Mind Diet: ಮೈಂಡ್ ಡಯಟ್ ಬಗ್ಗೆ ಕೇಳಿದ್ದೀರಾ? ಹಾಗಾದ್ರೆ ತಪ್ಪದೇ ಈ ವಿಷಯ ತಿಳಿಯಿರಿ

ವೆಬ್‌ಎಂಡಿ ಪ್ರಕಾರ ಹೆಚ್ಚು ಜಂಕ್ ಫುಡ್ ತಿನ್ನುವ ಜನರ ಮೆದುಳು ಹೆಚ್ಚು ದುರ್ಬಲ ಆಗಿರುತ್ತದೆ. ಬಹಳಷ್ಟು ಹ್ಯಾಂಬರ್ಗರ್‌ ಫ್ರೆಂಚ್ ಫ್ರೈಗಳು ಹಾಗೂ ಆಲೂಗೆಡ್ಡೆ ಚಿಪ್ಸ್ ಮತ್ತು ತಂಪು ಪಾನೀಯ ಒಳಗೊಂಡಿರುವ ಜನರು ಕಲಿಕೆ ಸ್ಮರಣೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮೆದುಳಿನ ದುರ್ಬಲ ಭಾಗ ಹೊಂದಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನಸ್ಸು (Mind) ದೇಹದ (Body) ಅತ್ಯಂತ ಮುಖ್ಯವಾದ ಅಂಗ (Part). ಮೆದುಳು (Brain) ಎಲ್ಲಾ ರೀತಿಯ ಚಟುವಟಿಕೆಯ (Activities) ಮುಖ್ಯ ಲೀಡರ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಹೋದ್ರೆ ಬಲವಾಗಿ ಕಾಣುವ ದೇಹವು ಸಹ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಮಗುವಿನ ಜನನದಿಂದಲೇ, ಮಗುವಿನ ಮೆದುಳಿನ ಪ್ರತಿಕ್ರಿಯೆಯ ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಲಾಗುತ್ತದೆ. ಆದರೆ ವಯಸ್ಸಿನ ಜೊತೆ ಜನರು ಮೆದುಳಿನ ಆರೋಗ್ಯದ ಬಗ್ಗೆ ಹೆಚ್ಚು ಗಂಭೀರ ಆಗಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹಲವು ಚಟುವಟಿಕೆಗಳನ್ನು ಅರಿವಿಲ್ಲದೆ ಮಾಡುತ್ತಿರುತ್ತಾನೆ.

    ಮೆದುಳು ಹೇಗೆ ದುರ್ಬಲವಾಗುತ್ತದೆ?

    ವೆಬ್‌ಎಂಡಿ ಪ್ರಕಾರ, ಹೆಚ್ಚು ಜಂಕ್ ಫುಡ್ ತಿನ್ನುವ ಜನರ ಮೆದುಳು ಹೆಚ್ಚು ದುರ್ಬಲ ಆಗಿರುತ್ತದೆ. ಬಹಳಷ್ಟು ಹ್ಯಾಂಬರ್ಗರ್‌, ಫ್ರೆಂಚ್ ಫ್ರೈಗಳು, ಆಲೂಗೆಡ್ಡೆ ಚಿಪ್ಸ್ ಮತ್ತು ತಂಪು ಪಾನೀಯ ಒಳಗೊಂಡಿರುವ ಜನರು ಕಲಿಕೆ, ಸ್ಮರಣೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮೆದುಳಿನ ದುರ್ಬಲ ಭಾಗ ಹೊಂದಿರುತ್ತಾರೆ.

    ಉತ್ತಮ ಮೆದುಳಿನ ಆರೋಗ್ಯಕ್ಕೆ ಉತ್ತಮ ಪದಾರ್ಥಗಳ ಸೇವನೆ ಮಾಡಿ

    ಮತ್ತೊಂದೆಡೆ ಹಣ್ಣು, ಧಾನ್ಯ, ಬೀಜ ಮತ್ತು ಹಸಿರು ಎಲೆಗಳ ತರಕಾರಿಗಳ ಸೇವನೆ ಮಾಡುವ ಜನರು ಉತ್ತಮ ಮೆದುಳಿನ ಆರೋಗ್ಯ ಹೊಂದಿರುತ್ತಾರೆ. ಅದಾಗ್ಯೂ ಹೆಚ್ಚುತ್ತಿರುವ ವಯಸ್ಸು ದೇಹದ ಉಳಿದ ಭಾಗಗಳಂತೆ ನಿಮ್ಮ ಮೆದುಳು ಸಹ ವಯಸ್ಸಾಗುವಿಕೆಗೆ ಒಳಗಾಗುತ್ತದೆ. ಮತ್ತು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ.

    ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

    ಆದರೆ ನೀವು ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ಮತ್ತು ಆಲ್ಝೈಮರ್ನಂತಹ ವಯಸ್ಸಾದ ಕಾಯಿಲೆಗಳು ಬುದ್ಧಿಮಾಂದ್ಯತೆ ತಡೆಯಲ್ಲ. ಇದಕ್ಕಾಗಿ ನೀವು ಕೇವಲ ಮೆದುಳಿನ ಆರೋಗ್ಯ ಹೆಚ್ಚಿಸುವ ಮತ್ತು ಆರೋಗ್ಯಕರ ಆಹಾರ ಅನುಸರಿಸಬೇಕು. ಮನಸ್ಸನ್ನು ಚುರುಕು ಮತ್ತು ಆರೋಗ್ಯಕರವಾಗಿರಿಸಲು ಮೈಂಡ್ ಡಯಟ್ ಫಾಲೋ ಮಾಡಬೇಕು.

    ಮೈಂಡ್ ಡಯಟ್ ಎಂದರೇನು?

    ಹೊವಾರ್ಡ್ ಪ್ರಕಾರ, ಮೈಂಡ್ ಡಯಟ್ ಪ್ರಪಂಚದ ಪ್ರಸಿದ್ಧ ಎರಡು ಆಹಾರ ಕ್ರಮಗಳಿಂದ ರಚಿಸಲ್ಪಟ್ಟಿದೆ. DASH ಆಹಾರ ಮತ್ತು ಮೆಡಿಟರೇನಿಯನ್ ಆಹಾರ ಕ್ರಮಗಳಿಂದ ಮಾಡಲ್ಪಟ್ಟಿದೆ. ಈ ಎರಡೂ ಆಹಾರಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮತ್ತು ಹೃದ್ರೋಗ, ಮಧುಮೇಹದಂತಹ ಇತರ ಅನೇಕ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಹಕಾರಿ ಆಗಿವೆ.

    ಅದೇ ವೇಳೆ ಆಹಾರ ಕ್ರಮಗಳ ಸಂಯೋಜನೆ ಮೈಂಡ್ ಡಯಟ್ ಆಹಾರವು ನ್ಯೂರೋ ಡಿಜೆನೆರೇಟಿವ್ ವಿಳಂಬಕ್ಕಾಗಿ ಮೆಡಿಟರೇನಿಯನ್-ಡ್ಯಾಶ್ ಇಂಟರ್ವೆನ್ಷನ್ ಮಾಡಲಾಗುತ್ತದೆ. DASH ಮತ್ತು ಮೆಡಿಟರೇನಿಯನ್ ಆಹಾರಗಳಲ್ಲಿ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತೋರಿಸಿರುವ ಆಹಾರಗಳು ಹೀಗಿವೆ.

    ಮೈಂಡ್ ಡಯಟ್ ಸಿದ್ಧಪಡಿಸಿರುವ ಕಾರಣವೇನು?

    ಮೈಂಡ್ ಡಯಟ್ ಮೆದುಳನ್ನು ಚುರುಕುಗೊಳಿಸುವ ಗುರಿ ಹೊಂದಿದೆ. ಜೊತೆಗೆ ಇದು ಬುದ್ಧಿಮಾಂದ್ಯತೆ, ಆಲ್ಝೈಮರ್ ಮತ್ತು ಇತರ ಮೆದುಳಿನ ಆರೋಗ್ಯ ಕುಸಿತದ ಅಪಾಯ ಕಡಿಮೆ ಮಾಡುತ್ತದೆ.

    ಯಾವ ಆಹಾರಗಳನ್ನು ಮೈಂಡ್ ಡಯಟ್‌ನಲ್ಲಿ ಸೇರಿಸಲಾಗಿದೆ?

    ಮೈಂಡ್ ಡಯಟ್ ಸೇವಿಸಬೇಕಾದ 10 ಆಹಾರ ಗುಂಪುಗಳು ಮತ್ತು 5 ಆಹಾರಗಳನ್ನು ಒಳಗೊಂಡಿದೆ. ಮುಖ್ಯವಾಗಿ ಪ್ರತಿದಿನ ನೀವು ಕನಿಷ್ಠ 3 ಬಾರಿ ಧಾನ್ಯ, ಹಣ್ಣು ಮತ್ತು ತರಕಾರಿ, ಬೀನ್ಸ್, ಕೋಳಿ ಮತ್ತು ಮೀನುಗಳನ್ನು ಪ್ರತಿ ವಾರ ತಿನ್ನಬೇಕು.

    ಇದು ದೈನಂದಿನ ತಿಂಡಿಗಳಲ್ಲಿ ಬೀಜಗಳು ಮತ್ತು ಬೆರ್ರಿ ಸೇರಿಸಿ. ಮತ್ತು ಅಡುಗೆ ಊಟಕ್ಕೆ ಕೊಬ್ಬಿನ ಆರೋಗ್ಯಕರ ಮೂಲವಾಗಿ ಆಲಿವ್ ಎಣ್ಣೆಯ ಬಳಕೆ ಮಾಡುವಂತೆ ತಿಳಿಸುತ್ತದೆ.

    ಮೈಂಡ್ ಡಯಟ್‌ನಲ್ಲಿ ಯಾವ 5 ವಸ್ತುಗಳನ್ನು ತಿನ್ನುವುದು ನಿಷೇಧಿಸಲ್ಪಟ್ಟಿದೆ

    ಬೆಣ್ಣೆ, ಗಿಣ್ಣು, ಕೆಂಪು ಮಾಂಸ, ಹುರಿದ ಆಹಾರಗಳು, ಸಿಹಿ, ಪೇಸ್ಟ್ರಿ

    ಮೈಂಡ್ ಡಯಟ್‌ ಪ್ರಯೋಜನಗಳು

    ಮೈಂಡ್ ಡಯಟ್ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಮತ್ತು ಆಲ್ಝೈಮರ್ನ ಕಾಯಿಲೆ, ಬುದ್ಧಿಮಾಂದ್ಯತೆ ಮತ್ತು ವಯಸ್ಸಿಗೆ ಸಂಬಂಧಿಸಿದ ಅರಿವಿನ ಕುಸಿತ ಹಾಗೂ ಇತರೆ ರೀತಿಯ ಪರಿಸ್ಥಿತಿಗಳ ಬೆಳವಣಿಗೆ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.

    ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

    ಕೆಲವು ಆಹಾರ ಸೇವನೆ ಮತ್ತು ಅನಾರೋಗ್ಯಕರ ಆಹಾರ ತಪ್ಪಿಸುವುದು ಮೆದುಳಿನ ವಯಸ್ಸನ್ನು 7.5 ವರ್ಷಗಳವರೆಗೆ ನಿಧಾನಗೊಳಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.
    Published by:renukadariyannavar
    First published: