Trigger Finger: ನಿಮ್ಮ ಕೈ ಬೆರಳುಗಳಲ್ಲಿ ಈ ರೀತಿ ಸಮಸ್ಯೆ ಇದ್ಯಾ? ನೆಗ್ಲೆಟ್​ ಮಾಡ್ಬೇಡಿ, ದೊಡ್ಡ ಸಮಸ್ಯೆ ಆಗ್ಬಹುದು!

Trigger Finger: ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾದರೆ ಬೆರಳುಗಳು ನೋವಿನಿಂದ ಕೂಡಿರುತ್ತವೆ. ಇದು ಕೇವಲ ಯಾವುದಾದರು ಒಂದೇ ಬೆರಳಿಗೂ ಸಂಭವಿಸಬುದು ಕೆಲವೊಮ್ಮೆ ಎಲ್ಲಾ ಬೆರಳುಗಳಿಗೂ ಸಂಭವಿಸಬಹುದು.

ಟ್ರಿಗರ್ ಫಿಂಗರ್

ಟ್ರಿಗರ್ ಫಿಂಗರ್

  • Share this:
ಕೈಯಲ್ಲಿರುವ ಎಲ್ಲಾ ಬೆರಳುಗಳು ಸಹ  ಮುಖ್ಯ ಪಾತ್ರವಹಿಸುತ್ತದೆ. ನಿಮ್ಮಲ್ಲಿ ಕೆಲವರು ಬೆರಳು (Finger) ನೋವು ಕಂಡುಬಂದರೂ ಅದರ ಕುರಿತು ಕೇರ್​ ಮಾಡದೇ ಇರಬಹುದು. ಅದು ತನ್ನಷ್ಟಕ್ಕೆ ತಾನೇ ಕಡಿಮೆ ಆಗಬಹುದು ಎಂದು ತುಂಬಾ ದಿನಗಳ ಕಾಲ ಹಾಗೆಯೇ ಬಿಟ್ಟರೇ ಟ್ರಿಗರ್ ಫಿಂಗರ್(Trigger Finger) ಸಮಸ್ಯೆಗೆ ನೀವು ಗುರಿಯಾಗಬಹುದು.  ನಮ್ಮ ಕೈಯಲ್ಲಿರುವ (Hand) ಪ್ರತಿಯೊಂದು ಬೆರಳಿಗೂ ಈ ಸಮಸ್ಯೆ (Problem) ಉದ್ಭವಿಸಬಹುದು. ಹಾಗಾದ್ರೆ ಈ ಟ್ರಿಗರ್ ಫಿಂಗರ್ ಅಂದ್ರೇನು? ಅನ್ನೋ ಕುತೂಹಲ ನಿಮಗಿದ್ಯಾ? ಹಾಗಾದ್ರೆ ಈ ಆರ್ಟಿಕಲ್​ನ ಸಂಪೂರ್ಣ ಓದಿ.

ಟ್ರಿಗರ್ ಫಿಂಗರ್ ಅಂದರೇನು?

ನಮ್ಮ ಕೈಗಳಲ್ಲಿರುವ ಪ್ರತಿಯೊಂದು ಬೆರಳಿಗೂ ಅದರದೇ ಆದ ಬೇರೆ ಬೇರೆ ಕಾರ್ಯಪ್ರವೃತ್ತಿ ಇರುತ್ತದೆ. ಎಲ್ಲಾ ಬೆರಳುಗಳೂ ಸಹ ಒಂದೇ ರೀತಿಯಾಗಿರುವುದಿಲ್ಲ ಪ್ರತಿಯೊಂದು ಬೆರಳೂ ಸಹ ಗಾತ್ರದಲ್ಲಿ ಬದಲಾವಣೆ ಹೊಂದಿರುತ್ತದೆ. ಕೆಲವೊಂದು ಬಾರಿ ಬೆರಳಿನಲ್ಲಿ ಸಹಜವಾಗಿ ನೋವು ಕಂಡುಬಂದರೆ ಅದು ತುಂಬಾ ದಿನಗಳ ಕಾಲ  ಹಾಗೆ ಉಳಿದುಕೊಂಡರೆ ಅದು ಟ್ರಿಗರ್ ಫಿಂಗರ್ ಸಮಸ್ಯೆ ಎನ್ನಬಹುದು. ನಮ್ಮ ಕೈಯಲ್ಲಿರುವ ಎಲ್ಲಾ ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಟ್ರಿಗರ್​​ ಫಿಂಗರ್ ಸಮಸ್ಯೆ ಇದ್ದರೆ ಯಾವ ಬೆರಳುಗಳಲ್ಲೂ ಯಾವುದೇ ಗಾಯವೂ ಕಂಡುಬರುವುದಿಲ್ಲ.

ಟ್ರಿಗರ್ ಫಿಂಗರ್​​ನಿಂದ ಏನಾಗತ್ತೆ?

ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾದರೆ ಬೆರಳುಗಳು ನೋವಿನಿಂದ ಕೂಡಿರುತ್ತವೆ. ಇದು ಕೇವಲ ಯಾವುದಾದರು ಒಂದೇ ಬೆರಳಿಗೂ ಸಂಭವಿಸಬುದು. ಕೆಲವೊಮ್ಮೆ ಎಲ್ಲಾ ಬೆರಳುಗಳಿಗೂ ಸಂಭವಿಸಬಹುದು. ಈ ಸಮಸ್ಯೆ ಉಂಟಾದರೆ ಬೆರಳನ್ನು ನೇರವಾಗಿ ಬಿಡಿಸಲು ಬರುವುದಿಲ್ಲ. ಅದು ಮೆದುಳಿನ ಆದೇಶವನ್ನು ಪಾಲಿಸುವುದಿಲ್ಲ. ಒತ್ತಾಯ ಪೂರ್ವಕವಾಗಿ ಬೆರಳಿನ ಚಲನೆ ಮಾಡಿದರೆ ಬೆರಳು ಲಾಕ್ ಆದಂತೆ ಭಾಸವಾಗುತ್ತದೆ. ಈ ಸ್ಥಿತಿಯನ್ನು "ಸ್ಟೆನೋಸಿಂಗ್ ಟೆನೊಸೈನೋವಿಟಿಸ್" ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ತೆಂಗಿನಕಾಯಿ ಅಷ್ಟೇ ಅಲ್ಲ ತೆಂಗಿನ ನೀರೂ ಉಪಯೋಗಿ! ಇದರಿಂದ ನಿಮ್ಮ ಮುಖ ಹೊಳೆಯುತ್ತೆ ನೋಡಿ

ಸಮಸ್ಯೆಗೆ ಕಾರಣ:

ಉಂಗುರ ಬೆರಳು ಮತ್ತು ಹೆಬ್ಬೆರಳು ಹೆಚ್ಚಾಗಿ ಟ್ರಿಗರ್ ಫಿಂಗರ್ ಸಮಸ್ಯೆಗೆ ಒಳಗಾಗುತ್ತದೆ. ಆದರೆ ಕೆಲವೊಮ್ಮೆ ಇತರ ಬೆರಳುಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೆಬ್ಬೆರಳು ಒಳಗೊಂಡಿರುವಾಗ, ಸ್ಥಿತಿಯನ್ನು "ಪ್ರಚೋದಕ ಹೆಬ್ಬೆರಳು" ಎಂದು ಕರೆಯಲಾಗುತ್ತದೆ.

ಫ್ಲೆಕ್ಸರ್ ಸ್ನಾಯುರಜ್ಜುಗಳು ಉದ್ದವಾದ ಬಳ್ಳಿಯಂತಹ ರಚನೆ ಹೊಂದಿರುತ್ತದೆ. ಅದು ಮುಂದೋಳಿನ ಸ್ನಾಯುಗಳನ್ನು ಬೆರಳುಗಳ ಮೂಳೆಯೊಟ್ಟಿಗೆ ಜೋಡಿಸುತ್ತದೆ. ಸ್ನಾಯುಗಳು ಸಂಕುಚಿತಗೊಂಡಾಗ, ಫ್ಲೆಕ್ಟರ್ ಸ್ನಾಯುರಜ್ಜುಗಳು ಬೆರಳುಗಳನ್ನು ಬಗ್ಗಿಸಲು ಅನುವು ಮಾಡಿಕೊಡುತ್ತದೆ. ಪ್ರತಿಯೊಂದು ಫ್ಲೆಕ್ಸರ್ ಸ್ನಾಯುರಜ್ಜುಗಳು ಅಂಗೈ ಮತ್ತು ಬೆರಳುಗಳಲ್ಲಿನ ಸುರಂಗದ ಮೂಲಕ ಹಾದುಹೋಗುತ್ತವೆ ಅದು ಬೆರಳು ಬಾಗಲು ಮತ್ತು ನೇರವಾಗಿ ಚಲಿಸುವಂತೆ ಮಾಡುತ್ತದೆ. ಈ ಸುರಂಗವನ್ನು "ಸ್ನಾಯುರಜ್ಜು ಪೊರೆ" ಎಂದು ಕರೆಯಲಾಗುತ್ತದೆ. ಇದರಲ್ಲಿ ಸಮಸ್ಯೆ ಉಂಟಾದಾಗ ಟ್ರಿಗರ್ ಫಿಂಗರ್ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಚಪಾತಿ ನೂಡಲ್ಸ್​ ಮಾಡಿಕೊಟ್ಟರೆ ಮಕ್ಕಳು ನೋ ಅನ್ನಲ್ಲ, ಇದು ಆರೋಗ್ಯಕರ ಕೂಡ

ಟ್ರಿಗರ್ ಫಿಂಗರ್ ಲಕ್ಷಣಗಳು:

- ಬೆರಳನ್ನು ಬಾಗಿಸುವ ಗಂಟುಗಳು ಲಾಕ್ ಆಗಿರುತ್ತವೆ.
- ಅಂಗೈಯ ಭಾಗದ ಬೆರಳಿನ ಬುಡದಲ್ಲಿ ಮೃದುವಾದ ಗಂಟುಗಳಾಗಬಹುದು.
- ಬೆರಳನ್ನು ಬಾಗಿಸುವಾಗ ಅಥವಾ ನೇರಗೊಳಿಸಿವಾಗ ನೋವು ಕಾಣಿಸಿಕೊಳ್ಳುತ್ತದೆ.
- ಬೆಳಿಗ್ಗೆ ಎದ್ದಾಗ ಕೈ ಬೆರಳು ನೋವು ಹೆಚ್ಚಿರಬಹುದು.

ಪತ್ತೆ ಹಚ್ಚುವುದು ಹೇಗೆ:
- ನೀವೇ ಪರೀಕ್ಷಿಸಿಕೊಳ್ಳಬಹುದು.
- ವೈದರೊಂದಿಗೆ ಸಮಸ್ಯೆ ಕುರಿತು ಮಾತನಾಡಿದಾಗ ತಿಳಿಯಬಹುದು.
- ಕ್ಷ - ಕಿರಣ ಪರೀಕ್ಷೆ ಮಾಡಿ ಪತ್ತೆ ಹಚ್ಚಬಹುದು.
- ತುಂಬಾ ದಿನಗಳ ಕಾಲ ನೋವು ಕಾಣಿಸಿಕೊಂಡಾಗ ಪತ್ತೆ ಹಚ್ಚಬಹುದು

ನಿಮ್ಮ ಬೆರಳುಗಳಲ್ಲಿ ಊರಿಯೂತ ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗಿ. ಬೆರಳುಗಳು ಬಿಸಿಯಾದಂತಹ ಅನುಭವ ಆಗುವುದು ಟ್ರಿಗರ್ ಫಿಂಗರ್​​ನ ಮೊದಲ ಲಕ್ಷಣವಾಗಿರುತ್ತದೆ. ಕೆಲವೊಮ್ಮೆ ಬಲವಂತವಾಗಿ ಬೆರಳುಗಳಲ್ಲಿ ಬಳಸಿದಾಗಲೂ ಹೀಗಾಗಬಹುದು.
First published: