Weight Loss vs Fat Loss: ತೂಕ ಇಳಿಕೆ ಮತ್ತು ಕೊಬ್ಬು ಕರಗಿಸೋದು ಎರಡೂ ಬೇರೆ ಬೇರೆಯೇ? ಇಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weight Loss vs Fat Loss: ಇಂದಿನ ಫಿಟ್‍ನೆಸ್ ಪ್ರಯಾಣದಲ್ಲಿ ತೂಕ ಇಳಿಕೆ ಮತ್ತು ಬೊಜ್ಜು ಕರಗುವಿಸುವಿಕೆ ಎರಡು ವಿಭಿನ್ನ ಆಯಾಮಗಳು. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳು ಇದೆ. ಹಾಗಾದರೆ ಈ ಎರಡರ ನಡುವೆ ವ್ಯತ್ಯಾಸ ಏನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಕ್ರಮ (Food), ಸಮಯದ ಅಭಾವ, ಒತ್ತಡದಿಂದಾಗಿ ತೂಕ ಹೆಚ್ಚಳದಂತಹ ಸಮಸ್ಯೆಗಳು ಹೆಚ್ಚಾಗಿದೆ. ಇದರಿಂದಾಗಿ ಫಿಟ್‍ನೆಸ್ ಮಂತ್ರವನ್ನೇ ಮರೆತು ಬದುಕು ಸಾಗಿಸುವಂತಾಗಿದೆ. ಆದರೂ ಕೆಲವರು ಜನರು ತೂಕ ಇಳಿಕೆ ಮತ್ತು ಬೊಜ್ಜು ಕರಗಿಸುವಿಕೆಗಾಗಿ (Dissolving Obesity) ವ್ಯಾಯಾಮ, ಜಿಮ್, ವಾಕಿಂಗ್ (Walking) ಮೊರೆ ಹೋಗುತ್ತಾರೆ. ಅದು ಸಾಧ್ಯವಾಗದೇ ಮಧ್ಯದಲ್ಲೇ ಬಿಡುವುದೂ ಉಂಟು. ಕೆಲವರು ದಪ್ಪವಾಗಿದ್ದ ತಕ್ಷಣ ತೂಕ ಇಳಿಸಿಕೊಳ್ಳಲು ಯೋಚಿಸುತ್ತಾರೆ. ಇನ್ನು ಕೆಲವರು ಬೊಜ್ಜು ಹೆಚ್ಚಿದ್ದರೂ ತೂಕ ಇಳಿಕೆಯೇ (Weight Loss) ಎಂದು ಭಾವಿಸುತ್ತಾರೆ. ಅಂದರೆ ತೂಕ ಇಳಿಕೆ ಮತ್ತು ಬೊಜ್ಜು ಕರಗುವಿಸುವಿಕೆ ಎರಡು ಒಂದೇ ಎಂದು ಭಾವಿಸುತ್ತಾರೆ. ಆದರೆ ಅವೆರಡೂ ಬೇರೆ ಬೇರೆ ಎನ್ನುತ್ತಾರೆ ಆರೋಗ್ಯ ತಜ್ಞರು.


ಹೌದು ಫಿಟ್‍ನೆಸ್ ಪ್ರಯಾಣದಲ್ಲಿ ತೂಕ ಇಳಿಕೆ ಮತ್ತು ಬೊಜ್ಜು ಕರಗುವಿಸುವಿಕೆ ಎರಡು ವಿಭಿನ್ನ ಆಯಾಮಗಳು. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳು ಇದೆ. ಹಾಗಾದರೆ ಈ ಎರಡರ ನಡುವೆ ವ್ಯತ್ಯಾಸ ಏನು ಎಂಬುದನ್ನು ವಿವರಿಸುತ್ತಾರೆ ಪೌಷ್ಟಿಕ ತಜ್ಞೆ ನ್ಯಾನ್ಸಿ ಡೆಹ್ರಾ.


ಪೌಷ್ಟಿಕ ತಜ್ಞೆ ನ್ಯಾನ್ಸಿ ಡೆಹ್ರಾ ಹೇಳುವುದೇನು?


ಪೌಷ್ಟಿಕ ತಜ್ಞೆ ನ್ಯಾನ್ಸಿ ಡೆಹ್ರಾ ಅವರು ತಮ್ಮ ಇನ್‍ಸ್ಟಾಗ್ರಾಮ್ ಅಕೌಂಟ್​​ನಲ್ಲಿ ಇವೆರಡರ ನಡುವಿನ ವ್ಯತ್ಯಾಸ ಏನು ಎಂದು ತಿಳಿಸಿಕೊಟ್ಟಿದ್ದಾರೆ. ಬೊಜ್ಜು ಕರಗುವಿಕೆಗೆ ನಾರಿನಾಂಶ ಮತ್ತು ಪ್ರೊಟೀನ್​​ಯುಕ್ತ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು ಎಂದು ಹೇಳುತ್ತಾರೆ.


ಇದನ್ನೂ ಓದಿ: ಬೇಸಿಗೆಯಲ್ಲಿ ಹೊಟ್ಟೆ ಹಾಳಾಗೋದನ್ನು ತಪ್ಪಿಸಲು ನಿಮ್ಮ ಆಹಾರ ಶೈಲಿಯನ್ನು ಈ ರೀತಿ ಬದಲಿಸಿ


ಬೊಜ್ಜು ಕರಗುವಿಕೆಯನ್ನು ಅಳೆಯಲು ಯಾವುದೇ ಮಾನದಂಡಗಳಿಲ್ಲ. ಆದರೆ ಇದು ನಿಮ್ಮ ಮನೆಯ ಕನ್ನಡಿಯ ಮುಂದೆ ನಿಂತರೆ ಗೊತ್ತಾಗುತ್ತದೆ. ಯಾವ ಅಂಗಾಂಗದಲ್ಲಿ ಹೆಚ್ಚು ಬೊಜ್ಜು ಇದೆ ಎಂದು ತಿಳಿಯುವುದರ ಮೂಲಕ ನೀವು ಬೊಜ್ಜು ಕರಗಿಸಿಕೊಳ್ಳಬೇಕೆ ಅಥವಾ ತೂಕ ಇಳಿಸಿಕೊಳ್ಳಬೇಕೇ ಎಂದು ತಿಳಿಯುತ್ತದೆ. ಇನ್ನು ತೂಕ ಇಳಿಕೆಯನ್ನು ಸ್ಕೇಲ್‍ನಿಂದ ಅಳೆಯಬಹುದು. ಸ್ಕೇಲ್‍ನಿಂದ ನೀವು ತೆಳ್ಳಗಾಗಬೇಕಾ, ಎಷ್ಟು ತೆಳ್ಳಗಾಗಬೇಕು ಎಂದು ತಿಳಿಯುತ್ತದೆ. ಎರಡು ಒಂದೇ ರೀತಿ ಕಂಡರೂ ಆದರೆ ಅವೆರಡು ಬೇರೆ ಎನ್ನುತ್ತಾರೆ.


ಕೊಬ್ಬು ಕರಗುವಿಕೆಯ ಐದು ಮಾರ್ಗಗಳು:


ಕೊಬ್ಬು ಕರಗುವಿಕೆಯ ಐದು ಮಾರ್ಗಗಳು ಎಂದು ವಿಡಿಯೋ ಮಾಡಿರುವ ನ್ಯಾನ್ಸಿ ಅವರು, ಮೊದಲಿಗೆ ಹೆಚ್ಚು ಪ್ರೊಟೀನ್​ಯುಕ್ತ ಆಹಾರ ತಿನ್ನುವಂತೆ ಹೇಳುತ್ತಾರೆ. ಕಾರ್ಬೋಹೈಡ್ರೇಟ್ಸ್ ಹೊಂದಿದ ಪದಾರ್ಥಗಳಿಂದ ಸಾಧ್ಯವಾದಷ್ಟು ದೂರವಿರಿ. ಇದರಿಂದ ನಿಮ್ಮಲ್ಲಿನ ಬೊಜ್ಜು ಕರಗಿಸಲು ಸಹಕಾರಿಯಾಗಲಿದೆ. ಎಣ್ಣೆಯಲ್ಲಿ ಹುರಿದ ಹಾಗೂ ಹೆಚ್ಚು ಕ್ಯಾಲೊರಿ ಇರುವ ಆಹಾರಗಳನ್ನು ಕಡಿಮೆ ಮಾಡಿ.


ಸಾಂದರ್ಭಿಕ ಚಿತ್ರ


ಸೂಪ್ ಮತ್ತು ಸಲಾಡ್‍ಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ. ಇದು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುವುದರೊಂದಿಗೆ ಅತ್ಯಧಿಕವಾಗಿ ತಿನ್ನುವುದನ್ನು ಕಡಿಮೆಗೊಳಿಸುತ್ತದೆ. ಈ ಎಲ್ಲದರ ಜೊತೆಗೆ ವ್ಯಾಯಾಮಗಳಿಗೆ ಹೆಚ್ಚು ಒತ್ತು ಕೊಡಿ. ಇದು ಸಹ ಬೊಜ್ಜು ಕರಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.


ವರುಣ್ ರತ್ತನ್ ಫಿಟ್‍ನೆಸ್ ಮಾತು


ಪ್ರಮಾಣೀಕೃತ ಪೌಷ್ಟಿಕಾಂಶ ತರಬೇತುದಾರ ವರುಣ್ ರತ್ತನ್, ತೂಕ ನಷ್ಟವು ಸ್ನಾಯು, ನೀರು ಮತ್ತು ಮೂಳೆಗಳಿಂದ ತೂಕವನ್ನು ಕಳೆದುಕೊಳ್ಳುವುದಾಗಿರುತ್ತದೆ. ಕೊಬ್ಬಿನ ನಷ್ಟವು ನಮ್ಮಲ್ಲಿ ಎಷ್ಟು ಕೊಬ್ಬು ಶೇಖರಣೆಯಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.




ಕೆಲವರು ಅನುಸರಿಸುವ ವಿಧಾನಗಳು

top videos


    ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ತಾವು ತಿನ್ನುವ ಕಾರ್ಬೋಹೈಡ್ರೇಟ್ ಆಹಾರಗಳ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಆಹಾರದಲ್ಲಿ ಉಪ್ಪು ಅಥವಾ ಉಪ್ಪಿನ ಅಂಶಗಳ ಆಹಾರವನ್ನು ಕಡಿಮೆ ಮಾಡಲು ಅಥವಾ ಮೂತ್ರವರ್ಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆಯ್ಕೆ ಮಾಡುತ್ತಾರೆ. ಆದರೆ ಈ ಎಲ್ಲಾ ವಿಧಾನಗಳು ಕ್ರೀಡಾಪಟುಗಳಿಗೆ ಹೆಚ್ಚು ಉಪಯೋಗವಾಗಲಿದೆ. ಆದರೆ ಇದು ಆಹಾರ ತೆಗೆದುಕೊಂಡ 48 ಗಂಟೆಗಳ ಒಳಗೆ ನೀರಿನ ತೂಕವು ಮರಳುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ, ಎಂದು ಹೇಳಿದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು