Healthy Tips: ನಿಮ್ಮ ಹೃದಯದ ಬಗ್ಗೆ ಇರಲಿ ಕಾಳಜಿ, ಜೀವನಶೈಲಿಯನ್ನು ಹೀಗೆ ಬದಲಾಯಿಸಿಕೊಳ್ಳಿ

ಕೆಲವೊಬ್ಬರು ಈ ವ್ಯಾಯಾಮ ಮತ್ತು ತಾಲೀಮು ಮಾಡಲು ಜಿಮ್ ಗೆ ಹೋದಾಗ ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿರುವ ಘಟನೆಗಳು ಇತ್ತೀಚೆಗೆ ನೋಡಿದ್ದೇವೆ. ಹೌದು..ಈ ಎದೆನೋವು ಯಾವಾಗ? ಎಲ್ಲಿ? ಯಾರಿಗೆ? ಕಾಣಿಸಿಕೊಳ್ಳುತ್ತದೆ ಅಂತ ಊಹೆ ಸಹ ಮಾಡುವುದಕ್ಕೆ ಆಗುವುದಿಲ್ಲ, ಅಂತಹ ಒಂದು ಪರಿಸ್ಥಿತಿಗೆ ಇವತ್ತಿನ ಒತ್ತಡದ ಜೀವನಶೈಲಿ ಮತ್ತು ಜಂಕ್ ಫುಡ್ ನಮ್ಮನ್ನು ತಳ್ಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ನೀವು ಹೆಚ್ಚಾಗಿ ಈ ಕಾರ್ಡಿಯಕ್ ಅರೆಸ್ಟ್ (Cardiac arrest) ಎಂದರೆ ಹೃದಯ ಸ್ತಂಭನ ಮತ್ತು ಹೃದಯಾಘಾತವಾಗಿ ಜನರು ಸಾವನ್ನಪ್ಪಿರುವ ಘಟನೆಗಳು ಹಿಂದೆಗಿಂತಲೂ ಸ್ವಲ್ಪ ಜಾಸ್ತಿಯೇ ಕೇಳುತ್ತಿದ್ದೇವೆ ಅಂತ ನಿಮಗೆ ಖಂಡಿತವಾಗಿಯೂ ಅನ್ನಿಸಿರುತ್ತದೆ. ಕೆಲವೊಬ್ಬರು ಈ ವ್ಯಾಯಾಮ (Exercise) ಮತ್ತು ತಾಲೀಮು ಮಾಡಲು ಜಿಮ್ ಗೆ ಹೋದಾಗ ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿರುವ ಘಟನೆಗಳು ಇತ್ತೀಚೆಗೆ ನೋಡಿದ್ದೇವೆ. ಹೌದು..ಈ ಎದೆನೋವು ಯಾವಾಗ? ಎಲ್ಲಿ? ಯಾರಿಗೆ? ಕಾಣಿಸಿಕೊಳ್ಳುತ್ತದೆ ಅಂತ ಊಹೆ ಸಹ ಮಾಡುವುದಕ್ಕೆ ಆಗುವುದಿಲ್ಲ, ಅಂತಹ ಒಂದು ಪರಿಸ್ಥಿತಿಗೆ ಇವತ್ತಿನ ಒತ್ತಡದ ಜೀವನಶೈಲಿ (Stress Lifestyle) ಮತ್ತು ಜಂಕ್ ಫುಡ್ ನಮ್ಮನ್ನು ತಳ್ಳಿದೆ. ಈ ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ (Heart Attack) ಮುಖ್ಯ ಕಾರಣಗಳನ್ನು ನಾವು ತಿಳಿದುಕೊಂಡಿದ್ದೇವೆ.

ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿನ ಹೃದ್ರೋಗಗಳ ಪ್ರಕರಣಗಳನ್ನು ನೋಡಬಹುದು
ಕಳಪೆ ಜೀವನಶೈಲಿ ಮತ್ತು ತಪ್ಪಾದ ಆಹಾರ ಕ್ರಮ ಇವೆರಡರ ಜೊತೆಗೆ ಹೃದ್ರೋಗಗಳಿಗೆ ಕಾರಣವಾಗುವ ಅನೇಕ ಅಂಶಗಳಿವೆ. ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತದಲ್ಲಿ ಎರಡು ಮೂರು ಪಟ್ಟು ಹೆಚ್ಚಿನ ಶೇಕಡಾವಾರು ಹೃದ್ರೋಗಗಳ ಪ್ರಕರಣಗಳು ಸಂಭವಿಸುತ್ತವೆ ಅಂತ ಹೇಳಲಾಗುತ್ತಿದೆ. ಈ ದೃಷ್ಟಿಯಿಂದ, ಅನೇಕ ಜೀವನಶೈಲಿ ಅಭ್ಯಾಸಗಳು ಈ ಕಳಪೆ ಹೃದಯ ರಕ್ತನಾಳದ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ ಎಂದು ಇಲ್ಲಿನ ವೈದ್ಯರು ಹೇಳುತ್ತಾರೆ.

ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ಮುಖ್ಯಸ್ಥ ವಸಂತ್ ಕುಂಜ್ ಅವರ ಪ್ರಕಾರ, ದೇಶದಲ್ಲಿ ಹೃದ್ರೋಗಗಳ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕಾರ್ಡಿಯಾಲಜಿಯ ನಿರ್ದೇಶಕ ಮತ್ತು ಮುಖ್ಯಸ್ಥ ಡಾ.ತಪನ್ ಘೋಷ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿನ ಜನರು ಹೆಚ್ಚಾಗಿ ತಮ್ಮ 60 ರ ದಶಕದಲ್ಲಿ ಹೃದಯಾಘಾತವನ್ನು ಅನುಭವಿಸುತ್ತಾರೆ, ಆದರೆ ಭರತದಲ್ಲಿ ಹೃದಯ ಸ್ತಂಭನಗಳ ಪ್ರಕರಣಗಳನ್ನು ನಾವು 40 ಮತ್ತು 50 ವರ್ಷ ವಯಸ್ಸಿನವರಲ್ಲಿಯೂ ಸಹ ನೋಡುತ್ತಿದ್ದೇವೆ ಎಂದು ಇವರು ಹೇಳಿದ್ದಾರೆ.

ಇದನ್ನೂ ಓದಿ:  Pregnancy And Weight: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

"ಪರಿಧಮನಿಯ ಅಪಧಮನಿಯ ಕಾಯಿಲೆಗಳಿಗೆ ಬೇರೆ ಬೇರೆ ಅನೇಕ ಅಂಶಗಳಿವೆ. ನಮ್ಮ ದೇಶದಲ್ಲಿ, ನಾವು ಹೃದಯ ರಕ್ತನಾಳದ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದೇವೆ. ವಿನಾಶಕಾರಿ ವಿಷಯವೆಂದರೆ ಪಾಶ್ಚಿಮಾತ್ಯ ಜನಸಂಖ್ಯೆಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಹೆಚ್ಚಿನ ಹೃದಯಾಘಾತಗಳು ಗಂಟೆಗೊಮ್ಮೆ ಸಂಭವಿಸುತ್ತವೆ. ವಾಸ್ತವವಾಗಿ, ಅನೇಕ ಭಾರತೀಯರು ನಮ್ಮ ಸಹವರ್ತಿಗಳಿಗಿಂತ ಹತ್ತು ವರ್ಷ ಮುಂಚಿತವಾಗಿ ಹೃದಯಾಘಾತಕ್ಕೆ ಒಳಗಾಗುತ್ತಾರೆ" ಎಂದು ಡಾ. ಘೋಷ್ ಹೇಳಿದರು.

ಹೃದ್ರೋಗದ ಪ್ರಮುಖ ಕಾರಣಗಳು
ಧೂಮಪಾನ ಮಾಡುವುದು, ಮಧುಮೇಹ ಹೊಂದಿರುವುದು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು, ಅಧಿಕ ರಕ್ತದ ಕೊಲೆಸ್ಟ್ರಾಲ್ ಹೊಂದಿರುವುದು, ಮಾನಸಿಕ ಮತ್ತು ಸಾಮಾಜಿಕ ಅಂಶಗಳು, ಕಿಬ್ಬೊಟ್ಟೆಯ ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸದೆ ಇರುವುದು ಮತ್ತು ಅತಿಯಾದ ಮದ್ಯ ಸೇವನೆಯು ತುಂಬಾನೇ ಅಪಾಯಕಾರಿ ಅಂಶಗಳಾಗಿವೆ ಎಂದು ಡಾ. ಘೋಷ್ ಅವರು ಹೇಳುತ್ತಾರೆ.

ಹೃದಯವನ್ನು ಆರೋಗ್ಯಕರವಾಗಿಡುವುದು ಹೇಗೆ?
"ಈ ಮೇಲೆ ಹೇಳಿದಂತಹ ಎಲ್ಲಾ ಅಪಾಯದ ಅಂಶಗಳನ್ನು ದೂರವಿರಿಸಿಕೊಳ್ಳಲು ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಸಮಯ ಬಂದಾಗಿದೆ. ಇವುಗಳನ್ನು ತಪ್ಪದೆ ಅನುಸರಿಸಿದರೆ ನಮ್ಮ ದೇಶದಲ್ಲಿ ಹೃದ್ರೋಗವನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತದೆ" ಎಂದು ವೈದ್ಯರು ಹೇಳಿದರು.

ರಕ್ತದೊತ್ತಡ ನಿಯಂತ್ರದಲ್ಲಿರಬೇಕು
ನಿಮ್ಮ ರಕ್ತದೊತ್ತಡವನ್ನು (ಬಿಪಿ) ನಿಯಂತ್ರಿಸಿಕೊಳ್ಳಬೇಕು. ಸಾಮಾನ್ಯವಾದ ಬಿಪಿ 120/70 ಆಗಿದ್ದು, 120/75 ಕ್ಕಿಂತ ಹೆಚ್ಚು ಇದ್ದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಲೇ ಬೇಕು. ವಾಸ್ತವವಾಗಿ 140/90 ಬಿಪಿಯನ್ನು ಅಧಿಕ ರಕ್ತದೊತ್ತಡ ಅಥವಾ ‘ಹೈ ಬಿಪಿ’ ಎಂದು ಕರೆಯಲಾಗುತ್ತದೆ ಮತ್ತು ಅದಕ್ಕೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿದೆ.

ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಬಗ್ಗೆ ಗಮನ ಇರಲಿ
ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಸಹ 126 ಕ್ಕಿಂತ ಕಡಿಮೆ ಇರಬೇಕು. ಒಂದು ವೇಳೆ ರಕ್ತದ ಗ್ಲುಕೋಸ್ 200 ಕ್ಕಿಂತ ಹೆಚ್ಚಿದ್ದರೆ, ಅದನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ಮಧುಮೇಹದಲ್ಲಿ, ನಾವು ಮೆಮೊರಿ ಗ್ಲೂಕೋಸ್ ಅಥವಾ ಎಚ್‌ಬಿಎ 1ಸಿ ಅಂತ ಅಳೆಯುತ್ತೇವೆ, ಇದನ್ನು 6.5 ಪ್ರತಿಶತಕ್ಕಿಂತ ಕಡಿಮೆ ಇಡಬೇಕು ಮತ್ತು ದೀರ್ಘಕಾಲೀನ ಸಂಕೀರ್ಣತೆಯನ್ನು ತಡೆಗಟ್ಟಲು ಆದ್ಯತೆಯಾಗಿ 7 ಪ್ರತಿಶತಕ್ಕಿಂತ ಕಡಿಮೆ ಇರಬೇಕು.

ಮಾನಸಿಕ ಸಾಮಾಜಿಕ ಅಂಶಗಳು ಹೃದಯದ ಆರೋಗ್ಯದ ಬಗ್ಗೆ ಎಚ್ಚರ ಇರಲಿ 
ಮಾನಸಿಕ ಸಾಮಾಜಿಕ ಅಂಶಗಳು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. "ನಾವು ಸಾಮಾಜಿಕ ಸಂವಹನವನ್ನು ಹೊಂದಿರಬೇಕು. ದೈನಂದಿನ ಒತ್ತಡವನ್ನು ತಡೆಗಟ್ಟಬೇಕು. ನಾವು ದಿನಕ್ಕೆ 7 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ನಮ್ಮನ್ನು ಸಂತೋಷಪಡಿಸುವ ಚಟುವಟಿಕೆಗಳನ್ನು ಮಾಡುವುದು ಹೃದಯಕ್ಕೂ ಮುಖ್ಯವಾಗಿದೆ.

ಇದನ್ನೂ ಓದಿ: Blood Pressure: ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆಯಂತೆ ಈ ಉಸಿರಾಟದ ತರಬೇತಿ!

ನಿಯಮಿತ ದೈಹಿಕ ಚಟುವಟಿಕೆ ಮತ್ತು ವೃತ್ತಿಪರ ಜೀವನವನ್ನು ಮೀರಿ ಸಮಯವನ್ನು ಕಳೆಯುವುದು ಅಥವಾ ಜೀವನದ ವಿವಿಧ ಆಯಾಮಗಳಲ್ಲಿ ಮೋಜು ಮಾಡುವುದು ನಿಮ್ಮ ಉದ್ವೇಗವನ್ನು ಹೆಚ್ಚು ಮಾಡುತ್ತದೆ ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. "ಕಡಿಮೆ ಒತ್ತಡದ ಮಟ್ಟವು ಕಾರ್ಡಿಯೋ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ" ಎಂದು ಡಾ ಘೋಷ್ ಹೇಳಿದರು.

ಆಗಾಗ್ಗೆ ನಿಮ್ಮ ಸ್ಥೂಲಕಾಯತೆಯನ್ನು ಪರೀಕ್ಷಿಸಿಕೊಳ್ಳಬೇಕು
"ಸಾಮಾನ್ಯವಾಗಿ, ನಾವು ಬೊಜ್ಜನ್ನು ಬಾಡಿ ಮಾಸ್ ಇಂಡೆಕ್ಸ್ ನಿಂದ ವ್ಯಾಖ್ಯಾನಿಸುತ್ತೇವೆ, ಇದನ್ನು ಕೆಜಿಯಲ್ಲಿ ತೂಕವನ್ನು ಚದರ ಮೀಟರ್ ಎತ್ತರದಲ್ಲಿ ಭಾಗಿಸಲಾಗುತ್ತದೆ. ಏಷ್ಯನ್ ಭಾರತೀಯರಿಗೆ ಇದು 23 ಕ್ಕಿಂತ ಕಡಿಮೆ ಇರಬೇಕು. ಏಷ್ಯನ್ ಭಾರತೀಯರಿಗೆ ಗರಿಷ್ಠ ಕಟ್ ಆಫ್ ಮಿತಿ 22.9 ಆಗಿರಬೇಕು. ಪಾಶ್ಚಿಮಾತ್ಯ ಜನರಿಗೆ ಇದು 22.4 ಆಗಿರಬೇಕು. ಭಾರತದಲ್ಲಿ 23 ಕ್ಕಿಂತ ಹೆಚ್ಚಿನ ಬಿಎಂಐ ಹೊಂದಿರುವ ಜನರನ್ನು ಅಧಿಕ ತೂಕ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ" ಎಂದು ಅವರು ಹೇಳಿದರು.

ಭಾರತೀಯ ಜನರಲ್ಲಿ ಕಂಡು ಬರುವ ವಿಚಿತ್ರ ರೀತಿಯ ಬೊಜ್ಜನ್ನು ‘ಮಡಕೆ ಹೊಟ್ಟೆ’ ಅಥವಾ ‘ಸೇಬಿನ ದೇಹದ ಸಂರಚನೆ’ ಎಂದು ಕರೆಯಲಾಗುತ್ತದೆ ಎಂದು ಡಾ. ಘೋಷ್ ಹೇಳಿದರು. "ಇದರರ್ಥ ಒಬ್ಬ ವ್ಯಕ್ತಿಯು ತೆಳ್ಳಗಿದ್ದು, ಅವರ ಹೊಟ್ಟೆ ಹೊರಕ್ಕೆ ಚಾಚಿಕೊಂಡಿರುವುದು. ಇದು ಭಾರತೀಯರಲ್ಲಿ ಪರಿಧಮನಿಯ ಅಪಧಮನಿ ಕಾಯಿಲೆ ಅಥವಾ ಹೃದಯಾಘಾತದ ಸಂಕೇತವಾಗಿದೆ" ಎಂದು ಅವರು ಎಚ್ಚರಿಸಿದ್ದಾರೆ.

ತಪ್ಪದೆ  ದೈಹಿಕ ಚಟುವಟಿಕೆಯನ್ನುಮಾಡಿರಿ
ಪ್ರತಿದಿನ ತಪ್ಪದೆ 30 ರಿಂದ 40 ನಿಮಿಷಗಳ ದೈಹಿಕ ಚಟುವಟಿಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ. "ಬೆಳಿಗ್ಗೆ ಎದ್ದು ಅಥವಾ ಸಂಜೆ ಹೊತ್ತಿನಲ್ಲಿ ಜೋರಾಗಿ ನಡೆಯುವುದು, ಸೈಕ್ಲಿಂಗ್ ಮಾಡುವುದು, ಈಜುವುದು ಮತ್ತು ಜಾಗಿಂಗ್ ನಂತಹ ಇತರ ಚಟುವಟಿಕೆಗಳನ್ನು ಮಾಡಲೇಬೇಕು. ಇವುಗಳನ್ನು ಐಸೋಟೋನಿಕ್ ವ್ಯಾಯಾಮಗಳು ಎಂದು ಕರೆಯಲಾಗುತ್ತದೆ. ಇವುಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದಾಗ್ಯೂ, ಸ್ನಾಯುವಿನ ಐಸೋಮೆಟ್ರಿಕ್ ವ್ಯಾಯಾಮ ಎಂದು ಕರೆಯಲ್ಪಡುವ ತೂಕ ಎತ್ತುವಿಕೆಯು ಹೃದಯ ಆರೋಗ್ಯಕರವಲ್ಲ" ಎಂದು ಅವರು ಹೇಳಿದರು.

ಹಣ್ಣು ತರಕಾರಿ ಹೆಚ್ಚು ಸೇವಿಸಿ 
ಹಣ್ಣುಗಳು ಮತ್ತು ತರಕಾರಿಗಳ ಸೇವನೆಯಲ್ಲಿ ಹೆಚ್ಚಳವಾಗಬೇಕು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೃದಯ ರಕ್ತನಾಳದ ಆರೋಗ್ಯಕ್ಕಾಗಿ ಪ್ರತಿದಿನ 600 ಗ್ರಾಂ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ಶಿಫಾರಸು ಮಾಡುತ್ತದೆ.

ಆಲ್ಕೋಹಾಲ್ ಸೇವನೆ ಬಗ್ಗೆ ಇರಲಿ ಎಚ್ಚರ
"ಭಾರತೀಯ ಜನರು ಆಲ್ಕೋಹಾಲ್ ಕಾರ್ಡಿಯೋ-ಪ್ರೊಟೆಕ್ಟಿವ್ ಅಲ್ಲ ಎಂದು ತೀವ್ರ ಸಂಶೋಧನೆ ನಡೆದಿದೆ. ಪಾಶ್ಚಿಮಾತ್ಯ ಜನರಲ್ಲಿ ಆಲ್ಕೋಹಾಲ್ ಹೃದಯಾಘಾತವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುತ್ತದೆ ಆದರೆ ನಾವು ಭಾರತೀಯ ಜನಸಂಖ್ಯೆಯಲ್ಲಿನ ದತ್ತಾಂಶವನ್ನು ವಿಶ್ಲೇಷಿಸಿದಾಗ, ಅದು ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುವ ಬದಲಿಗೆ ಇನ್ನೂ ಹೆಚ್ಚಿಸುತ್ತದೆ ಅಥವಾ ತಟಸ್ಥವಾಗಿ ಉಳಿಸುತ್ತದೆ" ಎಂದು ಡಾ. ಘೋಷ್ ಹೇಳಿದರು.

ಇದನ್ನೂ ಓದಿ:  PCOS Diet: ಪಿಸಿಓಎಸ್​ ಸಮಸ್ಯೆಗೆ ನಟಿ ಸೋನಮ್ ಕಪೂರ್ ಈ ಆಹಾರಗಳನ್ನೇ ಸೇವಿಸುತ್ತಿದ್ರಂತೆ

"ಹೃದಯಾಘಾತವನ್ನು ತಡೆಗಟ್ಟಲು ನಾವು ಅದನ್ನು ಸಮರ್ಥಿಸುವುದಿಲ್ಲ. ನಿಜವಾಗಿಯೂ ಅದನ್ನು ಸೇವಿಸಲು ಬಯಸುವವರು, ನೀವು ಪುರುಷರಾದಲ್ಲಿ ದಿನಕ್ಕೆ 60 ಮಿಲಿ ಲೀಟರ್ ಮತ್ತು ಮಹಿಳೆಯರಾದಲ್ಲಿ 30 ಮಿಲಿ ಲೀಟರ್ ಗಿಂತ ಕಡಿಮೆ ಸೇವನೆ ಮಾಡುವುದು ಒಳ್ಳೆಯದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ಬಿಟ್ಟು ಬಿಡುವುದು ಒಳ್ಳೆಯದು” ಅಂತಾರೆ ವೈದ್ಯರು.
Published by:Ashwini Prabhu
First published: