• Home
  • »
  • News
  • »
  • lifestyle
  • »
  • Memory Booster: ಸ್ಮರಣ ಶಕ್ತಿ ಹೆಚ್ಚಿಸುತ್ತಾ ಬಾದಾಮಿ? ಮೆಮೋರಿ ಹೆಚ್ಚಿಸುವ ಬಗ್ಗೆ ತಜ್ಞರು ಹೇಳುವುದೇನು?

Memory Booster: ಸ್ಮರಣ ಶಕ್ತಿ ಹೆಚ್ಚಿಸುತ್ತಾ ಬಾದಾಮಿ? ಮೆಮೋರಿ ಹೆಚ್ಚಿಸುವ ಬಗ್ಗೆ ತಜ್ಞರು ಹೇಳುವುದೇನು?

ಬಾದಾಮಿ

ಬಾದಾಮಿ

ಮಕ್ಕಳ ಬೆಳವಣಿಗೆ ವೇಳೆ ಬಾದಾಮಿ ಸೇವನೆ ಮಾಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮೆದುಳಿನ ಬೆಳವಣಿಗೆ ಮತ್ತು ಸ್ಮರಣಾ ಶಕ್ತಿ ಹೆಚ್ಚಿಸುತ್ತದೆ. ಆದರೆ ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮಿ ತಿನ್ನುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.

ಮುಂದೆ ಓದಿ ...
  • Share this:

    ಅಗತ್ಯ ಪೋಷಕಾಂಶಗಳಿಂದ (Nutrients) ಸಮೃದ್ಧ ಬಾದಾಮಿ (Almond) ಸೇವಿಸುವುದು ಆರೋಗ್ಯಕ್ಕೆ (Health) ತುಂಬಾ ಪ್ರಯೋಜನಕಾರಿ (Benefits) ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಾದಾಮಿಯನ್ನು ಅನೇಕ ವರ್ಷಗಳಿಂದ ಸ್ಮರಣಾ ಶಕ್ತಿ (Memory Booster) ಹೆಚ್ಚಿಸಲುವ ಆಹಾರ ಪದಾರ್ಥ ಎಂದು ಕರೆಯುತ್ತಾರೆ. ಅಲ್ಲದೇ ಯಾರು ಸ್ಮರಣಾ ಶಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೆ, ಅವರಿಗೆ ಬಾದಾಮಿ ತಿನ್ನಲು ಸಲಹೆ ನೀಡುತ್ತಾರೆ. ಅಷ್ಟೇ ಅಲ್ಲದೇ, ಮಕ್ಕಳ ಬೆಳವಣಿಗೆ ವೇಳೆ ಬಾದಾಮಿ ಸೇವನೆ ಮಾಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮೆದುಳಿನ ಬೆಳವಣಿಗೆ ಮತ್ತು ಸ್ಮರಣಾ ಶಕ್ತಿ ಹೆಚ್ಚಿಸುತ್ತದೆ. ಆದರೆ ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮಿ ತಿನ್ನುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.


    ಹಾಗಾಗಿ ನಾವು ಇಂದು ಬಾದಾಮಿ ಹೇಗೆ ಸೇವಿಸಿದರೆ ಸ್ಮರಣಾ ಶಕ್ತಿ ಹೆಚ್ಚುತ್ತದೆ ಎಂದು ನೋಡೋಣ. ಬಾದಾಮಿ ಮೆದುಳನ್ನು ಹೇಗೆ ನಿಯಂತ್ರಿಸುತ್ತದೆ? ನೋಡೋಣ.


    ಬಾದಾಮಿಯಲ್ಲಿರುವ ಪೋಷಕಾಂಶಗಳು


    ಬಾದಾಮಿ ಕುರಿತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದಲ್ಲಿ ಬಾದಾಮಿ ಫೈಬರ್, ಪ್ರೋಟೀನ್, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್‌ನ ಅತ್ಯುತ್ತಮ ಮೂಲ ಆಗಿದೆ. ಇದು ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿದ್ದು, ಆರೋಗ್ಯ ವೃದ್ಧಿಸುತ್ತದೆ. ಒಟ್ಟಾರೆ ಆರೋಗ್ಯಕ್ಕೆ, ವಿಶೇಷವಾಗಿ ಮೆದುಳಿಗೆ ಪ್ರಯೋಜನ ನೀಡುತ್ತದೆ.


    ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


    ಬಾದಾಮಿ ಮತ್ತು ಸ್ಮರಣಾ ಶಕ್ತಿ ನಡುವಿನ ಸಂಬಂಧವೇನು?


    ವಿಟಮಿನ್ ಇ


    ಬಾದಾಮಿಯನ್ನು ಹಲವು ವರ್ಷಗಳಿಂದ ಮೆದುಳು ಹೆಚ್ಚಿಸುವ ಆಹಾರ ಎಂದು ಕರೆಯುತ್ತಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆ ಸಮಸ್ಯೆ ನಿವಾರಣೆಗೆ ಇದು ಪ್ರಯೋಜನಕಾರಿ ಆಗಿದೆ. ಅದೇ ವೇಳೆ ಅದರಲ್ಲಿರುವ ಪೋಷಕಾಂಶಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಇ ದೀರ್ಘಕಾಲ ಜ್ಞಾಪಕ ಶಕ್ತಿ ಕಾಪಾಡುತ್ತದೆ.


    ಒಮೆಗಾ 6 ಕೊಬ್ಬಿನಾಮ್ಲ


    ವಯಸ್ಸಾದಂತೆ ಕಾಡುವ ನೆನಪಿನ ಸಮಸ್ಯೆ ನಿವಾರಣೆಗೆ ಬಾದಾಮಿ ಪ್ರಯೋಜನಕಾರಿ. ಅವುಗಳಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲ ಫೋಲೇಟ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲ, ಪಾಲಿಫಿನಾಲ್ ಅಗತ್ಯ ಪೋಷಕಾಂಶಗಳ ಪರಿಣಾಮ ಮತ್ತಷ್ಟು ಹೆಚ್ಚಿಸುತ್ತವೆ. ಮೆದುಳಿಗೆ ಅಕಾಲಿಕ ವಯಸ್ಸಾಗುವಿಕೆ ತಡೆಯುತ್ತದೆ. ಇದು ಸ್ಮರಣಶಕ್ತಿಯನ್ನು ದೀರ್ಘಕಾಲ ಕಾಪಾಡುತ್ತದೆ.


    ಸತು


    ಬಾದಾಮಿಯಲ್ಲಿರುವ ಸತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮತ್ತು ಮೆದುಳಿನ ಕೋಶಗಳಿಗೆ ಹಾನಿ ಮಾಡುವ ವೈರಸ್‌ ಮತ್ತು ಬ್ಯಾಕ್ಟೀರಿಯಾ ಪರಿಣಾಮ ಕಡಿಮೆ ಮಾಡುತ್ತದೆ. ಪ್ರೋಟೀನ್ ಮೆದುಳಿನ ಕೋಶಗಳನ್ನು ಸರಿಪಡಿಸುವಾಗ ಬಾದಾಮಿಯಲ್ಲಿರುವ ಪ್ರಮುಖ ಪೋಷಕಾಂಶ ವಿಟಮಿನ್ ಇ ಮೆದುಳಿನ ವಯಸ್ಸಾಗುವಿಕೆ ನಿಧಾನಗೊಳಿಸುತ್ತದೆ. ಇದು ಮೆಮೊರಿ ನಷ್ಟ ತಡೆಯುತ್ತದೆ.


    ನೆನಪಿನ ಶಕ್ತಿ ಹೆಚ್ಚಿಸಲು ಈ ವಿಧಾನಗಳಲ್ಲಿ ಬಾದಾಮಿ ಸೇವಿಸಿ


    ಬೆಳಿಗ್ಗೆ ಒಂದು ಹಿಡಿ ಹಸಿ ಬಾದಾಮಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದು


    ಬಾದಾಮಿಯಿಂದ ಪೋಷಕಾಂಶ ಪಡೆಯಲು ಉತ್ತಮ ಮತ್ತು ಸುಲಭವಾದ ಮಾರ್ಗ ಅಂದ್ರೆ ಅವುಗಳನ್ನು ಕಚ್ಚಾ ತಿನ್ನುವುದು. ಅದೂ ಮುಂಜಾನೆ ವೇಳೆ. ಪ್ರತಿದಿನ ಕನಿಷ್ಠ 8 ರಿಂದ 10 ಬಾದಾಮಿ ತಿನ್ನಲು ಪ್ರಯತ್ನಿಸಿ. ಅದು ನಿಮಗೆ ತೃಪ್ತಿ ನೀಡುತ್ತದೆ. ಮತ್ತು ನಿಮ್ಮ ಮೆದುಳಿನ ಆರೋಗ್ಯ ಸುಧಾರಿಸುತ್ತದೆ.


    ನೆನೆಸಿ ಸೇವಿಸಿ


    ನೆನೆಸಿದ ಬಾದಾಮಿ ಸೇವನೆ ಮಾಡಿದರೆ ಅದರ ಪೋಷಕಾಂಶಗಳು ಇನ್ನಷ್ಟು ಹೆಚ್ಚುತ್ತವೆ. ಇದು ಮಲ್ಟಿವಿಟಮಿನ್‌ ಅತ್ಯುತ್ತಮ ಮೂಲ. ಒಂದು ಬಟ್ಟಲಿನಲ್ಲಿ 8 ರಿಂದ 10 ಬಾದಾಮಿ ನೆನೆಸಿ ರಾತ್ರಿಯಿಡೀ ಬಿಡಿ. ಬೆಳಗ್ಗೆ ಬಾದಾಮಿಯನ್ನು ನೀರಿನಿಂದ ಹೊರ ತೆಗೆದು ತೆಳುವಾದ ಸಿಪ್ಪೆ ಸುಲಿದು ತಿನ್ನಿರಿ.


    ಸ್ಮೂಥೀ ಮತ್ತು ಶೇಕ್ಸ್‌ ನಲ್ಲಿ ಮಿಶ್ರಣ ಮಾಡಿ


    ಖೀರ್ ಮತ್ತು ಹಲ್ವಾಕ್ಕೆ ಕತ್ತರಿಸಿದ ಅಥವಾ ಪುಡಿ ಮಾಡಿದ ಬಾದಾಮಿ ಸೇರಿಸಿ ಸೇವಿಸಿ. ಜೊತೆಗೆ ಸ್ಮೂಥಿಗಳು ಮತ್ತು ಶೇಕ್‌ಗಳಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಿ.


    ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


    ಆರೋಗ್ಯಕರ ಬಾದಾಮಿ ಹಾಲು


    ಬೆಳೆಯುತ್ತಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಲು ಮತ್ತು ಬಾದಾಮಿ ಎರಡೂ ಪ್ರಯೋಜನಕಾರಿ. 30 ರ ನಂತರ ನಿಮ್ಮ ಮೂಳೆಗಳು ದುರ್ಬಲವಾಗುತ್ತಿದ್ದರೆ, ಈ ಎರಡೂ ಸೂಪರ್‌ ಫುಡ್‌ ಗಳು ನಿಮಗೂ ಬಹಳ ಮುಖ್ಯ. ಇದಕ್ಕಾಗಿ ನೀವು ಬಾದಾಮಿ ಹಾಲು ಸೇವಿಸಿ.

    Published by:renukadariyannavar
    First published: