Night Dinner: ರಾತ್ರಿ ಹೊತ್ತಲ್ಲಿ ಈ ಕೆಲವು ಆಹಾರ ಸೇವಿಸಲೇಬಾರದು! ಯಾವ ಆಹಾರ ಬೆಸ್ಟ್ ಗೊತ್ತೇ?

ರಾತ್ರಿ ವೇಳೆ ನಿಮ್ಮ ನೆಚ್ಚಿನ ಆಹಾರ ತಿನ್ನಲು ಇಷ್ಟ ಪಡುತ್ತಿದ್ದರೆ ನೀವು ಅನೇಕ ರೀತಿಯ ಕಾಯಿಲೆಗಳನ್ನು ಹೊಂದುವ ಸಾಧ್ಯತೆ ಹೆಚ್ಚು. ಏಕೆಂದರೆ ರಾತ್ರಿಯಲ್ಲಿ ದೇಹಕ್ಕೆ ಯಾವುದೇ ಚಟುವಟಿಕೆ ನೀಡುವುದಿಲ್ಲ. ಹೀಗಾಗಿ ಇದು ಜೀರ್ಣಾಂಗ ವ್ಯವಸ್ಥೆಯು ಭಾರವಾದ ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾತ್ರಿ ಊಟವು (Night Dinner) ದಿನದ ಕೊನೆಯ (Last) ಊಟವಾಗಿರುತ್ತದೆ. ಯಾಕೆಂದ್ರೆ ರಾತ್ರಿ ಊಟದ ನಂತರ ಎಲ್ಲರೂ ಮಲಗುತ್ತಾರೆ (Sleeping). ಆದ್ದರಿಂದ ಇದು ತುಂಬಾ ಮುಖ್ಯವಾಗಿದೆ. ರಾತ್ರಿ ಊಟ ಯಾವಾಗಲೂ ತುಂಬಾ ಹಗುರ  ಮತ್ತು ಆರೋಗ್ಯಕರವಾಗಿರಬೇಕು (Healthy) ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾವ ತರಹದ ಊಟವನ್ನು ರಾತ್ರಿ ಮಾಡುವುದು ಆರೋಗ್ಯಕ್ಕೆ ಉತ್ತಮ? ಹಾಗೂ ಆಯುರ್ವೇದದ ಪ್ರಕಾರ, ರಾತ್ರಿಯಲ್ಲಿ ತ್ಯಜಿಸಬೇಕಾದ ಕೆಲವು ಆಹಾರಗಳಿವೆ. ರಾತ್ರಿ ಭಾರೀ ಅಂದ್ರೆ ಹೆಚ್ಚು ಊಟ ಮಾಡಿದರೆ ಅದು ತೂಕ ಹೆಚ್ಚಾಗಲು ಕಾರಣ ಆಗುತ್ತದೆ ಎಂಬುದು ಅಕ್ಷರಶಃ ನಿಜ ಎಂಬುದು ತಜ್ಞರ ಮಾತು.

  ದಿನವಿಡೀ ನಿಮ್ಮ ಆಹಾರ ಕ್ರಮ ಹೇಗಿರಬೇಕು?

  ಬೆಳಗಿನ ಉಪಾಹಾರವನ್ನು ರಾಜನಂತೆ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಭಿಕ್ಷುಕನಂತೆ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ದಿನವಿಡೀ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ನೀವು ಇದರಿಂದ ತಿಳಿಯಬೇಕು. ಇದಕ್ಕೆ ವ್ಯತಿರಿಕ್ತವಾಗಿ, ನೀವು ರಾತ್ರಿ ವೇಳೆ ನಿಮ್ಮ ನೆಚ್ಚಿನ ಆಹಾರ ತಿನ್ನಲು ಇಷ್ಟ ಪಡುತ್ತಿದ್ದರೆ ನೀವು ಅನೇಕ ರೀತಿಯ ಕಾಯಿಲೆಗಳನ್ನು ಹೊಂದುವ ಸಾಧ್ಯತೆ ಹೆಚ್ಚು.

  ಏಕೆಂದರೆ ರಾತ್ರಿಯಲ್ಲಿ ದೇಹಕ್ಕೆ ಯಾವುದೇ ಚಟುವಟಿಕೆ ನೀಡುವುದಿಲ್ಲ. ಹೀಗಾಗಿ ಇದು ಜೀರ್ಣಾಂಗ ವ್ಯವಸ್ಥೆಯು ಭಾರವಾದ ಆಹಾರ ಜೀರ್ಣಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ. ಇದರ ಫಲಿತಾಂಶವನ್ನು ನೀವು ಮಾರನೇ ದಿನ ಬೆಳಿಗ್ಗೆ ಅನುಭವಿಸಬೇಕಾಗುತ್ತದೆ. ಹೊಟ್ಟೆ ಅಸಮಾಧಾನ, ನಿಧಾನಗತಿಯ ರೂಪದ ಚಯಾಪಚಯ ಉಂಟಾಗುತ್ತದೆ.

  ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

  ಯಾವ ರೀತಿಯ ಭೋಜನ ಮಾಡಬೇಕು?

  ರಾತ್ರಿಯ ಊಟದ ಬಗ್ಗೆ ಆಯುರ್ವೇದ ವೈದ್ಯೆ ರೇಖಾ ರಾಧಾಮಣಿ ಸಲಹೆ ನೀಡಿದ್ದಾರೆ. ಊಟದ ಆಯ್ಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎನ್ನುತ್ತಾರೆ. ಏಕೆಂದರೆ ತಪ್ಪು ಭೋಜನದ ಆಯ್ಕೆ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಹಾಗಾದರೆ ರಾತ್ರಿ ಏನು ತಿನ್ನಬೇಕು? ಈ ಬಗ್ಗೆ ವೈದ್ಯೆ ರೇಖಾ ಅವರು ವಿವರವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಮಾಹಿತಿ ಇಲ್ಲಿದೆ ನೋಡಿ.

  ಗೋಧಿಯಿಂದ ಮಾಡಿದ ಪದಾರ್ಥಗಳು

  ತಜ್ಞರ ಪ್ರಕಾರ, ರಾತ್ರಿಯ ಊಟಕ್ಕೆ ಗೋಧಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಗೋಧಿಯಿಂದ ಮಾಡಿದ ಪದಾರ್ಥಗಳು ಭಾರವಾಗಿರುತ್ತವೆ. ಹಾಗಾಗಿ ಇದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ದೇಹದಲ್ಲಿ ಅಮಾ (ವಿಷ) ಉಂಟು ಮಾಡುವ ಸಾಧ್ಯತೆಯಿದೆ.

  ರಾತ್ರಿಯಲ್ಲಿ ಏನು ತಿನ್ನಬಾರದು - ಮೊಸರು

  ಜೀರ್ಣಕ್ರಿಯೆಗೆ ರಾತ್ರಿ ಮೊಸರು ಸೇವನೆ ತುಂಬಾ ಲೆಟ್ಟ ಪರಿಣಾಮ ಬೀರುತ್ತದೆ. ರಾತ್ರಿ ಊಟದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ದೇಹದಲ್ಲಿ ಕಫ ಮತ್ತು ಪಿತ್ತ ಪ್ರಮಾಣ ಹೆಚ್ಚಿಸುತ್ತದೆ.

  ಹಿಟ್ಟಿನಿಂದ ಮಾಡಿದ ಆಹಾರ ಸೇವಿಸಬೇಡಿ

  ಗೋಧಿಯಂತೆ ಮೈದಾ ಕೂಡ ಭಾರವಾಗಿರುತ್ತದೆ. ಹಾಗಾಗಿ ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಭಾರೀ ಆಹಾರವು ದೇಹದಲ್ಲಿ ಅಮಾ (ವಿಷ) ಉಂಟು ಮಾಡುತ್ತದೆ.

  ರಾತ್ರಿಯಲ್ಲಿ ಸಿಹಿ ತಿಂಡಿಗಳು ಅಥವಾ ಚಾಕೊಲೇಟ್ ಸೇವಿಸಬೇಡಿ

  ಸಿಹಿ ತಿನಿಸು ಸೇವನೆ ಕಡಿಮೆ ಮಾಡಿ. ಸಿಹಿ ರುಚಿಯ ಆಹಾರಗಳು ಪ್ರಕೃತಿಯಲ್ಲಿ ಭಾರವಾಗಿರುತ್ತವೆ. ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ. ಮತ್ತು ಲೋಳೆ ಹೆಚ್ಚಿಸುತ್ತದೆ.

  ಹಸಿ ಸಲಾಡ್ ತಿನ್ನಬೇಡಿ

  ಕಚ್ಚಾ ಸಲಾಡ್‌ಗಳು ವಿಶೇಷವಾಗಿ ಶೀತ ಮತ್ತು ಶುಷ್ಕವಾಗಿರುತ್ತದೆ. ಇದು ದೇಹದ ಬಹುದ್ವಾರಿಯಲ್ಲಿ ವಾತದ ಪ್ರಮಾಣ ಹೆಚ್ಚಿಸುತ್ತದೆ. ಹಾಗಾಗಿ ಬೇಯಿಸಿ ತಿನ್ನುವುದು ಆರೋಗ್ಯಕರ ಆಯ್ಕೆಯಾಗಿದೆ.

  ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

  ರಾತ್ರಿಯಲ್ಲಿ ತಪ್ಪು ಆಹಾರದ ಅಡ್ಡ ಪರಿಣಾಮ

  ರಾತ್ರಿಯ ಊಟದಲ್ಲಿ ತಪ್ಪು ಆಹಾರ ಸೇವನೆ ಜೀರ್ಣಕ್ರಿಯೆಯನ್ನು ಕೆಡಿಸುತ್ತದೆ. ಭಾರವಾದ ಆಹಾರ ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀರ್ಣವಾಗದ ಆಹಾರದಿಂದ ದೇಹದಲ್ಲಿ ವಿಷಕಾರಿ ಅಂಶಗಳ ಶೇಖರಣೆಯಾಗುತ್ತವೆ. ಇದು ದೀರ್ಘಾವಧಿಯಲ್ಲಿ ಬೊಜ್ಜು, ಮಧುಮೇಹ, ಚರ್ಮ ರೋಗಗಳು, ಕರುಳಿನ ಕಾಯಿಲೆ, ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ.
  Published by:renukadariyannavar
  First published: