Diabetes: ಗ್ಲೂಕೋಸ್ ನಿರ್ವಹಣೆ ಸೂಚಕ ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ವಿವರ

ನಿಮಗೆ ಗೊತ್ತಿರುವಂತೆ ತಂತ್ರಜ್ಞಾನದ ಆವಿಷ್ಕಾರಗಳು ಎಲ್ಲ ಕ್ಷೇತ್ರಗಳನ್ನು ಆವರಿಸಿರುವ ತರಹ ಮಧುಮೇಹ ಇರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮೇಲ್ವಿಚಾರಣೆಗೆ ಸಹಾಯ ಮಾಡಲು ಈ ತಂತ್ರಜ್ಞಾನವು ದಿನವೂ ವಿಕಸನಗೊಳ್ಳುತ್ತಲೇ ಇದೆ. ಇದರಿಂದಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬಹುದು.

ಗ್ಲೂಕೋಸ್ ನಿರ್ವಹಣೆ ಸೂಚಕ

ಗ್ಲೂಕೋಸ್ ನಿರ್ವಹಣೆ ಸೂಚಕ

  • Share this:
ಇಂದಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿರುವುದು ಈ ಮಧುಮೇಹ (Diabetes). ಇದನ್ನು ಆಡು ಭಾಷೆಯಲ್ಲಿ ಶುಗರ್‌ (Sugar) ಎಂದು ಕರೆಯುತ್ತಾರೆ. ನನಗೆ ಶುಗರ್‌ ಇದೆ, ಅಯ್ಯೋ ನಾನು ಮೊನ್ನೆ ಆಸ್ಪತ್ರೆಗೆ (Hospital) ಹೋಗಿದ್ದೆ, ವೈದ್ಯರು (Doctor) ನನಗೂ ಶುಗರ್‌ ಇದೆ ಎಂದು ಹೇಳಿದರು ಎನ್ನುವ ಮಾತುಗಳು ದಿನನಿತ್ಯ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಮಧುಮೇಹ ಅಥವಾ ಡಯಾಬಿಟಿಸ್‌ ಇರುವ ಜನರು ತಮ್ಮ ದೇಹದಲ್ಲಿರುವ ರಕ್ತದಲ್ಲಿನ ಸಕ್ಕರೆಯ (Blood Sugar) ಮಟ್ಟವನ್ನು ಆಗಾಗ ಪರಿಶೀಲಿಸುವುದನ್ನು ತಿಳಿದಿರುತ್ತಾರೆ ಮತ್ತು ಇದು ಅಗತ್ಯ ಕ್ರಮ ಎಂದು ವೈದ್ಯರು ಅವರಿಗೆ ಮುನ್ನೆಚ್ಚರಿಕೆಯನ್ನು (Caution) ಕೂಡ ಕೊಟ್ಟಿರುತ್ತಾರೆ.

ಈಗ ನಿಮಗೆ ಗೊತ್ತಿರುವಂತೆ ತಂತ್ರಜ್ಞಾನದ ಆವಿಷ್ಕಾರಗಳು ಎಲ್ಲ ಕ್ಷೇತ್ರಗಳನ್ನು ಆವರಿಸಿರುವ ತರಹ ಮಧುಮೇಹ ಇರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮೇಲ್ವಿಚಾರಣೆಗೆ ಸಹಾಯ ಮಾಡಲು ಈ ತಂತ್ರಜ್ಞಾನವು ದಿನವೂ ವಿಕಸನಗೊಳ್ಳುತ್ತಲೇ ಇದೆ. ಇದರಿಂದಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬಹುದು.

ಏನಿದು ಗ್ಲೂಕೋಸ್ ಮಾನಿಟರ್‌?
ಈ ಮಧುಮೇಹದಲ್ಲಿ ನಿರಂತರ ಗ್ಲೂಕೋಸ್ ಮಾನಿಟರ್‌ಗಳು (CGM) ಒಂದು ರೀತಿಯ ಹೊಸ ತಂತ್ರಜ್ಞಾನವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್‌ ಮಟ್ಟದ ಮಾಹಿತಿಯನ್ನು ಒದಗಿಸುತ್ತದೆ. 1990ರ ದಶಕದಿಂದಲೂ, ಮಧುಮೇಹ ಹೊಂದಿರುವ ಜನರು 3 ತಿಂಗಳಲ್ಲಿ ಸರಾಸರಿ ಗ್ಲೂಕೋಸ್ ಮಟ್ಟವನ್ನು ಮೌಲ್ಯಮಾಪನ ಮಾಡಲು ಹಿಮೋಗ್ಲೋಬಿನ್ A1C ಎಂಬ ತಂತ್ರಜ್ಞಾನದ ಮೇಲೆ ಅವಲಂಬಿಸಿರುತ್ತಾರೆ. ಆದರೆ ಈಗ ಆಧುನಿಕ CGM ತಂತ್ರಜ್ಞಾನದೊಂದಿಗೆ, ಗ್ಲೂಕೋಸ್ ಮ್ಯಾನೇಜ್ಮೆಂಟ್ ಇಂಡಿಕೇಟರ್ (GMI) ಎಂದು ಕರೆಯಲಾಗುವ ಹೊಸ ಮೆಟ್ರಿಕ್ ವಿಧಾನವು ಮಧುಮೇಹ ಇರುವ ಜನರಿಗೆ ತಮ್ಮ ಗ್ಲೂಕೋಸ್ ಮಟ್ಟದಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಿಕೊಂಡು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ.

ಮಧುಮೇಹ ಮತ್ತು ಗ್ಲುಕೋಸ್‌ ಮಟ್ಟ
ಮಧುಮೇಹ ಇರುವ ಜನರ ದಿನನಿತ್ಯದ ಮೊದಲ ಮತ್ತು ಪ್ರಮುಖ ಅಂಶವೆಂದರೆ ಅವರ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್) ಮಟ್ಟವನ್ನು ಮೇಲ್ವಿಚಾರಣೆ ನಡೆಸುವುದು. ಅಧಿಕ ರಕ್ತದ ಸಕ್ಕರೆಯ ಮಟ್ಟವು ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವು ದಿನಗಳು ಅಥವಾ ವರ್ಷಗಳ ನಂತರ ಅಧಿಕ ರಕ್ತದ ಸಕ್ಕರೆ ಮಟ್ಟವು ನಿಮ್ಮ ಪ್ರಮುಖ ಅಂಗಗಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ನಿಮ್ಮ ಕಣ್ಣುಗಳು, ನರಗಳು, ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಡಯಾಬಿಟಿಕ್ ಕೀಟೋಆಸಿಡೋಸಿಸ್ (DKA)
ಅತಿ ಹೆಚ್ಚು ರಕ್ತದಲ್ಲಿನ ಸಕ್ಕರೆ ಮಟ್ಟವು ಡಯಾಬಿಟಿಕ್ ಕೀಟೋಆಸಿಡೋಸಿಸ್ (DKA) ಎಂಬ ಅಪಾಯಕಾರಿ ಸ್ಥಿತಿಗೆ ತಂದು ನಿಲ್ಲಿಸಬಹುದು ಮತ್ತು ಕೋಮಾ ಅಥವಾ ಸಾವಿಗೆ ಕಾರಣವಾಗಬಹುದು. ಆರಂಭಿಕ ದಿನಗಳಲ್ಲಿ, ಜನರು ತಮ್ಮ ಮೂತ್ರದಲ್ಲಿ ಪರೀಕ್ಷಾ ಪಟ್ಟಿಯನ್ನು ಇರಿಸುವ ಮೂಲಕ ಮತ್ತು ಅದನ್ನು ಬಣ್ಣದ -ಕೋಡೆಡ್ ಚಾರ್ಟ್‌ಗೆ ಹೋಲಿಸುವ ಮೂಲಕ ತಮ್ಮ ಗ್ಲೂಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ನಂತರ, 1980 ರ ದಶಕದಲ್ಲಿ, ಮನೆಯಲ್ಲಿ ಗ್ಲೂಕೋಸ್ ಮೀಟರ್‌ಗಳು ಇರಿಸಿಕೊಂಡು ದಿನವೂ ಮೇಲ್ವಿಚಾರಣೆ ನಡೆಸಿಕೊಳ್ಳುವುದು ಸಾಮಾನ್ಯವಾದವು.

ಇದನ್ನೂ ಓದಿ:  Grape Fruit Benefits: ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ ಗ್ರೇಫ್ ಫ್ರೂಟ್ಸ್

ಆದರೆ 2000 ರ ದಶಕದ ಆರಂಭದಲ್ಲಿ CGM ತಂತ್ರಜ್ಞಾನದೊಂದಿಗೆ, ಮಧುಮೇಹ ಹೊಂದಿರುವ ಜನರು ಈಗ ತಮ್ಮ ಗ್ಲೂಕೋಸ್ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು ಮತ್ತು ಅವರ ಮಧುಮೇಹ ಹೇಗಿದೆ? ಎಷ್ಟಿದೆ? ಎಂದು ಪರಿಶೀಲನೆ ನಡೆಸಬಹುದು. ಈ CGMಗಳು ಗ್ಲೂಕೋಸ್ ಮಟ್ಟವನ್ನು ಕೂಡಲೇ ತಿಳಿಯಲು ಮತ್ತು ನಿಮ್ಮ ಗ್ಲೂಕೋಸ್ ಮಟ್ಟ ಎಷ್ಟಿದೆ ಎಂದು ನೋಡಲು ವೈದ್ಯಕೀಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಥವಾ ಪ್ರತ್ಯೇಕ ಹ್ಯಾಂಡ್‌ಹೆಲ್ಡ್ ಸಾಧನಕ್ಕೆ ಪ್ರತಿ 1 ರಿಂದ 5 ನಿಮಿಷಗಳವರೆಗೆ ಸಮಯ ತೆಗೆದುಕೊಂಡು ನಂತರ ನಿಮ್ಮ ಗ್ಲೂಕೋಸ್‌ ಮಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತದೆ.

ಗ್ಲೂಕೋಸ್ ನಿರ್ವಹಣೆ ಸೂಚಕ (GMI) ಎಂದರೇನು?
CGM ತಂತ್ರಜ್ಞಾನ ಹೆಚ್ಚು ಸಾಮಾನ್ಯವಾಗುತ್ತಿದ್ದಂತೆ, ಮಧುಮೇಹ ಹೊಂದಿರುವ ಜನರು GMI ಎಂದು ಕರೆಯಲಾಗುವ ಅಳತೆಯನ್ನು ಬಳಸಲಾರಂಭಿಸಿದ್ದಾರೆ. ನಿಮ್ಮ CGM ಸಂಗ್ರಹಿಸಿದ ಡೇಟಾದ ಆಧಾರದ ಮೇಲೆ ನಿಮ್ಮ GMI ಸರಾಸರಿ (ಸರಾಸರಿ) ಗ್ಲೂಕೋಸ್ ಮಟ್ಟವಾಗಿರುತ್ತದೆ.

ಇದನ್ನೂ ಓದಿ:  Headache Problem: ಈ ರೀತಿಯ ತಲೆನೋವುಗಳು ಯಾವ ಗಂಭೀರ ಕಾಯಿಲೆಯ ಲಕ್ಷಣವಾಗಿದೆ?

ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲು ನಿಮಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿವೆ. ಅವುಗಳನ್ನು ಬಳಸಿ, ನಿಮ್ಮ ಆರೋಗ್ಯವನ್ನು ಇನ್ನು ಉತ್ತಮವಾಗಿ ಇರಿಸಲು ಪ್ರಯತ್ನಿಸಿ.
Published by:Ashwini Prabhu
First published: