. ಇದರಿಂದಾಗಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಹೊಟ್ಟೆನೋವು, ಆಯಾಸವನ್ನು ನಿವಾರಿಸಬಹುದು.

ಋತುಚಕ್ರದ ನಂತರ ಏನು ತಿನ್ನಬೇಕು ?

ಋತುಚಕ್ರದ ನಂತರ ಫೋಲಿಕ್ಯುಲಾರ್ ಹಂತದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚುತ್ತದೆ. LH ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಅಂಡೋತ್ಪತ್ತಿ ಪ್ರಕ್ರಿಯೆಯು ಸುಮಾರು 14ನೇ ದಿನದಂದು ಪ್ರಾರಂಭವಾಗುತ್ತದೆ. ಈ ಅಂಡೋತ್ಪತ್ತಿ ಅವಧಿಯಲ್ಲಿ ಮಹಿಳೆಯರು ಉತ್ತಮ ಆಹಾರ ಸೇವಿಸಬೇಕು ಎಂದು ಪೌಷ್ಟಿಕ ಆಹಾರ ತಜ್ಞೆ ಮಿನಾಕ್ಷಿ ಪೆಟ್ಟುಕೋಳ ತಿಳಿಸಿದ್ದಾರೆ.

ಈ ಸಮಯದಲ್ಲಿ ವಿಟಮಿನ್ ಬಿ ಇರುವ ಆಹಾರಗಳನ್ನು, ಕಬ್ಬಿಣ ಅಂಶ ಹೊಂದಿರುವ ಪದಾರ್ಥಗಳನ್ನು, ಕ್ಯಾಲ್ಸಿಯಂ ಇರುವ ಆಹಾರ ಸೇವನೆ ಹೆಚ್ಚು ಉಪಯುಕ್ತ. ಕೆಲವು ಮಾಂಸಗಳು, ಪಾಲಕ್ ಸೊಪ್ಪು, ಕಡು ಹಸಿರು ತರಕಾರಿ, ಕಾಳುಗಳು ಮತ್ತು ಡೈರಿ ಪದಾರ್ಥಗಳ ಸೇವನೆ ಒಳ್ಳೆಯದು.

ಇದನ್ನೂ ಓದಿ: ಸರಿಯಾದ ಸಮಯಕ್ಕೆ ಪಿರಿಯಡ್ಸ್​ ಆಗ್ತಿಲ್ವಾ? ಈ ಆಹಾರಗಳನ್ನು ಟ್ರೈ ಮಾಡಿ

ಓಟ್ಸ್, ಬ್ರೌನ್ ರೈಸ್, ಹಣ್ಣುಗಳು, ನಾರಿನ ತರಕಾರಿಗಳು, ಕಾರ್ಬೋಹೈಡ್ರೇಟ್‌ಗಳು ಹೊಂದಿರುವ ಅಗಸೆಬೀಜ, ಓಟ್ಸ್, ಬೀಜಗಳು, ಧಾನ್ಯಗಳಂತಹ ಫೈಬರ್ ಭರಿತ ಆಹಾರಗಳು ಋತುಚಕ್ರದ ನಂತರ ಮಹಿಳೆಯರನ್ನು ಬಲಿಷ್ಠಗೊಳಿಸುವಲ್ಲಿ ಸಹಕರಿಸುತ್ತವೆ.
Published by:ranjumbkgowda1 ranjumbkgowda1
First published: