• Home
  • »
  • News
  • »
  • lifestyle
  • »
  • Fruits: ಹಣ್ಣುಗಳನ್ನು ತಿನ್ನುವಾಗ ಈ ನಾಲ್ಕು ತಪ್ಪುಗಳನ್ನು ಖಂಡಿತ ಮಾಡಬೇಡಿ

Fruits: ಹಣ್ಣುಗಳನ್ನು ತಿನ್ನುವಾಗ ಈ ನಾಲ್ಕು ತಪ್ಪುಗಳನ್ನು ಖಂಡಿತ ಮಾಡಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಣ್ಣು ತಿನ್ನೋದು ಅಂದ್ರೆ ಸಾಮಾನ್ಯವಾಗಿ ಎಲ್ರಿಗೂ ಇಷ್ಟ ಇರುತ್ತೆ. ಆದ್ರೆ ನೀವು ಹಣ್ಣುಗಳನ್ನು ತಿನ್ನುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇಬೇಡಿ.

  • Share this:

ತಾಜಾ ತಾಜಾ ಹಣ್ಣುಗಳೆಂದರೆ (Fresh Fruits) ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ?ಕಿರಿಯರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಒಂದಿಲ್ಲ ಒಂದು ಬಗೆಯ ಹಣ್ಣಿನ ಅಭಿಮಾನಿಗಳಾಗಿಯೇ ಇರುತ್ತಾರೆ. ಹಣ್ಣುಗಳು ಕೇವಲ ಬಾಯಲ್ಲಿ ರುಚಿ ನೀಡುವಂತಹ ವಸ್ತುಗಳಲ್ಲ ಬದಲಾಗಿ ಆರೋಗ್ಯವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಆರೋಗ್ಯದ ವಿಷಯದಲ್ಲಿ ಹೇಳುವುದಾದರೆ, ಹಣ್ಣು ತೂಕ ಇಳಿಸುವಿಕೆಯಲ್ಲಿ ಸಾಕಷ್ಟು ಪ್ರಮುಖವಾಗಿವೆ, ಏಕೆಂದರೆ ಹಣ್ಣುಗಳಲ್ಲಿ ಕಡಿಮೆ ಕ್ಯಾಲೊರಿ, ಹೆಚ್ಚಿನ ಫೈಬರ್ ಹಾಗೂ ಬಹಳಷ್ಟು ನೀರಿನಂಶವಿರುತ್ತದೆ. ಅಷ್ಟೇ ಅಲ್ಲದೆ ಇತರೆ ಹಲವು ಬಗೆಯ ಪೋಷಕಾಂಶಗಳೂ ಸಹ ಹಣ್ಣುಗಳಲ್ಲಿ ಸಮೃದ್ಧವಾಗಿರುವುದರಿಂದ ಅನೇಕರು ತ್ವರಿತ ಉಪಹಾರವನ್ನಾಗಿಯೂ ಸೇವಿಸುತ್ತಾರೆ ಎಂದು ಹೇಳಬಹುದು.


ಆದರೆ, ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಸಹ ಬಲು ಮುಖ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. ಹೌದು, ನಾವು ಹಣ್ಣುಗಳನ್ನು ಸೇವಿಸುವಾಗ ಗೊತ್ತಿಲ್ಲದೆಯೇ ಅನೇಕ ಬಗೆಯ ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ನಮಗೆ ಬೇಕಾದ ಪ್ರಯೋಜನಗಳು ಸಮರ್ಪಕವಾಗಿ ಲಭಿಸುವುದಿಲ್ಲ. ಹಾಗಾಗಿ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯವಾಗುತ್ತದೆ. ಈ ಕುರಿತು ನಾವು ಮಾಡುವ ತಪ್ಪುಗಳನ್ನು ನೋಡುವುದಾದರೆ...


1. ಊಟದೊಂದಿಗೆ ಹಣ್ಣುಗಳ ಸೇವನೆ


ಸಾಮಾನ್ಯವಾಗಿ ನಮ್ಮಲ್ಲಿ ಬಹಳಷ್ಟು ಜನರು ಊಟದೊಂದಿಗೆ ಹಣ್ಣುಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದು ಉತ್ತಮ ರೂಢಿಯಲ್ಲ. ಏಕೆಂದರೆ, ಊಟ ಮಾಡಿದಾಗ ನಮ್ಮ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳೊಂದಿಗೆ ಹಣ್ಣೂ ಸಹ ಸೇರಿಬಿಡುತ್ತದೆ.


ಈ ಸಂದರ್ಭದಲ್ಲಿ ನಮ್ಮ ಹೊಟ್ಟೆಯಲ್ಲಿ ಆಹಾರ ಜೀರ್ಣಿಸಲು ಉತ್ಪತ್ತಿಯಾಗುವ ಜೀರ್ಣ ಕ್ರಿಯೆ ಉತ್ತೇಜಿಸುವ ರಸಗಳು ಹಣ್ಣಿನೊಂದಿಗೆ ಬೆರೆತು ಫರ್ಮೆಂಟೆಷನ್ ಆಗಿ ವಿಷಕಾರಿಯಾಗಿ ಬಿಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ತಲೆದೋರಬಹುದು.


2. ರಾತ್ರಿಯಲ್ಲಿ ಹಣ್ಣುಗಳ ಸೇವನೆ


ಸಾಮಾನ್ಯವಾಗಿ ಮಲಗುವ 2-3 ಗಂಟೆಗಳಷ್ಟು ಮುಂಚಿತವೇ ಆಹಾರ ಸೇವಿಸಬೇಕೆಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ, ಏಕೆಂದರೆ ಜೀರ್ಣ ಕ್ರಿಯೆಗೆ ಯಾವುದೇ ಆಡಿಯಾಗಬಾರದೆಂಬ ಉದ್ದೇಶದಿಂದ. ಅದೇ ರೀತಿ ಮಲಗುವ ಕೊಂಚ ಸಮಯದ ಮುಂಚೆಯೇ ಹಣ್ಣುಗಳನ್ನು ಸೇವಿಸುವುದು ಅಪಾಯಕರ.


ಇದನ್ನೂ ಓದಿ: ಸ್ತ್ರೀಯರಲ್ಲಿ ಈ 5 ಕ್ಯಾನ್ಸರ್ ಗಳು ಹೆಚ್ಚಾಗುತ್ತಿವೆ, ಕಾರಣ ಇಲ್ಲಿದೆ


ಏಕೆಂದರೆ, ಹಣ್ಣುಗಳಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾಗಿರುತ್ತದೆ. ಇದರಿಂದ ಸಾಕಷ್ಟು ಶಕ್ತಿ ಉತ್ಪತ್ತಿಯಾಗುತ್ತದೆ. ನಾವು ಮಲಗಿದಾಗ ಶರೀರದಲ್ಲಿ ಶಕ್ತಿಯ ಉತ್ಪನ್ನ ನಿದ್ರೆಗೆ ಸಾಕಷ್ಟು ಭಗ್ನ ಉಂಟು ಮಾಡುತ್ತದೆ. ಹಾಗಾಗಿ ರಾತ್ರಿಯಲ್ಲಿ ಮಲಗುವ ಸ್ವಲ್ಪ ಹೊತ್ತಿನ ಮುಂಚೆ ಹಣ್ಣು ಸೇವಿಸದೆ ಇರುವುದು ಉತ್ತಮ.


3. ಹಣ್ಣು ತಿಂದ ತಕ್ಷಣ ನೀರು ಕುಡಿಯುವುದು


ಕೆಲವರು ಯಾವುದೇ ಹಣ್ಣು ತಿಂದ ತಕ್ಷಣ ನೀರು ಕುಡಿಯುತ್ತಾರೆ. ಸಾಮಾನ್ಯವಾಗಿ ಆರೆಂಜ್, ಕಲ್ಲಂಗಡಿ, ಮಸ್ಕ್ ಮೆಲಾನ್ ಗಳಂತಹ ಹಣ್ಣು ನೀರಿನಂಶದಿಂದ ಸಮೃದ್ಧವಾಗಿರುತ್ತದೆ. ಇವುಗಳ ಸೇವನೆಯ ನಂತರ ಮತ್ತೆ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿರುವ pH ಮಟ್ಟದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ಅನವಶ್ಯಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.


4. ತೊಗಟೆಯೊಂದಿಗೆ ಹಣ್ಣು ಸೇವಿಸದೆ ಇರುವುದು


ಸಾಮಾನ್ಯವಾಗಿ ಗಟ್ಟಿಯಾದ ತೊಗಟೆಗಳುಳ್ಳ ಹಣ್ಣುಗಳಿದ್ದಾಗ ಅದರ ತೊಗಟೆ ತೆಗೆದು ಹಣ್ಣು ಸೇವಿಸುತ್ತೇವೆ. ಆದರೆ, ಕೆಲ ತೆಳುವಾದ ತೊಗಟೆಗಳುಳ್ಳ/ಪ್ದರಗಳುಳ್ಳ ಹಣ್ಣುಗಳನ್ನು ಹಾಗೆಯೇ ಸೇವಿಸಬಹುದಾಗಿದ್ದು ಬಹಳಷ್ಟು ಜನರು ಹಾಗೆ ಮಾಡುವುದಿಲ್ಲ.




ಉದಾಹರಣೆಗೆ ಸೇಬು. ಸೇಬು ಹಣ್ಣಿನ ಮೇಲ್ಪದರವು ತಿನ್ನಬಹುದಾಗಿದ್ದು ವಾಸ್ತವದಲ್ಲಿ ಅದರ ಚರ್ಮದಲ್ಲಿಯೇ ಸಾಕಷ್ಟು ಆಂಟಿ-ಆಕ್ಸಿಡೆಂಟ್ ಗಳಿರುತ್ತವೆ. ಆದರೆ, ನಮ್ಮಲ್ಲಿ ಬಹುತೇಕರು ಅದರ ಮೇಲ್ಪದರವನ್ನು ತೆಗೆದು ಸೇಬುವನ್ನು ಸೇವಿಸುತ್ತೇವೆ.


ಹಾಗಾಗಿ, ಸೇಬು ಹಣ್ಣನ್ನು ಇಡೀಯಾಗಿ ತಿನ್ನುವುದು ಆರೋಗ್ಯಕ್ಕೆ ಸಾಕಷ್ಟು ಸಹಕಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.


ಈ ಮೇಲಿನ ಅಂಶಗಳನ್ನು ಸರಿಯಾಗಿ ಗಮನಿಸಿ, ಮುಂದಿನ ಬಾರಿ ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ. ಇದರಿಂದ ಹಣ್ಣಿನಲ್ಲಿರುವ ಎಲ್ಲ ಬಗೆಯ ಆರೋಗ್ಯವರ್ಧಕ ಅಂಶಗಳು ಸಮರ್ಪಕವಾಗಿ ನಿಮ್ಮ ಶರೀರಕ್ಕೆ ತಲುಪಿ ನಿಮಗೆ ಹೆಚ್ಚಿನ ಪ್ರಯೋಜನ ದೊರೆಯುವುದು ಖಚಿತ.

First published: