Meditation: ನಿಮ್ಮ ನೋವನ್ನು ಸುಧಾರಿಸುವಲ್ಲಿ ಧ್ಯಾನದ ಪಾತ್ರವೇನು? ಅಧ್ಯಯನಗಳು ಏನು ಹೇಳುತ್ತಿವೆ ನೋಡಿ

ಇತ್ತೀಚಿಗೆ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ಮೆದುಳಿನ ಚಟುವಟಿಕೆ ಮತ್ತು ನೋವುಗಳ ಗ್ರಹಿಕೆಯಲ್ಲಿ ಹೇಗೆ ಈ ಸಾವಧಾನತೆ ಧ್ಯಾನವು ತನ್ನ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸಿದ್ದಾರೆ. ಈ ಸಂಶೋಧನೆಯನ್ನು 'PAIN' ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಧುನಿಕ ಯುಗದಲ್ಲಿ ಜೀವನಶೈಲಿಯ ಬದಲಾವಣೆಯಿಂದ ಅನೇಕ ಆರೋಗ್ಯ ತೊಂದರೆಗಳನ್ನು ನಾವು ದಿನನಿತ್ಯ ಎದುರಿಸುತ್ತಲೇ ಇರುತ್ತೇವೆ. ಇತ್ತೀಚಿಗೆ ಸಂಶೋಧಕರು (Researchers) ನಡೆಸಿದ ಅಧ್ಯಯನವೊಂದರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ಮೆದುಳಿನ (Brain) ಚಟುವಟಿಕೆ ಮತ್ತು ನೋವುಗಳ ಗ್ರಹಿಕೆಯಲ್ಲಿ ಹೇಗೆ ಈ ಸಾವಧಾನತೆ ಧ್ಯಾನವು (Meditation) ತನ್ನ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸಿದ್ದಾರೆ. ಈ ಸಂಶೋಧನೆಯನ್ನು 'PAIN' ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ವರ್ಷ ಜುಲೈ 7 ರಂದು PAIN ಜರ್ನಲ್‌ನಲ್ಲಿ ಬಿಡುಗಡೆಯಾದ ಈ ಅಧ್ಯಯನವು, ಸಾವಧಾನತೆ ಧ್ಯಾನವು ದೇಹದ ನೋವನ್ನು (Pain) ಕಂಡುಹಿಡಿಯುವುದಕ್ಕೆ ಕಾರಣವಾದ ಮೆದುಳಿನಲ್ಲಿರುವ ಸ್ಥಳಗಳು ಮತ್ತು ಸ್ವಯಂ ಭಾವನೆಯನ್ನು ಉಂಟುಮಾಡುವ ನಡುವಿನ ಮಾಹಿತಿಯ ಹರಿವನ್ನು ತೆಗೆದುಹಾಕುತ್ತದೆ ಎಂದು ತೋರಿಸಲಾಗಿದೆ.

ಈ ರೀತಿಯ ಪ್ರಕ್ರಿಯೆಯಲ್ಲಿ, ನೋವಿನ ಸಂಕೇತಗಳು ಇನ್ನೂ ದೇಹದಿಂದ ಮೆದುಳಿಗೆ ಹೋಗುತ್ತಲೆ ಇರುತ್ತವೆ. ಆದರೆ ವ್ಯಕ್ತಿಯು ಆ ನೋವಿನ ಭಾವನೆಗಳ ಮೇಲೆ ಕಡಿಮೆ ನಿಯಂತ್ರಣವನ್ನು ಹೊಂದಿರುವುದರಿಂದ, ಅವರು ಕಡಿಮೆ ನೋವು ಮತ್ತು ಸಂಕಟವನ್ನು ಅನುಭವಿಸುತ್ತಾರೆ.

ಧ್ಯಾನ ನೋವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಅರಿವಳಿಕೆ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಹಿರಿಯ ಲೇಖಕ ಫಾಡೆಲ್ ಝೀಡಾನ್ ಪ್ರಕಾರ, ʼನೀವು ನಿಮ್ಮ ಅನುಭವಗಳು ಆಗುವುದಿಲ್ಲ ಎಂಬ ಕಲ್ಪನೆಯು ಸಾವಧಾನತೆಯ ಮೂಲಭೂತ ಅಂಶಗಳಲ್ಲಿ ಒಂದಾಗಿದೆ.

ಹಾಗಿದ್ರೆ ಹೆಚ್ಚಿನ ನೋವಿನ ಸಮಯದಲ್ಲಿ ಮೆದುಳಿನಲ್ಲಿ ಈ ಸಾವಧಾನತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನಾವೀಗ ಗಮನಿಸಬಹುದು ಅದೇನೆಂದರೆ "ನಿಮ್ಮ ಅಹಂ ಅಥವಾ ಸ್ವಯಂ ಪ್ರಜ್ಞೆಯನ್ನು ನೀಡದೇ ಆಲೋಚನೆಗಳು ಮತ್ತು ಸಂವೇದನೆಗಳನ್ನು ಗ್ರಹಿಸಲು ನಿಮಗೆ ನೀವೇ ತರಬೇತಿ ನೀಡುತ್ತೀರಿ" ಎಂದು ಹೇಳಿದರು.

ಇದರ ಮೇಲೆ ಅಧ್ಯಯನ ಹೇಗೆ ಮಾಡಲಾಯಿತು 
ಈ ಸಾವಧಾನತೆಯ ಶಾಖ ಪ್ರಚೋದಕಗಳ ಸರಣಿಗೆ ಭಾಗವಹಿಸುವವರು ಈ ಪ್ರಯೋಗದ ಎಲ್ಲ ಹಂತಗಳಲ್ಲೂ ತಮ್ಮ ನೋವಿನ ಮಟ್ಟವನ್ನುಪರಿಶೀಲಿಸಬೇಕಾಗುತ್ತದೆ. ಅದರ ನಂತರ, ಭಾಗವಹಿಸುವವರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಇಲ್ಲಿ ಭಾಗವಹಿಸಿದವರು ವಿಭಿನ್ನ 20-ನಿಮಿಷಗಳ ನಾಲ್ಕು ಸಾವಧಾನತೆ ತರಬೇತಿಗಳನ್ನು ಮುಗಿಸುತ್ತಾರೆ.

ಇದನ್ನೂ ಓದಿ: Hormonal Imbalance: ಹಾರ್ಮೋನುಗಳ ಅಸಮತೋಲನ ಸಂಕೇತ ಮತ್ತು ಲಕ್ಷಣಗಳು ಯಾವವು?

ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ಸಂವೇದನೆಗಳನ್ನು ಮೊದಲು ಗಮನಿಸುವ ಮೂಲಕ ಸ್ವಯಂ-ಉಲ್ಲೇಖದ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಈ ತರಬೇತಿ ಅವಧಿಗಳಲ್ಲಿ ತಮ್ಮ ಉಸಿರಾಟದ ಬಗ್ಗೆ ಗಮನ ಹರಿಸಲು ಅವರಿಗೆ ತಿಳಿಸಲಾಯಿತು.

ನಿಜವಾಗಿಯೂ ಧ್ಯಾನದಿಂದ ನೋವನ್ನು ಕಡಿಮೆ ಮಾಡಬಹುದೇ
ಈ ಮೈಂಡ್‌ಫುಲ್‌ನೆಸ್ ಅಥವಾ ಸಾವಧಾನತೆಯ ಗುಂಪಿನಲ್ಲಿರುವ ವ್ಯಕ್ತಿಗಳು ಈ ಮೊದಲು ಅಸಹನೀಯ ಶಾಖವನ್ನು ಪಡೆದಿರುತ್ತಾರೆ. ಇದರ ನಡುವೆ ಅವರಿಗೆ ಧ್ಯಾನ ಮಾಡಲು ನಿರ್ದೇಶಿಸಲಾಗಿದೆ, ಆದರೆ ನಿಯಂತ್ರಣ ಗುಂಪಿನಲ್ಲಿರುವವರಿಗೆ ಅಧ್ಯಯನದ ಕೊನೆಯ ದಿನದಂದು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗುತ್ತದೆ. ಇದರ ನಂತರ ಎರಡೂ ಗುಂಪುಗಳ ಮೆದುಳಿನ ಚಟುವಟಿಕೆಯನ್ನು ಮತ್ತೊಮ್ಮೆ ಪರೀಕ್ಷಿಸಲಾಯಿತು. ಸಕ್ರಿಯವಾಗಿ ಧ್ಯಾನ ಮಾಡುತ್ತಿರುವವರು 32 % ನಷ್ಟು ಕಡಿಮೆ ತೀವ್ರತೆ ಮತ್ತು 33 % ಕಡಿಮೆ ಅಹಿತಕರ ನೋವನ್ನು ಅನುಭವಿಸುತ್ತಾರೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

ಝೀಡಾನ್ ಅವರ ಪ್ರಕಾರ, “ಮನುಷ್ಯನಲ್ಲಿ ದೀರ್ಘಕಾಲದ ನೋವಿನೊಂದಿಗೆ ಭಾವನಾತ್ಮಕ ವೇದನೆ ಮತ್ತು ಹತಾಶೆಯು ಆಗಾಗ ನಿಜವಾದ ನೋವಿಗಿಂತ ಅನೇಕ ಜನರ ಮೇಲೆ ಹೆಚ್ಚಿನ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಅವರ ಸಂಕಟವು ತೀವ್ರಗೊಳ್ಳುತ್ತದೆ ಏಕೆಂದರೆ ಅದರ ನೋವನ್ನು ಒಬ್ಬರು ಸಹಿಸುತ್ತಾರೆ ಮತ್ತೊಬ್ಬರು ಸಹಿಸಿಕೊಳ್ಳುವುದಿಲ್ಲ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ನೋವಿಗೆ ಚಿಕಿತ್ಸೆ ನೀಡಲು ಹೊಸ ವಿಧಾನ
ಸಾವಧಾನತೆ ಧ್ಯಾನವು ನೋವಿನ ಸ್ವಯಂ-ಮೌಲ್ಯಮಾಪನವನ್ನು ಮಾಡುವ ಮೂಲಕ ನೋವಿಗೆ ಚಿಕಿತ್ಸೆ ನೀಡಲು ಹೊಸ ವಿಧಾನವನ್ನು ಅನುಸರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ಇದಕ್ಕೆ ತಗಲುವ ವೆಚ್ಚವು ಬಹಳ ಕಡಿಮೆ ಮತ್ತು ಇದನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ನಾವು ಮಾಡಬಹುದು. ಇದನ್ನು ಮೊದಲು ತರಬೇತಿ ತೆಗೆದುಕೊಂಡು ಮಾಡುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು ಎಂದು ಝೀಡಾನ್ ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸಿದರು.

ಇದನ್ನೂ ಓದಿ: Quarrel Problem: ಜಗಳ ಆಗಲು ಕಾರಣಗಳು ಏನೇ ಇದ್ದರೂ ಅದನ್ನು ಹೀಗೆ ನಿಭಾಯಿಸಿ!

ನರವಿಜ್ಞಾನ ಮತ್ತು ಹಲವಾರು ರೋಗಗಳಿಗೆ ಸಾವಧಾನತೆಯ ಸಂಭವನೀಯ ಚಿಕಿತ್ಸಕ ಅನ್ವಯಿಕೆಗಳನ್ನು ಪರಿಶೀಲಿಸಲು ನಾವು ಉತ್ಸುಕರಾಗಿದ್ದೇವೆ. ಯುಸಿ ಸ್ಯಾನ್ ಡಿಯಾಗೋದಿಂದ ಗೇಬ್ರಿಯಲ್ ರೈಗ್ನರ್, ವಲೇರಿಯಾ ಒಲಿವಾ ಮತ್ತು ವಿಲಿಯಂ ಮೊಬ್ಲಿ ಸಹ-ಲೇಖಕರು, ಟುಲೇನ್ ವಿಶ್ವವಿದ್ಯಾಲಯದಿಂದ ಗ್ರೇಸ್ ಪೋಸಿ, ಕ್ಯಾಲಿಫೋರ್ನಿಯಾ ಡೇವಿಸ್ ವಿಶ್ವವಿದ್ಯಾಲಯದಿಂದ ಯಂಗ್‌ಕ್ಯೂ ಜಂಗ್ ಮತ್ತು ತುಲೇನ್‌ನಿಂದ ಯಂಗ್‌ಕ್ಯೂ ಪೋಸಿ ಈ ಅಧ್ಯಯನವನ್ನು ಸಂಶೋಧನೆ ನಡೆಸುತ್ತಿದ್ದಾರೆ.
Published by:Ashwini Prabhu
First published: