Uterine Didelphys: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

ಗರ್ಭಿಣಿ ಮಗುವಿಗೆ ಜನ್ಮ ನೀಡಿದಾಗ 20 ಮೂಳೆಗಳು ಒಟ್ಟಿಗೆ ಒಡೆಯುವಷ್ಟು ವೇದನೆ, ನೋವು ಅನುಭವಿಸುತ್ತಾಳೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಹೆರಿಗೆಯ ಸಮಯದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಸ್ಟೆಫನಿ ಹ್ಯಾಕ್ಸ್ಟನ್

ಸ್ಟೆಫನಿ ಹ್ಯಾಕ್ಸ್ಟನ್

  • Share this:
    ಒಬ್ಬ ಮಹಿಳೆಗೆ (Women) ತಾಯಿಯಾಗುವುದೇ (Mother) ಒಂದು ಮರು ಹುಟ್ಟು. ಅದು ವಿಶ್ವದ ಅತಿದೊಡ್ಡ ಸಂತೋಷದ (Happiness) ಕ್ಷಣ. ತಾಯಿಯಾಗುವುದೆಂದರೇ ಮರುಜನ್ಮ ಪಡೆದಂತೆ ಎಂದು ಹೇಳುತ್ತಾರೆ. ಗರ್ಭಧರಿಸಿದಾಗಿನಿಂದ ಹಿಡಿದು ಮಗುವಿಗೆ (Baby) ಜನ್ಮ ನೀಡುವವರೆಗೆ ತಾಯಿ ಸಾಕಷ್ಟು ಕಷ್ಟಕರ ಸನ್ನಿವೇಶಗಳನ್ನು ದಾಟಿ ಬರಬೇಕಾಗುತ್ತದೆ. ಮಗು ಹುಟ್ಟಿದ ನಂತರ ಮಗುವಿನ ಆರೈಕೆಗಾಗಿ ತನ್ನ ನಿದ್ದೆಯನ್ನೂ ಲೆಕ್ಕಿಸದೇ ಮಗುವನ್ನು ಜೋಪಾನ ಮಾಡಬೇಕಾಗುತ್ತದೆ. ಗರ್ಭಿಣಿ ಮಗುವಿಗೆ ಜನ್ಮ ನೀಡಿದಾಗ 20 ಮೂಳೆಗಳು ಒಟ್ಟಿಗೆ ಒಡೆಯುವಷ್ಟು ವೇದನೆ, ನೋವು ಅನುಭವಿಸುತ್ತಾಳೆ ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಹೆರಿಗೆಯ ಸಮಯದಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ.

    ಹೆರಿಗೆಯ ಸಮಸಯದಲ್ಲಿ ಉಂಟಾಗುವ ನೋವು, ತೊಂದರೆ ಮಗುವಿಗೆ ಜನ್ಮ ನೀಡುವುದು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಅಂತಹ ಒಂದು ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಇದರಲ್ಲಿ ಮಹಿಳೆಗೆ 2 ಯೋನಿ, 2 ಗರ್ಭಾಶಯ ಮತ್ತು 2 ಗರ್ಭಕಂಠವಿದೆ. ಈ ಮಹಿಳೆ ಹೆರಿಗೆಯ ಸಮಯದಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದಾರೆ.

    ಈ ತೊಂದರೆಗಳನ್ನು ನಿವಾರಿಸುವಲ್ಲಿ ವೈದ್ಯರ ತಂಡ ಸಹಾಯ ಮಾಡಿದೆ. ಮತ್ತು ಕೆಲವು ಸಮಯದ ಹಿಂದೆ ಮಹಿಳೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

    ಇದನ್ನೂ ಓದಿ: ತೂಕ ದಿಢೀರ್ ಹೆಚ್ಚುತ್ತಿದೆಯಾ? ಈ ಗಂಭೀರ ರೋಗದ ಲಕ್ಷಣವಿದು, ಪರೀಕ್ಷಿಸಿಕೊಳ್ಳಿ

    2 ಯೋನಿ, 2 ಗರ್ಭಾಶಯ ಮತ್ತು 2 ಗರ್ಭಕಂಠವಿರುವುದು 23 ನೇ ವಯಸ್ಸಿನಲ್ಲಿ ಗೊತ್ತಾಯಿತು

    2 ಯೋನಿಗಳೊಂದಿಗೆ ಜನಿಸಿದ ಈ ಮಹಿಳೆಯ ಹೆಸರು ಸ್ಟೆಫನಿ ಹ್ಯಾಕ್ಸ್ಟನ್. ಆಕೆಯ ಸಂಗಾತಿಯ ಹೆಸರು ಬೆನ್ ಲ್ಯೂಡ್ಟ್ಕೆ. ಸ್ಟೆಫನಿ ಅಲಾಸ್ಕಾದಿಂದ ಬಂದವರು. ಮತ್ತು ಆಕೆಗೆ 29 ವರ್ಷ. 23 ನೇ ವಯಸ್ಸಿನಲ್ಲಿ ಸ್ಟೆಫನಿ ತನ್ನ ಖಾಸಗಿ ಅಂಗದಲ್ಲಿ ನೋವು ಕಾಣಿಸಿಕೊಂಡಾಗ, ವೈದ್ಯರ ಬಳಿಗೆ ಹೋಗಿದ್ದಳು.

    ಆಗ ಆಕೆಯ ಸ್ಥಿತಿ ತಿಳಿಯಿತು. ಸ್ಟೆಫನಿಗೆ 2 ಯೋನಿ, 2 ಗರ್ಭಾಶಯ ಮತ್ತು 2 ಗರ್ಭಕಂಠವಿದೆ ಈ ವಿಷಯ ತಿಳಿದಾಗಿನಿಂದ, ಅವಳು ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲವೇನೋ ಎಂದು ಹೆದರುತ್ತಿದ್ದಳು. ಆದರೆ ಸ್ವಲ್ಪ ಸಮಯದ ಹಿಂದೆ ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

    ವರದಿಯ ಪ್ರಕಾರ, ಆಕೆಯ ಮಗಳು ತನ್ನ ಎಡ ಗರ್ಭಾಶಯದಲ್ಲಿ ಮಾತ್ರ ಬೆಳೆದಿದ್ದಾಳೆ. ಇದರಿಂದಾಗಿ ಆಕೆಯ ಮಗುವಿನ ಉಬ್ಬು ಸಹ ಅಸಹಜವಾಗಿದೆ. ಈ ಸಮಸ್ಯೆಯನ್ನು ಯುಟೆರಸ್ ಡಿಡೆಲ್ಫಿಸ್ ಎಂದು ಕರೆಯಲಾಗುತ್ತದೆ.

    ಗರ್ಭಾಶಯ ಡಿಡೆಲ್ಫಿಸ್ ಎಂದರೇನು?

    ಯುಟೆರಸ್ ಡಿಡೆಲ್ಫಿಸ್, ಇದನ್ನು ಡಬಲ್ ಯುಟರ್ಸ್ ಎಂದೂ ಕರೆಯುತ್ತಾರೆ. ಮಹಿಳೆಯು 2 ಗರ್ಭಾಶಯ, 2 ಪ್ರತ್ಯೇಕ ಗರ್ಭಾಶಯದ ಬಾಯಿ ಮತ್ತು ಕೆಲವೊಮ್ಮೆ 2 ಯೋನಿಗಳೊಂದಿಗೆ ಜನಿಸುವ ಸ್ಥಿತಿ ಆಗಿದೆ. ಇದನ್ನು ಕಂಡು ಹಿಡಿಯಲು ದೈಹಿಕ ಪರೀಕ್ಷೆ ಅಥವಾ ಅಲ್ಟ್ರಾಸೌಂಡ್ ಮಾಡಲಾಗುತ್ತದೆ.

    ಐದು ಸಾವಿರ ಮಹಿಳೆಯರಲ್ಲಿ ಒಬ್ಬ ಮಹಿಳೆಯರು ಯುಟೆರಸ್ ಡಿಡೆಲ್ಫಿಸ್ ಗರ್ಭಾಶಯ ಹೊಂದಿದ್ದಾರೆ

    ಯುಟೆರಸ್ ಡಿಡೆಲ್ಫಿಸ್ ಎನ್ನುವುದು ಎರಡು ಗರ್ಭಾಶಯ ಹೊಂದಿರುವ ಮಹಿಳೆಗೆ ಬಳಸುವ ಪದವಾಗಿದೆ. ಇದು ಬಹಳ ಅಪರೂಪದ ಸ್ಥಿತಿ. ಇದರಲ್ಲಿ ಮಹಿಳೆಯರು 2 ಗರ್ಭಾಶಯ ಅಥವಾ 2 ಯೋನಿಯನ್ನು ಹೊಂದಿರುತ್ತಾರೆ. ಈ ಸ್ಥಿತಿಯು ಐದು ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ ಹೀಗೆ ಆಗುತ್ತದೆ. ಗರ್ಭಾಶಯದ ಗಾತ್ರವು ಚಿಕ್ಕದಾಗುವುದರಿಂದ ಈ ಸ್ಥಿತಿಯು ಗರ್ಭಪಾತ ಅಥವಾ ಅಕಾಲಿಕ ಜನನದ ಅಪಾಯವನ್ನು ಹೆಚ್ಚಿಸುತ್ತದೆ.

    ಈ ಸ್ಥಿತಿಯಲ್ಲಿ ಗರ್ಭಧಾರಣೆ ತುಂಬಾ ಕಷ್ಟ. ಕೆಲವೊಮ್ಮೆ ಗರ್ಭಾಶಯದ ಒಳಗಿನ ಗೋಡೆಯನ್ನು ಆವರಿಸಿರುವ ಅಂಗಾಂಶವು ಸಂಪೂರ್ಣವಾಗಿ ಅಭಿವೃದ್ಧಿ ಆಗುವುದಿಲ್ಲ. ಯಾರಾದರೂ ಈ ಸ್ಥಿತಿಗೆ ಒಳಪಡ್ಡಿದ್ದರೆ ಮಗುವಿನ ಜನನಕ್ಕಾಗಿ ಸಿ-ವಿಭಾಗವನ್ನು ಮಾಡಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಸ್ಟೆಫನಿ ಸಹಜವಾಗಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

    ಗರ್ಭಾವಸ್ಥೆಯು ಅಪಾಯಕಾರಿಯಾಗಿತ್ತು

    ಸ್ಟೆಫನಿಗೆ ತಾನು ತಾಯಿಯಾಗುವ ಭರವಸೆ ಇರಲಿಲ್ಲ. ಅವರು 27 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿ ಆದಾಗ, ಗರ್ಭಪಾತವಾಗಿತ್ತು. ಇದಾದ ನಂತರ ಮತ್ತೆ ಸ್ವಲ್ಪ ಸಮಯದ ನಂತರ ಆಕೆ ಮತ್ತೆ ತಾಯಿಯಾದ ಖುಷಿ ಹಂಚಿಕೊಂಡಳು. ಈ ಬಾರಿ ತೊಂದರೆ ತಪ್ಪಿಸಲು, ವೈದ್ಯರಿಗೆ ತೋರಿಸಿದಾಗ ಗರ್ಭಾವಸ್ಥೆಯ ಸಮಯದಲ್ಲಿ ಸ್ಟೆಫನಿ ಸಾಕಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಹೆವಿ ಫುಡ್ ನಂತರ ಅಸ್ವಸ್ಥತೆಯಾ? ಈ ಕೆಲವು ಡಿಟಾಕ್ಸ್ ವಾಟರ್​ ಕುಡಿದು ಲೈಟ್ ಫೀಲ್ ಮಾಡಿ

    ಅವಳ ಹೆಣ್ಣು ಮಗು ಅವಳ ಎಡ ಗರ್ಭಾಶಯದಲ್ಲಿದೆ. ಅದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿತ್ತು. ಈ ಕಾರಣದಿಂದಾಗಿ, ಮಗುವಿನ ಸಂಪೂರ್ಣ ಬೆಳವಣಿಗೆಯ ನಿರೀಕ್ಷೆಯು ತುಂಬಾ ಕಡಿಮೆ ಇತ್ತು ಎಂದು ವೈದ್ಯರು ಹೇಳಿದ್ದರು. ಆದರೆ ಸ್ಟೆಫನಿ ಎಂಟು ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ.
    Published by:renukadariyannavar
    First published: