Dinner And Health: ರಾತ್ರಿ ಊಟಕ್ಕೆ ಸರಿಯಾದ ಸಮಯ ಇದಂತೆ, ಈ ಆಹಾರಗಳನ್ನು ಅಪ್ಪಿ ತಪ್ಪಿ ತಿನ್ಬೇಡಿ

ರಾತ್ರಿ ಆರೋಗ್ಯಕರ ಭೋಜನ ಸೇವಿಸಿದರೆ ಸಾಕಾಗಲ್ಲ. ಸರಿಯಾದ ಸಮಯದಲ್ಲಿ ಊಟ ಮಾಡುವುದು ಸಹ ತುಂಬಾ ಮುಖ್ಯ. ತಜ್ಞರ ಪ್ರಕಾರ ತಡರಾತ್ರಿ ಆಹಾರ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ರಾತ್ರಿ ಊಟ ತಡವಾಗಿ ಸೇವಿಸಿದರೆ ಅಂದ್ರೆ ಸಂಜೆ 7 ಗಂಟೆಯ ನಂತರ ಇದು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾತ್ರಿ ಊಟ (Dinner) ಇದು ದಿನದ ಪ್ರಮುಖ ಊಟಗಳಲ್ಲಿ ಒಂದಾಗಿದೆ. ಆರೋಗ್ಯಕರ (Healthy) ಭೋಜನವು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ಅದರಲ್ಲಿ ಉತ್ತಮ ನಿದ್ರೆ (Sleep), ಕಡಿಮೆ ಉರಿಯೂತ, ತಾಜಾ ಮನಸ್ಸು, ಉತ್ತಮ ಜೀರ್ಣಕ್ರಿಯೆ (Digestion), ರಕ್ತದ ಸಕ್ಕರೆ ನಿಯಂತ್ರಣ, ರಕ್ತದೊತ್ತಡ ಮತ್ತು ಶಾಂತ ಮನಸ್ಥಿತಿ ಪ್ರಯೋಜನಗಳು ಸೇರಿವೆ. ಒಳ್ಳೆಯ ಭೋಜನವು ಮರುದಿನ ನಿಮ್ಮನ್ನು ಆರೋಗ್ಯಕರವಾಗಿ ದಿನವನ್ನು ಆರಂಭಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿಯಲ್ಲಿ ಊಟ ಮಾಡದೆ ಮಲಗಬಾರದು ಎಂದು ಸಲಹೆ ನೀಡಲಾಗುತ್ತದೆ. ರಾತ್ರಿಯ ಊಟ ದಿನದ ಕೊನೆಯ ಊಟವಾಗಿರುತ್ತದೆ. ಜೊತೆಗೆ ಮರುದಿನದ ಮೊದಲ ಊಟದ ನಡುವೆ ದೊಡ್ಡ ಅಂತರವಿರುತ್ತದೆ.

  ಸರಿಯಾದ ಸಮಯದಲ್ಲಿ ಊಟ ಮಾಡುವುದು

  ಇದು ಹೆಚ್ಚಿನ ಹಸಿವು, ಆಮ್ಲೀಯತೆ, ವಾಕರಿಕೆ, ಬ್ಲ್ಯಾಕೌಟ್ ಮತ್ತು ನಿದ್ರಾಹೀನತೆ ಅನುಭವಿಸಬಹುದು. ಆರೋಗ್ಯಕರ ಭೋಜನ ಸೇವಿಸಿದರೆ ಸಾಕಾಗಲ್ಲ. ಸರಿಯಾದ ಸಮಯದಲ್ಲಿ ಊಟ ಮಾಡುವುದು ಸಹ ತುಂಬಾ ಮುಖ್ಯ. ತಜ್ಞರ ಪ್ರಕಾರ, ತಡರಾತ್ರಿ ಆಹಾರ ಸೇವನೆ ಆರೋಗ್ಯಕ್ಕೆ ಸಾಕಷ್ಟು ಅಪಾಯಕಾರಿ. ನೀವು ರಾತ್ರಿ ಊಟ ತಡವಾಗಿ ಸೇವನೆ ಮಾಡಿದರೆ ಅಂದ್ರೆ ಸಂಜೆ 7 ಗಂಟೆಯ ನಂತರ, ಇದು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗುತ್ತದೆ.

  ಹೊಟ್ಟೆ ಕೆರಳಿಕೆ, ಅಧಿಕ ರಕ್ತದೊತ್ತಡ ತಡರಾತ್ರಿ ಊಟ ಮಾಡುವುದು ಕಾರಣವಾಗುತ್ತದೆ. ಆಯುರ್ವೇದದ ಪ್ರಕಾರ, ರಾತ್ರಿಯ ಊಟ ಬೇಗ ಮಾಡಿದರೆ ಅದು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಇದು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಸಂಜೆ 7 ಗಂಟೆಯ ನಂತರ ಹಸಿವಾದರೆ ಕಿಚಡಿಯಂತಹ ಕೆಲವು ಲಘು ಆಹಾರ ಅಥವಾ ಎರಡು ಖರ್ಜೂರ ಅಥವಾ ಕೆಲವು ಬಾದಾಮಿ ಒಂದು ಲೋಟ ಹಾಲು ಕುಡಿಯಬಹುದು.

  ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

  ಮಟನ್ ಬಿರಿಯಾನಿ

  ಬಿರಿಯಾನಿ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಆದರೆ ಈ ಮಟನ್ ಬಿರಿಯಾನಿ ಸಾಕಷ್ಟು ಕ್ಯಾಲೋರಿ ಮತ್ತು ಕೊಬ್ಬಿನಂಶ ಹೊಂದಿದೆ. ಮಟನ್ ಬಿರಿಯಾನಿಯಂತಹ ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಯುಕ್ತ ಆಹಾರ ಸೇವನೆ ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಉತ್ತೇಜಿಸುತ್ತದೆ.

  ಇದು ಅಪಾಯಕಾರಿ ಕಾಯಿಲೆ. ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಮಟನ್ ಬಿರಿಯಾನಿಯ ಒಂದು ಸಣ್ಣ ಭಾಗವು 500 ರಿಂದ 700 ಕ್ಯಾಲೋರಿಗಳಿಗೆ ಸಮ. ಅದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.

  ಮಸಾಲೆ ಆಹಾರ

  ಮಸಾಲೆಗಳಿಂದ ಸಮೃದ್ಧವಾದ ಆಹಾರ ಪದಾರ್ಥಗಳಾದ ಲಾಲ್ ಮಾಸ್‌ನಿಂದ ವಿಂದಾಲೂವರೆಗೆ, ಕೊಲ್ಹಾಪುರಿ ಚಿಕನ್‌ನಿಂದ ರಿಸ್ಟಾವರೆಗೆ ಸಾಕಷ್ಟು ಮಸಾಲೆಯುಕ್ತ ಭಕ್ಷ್ಯ ತಿನ್ನುತ್ತೇವೆ. ರಾತ್ರಿ ಊಟದಲ್ಲಿ ನಾನ್ ಮತ್ತು ಪರಾಠದಂತಹ ಕೆಲವು ಆವಿಯಲ್ಲಿ ಬೇಯಿಸಿದ ಅನ್ನ ಅಥವಾ ರೊಟ್ಟಿ ಸೇವನೆ ತೀವ್ರವಾದ ಎದೆಯುರಿ ಉಂಟು ಮಾಡುತ್ತದೆ. ಎಣ್ಣೆ ಮತ್ತು ತುಪ್ಪ ಸೇರಿಸಿ ತಯಾರಿಸಿದ ಪದಾರ್ಥಗಳು ಹೃದಯ ಸಂಬಂಧಿ ಸಮಸ್ಯೆ ತಂದೊಡ್ಡುತ್ತದೆ. ರಾತ್ರಿ ಲಘು ಆಹಾರ ಸೇವಿಸಿ.

  ಸಿಹಿ

  ಊಟದ ನಂತರ ಸಿಹಿ ತಿನ್ನುವುದು ಅದರಲ್ಲೂ ಸಂಜೆ 7 ಗಂಟೆಯ ನಂತರ ಸಿಹಿತಿಂಡಿ ಸೇವನೆ ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಊಟದ ನಂತರದ ಸಿಹಿ ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾವಿಸಿದರೆ ಅದು ತಪ್ಪು. ಸಿಹಿತಿಂಡಿಗಳು ರಾತ್ರಿಯಲ್ಲಿ ಉತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತವೆ. ಅದು ನಿಮ್ಮನ್ನು ರಾತ್ರಿಯಿಡೀ ಎಚ್ಚರವಾಗಿರಿಸುತ್ತದೆ.

  ಪಕೋಡ

  ಮಳೆಗಾಲದಲ್ಲಿ ಪಕೋಡ ಮಾಡುವುದು ಸಾಮಾನ್ಯ. ರುಚಿಕರ ಖಾದ್ಯವು ಸಂಜೆ 7 ಗಂಟೆಯ ನಂತರ ಸೇವಿಸುವುದು ಎದೆಯುರಿ, ನಿದ್ರೆಗೆ ತೊಂದರೆ ಮಾಡುತ್ತದೆ. ಏಕೆಂದರೆ ಡೀಪ್ ಫ್ರೈ ಮಾಡಿದ ಪಕೋಡಾಗಳು ಹೆಚ್ಚು ಆಮ್ಲೀಯವಾಗಿರುತ್ತವೆ.

  ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

  ಕೆಫೀನ್ ಪಾನೀಯಗಳು

  ರಾತ್ರಿಯಲ್ಲಿ ಚಹಾ, ಕಾಫಿ ಅಥವಾ ಹಸಿರು ಚಹಾದಂತಹ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸಿದಾಗ ಅದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
  Published by:renukadariyannavar
  First published: