• Home
  • »
  • News
  • »
  • lifestyle
  • »
  • Infertility: ಬಂಜೆತನ ನಿವಾರಿಸುವ ಈ ಹೊಸ ತಂತ್ರಜ್ಞಾನ ಯಾವುದು? ಈ ಬಗ್ಗೆ ಸಂಶೋಧನಾ ಅಧ್ಯಯನ ಏನು ಹೇಳಿದೆ ನೋಡಿ

Infertility: ಬಂಜೆತನ ನಿವಾರಿಸುವ ಈ ಹೊಸ ತಂತ್ರಜ್ಞಾನ ಯಾವುದು? ಈ ಬಗ್ಗೆ ಸಂಶೋಧನಾ ಅಧ್ಯಯನ ಏನು ಹೇಳಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿ ಹೆಣ್ಣಿಗೂ ತಾಯ್ತನದ ಸುಖವನ್ನು, ಮಕ್ಕಳ ಲಾಲನೆ-ಪಾಲನೆಗಳನ್ನು ಮಾಡಬೇಕು ಎಂದು ಅನಿಸುತ್ತದೆ. ಆದರೆ ಎಲ್ಲರಿಗೂ ಈ ಮಕ್ಕಳ ಭಾಗ್ಯ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳು ಇಲ್ಲದವರನ್ನು ಬಂಜೆ ಎಂದು ಹೀಯಾಳಿಸಿ ಮಾತನಾಡುತ್ತಿದ್ದರು. ಆದರೆ ಸಮಯ ಬೆಳೆದಂತೆ ಇಂದು ತಂತ್ರಜ್ಞಾನವು ಎತ್ತರವಾಗಿ ಬೆಳೆದಿದೆ. ತಂತ್ರಜ್ಞಾನ ಮತ್ತು ವಿಜ್ಞಾನವು ಮಕ್ಕಳ ಕೊರಗನ್ನು ನಿವಾರಿಸುವಲ್ಲಿ ಮಕ್ಕಳು ಇಲ್ಲದವರಿಗೆ ಸಹಾಯ ಮಾಡುತ್ತಿದೆ.

ಮುಂದೆ ಓದಿ ...
  • Share this:

ಮಕ್ಕಳು (Children) ಎಂದರೆ ಎಲ್ಲರಿಗೂ ಇಷ್ಟ. ಮಕ್ಕಳ ಆಟ-ಪಾಠಗಳನ್ನು ನೋಡಿದರೆ ಸಾಕು ಕೆಲಸದಿಂದ ಎಷ್ಟೇ ದಣಿದಿದ್ದರೂ ಕೂಡ ಮನಸ್ಸು ಉಲ್ಲಾಸಗೊಂಡು ಮಕ್ಕಳನ್ನು ಮುದ್ದಾಡಬೇಕು ಎಂದು ಅನಿಸುತ್ತದೆ . ಪ್ರತಿ ಹೆಣ್ಣಿಗೂ ತಾಯ್ತನದ (Motherhood) ಸುಖವನ್ನು, ಮಕ್ಕಳ ಲಾಲನೆ-ಪಾಲನೆಗಳನ್ನು ಮಾಡಬೇಕು ಎಂದು ಅನಿಸುತ್ತದೆ. ಆದರೆ ಎಲ್ಲರಿಗೂ ಈ ಮಕ್ಕಳ ಭಾಗ್ಯ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳು ಇಲ್ಲದವರನ್ನು ಬಂಜೆ (Infertile) ಎಂದು ಹೀಯಾಳಿಸಿ ಮಾತನಾಡುತ್ತಿದ್ದರು. ಆದರೆ ಸಮಯ ಬೆಳೆದಂತೆ ಇಂದು ತಂತ್ರಜ್ಞಾನವು (Technology) ಎತ್ತರವಾಗಿ ಬೆಳೆದಿದೆ. ತಂತ್ರಜ್ಞಾನ ಮತ್ತು ವಿಜ್ಞಾನವು ಮಕ್ಕಳ ಕೊರಗನ್ನು ನಿವಾರಿಸುವಲ್ಲಿ ಮಕ್ಕಳು ಇಲ್ಲದವರಿಗೆ ಸಹಾಯ ಮಾಡುತ್ತಿದೆ.


ಹಾಗಿದ್ರೆ ಈ ಬಂಜೆತನ ನಿವಾರಿಸುವ ಈ ಹೊಸ ತಂತ್ರಜ್ಞಾನ ಯಾವುದು?
ಆ ಹೊಸ ವಿಸ್ಮಯಕಾರಿ ತಂತ್ರಜ್ಞಾನ ಇನ್‌ ವಿಟ್ರೋ ಫಲಿಕರಣ( ಐವಿಎಫ್‌) ನಮ್ಮ ಹಲವಾರು ವರ್ಷಗಳ ಬಯಕೆ ಈಡೆರುತ್ತದೆಯೇ ? ಈ ತಂತ್ರಜ್ಞಾನದಿಂದ ನಾವು ಮಗುವನ್ನು ಪಡೆಯಬಹುದೇ ಎಂದು ವೈದ್ಯರ ಸಲಹೆಯನ್ನು ಅನೇಕರು ಕೇಳುತ್ತಾರೆ. ಐವಿಎಫ್ ತಂತ್ರಜ್ಞಾನವು ಸಂತಾನೋತ್ಪತ್ತಿ ತಂತ್ರಜ್ಞಾನದ ಪ್ರಕ್ರಿಯೆಯಾಗಿದ್ದು, ವೀರ್ಯವನ್ನು ಮೊಟ್ಟೆಯೊಂದಿಗೆ ಫಲವತ್ತಾಗಿಸುವ ಮೂಲಕ ಆರೋಗ್ಯಕರ ಭ್ರೂಣವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ನಂತರ ಭ್ರೂಣವನ್ನು ಗರ್ಭಾಶಯದಲ್ಲಿ ಅಳವಡಿಸಿ ಗರ್ಭವತಿಯಾಗುವಂತೆ ಕೃತಕವಾಗಿ ಮಾಡುವ ಪ್ರಕ್ರಿಯೆಯಾಗಿದೆ.


ಇದನ್ನೂ ಓದಿ: Diabetes: ಈ ಸಮಸ್ಯೆಗಳು ಕಾಣಿಸಿದ್ರೆ ನಿರ್ಲಕ್ಷ್ಯ ಬೇಡ, ಇದು ಮಧುಮೇಹದ ಲಕ್ಷಣಗಳಿರಬಹುದು


ನೀವು ಸಹ ಇಂಥಾ ವೈಜ್ಞಾನಿಕ ವಿಸ್ಮಯಕ್ಕೆ ಒಳಗಾಗಲು ಬಯಸಿದ್ದರೆ, ಐವಿಎಫ್‌ ಮೂಲಕ ಮಗು ಪಡೆಯಲು ಮುಂದಾಗಿದ್ದರೆ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಲೇಖನವನ್ನೊಮ್ಮೆ ಓದಿ. ಇಲ್ಲಿ ಐವಿಎಫ್‌ ಮೂಲಕ ಮಗು ಪಡೆಯುವ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳು ಬಗ್ಗೆ ತಿಳಿಸಲಿದ್ದೇವೆ. ಆ ಸಮಸ್ಯೆಗಳಲ್ಲಿ ಮುಖ್ಯವಾಗಿ ಅನೇಕ ಐವಿಎಫ್‌ ಭ್ರೂಣಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಬೆಳವಣಿಗೆ ಹೊಂದಲು ವಿಫಲವಾಗುತ್ತಿವೆ.


ಈ ಬಗ್ಗೆ ಅಧ್ಯಯನದಲ್ಲಿ ಏನಿದೆ?
ಈ ಐವಿಎಫ್‌ ಮೂಲಕ ರೂಪಿಸಿದ ಅನೇಕ ಮಾನವ ಭ್ರೂಣಗಳು ಚೆಲ್ಲಾಪಿಲ್ಲಿಯಾಗುತ್ತವೆ. ಇದರ ಪರಿಣಾಮವಾಗಿ ದೇಹದಲ್ಲಿರುವ ಜೀವಕೋಶಗಳು ಕಡಿಮೆ ವರ್ಣತಂತುಗಳನ್ನು ಹೊಂದುತ್ತವೆ. ಇದರ ಅನೇಕ ಅಧ್ಯಯನಗಳು ಈಗಾಗಲೇ ನಡೆಯುತ್ತಿವೆ. ಅವುಗಳಲ್ಲಿ ಒಂದಾದ ಸಂಶೋಧನಾ ಅಧ್ಯಯನವು ಕೊಲಂಬಿಯಾ ಯೂನಿವರ್ಸಿಟಿ ವ್ಯಾಗೆಲೋಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್‌ ಮತ್ತು ಸಹಾಯಕ ಪ್ರೊಫೆಸರ್ ಆಫ್ ಡೆವಲಪ್‌ಮೆಂಟಲ್ ಸೆಲ್ ಬಯಾಲಜಿ ಅಧ್ಯಯನದ ಮುಖ್ಯಸ್ಥ ಡೈಟರ್ ಎಗ್ಲಿಯ ಪ್ರಕಾರ, "ಈ ಐವಿಎಫ್‌ ನ ಪ್ರಕ್ರಿಯೆಯಲ್ಲಿ ಡಿಎನ್‌ಎ ಅನ್ನು ನಕಲು ಮಾಡುವುದು ಆರಂಭಿಕ ಭ್ರೂಣಕ್ಕೆ ಬಹಳ ಕಷ್ಟವಾಗಿರುವ ಪ್ರಕ್ರಿಯೆ ಆಗಿರುತ್ತದೆ.  ಇದರ ನಂತರ ಜೀವಕೋಶದ ಅಂತಿಮ ಹಂತವಾದ ವಿಭಜನೆಯಲ್ಲಿ, ವರ್ಣತಂತುಗಳ ಎರಡು ಗುಂಪುಗಳು ಒಂದೇ ಮರಿ ಜೀವಕೋಶಗಳಾಗಿ ಸೃಷ್ಟಿಯಾಗುವ ಸಮಯದಲ್ಲಿ ಜೀವಕೋಶಗಳು ಕಡಿಮೆ ವರ್ಣತಂತುಗಳನ್ನು ಹೊಂದಿ ಆ ಐವಿಎಫ್‌ ಭ್ರೂಣವು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಬೆಳವಣಿಗೆ ಹೊಂದಲು ವಿಫಲವಾಗುತ್ತವೆ” ಎಂದು ಸಂಶೋಧನಾ ಅಧ್ಯಯನದಲ್ಲಿ ತಿಳಿಸಿದ್ದಾರೆ.


ಐವಿಎಫ್‌ ಸುತ್ತುಗಳ ಅಗತ್ಯವೇನು
ಐವಿಎಫ್‌ ಮೂಲಕ ಉತ್ಪತ್ತಿಯಾಗುವ ಅನೇಕ ಮಾನವ ಭ್ರೂಣಗಳು ಗರ್ಭಧಾರಣೆಯ ನಂತರ ಕೆಲವು ದಿನಗಳ ನಂತರ ಬೆಳೆಯುವುದನ್ನು ನಿಲ್ಲಿಸುತ್ತವೆ. ಸಂತಾನೋತ್ಪತ್ತಿ ಚಿಕಿತ್ಸೆಯನ್ನು ಪಡೆಯುವ ಅನೇಕ ಮಹಿಳೆಯರಿಗೆ ಗರ್ಭಿಣಿಯಾಗಲು ಹಲವಾರು ಐವಿಎಫ್‌ ಸುತ್ತುಗಳ ಅಗತ್ಯವಿರುತ್ತದೆ ಮತ್ತು ಇದು ಸ್ವಲ್ಪ ದುಬಾರಿ ಚಿಕಿತ್ಸೆ ಆಗಿರುವುದರಿಂದ ಸಾಮಾನ್ಯ ಜನರಿಗೆ ಈ ಚಿಕಿತ್ಸೆ ತಲುಪುವುದು ಸ್ವಲ್ಪ ಕಷ್ಟವೇ ಸರಿ.


ಇದನ್ನೂ ಓದಿ:  Best Places: ಭಾರತದ ಈ ಸ್ಥಳಗಳಿಗೆ ನಿಮ್ಮ ಮಕ್ಕಳೊಂದಿಗೆ ಮಿಸ್ ಮಾಡದೇ ಹೋಗಿ!


ಏನೇ ಇರಲಿ, ಈ ಐವಿಎಫ್‌ ಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಬಯಸುವವರಿಗೆ ಈ ಚಿಕಿತ್ಸೆಯಲ್ಲಿ ಅನೇಕ ಮೇಲ್ವಿಚಾರಣೆಗಳು ಇರುತ್ತವೆ. ಸಂತಾನೋತ್ಪತ್ತಿ ಪ್ರಕ್ರಿಯೆ ಮುಗಿದು ಮಗು ಆಗುವರೆಗೂ ನೀವು ವೈದ್ಯರ ಕಣ್ಗಾವಲ್ಲಿನಲ್ಲಿ ಇರಬೇಕಾಗುತ್ತದೆ. ಇವೆಲ್ಲ ಸವಾಲುಗಳಿಗೆ ನೀವು ಮುಂಚೆ ತಯಾರಾಗಿ ಧೈರ್ಯದಿಂದ ಮುನ್ನುಗ್ಗಿದ್ದರೆ ನೀವು ಮುದ್ದಾದ ಮಗುವಿಗೆ ಜನ್ಮ ನೀಡುವುದರಲ್ಲಿ ಸಂಶಯವಿಲ್ಲ.

Published by:Ashwini Prabhu
First published: