Water Therapy: ವಾಟರ್ ಥೆರಪಿ ಎಂದರೇನು? ಜಪಾನೀಸ್ ನೀರಿನ ಚಿಕಿತ್ಸೆಯ ಪ್ರಯೋಜನಗಳೇನು?

ರಾತ್ರಿ ತಾಮ್ರದ ಪಾತ್ರೆಯಲ್ಲಿ ಸುಮಾರು 4 ಲೋಟ ನೀರು ತುಂಬಿಸಿ ಇಡಬೇಕು. ನಂತರ ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ನೀರು ಕುಡಿಯುವ ಮೊದಲು 45 ನಿಮಿಷಗಳ ಕಾಲ ನೀವು ಏನನ್ನೂ ತಿನ್ನಬೇಕಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಮ್ಮ ದೇಹಕ್ಕೆ (Body) ನೀರು (Water) ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನೀರಿನಿಂದ ಹಲವಾರು ರೀತಿಯ ಕಾಯಿಲೆಗಳನ್ನು (Disease) ಸಹ ನಿವಾರಣೆ ಮಾಡಬಹುದು ಎಂದು ನೀವು ತಿಳಿಯಬೇಕು. ನೀರಿನಲ್ಲಿ ಎಷ್ಟು ಶಕ್ತಿ (Energy) ಇದೆ ಎಂದರೆ ಅದು ತಲೆನೋವು, ಮಲಬದ್ಧತೆ, ದೇಹದ ನೋವು ಮತ್ತು ಮೂಲವ್ಯಾಧಿ ಸಮಸ್ಯೆ ನಿವಾರಣೆ ಮಾಡುತ್ತದೆ. ಇದು ಅಪಸ್ಮಾರ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಸಹ ನಿವಾರಣೆ ಮಾಡಲು ಸಹಕಾರಿ. ಈ ರೋಗಗಳನ್ನು ಗುಣಪಡಿಸಲು ತಜ್ಞರು ನೀರಿನ ಚಿಕಿತ್ಸೆ ಬಳಕೆ ಮಾಡುತ್ತಾರೆ. ಇಲ್ಲಿ ನಾವು ವಾಟರ್ ಥೆರಪಿಯ ಪ್ರಯೋಜನಗಳೇನು ಎಂದು ತಿಳಿಯೋಣ.

    ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು ಕುಡಿಯುವುದರ ಪ್ರಯೋಜನಗಳು

    ರಾತ್ರಿ ತಾಮ್ರದ ಪಾತ್ರೆಯಲ್ಲಿ ಸುಮಾರು 4 ಲೋಟ ನೀರು ತುಂಬಿಸಿ ಇಡಬೇಕು. ನಂತರ ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ನೀರು ಕುಡಿಯುವ ಮೊದಲು 45 ನಿಮಿಷಗಳ ಕಾಲ ನೀವು ಏನನ್ನೂ ತಿನ್ನಬೇಕಾಗಿಲ್ಲ.

    ನಿಮಗೆ ಒಂದೇ ಬಾರಿಗೆ ಅಷ್ಟು ನೀರು ಕುಡಿಯಲು ಸಾಧ್ಯ ಆಗದಿದ್ದರೆ, 5-10 ನಿಮಿಷಗಳ ಮಧ್ಯಂತರದಲ್ಲಿ ಕುಡಿಯಿರಿ. ನಿಂತಲ್ಲೇ ನೀರು ಕುಡಿಯಬೇಕಾಗಿಲ್ಲ. ನಿಂತು ನೀರು ಕುಡಿದರೆ ಮೊಣಕಾಲು ನೋವಿನ ಅಪಾಯ ಉಂಟಾಗಬಹುದು.

    ಇದನ್ನೂ ಓದಿ: ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೂಲಕ ತೂಕ ಇಳಿಸಿಕೊಂಡಿರುವ ಮಹಿಳೆಯ ಜರ್ನಿ ಹೀಗಿದೆ…

    ನೀರಿನ ಚಿಕಿತ್ಸೆಯ ಪ್ರಯೋಜನಗಳು

    ಚರ್ಮದ ನವ ಯೌವ್ವನ ಕಾಯ್ದುಕೊಳ್ಳಲು

    ನೀವು ದೀರ್ಘ ಕಾಲದವರೆಗೆ ನೀರಿನ ಚಿಕಿತ್ಸೆ ಬಳಸಿದರೆ, ಅದು ಚರ್ಮವನ್ನು ಸುಧಾರಿಸುತ್ತದೆ. ಇದು ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ಮತ್ತು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಈ ಚಿಕಿತ್ಸೆಯು ತನ್ನದೇ ಆದ ಮೇಲೆ ಕಾರ್ಯ ನಿರ್ವಹಿಸಲು ಪ್ರಾರಂಭಿಸುವುದಿಲ್ಲ. ನೀವು ಅದನ್ನು ದೀರ್ಘ ಕಾಲದವರೆಗೆ ಅಳವಡಿಸಿಕೊಂಡರೆ, ಅದರ ಪರಿಣಾಮವು ನಿಮ್ಮ ಚರ್ಮದ ಮೇಲೂ ಗೋಚರಿಸುತ್ತದೆ.

    ಹಾನಿಕಾರಕ ಅಂಶಗಳನ್ನು ತೆಗೆದು ಹಾಕಿ

    ದೇಹದಿಂದ ಹಾನಿಕಾರಕ ಅಂಶಗಳನ್ನು ತೆಗೆದು ಹಾಕಲು ನೀರಿನ ಚಿಕಿತ್ಸೆಯು ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುತ್ತದೆ. ನೀರಿನ ಚಿಕಿತ್ಸೆ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಯ ಕಲೆಗಳು ಹೋಗುತ್ತವೆ. ಮತ್ತು ಹೊಟ್ಟೆ ಮತ್ತು ಕಿಡ್ನಿ ಸಮಸ್ಯೆಗಳು ಬರುವುದಿಲ್ಲ.

    ಶುಷ್ಕತೆ ಹೋಗಲಾಡಿಸುತ್ತದೆ

    ನೀರಿನ ಚಿಕಿತ್ಸೆಯು ದೇಹದಲ್ಲಿನ ನೀರಿನ ಕೊರತೆ ತೆಗೆದು ಹಾಕುತ್ತದೆ. ಈ ಕಾರಣದಿಂದಾಗಿ ದೇಹವು ಯಾವಾಗಲೂ ಹೈಡ್ರೇಟೆಡ್ ಆಗಿರುತ್ತದೆ. ಮತ್ತು ಅನೇಕ ರೋಗಗಳು ದೂರವಾಗುತ್ತವೆ. ವಾಟರ್ ಥೆರಪಿ ಕೂಡ ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. ಇದು ಚರ್ಮದ ಶುಷ್ಕತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

    ಜಪಾನೀಸ್ ವಾಟರ್ ಥೆರಪಿ ಎಂದರೇನು?

    ಹೆಚ್ಚಿನ ರೋಗಗಳು ಹೊಟ್ಟೆಯ ಅಸ್ವಸ್ಥತೆಯಿಂದ ಉಂಟಾಗುತ್ತವೆ. ಜಪಾನೀಸ್ ವಾಟರ್ ಥೆರಪಿ ಕರುಳನ್ನು ಶುದ್ಧೀಕರಿಸುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆ ಬಲವಾಗಿಸುತ್ತದೆ. ಜಪಾನಿನ ಸಾಂಪ್ರದಾಯಿಕ ಔಷಧವು ಬೆಳಿಗ್ಗೆ ಎದ್ದ ನಂತರ ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ.

    ಮುಂಜಾನೆಯ ಸಮಯವನ್ನು ಗೋಲ್ಡನ್ ಹವರ್ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಕುಡಿಯುವ ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಿಸುತ್ತದೆ. ಮತ್ತು ತೂಕ ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಈ ರೀತಿ ಮಾಡಿ ನೋಡಿ

    ಜಪಾನೀಸ್ ನೀರಿನ ಚಿಕಿತ್ಸೆಯ ಪ್ರಯೋಜನಗಳು

    ಜಪಾನಿನ ನೀರಿನ ಚಿಕಿತ್ಸೆ ಒತ್ತಡ ಕಡಿಮೆ ಮಾಡುತ್ತದೆ. ಇದು ತೂಕವನ್ನು ನಿಯಂತ್ರಿಸುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ. ಈ ಚಿಕಿತ್ಸೆಯು ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ಚಯಾಪಚಯವನ್ನು ಸುಧಾರಿಸುತ್ತದೆ.
    Published by:renukadariyannavar
    First published: