• Home
  • »
  • News
  • »
  • lifestyle
  • »
  • Health Care Tips: ಉತ್ತರ ಭಾರತದಲ್ಲಿ ಆಚರಿಸುವ ಆಮ್ಲಾ ನವಮಿಯ ಮಹತ್ವ ಇಲ್ಲಿದೆ

Health Care Tips: ಉತ್ತರ ಭಾರತದಲ್ಲಿ ಆಚರಿಸುವ ಆಮ್ಲಾ ನವಮಿಯ ಮಹತ್ವ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಸಿ ಬೆಟ್ಟದ ನೆಲ್ಲಿಕಾಯಿ ತಿಂದು ನೀರು ಕುಡಿಯಬೇಕೆಂದು ಹೇಳಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಮತ್ತು ಕಾಲೋಚಿತ ಶೀತ ಮತ್ತು ಕೆಮ್ಮು ಸಂಭವಿಸಲು ಅನುಮತಿ ನೀಡಲ್ಲ. ಬೆಟ್ಟದ ನೆಲ್ಲಿಕಾಯಿಯನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಸೇವನೆ ಮಾಡಲಾಗುತ್ತದೆ.

ಮುಂದೆ ಓದಿ ...
  • Share this:

    ಬೆಟ್ಟದ ನೆಲ್ಲಿಕಾಯಿ (Gooseberry) ಪೋಷಕಾಂಶಗಳ (Nutrients) ಕಣಜವಾಗಿದೆ. ಹೀಗಾಗಿಯೇ ಬೆಟ್ಟದ ನೆಲ್ಲಿಕಾಯಿಯನ್ನು ಎಲ್ಲಾ ಜನರು (People) ಸೇವಿಸಬೇಕು ಎಂದು ಹೇಳಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನು ನೀವು ವಿವಿಧ ಪಾಕವಿಧಾನಗಳ (Recipe) ಮೂಲಕ ಸೇವನೆ ಮಾಡಬಹುದಾಗಿದೆ. ಬೆಟ್ಟದ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನಬಹುದು. ಬೆಟ್ಟದ ನೆಲ್ಲಿಕಾಯಿ ಚಟ್ನಿ, ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಪೌಡರ್ ಹೀಗೆ ಯಾವುದೇ ವಿಧಾನದ ಮೂಲಕ ನೀವು ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಬಹುದು. ಇದು ಎಲ್ಲ ರೀತಿಯಿಂದಲೂ ಪ್ರಯೋಜನಕಾರಿ. ಹಾಗಾಗಿ ಭಾರತದಲ್ಲಿ ಇದನ್ನು ಹಲವು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ.


    ಈಗ ವಾತಾವರಣ ಬದಲಾಗುತ್ತಿದ್ದು, ಹಸಿ ಬೆಟ್ಟದ ನೆಲ್ಲಿಕಾಯಿ ತಿಂದು ನೀರು ಕುಡಿಯಬೇಕೆಂದು ಹೇಳಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ  ಬಲಪಡಿಸುತ್ತದೆ. ಮತ್ತು ಕಾಲೋಚಿತ ಶೀತ ಮತ್ತು ಕೆಮ್ಮು ಸಂಭವಿಸಲು ಅನುಮತಿ ನೀಡಲ್ಲ. ಹಾಗಾಗಿ ಬೆಟ್ಟದ ನೆಲ್ಲಿಕಾಯಿಯನ್ನು ವಿವಿಧ ಆರೋಗ್ಯ ಪ್ರಯೋಜನಗಳ ಹಿನ್ನೆಲೆ ಸೇವನೆ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ.


    ದೇಶದಲ್ಲಿ ಬೆಟ್ಟದ ನೆಲ್ಲಿಕಾಯಿ ನವಮಿ ಆಚರಣೆ ಮಹತ್ವ


    ಹಿಂದೂ ಸಮುದಾಯದಲ್ಲಿ ಆಮ್ಲಾ ನವಮಿ (ಬೆಟ್ಟದ ನೆಲ್ಲಿಕಾಯಿ ನವಮಿ) ಆಚರಿಸಲಾಗುತ್ತದೆ. ಇದನ್ನು ಅಕ್ಷಯ ನವಮಿ ಎಂದೂ ಕರೆಯುತ್ತಾರೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬೆಟ್ಟದ ನೆಲ್ಲಿಕಾಯಿ ಮರದ ಕೆಳಗೆ ಕುಟುಂಬದವರು ಅಡುಗೆ ಮಾಡಿ ತಿನ್ನುತ್ತಾರೆ.


    ಇದನ್ನೂ ಓದಿ: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ


    ಈ ದಿನವನ್ನು ಅಕ್ಷಯ ನವಮಿ ಎಂದೂ ಕರೆಯುತ್ತಾರೆ. ಬೆಟ್ಟದ ನೆಲ್ಲಿಕಾಯಿ ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ಇದನ್ನು ಅಕ್ಷಯ ಹಣ್ಣು ಎಂದು ಕರೆಯುತ್ತಾರೆ. ಬೆಟ್ಟದ ನೆಲ್ಲಿಕಾಯಿ ಮಹತ್ವವನ್ನು ಆಯುರ್ವೇದದಲ್ಲಿ ವಿವರವಾಗಿ ವಿವರಿಸಲಾಗಿದೆ.


    ಈಗ ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಬೆಟ್ಟದ ನೆಲ್ಲಿಕಾಯಿ ಪೋಷಕಾಂಶಗಳು ಇಡೀ ದೇಹಕ್ಕೆ ಅನೇಕ ಪ್ರಯೋಜನ ನೀಡುತ್ತವೆ ಎಂದು ಹೇಳಿವೆ. ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.




    ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆ ಮಾನಸಿಕ ಕಾಯಿಲೆ ತಡೆಗಟ್ಟಲು ಸಾಮಾಜಿಕ ಸಂವಹನವು ಬಹಳ ಮುಖ್ಯ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಹೀಗಾಗಿ ಬೆಟ್ಟದ ನೆಲ್ಲಿಕಾಯಿ ನವಮಿಯನ್ನು ಹಳ್ಳಿಗಳಲ್ಲಿ ಆಚರಿಸುವ ಪರಿಪಾಠ ವೇಗವಾಗಿ ಹೆಚ್ಚುತ್ತಿದೆ.


    ಬೆಟ್ಟದ ನೆಲ್ಲಿಕಾಯಿ ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿ


    ಬೆಟ್ಟದ ನೆಲ್ಲಿಕಾಯಿ ವೈಜ್ಞಾನಿಕ ಹೆಸರು ಎಂಬ್ಲಿಕಾ ಅಫಿಷಿನಾಲಿಸ್. ಇದನ್ನು ಭಾರತೀಯ ಆಯುರ್ವೇದ ಔಷಧ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.


    ಬೆಟ್ಟದ ನೆಲ್ಲಿಕಾಯಿ ಸೇವನೆಯು ರಕ್ತದ ದ್ರವತೆಯಲ್ಲಿ ಗಮನಾರ್ಹ ಸುಧಾರಣೆ ತರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಎಚ್‌ಡಿಎಲ್‌ನಲ್ಲಿ ಗಮನಾರ್ಹ ಸುಧಾರಣೆ, ಆಕ್ಸಿಡೇಟಿವ್ ಒತ್ತಡದ ಥ್ರಂಬಿನ್ ಬಯೋಮಾರ್ಕರ್‌ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.


    ಬೆಟ್ಟದ ನೆಲ್ಲಿಕಾಯಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಬೆಟ್ಟದ ನೆಲ್ಲಿಕಾಯಿ ಸೇವನೆಯ ನಂತರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಬೀರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಬೆಟ್ಟದ ನೆಲ್ಲಿಕಾಯಿ ಎಂಡೋಥೀಲಿಯಲ್ ಕಾರ್ಯ ಸುಧಾರಿಸುತ್ತದೆ.


    ಬೆಟ್ಟದ ನೆಲ್ಲಿಕಾಯಿ ಮಾನಸಿಕ ಆರೋಗ್ಯ ಸುಧಾರಿಸುತ್ತದೆ


    ಹಲವು ಅಧ್ಯಯನಗಳು ಬೆಟ್ಟದ ನೆಲ್ಲಿಕಾಯಿ ಪದಾರ್ಥದ ಮೇಲೆ ನಡೆದಿವೆ. ಅವುಗಳ ಪ್ರಕಾರ, ಬೆಟ್ಟದ ನೆಲ್ಲಿಕಾಯಿ ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿ-ಹೈಪರ್ಲಿಪಿಡೆಮಿಕ್ ಮತ್ತು ಆಂಟಿ-ಹೈಪರ್ಗ್ಲೈಸೆಮಿಕ್ ಪರಿಣಾಮ ಹೊಂದಿದೆ.


    ಅನೇಕ ನರವೈಜ್ಞಾನಿಕ ಅಸ್ವಸ್ಥತೆ ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ. ಹಲವಾರು ನರವೈಜ್ಞಾನಿಕ ಮತ್ತು ನ್ಯೂರೋ ಡಿಜೆನೆರೆಟಿವ್ ಅಸ್ವಸ್ಥತೆಗಳಲ್ಲಿ ಬೆಟ್ಟದ ನೆಲ್ಲಿಕಾಯಿ ಔಷಧೀಯ ಪರಿಣಾಮ ವಿವರಿಸಲಾಗಿದೆ.


    ಇದನ್ನೂ ಓದಿ: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು


    ಬೆಟ್ಟದ ನೆಲ್ಲಿಕಾಯಿಯಲ್ಲಿರುವ ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ನೆನಪಿನ ಶಕ್ತಿ ಹೆಚ್ಚಿಸುತ್ತವೆ. ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ.

    Published by:renukadariyannavar
    First published: