• Home
  • »
  • News
  • »
  • lifestyle
  • »
  • Coffee: ನೀವು ಕಾಫಿ ಪ್ರಿಯರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಸಂತಸದ ಸುದ್ದಿ!

Coffee: ನೀವು ಕಾಫಿ ಪ್ರಿಯರಾ? ಹಾಗಾದ್ರೆ ಇಲ್ಲಿದೆ ನೋಡಿ ನಿಮಗೆ ಸಂತಸದ ಸುದ್ದಿ!

ಕಾಫಿ

ಕಾಫಿ

Coffee: ಹೌದು ಇತ್ತೀಚಿಗೆ ನಡೆದ ಸಂಶೋಧನೆಯ ಪ್ರಕಾರ ಒಂದು ದಿನದಲ್ಲಿ ಎರಡರಿಂದ ಮೂರು ಕಪ್ ಕಾಫಿ ಸೇವನೆಯು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

  • Share this:

ಕಾಫಿಯ ಮೇಲೆ ಸಾಕಷ್ಟು ಸಂಶೋಧನೆಗಳು (Research) ನಡೆದಿವೆ. ಕಾಫಿಯಲ್ಲಿರೋ ಕೆಫೀನ್‌ ಒಳ್ಳೆಯದಾ ಕೆಟ್ಟದ್ದಾ? ದಿನವೂ ಕುಡಿಯಬಹುದಾ ಅಥವಾ ಕುಡಿಯಬಾರದಾ.. ಕುಡಿದರೆ ಎಷ್ಟು ಕಪ್‌ ಕಾಫಿ ಕುಡಿಯಬೇಕು ಹೀಗೆ ಕಾಫಿ (Coffee) ಆರೋಗ್ಯದ ಮೇಲೆ ಮಾಡುವಂಥ ಪರಿಣಾಮಗಳ ಕುರಿತು ಸಾಕಷ್ಟು ಅಧ್ಯಯನಗಳು (Study) ನಡೆದಿವೆ.ಇದೀಗ ಸಂಶೋಧಕರ ತಂಡ ಕಾಫಿಯಿಂದಾಗುವ ಮತ್ತೊಂದು ಮಹತ್ವದ ಆರೋಗ್ಯ (Health) ಪರಿಣಾಮವನ್ನು ಕಂಡುಹಿಡಿದಿದೆ. ಅದೇ, ದಿನದಲ್ಲಿ (Day) ಎರಡರಿಂದ ಮೂರು ಕಪ್‌ ಕಾಫಿ ಕುಡಿದರೆ ನಿಮ್ಮ ಜೀವಿತಾವಧಿ (Life Time) ಹೆಚ್ಚಾಗುತ್ತೆ.


ಹೌದು ಇತ್ತೀಚಿಗೆ ನಡೆದ ಸಂಶೋಧನೆಯ ಪ್ರಕಾರ, ಒಂದು ದಿನದಲ್ಲಿ ಎರಡರಿಂದ ಮೂರು ಕಪ್ ಕಾಫಿ ಸೇವನೆಯು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಹೃದ್ರೋಗಗಳು ಅಥವಾ ಹೃದಯರಕ್ತನಾಳದ ಕಾಯಿಲೆಗಳಾದ ಪರಿಧಮನಿಯ ಹೃದಯ ಕಾಯಿಲೆ, ರಕ್ತ ಕಟ್ಟಿ ಹೃದಯ ಸ್ಥಂಭನ ಮತ್ತು ರಕ್ತಕೊರತೆಯ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹಾಗಾಗಿ ಕಾಫಿಯನ್ನು ಜೀವನಶೈಲಿಯ ಒಂದು ಭಾಗವಾಗಿ ಪರಿಗಣಿಸಬೇಕು ಎಂದು ಅಧ್ಯಯನ ತಂಡ ಹೇಳಿದೆ.


ಕೆಫೀನ್ ರಹಿತ ಕಾಫಿ ಸೇವನೆ


ಆಸ್ಟ್ರೇಲಿಯಾದ ಬೇಕರ್ ಹಾರ್ಟ್ ಅಂಡ್ ಡಯಾಬಿಟಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಈ ಸಂಶೋಧನೆ ನಡೆದಿದೆ. ಅಧ್ಯಯನ ತಂಡವು 40 ರಿಂದ 69 ವರ್ಷ ವಯಸ್ಸಿನ ವಯಸ್ಕರ ಬಗ್ಗೆ ಯುಕೆ ಬಯೋಬ್ಯಾಂಕ್‌ನ ಡೇಟಾವನ್ನು ಬಳಸಿಕೊಂಡು ಕಾಫಿ, ಅನಿಯಮಿತ ಹೃದಯ ಬಡಿತ, ಹೃದಯ ರಕ್ತನಾಳದ ಕಾಯಿಲೆ ಮತ್ತು ಸಾವಿನ ನಡುವಿನ ಸಂಬಂಧ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ಲೇಖಕ ಪ್ರೊಫೆಸರ್ ಪೀಟರ್ ಕಿಸ್ಟ್ಲರ್ ಹೇಳುವುದೇನೆಂದರೆ ಹಿತ ಮಿತವಾದ ಕೆಫೀನ್‌ ರಹಿತ ಕಾಫಿ ಸೇವನೆ ಆರೋಗ್ಯಕರ ಜೀವನಶೈಲಿಯ ಭಾಗವೆಂದು ಪರಿಗಣಿಸಬೇಕು ಎನ್ನುತ್ತಾರೆ.


ಎಷ್ಟು ಕಪ್‌ ಕಾಫಿ ಕುಡಿಯಬೇಕು?


ಈ ಅಧ್ಯಯನವು ಕೇವಲ ಒಂದು ಅಥವಾ ಎರಡು ವಿಧದ ಕಾಫಿಗೆ ಸೀಮಿತವಾಗಿಲ್ಲ, ಎಲ್ಲಾ ರೀತಿಯ ಕಾಫಿಯು ಸಾವಿನ ಅಪಾಯವನ್ನು ಕಡಿಮೆ ಮಾಡಲು ಸಂಬಂಧಿಸಿದೆ ಎಂದು ಹೇಳಿದೆ. ದಿನಕ್ಕೆ ಎರಡರಿಂದ ಮೂರು ಕಪ್‌ಗಳ ಸೇವನೆಯಿಂದ ಹೆಚ್ಚಿನ ಸಾವಿನ ಅಪಾಯ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ. ಈ ದೊಡ್ಡ ಮಟ್ಟದ ಸಂಶೋಧನೆಯಲ್ಲಿ ಇನ್‌ ಸ್ಟಂಟ್‌ ಹಾಗೂ ಕೆಫೀನ್‌ ರಹಿತ ಕಾಫಿಯು ಹೃದಯ ರಕ್ತನಾಳದ ಕಾಯಿಲೆ ಹಾಗೂ ಅದರಿಂದ ಆಗುವ ಸಾವಿನ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ ಅಂತ ಸಂಶೋಧನಕಾರ ಕಿಸ್ಟ್ಲರ್‌ ಹೇಳುತ್ತಾರೆ.


ಇದನ್ನೂ ಓದಿ: ಪಪ್ಪಾಯಿ ಹಣ್ಣಿನ ಜೊತೆಗೆ ಅಪ್ಪಿ ತಪ್ಪಿಯೂ ಇವುಗಳನ್ನು ಸೇವಿಸಬೇಡಿ!


ಸಂಶೋಧನೆಯಲ್ಲಿ ತಿಳಿದಿದ್ದೇನು?


ಸಂಶೋಧನೆಯ ಫಾಲೋ-ಅಪ್ ಸಮಯದಲ್ಲಿ 43,173 ಅಂದರೆ ಶೇ. 9.6 ಜನರಲ್ಲಿ ಹೃದಯ ರಕ್ತನಾಳದ ಕಾಯಿಲೆ ಪತ್ತೆಯಾಗಿದೆ. ಆದರೆ, ಅಧ್ಯಯನದಿಂದ ಕಾಫಿಯ ಸೇವನೆಯು ಹೃದಯ ರಕ್ತನಾಳದ ಕಾಯಿಲೆಯ ಸಂಭವವನ್ನು ಕಡಿಮೆ ಮಾಡುತ್ತವೆ ಎಂದು ತಿಳಿದುಬಂದಿದೆ. ದಿನಕ್ಕೆ ಎರಡರಿಂದ ಮೂರು ಕಪ್‌ಗಳ ಕಾಫಿ ಸೇವನೆಯಿಂದ ಅಪಾಯ ಕಡಿಮೆ ಇರುವುದನ್ನು ಗಮನಿಸಲಾಗಿದೆ. ಇದು ಕಾಫಿಯಿಂದ ದೂರವಿರುವವರೊಂದಿಗೆ ಹೋಲಿಸಿದರೆ ಕೆಫಿನ್ ರಹಿತ, ಗ್ರೌಂಡ್ ಮಾಡಲಾದ ಹಾಗೂ ಇನ್ಸ್ಟಂಟ್ ಕಾಫಿಗಳೊಂದಿಗೆ ಕ್ರಮವಾಗಿ 6 ಪ್ರತಿಶತ, 20 ಪ್ರತಿಶತ ಮತ್ತು 9 ಪ್ರತಿಶತದಷ್ಟು ಕಡಿಮೆ ಹೃದಯರಕ್ತನಾಳದ ಕಾಯಿಲೆಯ ಸಾಧ್ಯತೆ ತೋರಿಸುತ್ತೆ.


ಕಾಫಿಯಲ್ಲಿ ಕೆಫಿನ್ ಪ್ರಾಮುಖ್ಯತೆ


ಅಂದಹಾಗೆ, ಕಾಫಿಯಲ್ಲಿ ಕೆಫಿನ್ ಅತ್ಯಂತ ಪ್ರಸಿದ್ಧವಾದ ಅಂಶವಾಗಿದ್ದರೂ, ಈ ಪಾನೀಯವು ನೂರಕ್ಕೂ ಹೆಚ್ಚು ಜೈವಿಕವಾಗಿ ಸಕ್ರಿಯವಾಗಿರುವ ಅಂಶಗಳನ್ನು ಒಳಗೊಂಡಿದೆ. ಆದ್ರೆ ಕಾಫಿಯಲ್ಲಿ ಕೆಫಿನ್ ಅಲ್ಲದಿರುವ ಅಂಶಗಳು ಸಾಕಷ್ಟು ಪ್ರಯೋಜನಕಾರಿಯಾಗಿವೆ. ಹೃದಯರಕ್ತನಾಳದ ಕಾಯಿಲೆ ಮತ್ತು ಜೀವಿತಾವಧಿ ನಡುವೆ ಕಂಡುಬರುವ ಸಕಾರಾತ್ಮಕ ಸಂಬಂಧಗಳಿಗೆ ಕಾರಣವಾಗಿವೆ ಎಂಬುದಾಗಿ ಹೇಳ್ತಾರೆ ಕಿಸ್ಟ್ಲರ್.


ಇದನ್ನೂ ಓದಿ: ಕಡಲೆಕಾಯಿ ಪ್ರತಿದಿನ ತಿಂದ್ರೆ ಪ್ರಯೋಜನಗಳ ಜೊತೆ ಸಮಸ್ಯೆ ಕೂಡ ಇದೆ


ಕಾಫಿಯಿಂದ ಆರೋಗ್ಯ ಪ್ರಯೋಜನ


ಅಲ್ಲದೇ "ನಮ್ಮ ಸಂಶೋಧನೆಗಳು ಎಲ್ಲಾ ವಿಧಗಳ ಸಾಧಾರಣ ಪ್ರಮಾಣದ ಕಾಫಿ ಪ್ರಿಯರನ್ನು ನಿರುತ್ಸಾಹಗೊಳಿಸಬಾರದು ಎಂದು ಸೂಚಿಸುತ್ತವೆ ಎಂದೂ ಅವರು ಹೇಳಿದ್ದಾರೆ. ಒಟ್ಟಾರೆ ಕಾಫಿ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಇವೆ ಅನ್ನೋದನ್ನು ಕೇಳಿ ಕಾಫಿ ಪ್ರಿಯರು ಹಿರಿ ಹಿರಿ ಹಿಗ್ಗಿರೋದಂತೂ ನಿಜ. ಆದ್ರೆ ಯಾವುದಾದರೂ ಹಿತ ಮಿತವಾಗಿದ್ದರೆ ಪ್ರಯೋಜನ ಹೆಚ್ಚು ಅನ್ನೋದನ್ನು ನೆನಪಿಡಬೇಕಷ್ಟೇ.

First published: