ಚಳಿಗಾಲದಲ್ಲಿ ಮಸಾಲೆ ಚಹಾ ಕುಡಿಯುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ. ಅಲ್ಲದೆ, ಇದು ಸ್ವಲ್ಪ ಸಮಯದವರೆಗೆ ಸಕ್ಕರೆ ಹಂಬಲವನ್ನು ಕಡಿಮೆ ಮಾಡುತ್ತದೆ. ಈ ಪ್ರಯೋಜನಗಳಿಗಾಗಿ, ಪ್ರತಿದಿನ ಎರಡು ಕಪ್ ಮಸಾಲೆಯುಕ್ತ ಚಹಾವನ್ನು ಸೇವಿಸುವುದು ಅವಶ್ಯಕ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಆನಂದ. ಒಂದು ಕಪ್ ಟೀ ಕುಡಿದರೆ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ. ಇದೀಗ ಗ್ರೀನ್ ಟೀ, ಬ್ಲೂ ಟೀ ಸೇರಿದಂತೆ ಹಲವು ವಿಭಿನ್ನ ಚಹಾಗಳು ಲಭ್ಯವಿದೆ. ಆದರೂ ಭಾರತೀಯ ಮಸಾಲೆಯಕ್ತ ಚಹಾದ ಸ್ವಾದವೇ ಬೇರೆ. ಅದರಲ್ಲೂ ಚಹಾದಲ್ಲಿ ಕೆಲವು ಮಸಾಲೆಗಳನ್ನು ಬೆರೆಸುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ಸಹ ಪಡೆಯಬಹುದು. ಅಡುಗೆ ಮನೆಯಲ್ಲಿ ಕಾಣಸಿಗುವ ಲವಂಗ, ಏಲಕ್ಕಿ, ಶುಂಠಿ, ದಾಲ್ಚಿನ್ನಿ ಮತ್ತು ತುಳಸಿ ಎಲೆಗಳನ್ನೇ ಬಳಸಿ ಅತ್ಯುತ್ತಮ ಮಸಾಲೆ ಚಹಾ ತಯಾರಿಸಬಹುದಾಗಿದೆ. ಇಂತಹ ಟೀಯನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ನೋಡೋಣ.

  ನೋವು ನಿವಾರಣೆ: ಮಸಾಲೆ ಟೀ ಕುಡಿಯುವುದರಿಂದ ದೇಹದಲ್ಲಿನ ಯಾವುದೇ ರೀತಿಯ ಉರಿಯೂತವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಇದಕ್ಕಾಗಿ ನೀವು ಚಹಾದಲ್ಲಿ ಶುಂಠಿ ಮತ್ತು ಲವಂಗ ಬಳಸಬೇಕು. 15 ನಿಮಿಷಗಳ ಕಾಲ ನೀರನ್ನು ಕುದಿಸಿದ ನಂತರ, ಈ ಮಸಾಲೆಗಳನ್ನು ನೀರಿನಲ್ಲಿ ಬೆರೆಸಬೇಕು. ಈ ಎರಡೂ ಮಸಾಲೆಗಳು ನೋವು ನಿವಾರಣೆಗೆ ಸಹಕಾರಿ.

  ಆಯಾಸ ನಿವಾರಣೆ:
  ನೀವು ದಿನವಿಡೀ ದಣಿದಿದ್ದರೆ, ಒಂದು ಕಪ್ ಮಸಾಲಾ ಚಹಾ ಕುಡಿಯಿರಿ. ನಿಮ್ಮ ಎಲ್ಲಾ ಆಯಾಸ ದೂರವಾಗುತ್ತದೆ. ಇದರಲ್ಲಿರುವ ಟ್ಯಾನಿನ್ ದೇಹವನ್ನು ನಿವಾರಿಸಲು ಸಹಾಯ ಮಾಡುತ್ತದೆ.

  ಕ್ಯಾನ್ಸರ್ ಅಪಾಯ ಕಡಿಮೆ: ಚಹಾದಲ್ಲಿ ಏಲಕ್ಕಿ, ಶುಂಠಿ ಮತ್ತು ದಾಲ್ಚಿನ್ನಿ ಮುಂತಾದ ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಹೊಟ್ಡೆ ಕ್ಯಾನ್ಸರ್​ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ಈ ಮಸಾಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್​ಗಳಿವೆ. ಇದು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದನ್ನು ನಿಯಮಿತವಾಗಿ ಸೇವಿಸಿದರೆ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.

  ಶೀತ ಮತ್ತು ಕೆಮ್ಮಿಗೆ ಪರಿಹಾರ: ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮನ್ನು ತಪ್ಪಿಸುವುದು ಸವಾಲಿನ ವಿಷಯವಲ್ಲ. ಮಸಾಲೆ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್ಸ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬಾಹ್ಯ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯಕ್ಕೆ ಶುಂಠಿ ಪ್ರಯೋಜನಕಾರಿಯಾಗಿದೆ. ಶೀತ ಇದ್ದರೆ, ಮಸಾಲೆ ಚಹಾವು ನಿಮ್ಮನ್ನು ಬೆಚ್ಚಗಿಡಲು ಸಹಕಾರಿಯಾಗಿದೆ.

  ಜೀರ್ಣಕಾರಿ ಶಕ್ತಿ: ಚಹಾದಲ್ಲಿ ಬಳಸುವ ಮಸಾಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿನ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದು ಆಮ್ಲಜನಕವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

  ಮಧುಮೇಹದ ಸಾಧ್ಯತೆ ಕಡಿಮೆ: ಮಧುಮೇಹವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ. ಅಲ್ಲದೆ, ಇದು ಸ್ವಲ್ಪ ಸಮಯದವರೆಗೆ ಸಕ್ಕರೆ ಹಂಬಲವನ್ನು ಕಡಿಮೆ ಮಾಡುತ್ತದೆ. ಈ ಪ್ರಯೋಜನಗಳಿಗಾಗಿ, ಪ್ರತಿದಿನ ಎರಡು ಕಪ್ ಮಸಾಲೆಯುಕ್ತ ಚಹಾವನ್ನು ಸೇವಿಸುವುದು ಅವಶ್ಯಕ.
  Published by:zahir
  First published: