Beauty Tips: ಮನೆಯಿಂದ ಹೊರಗೆ ಪ್ರಕೃತಿಯ ನಡುವೆ ಸಮಯ ಕಳೆಯುವುದು ಸಂತೋಷ ಕೊಡುತ್ತದೆ ಮತ್ತು ಸೂರ್ಯನ ಬಿಸಿಲಿನಿಂದ ಅರೋಗ್ಯಕ್ಕೆ ಲಾಭವೂ ಇದೆ. ಆದರೆ ಸೂರ್ಯನ ಅತೀ ನೇರಳೆ ಕಿರಣಗಳು ನಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ ಎಂಬುವುದನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸೂರ್ಯನ ಅತೀ ನೇರಳೆ ಕಿರಣಗಳು ನಮ್ಮ ಚರ್ಮಕ್ಕೆ ಹಾನಿ ಉಂಟಾಗದಂತೆ ನೋಡಿಕೊಳ್ಳಲು ನಾವು ಸನ್ಸ್ಕ್ರೀನ್ಗಳ ಮೊರೆ ಹೋಗುತ್ತೇವೆ. ಆದರೆ ಎಲ್ಲಾ ಸನ್ಸ್ಕ್ರೀನ್ಗಳು ಒಂದೇ ತರಹ ಇರುವುದಿಲ್ಲ. ಅವುಗಳ ಎಸ್ಪಿಎಫ್ ಮಟ್ಟದಲ್ಲಿ ವ್ಯತ್ಯಾಸ ಇರುತ್ತದೆ.
SPF ಎಂದರೇನು?
ಎಸ್ಪಿಎಫ್ ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್. ಸನ್ಸ್ಕ್ರೀನ್ ಹಚ್ಚಿಕೊಂಡು , ಸೂರ್ಯನ ಬಿಸಿಲಿನ ಅಪಾಯದಿಂದ ಎಷ್ಟು ಕಾಳದ ವರಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವ ರೇಟಿಂಗ್ ಇದು.
ಇದನ್ನು ಸರಳವಾಗಿ ಹೇಳುವುದಾದರೆ, ಸನ್ಸ್ಟ್ರೀನ್ ಹಚ್ಚದೆ ಹೊರಗೆ ಹೋದಾಗ 20 ನಿಮಿಷಗಳಲ್ಲಿ ಸನ್ಬರ್ನ್ ಆದರೆ, ಎಸ್ಪಿಎಫ್ 10 ಹಚ್ಚಿಕೊಂಡು ಹೋದಾಗ, ನೀವು ಅದರ 10 ಪಟ್ಟು (3 ಗಂಟೆ 30 ನಿಮಿಷ) ಅವಧಿಯ ವರೆಗೆ ಸೂರ್ಯನ ಕಿರಣಗಳಿಂದ ಸುರಕ್ಷಿತವಾಗಿರಬಹುದು.
ಇದನ್ನೂ ಓದಿ: ದೇಶದಲ್ಲಿ ಅತೀ ಕಡಿಮೆ ಮೀನು ತಿನ್ನುವುದು ಈ ರಾಜ್ಯದ ಜನರಂತೆ..! ಹಾಗಿದ್ರೆ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ?
ಚರ್ಮವನ್ನು ದೀರ್ಘ ಸಮಯದ ವರೆಗೆ ಸೂರ್ಯನ ಕಿರಣಗಳಿಂದ ರಕ್ಷಿಸುವಂತಹ, ಸೂಕ್ತ ಎಸ್ಪಿಎಫ್ ಮೌಲ್ಯವುಳ್ಳ ಸನ್ಸ್ಟ್ರೀನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಕೊಂಚ ಕಷ್ಟದ ಕೆಲಸವೆ. ಸನ್ಸ್ಕ್ರೀನನ್ನು ಆಯ್ಕೆ ಮಾಡಿಕೊಳ್ಳುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
1. ಬ್ರೋಡ್ -ಸ್ಪೆಕ್ಟ್ರಮ್ ಸನ್ಸ್ಟ್ರೀನ್- ಕನಿಷ್ಟ ಎಸ್ಪಿಎಫ್ 30 ಉಳ್ಳ ಬ್ರೋಡ್ ಸ್ಪೆಕ್ರ್ಟಮ್ ಸನ್ಸ್ಕ್ರೀನ್ , 97%ದಷ್ಟು ಸೂರ್ಯ ಕಿರಣಗಳನ್ನು ತಡೆಯಬಹುದು. ಎಸ್ಪಿಎಫ್ ಹೆಚ್ಚಿದ್ದಷ್ಟು ಸೂರ್ಯನ ಅತಿ ನೇರಳೆ ಕಿರಣಗಳಿಂದ ಹೆಚ್ಚು ಕಾಪಾಡುತ್ತದೆ ಎಂದರ್ಥ.
2. ಅವಧಿ:ಎಸ್ಪಿಎಫ್ ಮೌಲ್ಯದ ಹೊರತಾಗಿ, ಅದನ್ನು ಉತ್ತಮ ಪ್ರಮಾಣದಲ್ಲಿ ಹಚ್ಚಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಿಕೊಳ್ಳಲು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮನೆಯಿಂದ ಹೊರ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳಿ. ಸನ್ಸ್ಕ್ರೀನ್ ನೀರು ಮತ್ತು ಬೆವರು ನಿರೋಧಕವಾಗಿರಬೇಕು. ಹಾಗೆಯೇ ಪ್ರತೀ 2 ಗಂಟೆಗೊಮ್ಮೆ ಸನ್ಸ್ಕ್ರೀನ್ ಮರುಲೇಪನ ಮಾಡುವುದನ್ನು ಮರೆಯಬೇಡಿ.
3. ದಿನ ನಿತ್ಯದ ಚಟುವಟಿಕೆ:ಸರಿಯಾದ ಎಸ್ಪಿಎಫ್ ಆಯ್ಕೆ ಮಾಡುವುದು ಕಿರಿಕಿರಿಯ ಕೆಲಸವಾಗಿರಬಹುದು, ಆದರೆ ಅದು ನಮ್ಮ ಕೆಲಸ ಮತ್ತು ಹೊರಗಿನ ಜವಾಬ್ಧಾರಿಗಳನ್ನು ಅವಲಂಬಿಸಿರುತ್ತದೆ. ನೀವು ನಿತ್ಯವೂ ಹೊರ ಹೋಗುವವರಾಗಿದ್ದರೆ, ಎಸ್ಪಿಎಫ್ 15 (ಅತಿ ನೇರಳೆ ಕಿರಣಗಳಿಂದ 93 ಶೇಕಡಾ ರಕ್ಷಣೆ) ನಿಂದ ಎಸ್ಪಿಎಫ್ 50 (ಅತಿ ನೇರಳೆ ಕಿರಣಗಳಿಂದ 98 ಶೇಕಡಾ ರಕ್ಷಣೆ) ನಡುವಿನ ಸನ್ಸ್ಟ್ರೀನ್ನನ್ನು ಆಯ್ಕೆ ಮಾಡಿಕೊಳ್ಳಿ.
ಸರಿಯಾದ ಎಸ್ಪಿಎಫ್ ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಅಗತ್ಯ ಮತ್ತು ಅವಧಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಈ ಮೇಲಿನ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವ ನಿಮ್ಮ ಉಪಾಯಗಳನ್ನು ಇನ್ನಷ್ಟು ಉತ್ತಮಗೊಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ