ಸಾಮಾನ್ಯವಾಗಿ ಜನರಿಗೆ (People) ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ, ವಿಟಮಿನ್ ಡಿ ಬಗ್ಗೆ ಗೊತ್ತಿದೆ. ನಂತರ ತುಂಬಾ ಜನರಿಗೆ ವಿಟಮಿನ್ ಪಿ (Vitamin P) ಬಗ್ಗೆ ಗೊತ್ತಿಲ್ಲ. ಹೇಗೆ ದೇಹಕ್ಕೆ (Body) ವಿಟಮಿನ್ ಮುಖ್ಯವೋ, ಹಾಗೆಯೇ ವಿಟಮಿನ್ ಪಿ ಕೂಡ ಮುಖ್ಯ. ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ವಿಟಮಿನ್ ಪಿ ತುಂಬಾ ಅಗತ್ಯವಾಗಿ ಬೇಕು. ತುಂಬಾ ಜನರಿಗೆ ವಿಟಮಿನ್ ಪಿ ಯಾವೆಲ್ಲಾ ಪದಾರ್ಥಗಳಲ್ಲಿದೆ (Ingredients) ಎಂಬುದು ಗೊತ್ತಿಲ್ಲ. ಆದರೆ ವಿಟಮಿನ್ ಪಿ ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳಲ್ಲಿ (Nutrients) ಒಂದಾಗಿದೆ ಹಾಗೂ ಅದು ವಿವಿಧ ತರಕಾರಿ ಮತ್ತು ಹಣ್ಣುಗಳಿಂದ ಸಿಗುತ್ತದೆ.
ವಿಟಮಿನ್ ಪಿ ಹೇಗೆ ಆರೋಗ್ಯಕ್ಕೆ ಪ್ರಯೋಜನಕಾರಿ?
ವಿಟಮಿನ್ ಪಿ ಅನೇಕ ಗಂಭೀರ ಕಾಯಿಲೆಗಳಿಂದ ದೇಹವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವಿಟಮಿನ್ ಪಿ ಅಂಶವು ದಿನ ನಿತ್ಯ ಸೇವಿಸುವ ಅನೇಕ ಪದಾರ್ಥಗಳಲ್ಲಿ ಇದೆ. ಅಂದ ಹಾಗೇ ವಿಟಮಿನ್ ಪಿ ನ್ನು ಫ್ಲೇವನಾಯ್ಡ್ಸ್ ಎಂದು ಸಹ ಕರೆಯುತ್ತಾರೆ.
ನೈಸರ್ಗಿಕವಾಗಿ ಕಂಡು ಬರುವ ವರ್ಣದ್ರವ್ಯಗಳನ್ನು ಫ್ಲೇವನಾಯ್ಡ್ ಗಳು ಎಂದು ಕರೆಯುತ್ತಾರೆ. ಇದು ಹಣ್ಣು ಮತ್ತು ತರಕಾರಿ, ಚಹಾ, ಕೋಕೋ ಮತ್ತು ವೈನ್ ನಲ್ಲಿ ಕಂಡು ಬರುತ್ತದೆ. ಕೆಲವು ಆಹಾರಗಳಿಗೆ ಬಣ್ಣ ನೀಡುವ ಕೆಲಸ ಮಾಡುತ್ತವೆ ಫ್ಲೇವನಾಯ್ಡ್ಗಳು.
ಪ್ಲೇವನಾಯ್ಡ್ ಗಳು ನಿಮ್ಮನ್ನು ನೇರ ಸೂರ್ಯನ ಹಾನಿಕಾರಕ ಕಿರಣಗಳು ಮತ್ತು ಸೋಂಕಿನಿಂದ ರಕ್ಷಣೆ ಮಾಡುತ್ತವೆ. ಜೊತೆಗೆ ಇವು ಮಾನವನ ಆರೋಗ್ಯಕ್ಕೆ ಪ್ರಯೋಜನಕಾರಿಯೂ ಹೌದು.
ವಿಟಮಿನ್ ಪಿ ಕೊರತೆ
ವಿಟಮಿನ್ ಪಿ ಕೊರತೆಯು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ವಿಟಮಿನ್ ಪಿ ಇರುವ ಪದಾರ್ಥ ಸೇವನೆ ಮಾಡುವುದು ತುಂಬಾ ಮುಖ್ಯ.
ವಿಟಮಿನ್ ಪಿ ಎಂದರೇನು?
ಫ್ಲೇವನಾಯ್ಡ್ ಗಳನ್ನು ಬಯೋಫ್ಲಾವೊನೈಡ್ ಗಳು ಎಂದೂ ಕರೆಯುತ್ತಾರೆ. ಇದು ಆರು ಉಪವರ್ಗಗಳನ್ನು ಹೊಂದಿದೆ. ವರದಿಯೊಂದರ ಪ್ರಕಾರ, ಪ್ರಸ್ತುತ 6,000 ಕ್ಕಿಂತ ಹೆಚ್ಚು ವಿಧದ ಫ್ಲೇವನಾಯ್ಡ್ ಗಳಿವೆ.
1930 ರ ದಶಕದಲ್ಲಿ ಕಿತ್ತಳೆ ಹಣ್ಣಿನಲ್ಲಿ ಮೊದಲ ಬಾರಿಗೆ ಪ್ಲೇವನಾಯ್ಡ್ ಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅಂದಿನಿಂದ ಇದನ್ನು ವಿಟಮಿನ್ ಪಿ ಎಂದು ಕರೆದರು.
ವಿಟಮಿನ್ ಪಿ ಕೊರತೆ ಲಕ್ಷಣಗಳು ಮತ್ತು ಅನಾನುಕೂಲಗಳು
ಪ್ಲೇವನಾಯ್ಡ್ ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ವಿಟಮಿನ್ ಸಿ ಕೊರತೆಯಂತೆಯೇ ಇರುತ್ತವೆ. ಸುಲಭ ಮೂಗೇಟುಗಳು ಮತ್ತು ರಕ್ತಸ್ರಾವ. ಮುರಿದ ರಕ್ತನಾಳದಿಂದ ರಕ್ತ ಸೋರುವಿಕೆ, ಸಂಧಿವಾತ ಮತ್ತು ಉರಿಯೂತ, ಸ್ಕರ್ವಿ, ಒಸಡು ಮತ್ತು ಹಲ್ಲು ಸಮಸ್ಯೆ, ಚರ್ಮ ಮತ್ತು ಕೂದಲಿನ ಶುಷ್ಕತೆ ಮತ್ತು ರಕ್ತಹೀನತೆ ಸಮಸ್ಯೆ ಉಂಟು ಮಾಡುತ್ತದೆ.
ವಿಟಮಿನ್ ಪಿ ಯಾವ ಆಹಾರದಲ್ಲಿದೆ?
ವಿಟಮಿನ್ ಪಿ ಆಲಿವ್ ಎಣ್ಣೆ, ಹಣ್ಣು, ಈರುಳ್ಳಿ, ಕೇಲ್, ದ್ರಾಕ್ಷಿ, ಟೊಮ್ಯಾಟೊ, ಕೆಂಪು ವೈನ್, ಚಹಾ, ಕೋಕೋ, ಸೇಬು, ದ್ರಾಕ್ಷಿ, ಸೋಯಾಬೀನ್ , ಸೋಯಾ ಉತ್ಪನ್ನ, ಕ್ರಾನ್ಬೆರಿ, ಸ್ಟ್ರಾಬೆರಿ, ಬೆರಿಹಣ್ಣು, ಬ್ಲ್ಯಾಕ್ಬೆರಿಯಲ್ಲಿ ಕಂಡು ಬರುತ್ತದೆ.
ವಿಟಮಿನ್ ಪಿ ಆರೋಗ್ಯ ಪ್ರಯೋಜನಗಳು
ಸದೃಢ ಮನಸ್ಸು
ವರದಿಯೊಂದರ ಪ್ರಕಾರ, ವಿಟಮಿನ್ ಪಿ ಮೆದುಳಿನ ಕೋಶಗಳನ್ನು ರಕ್ಷಣೆ ಮಾಡುತ್ತದೆ. ಮತ್ತು ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಸ್ಮರಣೆ ತೀಕ್ಷ್ಣಗೊಳಿಸುತ್ತದೆ.
ಇದನ್ನೂ ಓದಿ: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ
ಟೈಪ್ 2 ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ
ಫ್ಲೇವನಾಯ್ಡ್ ಸಮೃದ್ಧ ಆಹಾರವು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ. ಪ್ರತಿದಿನ 300 ಮಿಗ್ರಾಂ ಫ್ಲೇವನಾಯ್ಡ್ ಸೇವನೆಯು ಮಧುಮೇಹದ ಅಪಾಯ ರಷ್ಟು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ ತಡೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ