• Home
  • »
  • News
  • »
  • lifestyle
  • »
  • Story Telling: ಮಕ್ಕಳಿಗೆ ಈ ವಯಸ್ಸಿಗೆ ಕಥೆ ಹೇಳಿದ್ರೆ ಅವರ ಬುದ್ದಿ ಚುರುಕಾಗುತ್ತಂತೆ

Story Telling: ಮಕ್ಕಳಿಗೆ ಈ ವಯಸ್ಸಿಗೆ ಕಥೆ ಹೇಳಿದ್ರೆ ಅವರ ಬುದ್ದಿ ಚುರುಕಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Story Telling To Your Kids: ಮೊದಲೆಲ್ಲ ಟಿವಿ ಇರಲಿಲ್ಲ, ಮೊಬೈಲ್‌ ಇರಲಿಲ್ಲ ಹಾಗಾಗಿ ದೊಡ್ಡವರೂ ಕಥೆ ಹೇಳುತ್ತಿದ್ದರು. ಮಕ್ಕಳೂ ಕಥೆ ಹೇಳುತ್ತಿದ್ದರು. ಆದರೆ ಈಗ ಈ ಎಲ್ಲ ತಂತ್ರಜ್ಞಾನಗಳಿಂದಾಗಿ ದೊಡ್ಡವರು, ಮಕ್ಕಳು ಎಲ್ಲರೂ ಬ್ಯುಸಿ. ಹಾಗಾಗಿ ಕಥೆ ಹೇಳೋಕೆ ಸಮಯವೇ ಸಿಗೋದಿಲ್ಲ ಎನ್ನುವವರೇ ಹೆಚ್ಚು.

ಮುಂದೆ ಓದಿ ...
  • Share this:

ಪುಸ್ತಕಗಳು (Book) ಶಿಕ್ಷಣ (Education) ನೀಡಿದ್ರೆ ಕಥೆಗಳು (Stories) ಜ್ಞಾನ (Knowledge)  ನೀಡುತ್ತವೆ ಅನ್ನೋ ಮಾತಿದೆ. ಮಾತು ಕಥೆಗಳ ಪ್ರಾಮುಖ್ಯತೆಯನ್ನ ಸಾರುತ್ತದೆ. ಆದ್ರೆ ಬಹುತೇಕರು ಕೇಳುವ ಪ್ರಶ್ನೆಯೆಂದ್ರೆ ಮಕ್ಕಳಿಗೆ (Children)  ಯಾವ ವಯಸ್ಸಿನಲ್ಲಿ ಕಥೆ ಹೇಳಬಹುದು ಅನ್ನೋದು. ಯಾಕೆಂದ್ರೆ ಮಕ್ಕಳಿಗೆ ಯಾವ ವಯಸ್ಸಿಗೆ ಕಥೆ ಹೇಳಬಹುದು ಅನ್ನೋದು ಸಾಕಷ್ಟು ಜನರಲ್ಲಿ ಗೊಂದಲ ಮೂಡಿಸಿರುತ್ತದೆ.ಅಂದಹಾಗೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಬೇಕಾದರೂ ಕಥೆಗಳನ್ನ ಹೇಳ್ಬಹುದು. ಇದಕ್ಕೆ ಯಾವುದೇ ಜಾತಿ, ಧರ್ಮ, ವಯಸ್ಸು ಹಾಗೂ ಲಿಂಗ ಬೇಧವಿಲ್ಲ. ಮಕ್ಕಳಿಗೆ ಯಾವ ಕಥೆಗಳನ್ನಾದರೂ ನೀವು ಹೇಳಬಹುದು.


ಯಾವ ಹಂತಗಳಲ್ಲಿ ಮಕ್ಕಳಿಗೆ ಕಥೆ ಹೇಳಬಹುದು?


ಮಗು ಗರ್ಭದಲ್ಲಿರುವಾಗ: ನೀವು ನಿಮ್ಮ ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಕಥೆ ಹೇಳಬಹುದು. ಮಹಾಭಾರತದ ಅಭಿಮನ್ಯುವಿನ ಕಥೆ ಕೇಳಿದ್ದರೆ ಇದು ನಿಮಗೆ ಗೊತ್ತೇ ಇರುತ್ತದೆ. ಹೌದು, ನೀವು ನಿಮ್ಮ ಗರ್ಭದಲ್ಲಿರುವ ಮಗುವಿನ ಜೊತೆ ಮಾತನಾಡುತ್ತಿದ್ದರೆ ಮಗುವಿನ ಮಾತನಾಡುವ ಕಲೆ ಹಾಗೂ ಮಾತಿಗೆ ಪ್ರತಿಕ್ರಿಯೆ ನೀವು ಕಲೆ ಚೆನ್ನಾಗಿ ಬರುತ್ತದೆ. ಅದರಲ್ಲೂ ಬೇರೆ ಮಕ್ಕಳಿಗೆ ಹೋಲಿಸಿದರೆ ಇವು ಹೆಚ್ಚು ಮುಂದಿರುತ್ತವೆ ಎಂದು ತಜ್ಞರೇ ಹೇಳುತ್ತಾರೆ.



ಶಿಶುವಿಗೆ ಹೇಳಬಹುದು ಕಥೆ: ನೀವು ನಿಮ್ಮ ಶಿಶುವಿಗೆ ನೀವು ಕಥೆ ಹೇಳಿದರೆ ಅವು ಪ್ರತಿಕ್ರಿಯಿಸುತ್ತವೆ. ನೀವು ಕಥೆ ಹೇಳುವಾಗಿ ಸ್ವಲ್ಪ ನಾಟಕೀಯವಾಗಿ ಹೇಳಿದರೆ ಅಥವಾ ಬೇರೆ ಬೇರೆ ಮುಖಭಾವ ಮಾಡಿ ಹೇಳಿದರೆ ಅದು ರಿಯಾಕ್ಟ್ಮಾಡುತ್ತೆ. ಶಿಶುಗಳು ಅದರದೇ ಆದ ಭಾಷೆಯಲ್ಲಿ ಆಕ್ಶನ್ಮಾಡುತ್ತೆ, ನಗುತ್ತೆ ಅಥವಾ ಕೆಲವೊಮ್ಮೆ ಕಣ್ಣರಳಿಸುತ್ತೆ. ಇನ್ನೂ ಕೆಲವೊಮ್ಮೆ ನಿದ್ದೆಯನ್ನೂ ಮಾಡಿಬಿಡುತ್ತವೆ.


ಇದನ್ನೂ ಓದಿ: ಈ 5 ಆಹಾರಗಳಿದ್ರೆ ನೀವ್ ಬೇಗ ತೆಳ್ಳ ಆಗ್ತೀರಂತೆ

1-5 ವರ್ಷದ ಮಕ್ಕಳಿಗೆ: ಇನ್ನು ಅಂಬೆಗಾಲಿಡುವ ಮಕ್ಕಳು ಅಥವಾ 1 ರಿಂದ 5 ವರ್ಷ ಒಳಗಿನ ಮಕ್ಕಳು ಕಥೆಗಳಿಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತವೆ. ಕಥೆ ಹೇಳುವುದರ ಮೂಲಕ ಮಕ್ಕಳಿಗೆ ಕೆಲವೊಂದಿಷ್ಟು ಜ್ಞಾನವನ್ನೂ, ಶಿಕ್ಷಣ ವನ್ನೂ ನೀಡಬಹುದು. ಬಣ್ಣಗಳ ಬಗ್ಗೆ, ಗಾತ್ರಗಳ ಬಗ್ಗೆ, ಭಾವನೆಗಳ ಬಗ್ಗೆ, ಅಷ್ಟೇ ಏಕೆ ಅಕ್ಷರಗಳು, ಸಂಖ್ಯೆಗಳನ್ನೂ ತಿಳಿಸಬಹುದು. ಅಲ್ಲದೇ ಕಥೆಗಳನ್ನು ಕೇಳುವ ಮಕ್ಕಳು ಸಾಮಾಜಿಕವಾಗಿ ಬೆರೆಯುತ್ತಾರೆ, ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ ಅಲ್ಲದೇ ಅವರ ಬುದ್ಧಿಶಕ್ತಿ ಕೂಡ ಹೆಚ್ಚಾಗಿರುತ್ತದೆ. ಅಲ್ಲದೇ ನೀವು ಅವರಿಗೆ ಅವರದೇ ಆದ ಕಥೆಗಳನ್ನು ರಚಿಸೋದಕ್ಕೂ ಹೇಳಬಹುದು.


5-6 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ: ಇನ್ನು 5-6 ವರ್ಷದ ಮೇಲಿನ ಮಕ್ಕಳು ಓದಲು ಕಲಿತಿರುತ್ತಾರೆ. ಆದರೆ ಅವರಿಗೆ ಓದುವ ಅಭ್ಯಾಸವನ್ನು ನಾವೇ ಬೆಳೆಸಬೇಕಾಗಿರುತ್ತದೆ. ನೀವು ಅವರ ಜೊತೆಗೇ ಕುಳಿತು ಓದಬೇಕಿಲ್ಲ. ಬದಲಾಗಿ ಅವರಿಗೆ ಓದುವಂತೆ ಪ್ರೋತ್ಸಾಹಿಸಬೇಕಾಗಿರುತ್ತೆ. ಅವರು ಓದಿದ ಕಥೆಗಳನ್ನು ಹೇಳುವ ಹಾಗೆ ಮಾಡಬಹುದು. ನೀವು ವೀಕ್ಷಕರಾಗಿ ಪ್ರೋತ್ಸಾಹಿಸಿದಲ್ಲಿ ಅವರಿಗೂ ಓದಿ ಕಥೆ ಹೇಳುವ ಉತ್ಸಾಹ ತಾನಾಗಿಯೇ ಬರುತ್ತೆ.


ಹಾಗಾಗಿ ಈಗ ನಾವು ಮೊದಲಿನ ಪ್ರಶ್ನೆ ಉತ್ತರ ಕಂಡುಕೊಂಡಾಗಿದೆ. ಯಾವಾಗ ಮಕ್ಕಳಿಗೆ ಕಥೆ ಹೇಳಬಹುದು ಅನ್ನೋದಕ್ಕೆ ಉತ್ತರಈಗ”. ನಿಮ್ಮ ಮಗು ಇನ್ನೂ ಶಿಶುವಾಗಿರಬಹುದು ಅಥವಾ ವಯಸ್ಸಿಗೆ ಬಂದ ಟೀನೇಜರ್ಆಗಿರಬಹುದು. ದಿನಕ್ಕೆ ಬರೀ 10 ನಿಮಿಷ ತೆಗೆದುಕೊಂಡು ನೀವು ನಿಮ್ಮಮಕ್ಕಳಿಗೆ ಕಥೆ ಹೇಳಿ, ನಂತರ ಮ್ಯಾಜಿಕ್ನೋಡಿ!


ಇದನ್ನೂ ಓದಿ: ಅಂಜೂರವನ್ನು ಹೀಗೆ ತಿಂದ್ರೆ ನಿಮ್ಮ ತೂಕ ಇಳಿಸೋಕೆ ಸಹಾಯ ಮಾಡುತ್ತೆ

ಮೊದಲೆಲ್ಲ ಟಿವಿ ಇರಲಿಲ್ಲ, ಮೊಬೈಲ್ಇರಲಿಲ್ಲ ಹಾಗಾಗಿ ದೊಡ್ಡವರೂ ಕಥೆ ಹೇಳುತ್ತಿದ್ದರು. ಮಕ್ಕಳೂ ಕಥೆ ಹೇಳುತ್ತಿದ್ದರು. ಆದರೆ ಈಗ ಎಲ್ಲ ತಂತ್ರಜ್ಞಾನಗಳಿಂದಾಗಿ ದೊಡ್ಡವರು, ಮಕ್ಕಳು ಎಲ್ಲರೂ ಬ್ಯುಸಿ. ಹಾಗಾಗಿ ಕಥೆ ಹೇಳೋಕೆ ಸಮಯವೇ ಸಿಗೋದಿಲ್ಲ ಎನ್ನುವವರೇ ಹೆಚ್ಚು. ಆದರೆ ಕಥೆ ಹೇಳೋದ್ರಿಂದ ಬಹಳಷ್ಟು ಪ್ರಯೋಜನಗಳಿವೆ. ಅದರಲ್ಲೂ ಚಿಕ್ಕವರಿದ್ದಾಗ ಕಥೆ ಕೇಳಿ ಬೆಳೆದ ಮಕ್ಕಳು ಹೆಚ್ಚು ಚುರುಕಾಗಿರುತ್ತಾರೆ. ಮತ್ಯಾಕೆ ತಡ ಇಂದಿನಿಂದಲೇ ನಿಮ್ಮ ಮಕ್ಕಳಿಗೆ ಕಥೆ ಹೇಳೋಕೆ ಶುರು ಮಾಡಿ!

Published by:Sandhya M
First published: