ಸೂರ್ಯನ (Sun) ಅತೀ ಬಿಸಿಲ ತಾಪ (Heat), ಬಿಸಿ ಗಾಳಿ (Heat Wave) ಮತ್ತು ತೇವಾಂಶದಿಂದಾಗಿ, ದೇಶದ (Country) ಅನೇಕ ರಾಜ್ಯಗಳು (States) ತೀವ್ರ ಶಾಖವನ್ನು ಎದುರಿಸುತ್ತಿವೆ. ಹಲವು ಕಡೆಗಳಲ್ಲಿ ಕೂಲರ್, ಎಸಿ ಇದ್ದರೂ ಸಹ ಬಿಸಿಲಿನ ಝಳದಿಂದಾಗಿ ಜನರು ಕೂಲ್ ಆಗಲು ಸಾಧ್ಯವಿಲ್ಲದೇ ಒದ್ದಾಡುತ್ತಿದ್ದಾರೆ. ಜನರು ಹಗಲಿನಲ್ಲಿ ಹೊರಗೆ ಹೋದರೆ ಬಿಸಿಲ ತಾಪಮಾನದಿಂದಾಗಿ ಬೆವರಿನಿಂದ ಒದ್ದೆಯಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆದರೆ ಅನೇಕ ಜನರು ರಾತ್ರಿ ಮಲಗಿದಾಗ ಹೆಚ್ಚು ಬೆವರುತ್ತಾರೆ. ಬೇಸಿಗೆಯಲ್ಲಿ ಮಾತ್ರವಲ್ಲದೇ ಪ್ರತಿ ಋತುವಿನಲ್ಲಿಯೂ ರಾತ್ರಿ ಮಲಗಿದ ನಂತರ ಅತಿಯಾಗಿ ಬೆವರುವುದು ಸಾಕಷ್ಟು ಆರೋಗ್ಯ ತೊಂದರೆ ಉಂಟು ಮಾಡುತ್ತದೆ.
ರಾತ್ರಿ ಬೆವರುವಿಕೆ ಸಮಸ್ಯೆ
ರಾಷ್ಟ್ರೀಯ ಆರೋಗ್ಯ ಸೇವೆಯು ಹೇಳುವ ಪ್ರಕಾರ, ರಾತ್ರಿಯಲ್ಲಿ ಹೆಚ್ಚು ಬೆವರುವಿಕೆ ಹೆಚ್ಚಿನ ಜನರಿಗೆ ಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿಸುತ್ತದೆ. ನೈಸರ್ಗಿಕ ಗಾಳಿಯ ತೆಗೆದುಕೊಳ್ಳುವುದು ಮತ್ತು ನೈಸರ್ಗಿಕ ಗಾಳಿಯಲ್ಲಿ ಮಲಗುವುದು,
ಹತ್ತಿ ಬಟ್ಟೆ ಮತ್ತು ತಣ್ಣೀರು ಧರಿಸುವುದು ಬೇಸಿಗೆಯಲ್ಲಿ ಹೆಚ್ಚು ತಂಪು ಮಾಡಲು ಸಹಕಾರಿ. ಇತ್ಯಾದಿ ಕಾರಣಗಳು ಬೆವರುವಿಕೆಗೆ ಮುಕ್ತಿ ಪಡೆಯಲು ಸಹಕಾರಿ. ರಾತ್ರಿಯಲ್ಲಿ ಬೆವರುವಿಕೆಗೆ ಕಾರಣ ಏನು ಎಂದು ತಿಳಿಯುವುದು ಮುಖ್ಯ. ಆತಂಕ ಅತಿಯಾದಾಗ, ಮನಸ್ಸು ಸ್ಥಿರವಾಗಿರದೇ ಇದ್ದಾಗ, ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಬೆವರುವಿಕೆ ಇರುತ್ತದೆ.
ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ
ಋತುಬಂಧದ ಸಂಕೇತ
NHS ಪ್ರಕಾರ, ಮಹಿಳೆಯರು ರಾತ್ರಿಯಲ್ಲಿ ಬೆವರುವಿಕೆ ಅನುಭವಿಸಿದರೆ, ಅದು ಋತುಬಂಧದ ಸಂಕೇತ ಆಗಿರಬಹುದು. ಈ ಸಮಯದಲ್ಲಿ, ಹಾರ್ಮೋನುಗಳ ಬದಲಾವಣೆಯಿಂದಾಗಿ ವಯಸ್ಸಾದ ಮಹಿಳೆಯರು ರಾತ್ರಿಯಲ್ಲಿ ಹೆಚ್ಚು ಬೆವರುವಿಕೆ ಅನುಭವಿಸುತ್ತಾರೆ. ಮಹಿಳೆಯರ ವಯಸ್ಸು 45-55 ವರ್ಷಗಳ ನಡುವೆ ಇದ್ದರೆ ಇದು ಅತಿಯಾದ ಬೆವರುವಿಕೆಗೆ ಕಾರಣ ಆಗಬಹುದು.
ಔಷಧಿ ಸೇವಿಸುವವರಲ್ಲಿ ಬೆವರುವಿಕೆ
ಹೆಚ್ಚು ಔಷಧಿ ಸೇವಿಸುವವರು, ರಾತ್ರಿ ಮಲಗುವಾಗಲೂ ಬೆವರು ಬರಬಹುದು. NHS ಪ್ರಕಾರ, ಬೆವರುವುದು ಕೂಡ ಔಷಧಿಗಳ ಅಡ್ಡ ಪರಿಣಾಮ ಆಗಿದೆ. ಖಿನ್ನತೆ, ನೋವು ನಿವಾರಕಗಳು, ಸ್ಟೀರಾಯ್ಡ್ಗಳು ರಾತ್ರಿ ಬೆವರುವಿಕೆಗೆ ಕಾರಣ ಆಗಬಹುದು.
ರಕ್ತದ ಸಕ್ಕರೆ ಮಟ್ಟ ಕಡಿಮೆ ಆದಾಗ
ರಕ್ತದ ಸಕ್ಕರೆ ಮಟ್ಟ ಕಡಿಮೆ ಆಗುವದನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯುತ್ತಾರೆ. ಒಬ್ಬರ ದೇಹದಲ್ಲಿ ರಕ್ತದ ಸಕ್ಕರೆ ತುಂಬಾ ಕಡಿಮೆಯಾದಾಗ, ಈ ಸ್ಥಿತಿ ಬರುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ಮಧುಮೇಹಕ್ಕೆ ಸಂಬಂಧ ಪಟ್ಟಿದೆ. ಯಾರ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಇರುತ್ತದೆಯೋ ಆ ವ್ಯಕ್ತಿ ರಾತ್ರಿಯೂ ಬೆವರುತ್ತಾನೆ.
ಡಾ. ನೆಸೊಚಿ ಒಕೆಕೆ-ಇಗ್ಬೊಕ್ವೆ ಪ್ರಕಾರ, ರಕ್ತದ ಸಕ್ಕರೆ ಮಟ್ಟ ತುಂಬಾ ಕಡಿಮೆ ಆದಾಗ ಅದು ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಮತ್ತು ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆ ಆದಾಗ ಬೆವರುವಿಕೆಗೆ ಕಾರಣವಾಗುವ ಬೆವರು ಗ್ರಂಥಿಗಳು ಸಕ್ರಿಯಗೊಳ್ಳುತ್ತವೆ. ಇದು ಬೆವರುವಿಕೆಗೆ ಕಾರಣ ಆಗುತ್ತದೆ.
ಸೋಂಕು ಇದ್ದಾಗ ಬೆವರುವಿಕೆ
ರಾತ್ರಿಯಲ್ಲಿ ಬೆವರುವುದು ಸೋಂಕು ಅಥವಾ ಸೋಂಕಿನ ಸಂಕೇತ ಆಗಿರಬಹುದು. ನೀವು ಸೋಂಕಿಗೆ ಒಳಗಾದಾಗ ರೋಗ ನಿರೋಧಕ ಶಕ್ತಿ ಆ ವೈರಸ್ ವಿರುದ್ಧ ಹೋರಾಡುತ್ತದೆ. ಮತ್ತು ಅದರಿಂದ ನಿಮ್ಮನ್ನು ರಕ್ಷಿಸುತ್ತದೆ. ಆ ಸಮಯದಲ್ಲಿ ಹೆಚ್ಚು ಬೆವರುವಿಕೆ ಆರಂಭವಾಗುತ್ತದೆ.
ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು
ಮಲಗುವ ಮೊದಲು ಹೆಚ್ಚು ಪಾನೀಯ ಸೇವನೆ
ಮಲಗುವ ಮೊದಲು ನೀವು ಒಂದು ಅಥವಾ ಎರಡು ಪಾನೀಯಗಳನ್ನು ಸೇವಿಸಿದರೆ ಅದು ರಾತ್ರಿ ಬೆವರುವಿಕೆಗೆ ಕಾರಣ ಆಗಬಹುದು. ಆಲ್ಕೋಹಾಲ್ ದೇಹದ ಮೂಲಕ ಹಾದು ಹೋಗುವ ಗಾಳಿಯ ರಂಧ್ರಗಳನ್ನು ಮುಚ್ಚುವುದರಿಂದ ಇದು ಸಂಭವಿಸುತ್ತದೆ. ರಾತ್ರಿ ಬೆವರುವಿಕೆ ಕೆಲವು ಕ್ಯಾನ್ಸರ್ಗಳ ಆರಂಭಿಕ ಚಿಹ್ನೆಯಾಗಿರಬಹುದು. ಲಿಂಫೋಮಾ ರಕ್ತ ಕ್ಯಾನ್ಸರ್ ನಲ್ಲಿ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ