Diabetes Food: ಮಧುಮೇಹಿಗಳ ಮಧ್ಯಾಹ್ನದ ಊಟ ಹೇಗಿರಬೇಕು? ಯಾವ ಆಹಾರ ಉತ್ತಮ ಎನ್ನುತ್ತಾರೆ ತಜ್ಞರು?

ಮಧುಮೇಹಿಗಳು ಸಕ್ಕರೆ ಅಷ್ಟೇ ಅಲ್ಲ, ಸಾಮಾನ್ಯ ದಿನನಿತ್ಯದ ಆಹಾರಗಳ ಸೇವನೆ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ರಕ್ತದ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಪ್ರತಿ ಆಹಾರವನ್ನು ತಿನ್ನುವ ಮೊದಲು ಬಹಳ ಜಾಗರೂಕರಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಲವರಿಗೆ ಆಹಾರ (Food) ಅಂದ್ರೆ ತುಂಬಾ ಇಷ್ಟ (Like). ಒಬ್ಬ ವ್ಯಕ್ತಿಗೆ (Person) ಮಧುಮೇಹ (Diabetes) ಇದ್ರೆ ಆತ ತುಂಬಾ ಎಚ್ಚರಿಕೆಯಿಂದ (Careful) ಇರಬೇಕಾಗುತ್ತದೆ. ಅದರಲ್ಲೂ ತಿನ್ನುವ (Eating) ಹಾಗೂ ಕುಡಿಯುವ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಏಕೆಂದರೆ ಅನಾರೋಗ್ಯಕರ ಆಹಾರ ಸೇವನೆ, ಬೇಕಾ ಬಿಟ್ಟಿ ತಿನ್ನುವುದು ರಕ್ತದ ಸಕ್ಕರೆ ಮಟ್ಟ ಹೆಚ್ಚಿವಂತೆ ಮಾಡುತ್ತದೆ. ಸರಳವಾಗಿ ಮನೆಯಲ್ಲಿ ತಯಾರಿಸಿದ ಊಟ ಮತ್ತು ಸರಿಯಾದ ಆಹಾರ ಸೇವನೆ ನಿಮ್ಮನ್ನು ಮಧಮೇಹ ಕಾಯಿಲೆಯಿಂದ ದೂರ ಇಡಲು ಸಾಧ್ಯ. ಆಹಾರದ ಆಯ್ಕೆ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಸುಲಭ.

  ದಿನನಿತ್ಯದ ಆಹಾರಗಳ ಸೇವನೆ ಬಗ್ಗೆ ಮಧುಮೇಹಿಗಳು ಎಚ್ಚರಿಕೆ ವಹಿಸಿ

  ಮಧುಮೇಹಿಗಳು ಸಕ್ಕರೆ ಅಷ್ಟೇ ಅಲ್ಲ, ಸಾಮಾನ್ಯ ದಿನನಿತ್ಯದ ಆಹಾರಗಳ ಸೇವನೆ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ರಕ್ತದ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಪ್ರತಿ ಆಹಾರವನ್ನು ತಿನ್ನುವ ಮೊದಲು ಬಹಳ ಜಾಗರೂಕರಾಗಿರಬೇಕು.

  ರಕ್ತದ ಸಕ್ಕರೆ ಮಟ್ಟ ನಿಯಂತ್ರಣ ಮಾಡಬೇಕಾದವರು ಮಧ್ಯಾಹ್ನದ ಊಟದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ಊಟ ಆರೋಗ್ಯಕರವಾಗಿರಬೇಕು. ಮಧುಮೇಹಿಗಳು ರಕ್ತದ ಸಕ್ಕರೆ ಹೆಚ್ಚಳ ತಡೆಗೆ ಈ ರೀತಿಯ ಆಹಾರ ಸೇವನೆ ಸಹಾಯಕವಾಗಿದೆ.

  ಇದನ್ನೂ ಓದಿ: ಚರ್ಮದ ಟ್ಯಾಗ್‌ ಮತ್ತು ನರಹುಲಿ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

  ಮಧ್ಯಾಹ್ನದ ಊಟದಲ್ಲಿ ಆರೋಗ್ಯಕರ ರೊಟ್ಟಿ ತಿನ್ನಿ

  ಮಧುಮೇಹಿಗಳು ಅನ್ನಕ್ಕಿಂತ ರೊಟ್ಟಿ ಸೇವನೆ ಮಾಡಬೇಕು. ತಮ್ಮ ಆಹಾರದಲ್ಲಿ ರೊಟ್ಟಿ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಅಕ್ಕಿ ಹೆಚ್ಚಾಗಿ ರಕ್ತದ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಕ್ಕಿ ಇಲ್ಲದೆ ಬದುಕಲು ಸಾಧ್ಯವಾಗದ ಜನರಲ್ಲಿ ನೀವು ಒಬ್ಬರಾಗಿದ್ದರೆ ಕಡಿಮೆ ಮಾಡುವಂತೆ ತಜ್ಞರು ಸಲಹೆ ನೀಡುತ್ತಾರೆ.

  ನೀವು ಅಕ್ಕಿ ಬದಲಿಗೆ ಕ್ವಿನೋವಾ ತಿನ್ನಬಹುದು. ಇದು ನಿಜವಾಗಿಯೂ ಮಧುಮೇಹ ರೋಗಿಗಳಿಗೆ ತುಂಬಾ ಸುರಕ್ಷಿತ. ನೀವು ಊಟಕ್ಕೆ ರೊಟ್ಟಿ ಸೇವನೆ ಮಾಡುತ್ತಿದ್ದರೆ ಗೋಧಿಯ ಬದಲಿಗೆ ಜೋಳ, ಓಟ್ಸ್, ರಾಗಿ, ಬಜ್ರಾ, ಮೂಂಗ್ ಮತ್ತು ಹಸಿರು ಬಟಾಣಿ ಆರಿಸಿಕೊಳ್ಳಿ.

  ಬೆಂಡೆಕಾಯಿ, ಹಾಗಲಕಾಯಿ, ಸೋರೆಕಾಯಿ ಮತ್ತು ಕುಂಬಳಕಾಯಿ ತರಕಾರಿ ಸೇವಿಸಿ

  ಪಿಷ್ಟದಲ್ಲಿ ಸಮೃದ್ಧವಾಗಿರುವ ಆಹಾರ ಮಧುಮೇಹಿಗಳಿಗೆ ಒಳ್ಳೆಯದು. ಆಲೂಗಡ್ಡೆ, ಗೆಣಸು ಮತ್ತು ಸಿಹಿ ಗೆಣಸು ಹೊರತುಪಡಿಸಿ ಎಲ್ಲಾ ರೀತಿಯ ತರಕಾರಿಗಳನ್ನು ಸೇವಿಸಬಹುದು. ಬೆಂಡೆಕಾಯಿ, ಹಾಗಲಕಾಯಿ, ಬದನೆ, ಪಾಲಕ್, ಬೀನ್ಸ್, ಅಣಬೆ, ಕ್ಯಾಪ್ಸಿಕಂ, ಬಟಾಣಿ, ಕ್ಯಾರೆಟ್, ಲೆಟಿಸ್,ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಬೇಕಾದ ಅತ್ಯುತ್ತಮ ತರಕಾರಿಗಳಲ್ಲಿ ಹೂಕೋಸು ಒಂದಾಗಿದೆ.

  ಈರುಳ್ಳಿ-ಟೊಮೆಟೋ-ಸೌತೆಕಾಯಿ ಸಲಾಡ್

  ಸಲಾಡ್ ಜಿಐ ಕಡಿಮೆ ಮತ್ತು ಫೈಬರ್ ಅಧಿಕ ಹೊಂದಿರುತ್ತದೆ. ಊಟದ ಜೊತೆಗೆ ನಾರಿನ ಸಲಾಡ್ ನಿಮ್ಮ ಊಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ರಕ್ತದ ಸಕ್ಕರೆಯ ಹೆಚ್ಚಳ ತಡೆಯಬಹುದು.

  ವ್ಯಕ್ತಿಯು ಈರುಳ್ಳಿ-ಟೊಮ್ಯಾಟೊ-ಸೌತೆಕಾಯಿ ಸಲಾಡ್, ಎಲೆಕೋಸು-ಕ್ಯಾರೆಟ್ ಸಲಾಡ್, ಕಚುಂಬರ್ ಮತ್ತು ಪಾಲಕ ಸಲಾಡ್ ಅಥವಾ ಯಾವುದೇ ಇತರ ಸಲಾಡ್ ಅನ್ನು ತೆಗೆದುಕೊಳ್ಳಬಹುದು, ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಿ.

  ಈ ರೀತಿಯ ದಾಲ್ ತಿನ್ನಿರಿ

  ಬೇಳೆಕಾಳು ಸೇವಿಸುವುದು ಮಧುಮೇಹ ರೋಗಿಗಳಿಗೆ ತಮ್ಮ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಉತ್ತಮ ಮಾರ್ಗವಾಗಿದೆ. ಮಧುಮೇಹಿಗಳು ಮಧ್ಯಾಹ್ನದ ಊಟದಲ್ಲಿ ಬೇಳೆಕಾಳು, ಉದ್ದಿನಬೇಳೆ, ಮೂಂಗ್ ಬೇಲ್, ಮಸೂರ್ ದಾಲ್, ಪಾಲಕ್ ಸೊಪ್ಪು ಮತ್ತು ಕಿಡ್ನಿ ಬೀನ್ಸ್ ಮತ್ತು ಕಡಲೆ ಸಹ ತಿನ್ನಬಹುದು.

  ಇದನ್ನೂ ಓದಿ: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ

  ಮಧ್ಯಾಹ್ನದ ಊಟದಲ್ಲಿ ಮೊಳಕೆಕಾಳು ತಿನ್ನಿ

  ಮೊಳಕೆ ಕಾಳು ಕಡಿಮೆ ಕ್ಯಾಲೋರಿ ಊಟವಾಗಿದೆ. ಮಧುಮೇಹ ಹೊಂದಿವರ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪಿಷ್ಟದ ಅಂಶವನ್ನು ಮತ್ತು ಹೆಚ್ಚಿನ ಫೈಬರ್ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.
  Published by:renukadariyannavar
  First published: