ಲೈಂಗಿಕ ಸಂಬಂಧದ ಕುರಿತು ನೀವು ತಿಳಿದಿರಲೇಬೇಕಾದ ಕೆಲ ಸಂಗತಿಗಳು

news18
Updated:December 1, 2018, 7:27 AM IST
ಲೈಂಗಿಕ ಸಂಬಂಧದ ಕುರಿತು ನೀವು ತಿಳಿದಿರಲೇಬೇಕಾದ ಕೆಲ ಸಂಗತಿಗಳು
news18
Updated: December 1, 2018, 7:27 AM IST
ಭಾರತದಂತಹ ಸಂಪ್ರದಾಯಬದ್ಧ ರಾಷ್ಟ್ರಗಳಲ್ಲಿ ಲೈಂಗಿಕ ಜೀವನದ ಕುರಿತು ಕೆಲವೊಂದು ತಪ್ಪು ಕಲ್ಪನೆಗಳಿವೆ. ಇಲ್ಲಿ ಪುರುಷರು ಲೈಂಗಿಕ ತೃಪ್ತಿಯೊಂದಿಗೆ ಮಹಿಳೆಯರು ಕೂಡ ಸಂತೃಪ್ತಿ ಹೊಂದುತ್ತಾರೆ ಎಂದು ಭಾವಿಸುತ್ತಾರೆ.  ಆದರೆ ಕೇವಲ ಲೈಂಗಿಕ ಕ್ರಿಯೆಯಿಂದ ಮಹಿಳೆಯರು ಪರಾಕಾಷ್ಠೆಯನ್ನು ತಲುಪಿ ಲೈಂಗಿಕ ಸಂತೃಪ್ತಿ ಪಡೆಯುತ್ತಾರೆ ಎಂಬುದು ತಪ್ಪು ಕಲ್ಪನೆ. ಏಕೆಂದರೆ ಲೈಂಗಿಕ ಬಂಧಕ್ಕಿಂತ ಮಹಿಳೆಯರು ಇನ್ನಿತರ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ ಎಂಬುದನ್ನು ಲೈಂಗಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಲೈಂಗಿಕ ಚಟುವಟಿಕೆಯ ವೇಳೆ ಕೆಲ ವಿಷಯಗಳ ಬಗ್ಗೆ ಗಮನ ಹರಿಸುವುದರಿಂದ ಮಹಿಳೆಯರನ್ನು ಹೆಚ್ಚು ಸಂತೃಪ್ತಿ ಪಡಿಸಬಹುದು. ಅಂತಹ ಕೆಲ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

ಮಹಿಳೆಯರ ಪರಾಕಾಷ್ಠೆ
ಕೇವಲ ಲೈಂಗಿಕ ಬಂಧದಲ್ಲಿ ಏರ್ಪಡುವುದರಿಂದ ಮಹಿಳೆಯರು ಪರಾಕಾಷ್ಠೆಯನ್ನು ತಲುಪುವುದಿಲ್ಲ. ಪುರುಷರ ಜನಾಂಗದಿಂದ ಶೇ.25 ರಷ್ಟು ಮಹಿಳೆಯರು ಮಾತ್ರ ಲೈಂಗಿಕ ತೃಪ್ತಿ ಹೊಂದುತ್ತಾರೆ ಎನ್ನಲಾಗಿದೆ. ಹೆಚ್ಚಿನ ಮಹಿಳೆಯರು ಚಂದ್ರನಾಡಿಯ ಉತ್ತೇಜನವನ್ನು ಬಯಸುತ್ತಾರೆ. ಹೀಗಾಗಿ ಸಂಗಾತಿಯೊಂದಿಗೆ ಚರ್ಚಿಸಿ ಅವರನ್ನು ತೃಪ್ತಿ ಪಡಿಸಿಕೊಳ್ಳಬೇಕಾಗುತ್ತದೆ.

ಅಲೋಚನೆ ಮತ್ತು ಸಂತೃಪ್ತಿ

ಲೈಂಗಿಕ ಸಂಪರ್ಕದ ಬಗ್ಗೆ ನಿಮ್ಮ ಸಂಗಾತಿಗಳಲ್ಲೂ ಕೆಲವೊಂದು ಕಲ್ಪನೆಗಳಿರುತ್ತದೆ. ಇಂತಹ ಸಂದರ್ಭದಲ್ಲಿ ಅವರ ಮನದಲ್ಲಿ ಮೂಡುವ ಆಸೆ ಆಕಾಂಕ್ಷೆಗಳನ್ನು ನೀವು ತಿಳಿದುಕೊಳ್ಳಬೇಕು. ಲೈಂಗಿಕ ಕ್ರಿಯೆಯ ವೇಳೆ ಹೇಗೆ ಪ್ರಚೋದನೆಗೊಳ್ಳುತ್ತಾರೆ ಎಂಬುದನ್ನು ಅರಿತು ಅವರೊಂದಿಗೆ ಸಂಪರ್ಕ ಹೊಂದಬೇಕು.

ಉತ್ತಮ ಭಾವನೆ ಮೂಡಿಸುವುದು
ಸಂಗಾತಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಹೊಂದಿದ್ದರೆ ಮಾತ್ರ ಅವರು ಲೈಂಗಿಕ ತೃಪ್ತಿ ಹೊಂದುತ್ತಾರೆ. ಪರಾಕಾಷ್ಠೆ ಎಂಬುದು ಮೆದುಳಿಗೆ ಸಂಬಂಧಿಸಿದ ವಿಷಯವಾಗಿದ್ದು, ನೀವು ಅನೋನ್ಯತೆಯಿಂದ ಇದ್ದರೆ ಮಹಿಳೆಯರ ಹಾರ್ಮೋನುಗಳು ಹೆಚ್ಚು ಬಿಡುಗಡೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸುಖ ಪಡೆಯುತ್ತಾರೆ.
Loading...

ಆರೋಗ್ಯ ಮತ್ತು ಲೈಂಗಿಕ ಸಾಮರ್ಥ್ಯ
ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯ ದುರ್ಬಲವಾಗಿದ್ದರೆ ಅದರಿಂದ ಕೂಡ ಮಹಿಳೆಯರು ಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ನಿಮ್ಮ ಲೈಂಗಿಕ ಕ್ರಿಯೆಯು ಮಹಿಳೆಯ ಆಕಾಂಕ್ಷೆಯನ್ನು ಕೆರಳಿಸುವಂತಿದ್ದರೆ ಮಾತ್ರ ಅವರು ಸಂತೃಪ್ತಿ ಹೊಂದುತ್ತಾರೆ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಕೂಡ ಲೈಂಗಿಕ ಸಾಮರ್ಥ್ಯ ಹೆಚ್ಚಿಸಬಹುದು. ನಮ್ಮ ಆರೋಗ್ಯವು ಉತ್ತವಾಗಿದಷ್ಟು ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ರೋಮಾನ್ಸ್ ಮಾಡಿ
ಮಹಿಳೆಯರು ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸುವ ಮೊದಲು ರೋಮ್ಯಾನ್ಸ್​ನ್ನು ಬಯಸುತ್ತಾರೆ. ಅವರೊಂದಿಗೆ ರೋಮ್ಯಾಂಟಿಕ್ ಆಗಿ ಮಾತನಾಡುವ ಮೂಲಕ ಮತ್ತು ಅವರ ದೇಹದ ಪ್ರತಿ ಭಾಗವನ್ನು ಸ್ಪರ್ಶಿಸಿ ಅವರನ್ನು ಸೆಕ್ಸ್​ ಕ್ರಿಯೆಗೆ ಉತ್ತೇಜಿಸಬಹುದು. ಹೆಚ್ಚು ಹೊತ್ತು ರೋಮ್ಯಾನ್ಸ್ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮಹಿಳೆಯರು ಪರಾಕಾಷ್ಠೆಯನ್ನು ಬೇಗ ಪಡೆಯುತ್ತಾರೆ.

ಇದನ್ನೂ ಓದಿ: ಈ ಬ್ಯಾಂಕಲ್ಲಿ ಸಾಲ ಬೇಕಾದರೆ ಬೆತ್ತಲೆ ಫೋಟೊ ನೀಡಬೇಕು, ಮರುಪಾವತಿ ಮಾಡದಿದ್ದರೆ ಫೋಟೋ ಲೀಕ್..!

ಶೀಘ್ರದ ಸ್ಖಲನ
ಲೈಂಗಿಕ ಕ್ರಿಯೆ ವೇಳೆ ಶೀಘ್ರ ಸ್ಖಲನವನ್ನು ಮಾಡಬೇಡಿ. ಮಹಿಳೆಯರು ಪರಾಕಾಷ್ಠೆಯನ್ನು ತಲುಪುವ ವೇಳೆ ನೀವು ಸ್ಖಲನ ಮಾಡಿಕೊಂಡರೆ ಅವರಲ್ಲಿ ನಿರಾಸೆ ಭಾವನೆ ಮೂಡುತ್ತದೆ. ಹಾಗಾಗಿ ಅವರನ್ನು ಹೆಚ್ಚು ತೃಪ್ತಿಪಡಿಸಲು ಪ್ರಯತ್ನಿಸಿ. ಲೈಂಗಿಕ ತಜ್ಞರನ್ನು ಭೇಟಿಯಾಗುವ ಮೂಲಕ ಶೀಘ್ರ ಸ್ಖಲನದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂತಹ ಸಮಸ್ಯೆಯಿದ್ದಲ್ಲಿ ಸಾಧ್ಯವಾದಷ್ಟು ಸಮಯ ರೋಮ್ಯಾನ್ಸ್ ಮಾಡಿ ನಂತರ ಲೈಂಗಿಕ ಸಂಪರ್ಕ ಬೆಳೆಸುವುದು ಉತ್ತಮ. ಇದರಿಂದ ಮಹಿಳೆಯರು ಪರಾಕಾಷ್ಠೆಯನ್ನು ತಲುಪಿ ಹೆಚ್ಚು ಸಂತೃಪ್ತಿ ಪಡೆಯುತ್ತಾರೆ.

ಇದನ್ನೂ ಓದಿ: ಬ್ಯಾಂಕ್​ಗಳ ಉಚಿತ ಸೇವೆಗಳಿಗೆ ಬ್ರೇಕ್: ಇನ್ಮುಂದೆ ಈ ಕೆಲಸಗಳಿಗೆ ಹಣ ಪಾವತಿಸಬೇಕು

First published:November 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ